bredcrumb

ಲ್ಯಾಕ್ಮೇ ಫ್ಯಾಷನ್ ವೀಕ್‌ನಲ್ಲಿ ಮಿಂಚಿದ ಮಲೈಕಾ ಅರೋರಾ..!

By Kannada Filmibeat Photos
| Published: Sunday, March 30, 2025, 20:15 [IST]

ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿರುವ ನಟಿಮಣಿಯರ ಪೈಕಿ ಬಾಲಿವುಡ್ ನ ಮಲೈಕಾ ಅರೋರಾ ಪ್ರಮುಖರು. ವಯಸ್ಸು ಐವತ್ತಾದರೂ ಹದಿ ಹರೆಯದ ಯುವತಿಯರು ನಾಚುವಂತಹ ದೇಹ ಸಿರಿಯನ್ನ ಹೊಂದಿರುವ ಮಲೈಕಾ ತಮ್ಮ ಮನೆಯಲ್ಲಿರುವುದಕ್ಕಿಂತ ಹೆಚ್ಚು ಜಿಮ್‌ನಲ್ಲಿ ಇರಬಹುದು ಎಂದು ಅನೇಕರಿಗೆ ಅನಿಸಿದ್ದು ಇದೆ. ಇಂಥಾ ಮಲೈಕಾ ಅರೋರಾ ಈಗ ರ್ಯಾಂಪ್ ವಾಕ್ ಮಾಡಿದ್ದಾರೆ. ಎಲ್ಲರ ಕಣ್ಮನ ಸೆಳೆದಿದ್ದಾರೆ. 

Malaika Arora Stuns as the Showstopper for Namrata Joshipura at Lakmé Fashion Week 2025
1/4

ಸಹಯೋಗದ ಜೊತೆ ನಮ್ರತಾ ಜೋಶಿಪುರ ಅವರ 2025ರ ಲ್ಯಾಕ್ಮೇ ಫ್ಯಾಷನ್ ವೀಕ್‌ನಲ್ಲಿ ಮಲೈಕಾ ಅರೋರಾ ಮಾರ್ಜಾಲ ನಡಿಗೆಯ ಮೂಲಕ ಗಮನ ಸೆಳೆದಿದ್ದಾರೆ. ಬ್ಲ್ಯಾಕ್ ಕಲರ್ ಕಾಸ್ಟೂಮ್ ಮತ್ತು ಹೈ ಹೀಲ್‌ನಲ್ಲಿ ಮಲೈಕಾ ಅವರನ್ನು ಕಂಡು ಅನೇಕರು ಫಿದಾ ಆಗಿದ್ದಾರೆ.
Malaika Arora Stuns as the Showstopper for Namrata Joshipura at Lakmé Fashion Week 2025
2/4

ತಮ್ಮ ಕಪ್ಪು ಬಣ್ಣದ ಉಡುಗೆಗೆ ಹೊಂದಿಕೆಯಾಗುವಂತೆ ಕ್ರಾಪ್ ಜಾಕೆಟ್ ಕೂಡ ಧರಿಸಿದ್ದ ಮಲೈಕಾ ವೇದಿಕೆಯ ಮೇಲೆ ಅತ್ಯಾಕರ್ಷಕ ಫೋಸ್‌ ನೀಡಿದ್ದಾರೆ. ಪೋನಿಟೇಲ್ ಹೇರ್ ಸ್ಟೈಲ್‌ನಲ್ಲಿ ಮಿಂಚಿದ್ದಾರೆ.
Malaika Arora Stuns as the Showstopper for Namrata Joshipura at Lakmé Fashion Week 2025
3/4

ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಈ ಫ್ಯಾಷನ್ ಶೋನಲ್ಲಿ ದೇಶ ವಿದೇಶದ ಅನೇಕರು ಹಾಜರಾಗಿದ್ದರು. ನಮ್ರತಾ ಜೋಶಿಪುರ್ ಮತ್ತು ಅವರ ಶೋ ಸ್ಟಾಪರ್ ಮಲೈಕಾ ಅರೋರಾ ಅವರ ಗುಣಗಾನವನ್ನು ಕೂಡ ಮಾಡಿದರು.
Malaika Arora Stuns as the Showstopper for Namrata Joshipura at Lakmé Fashion Week 2025
4/4

ಇನ್ನುಳಿದಂತೆ ಅರ್ಜುನ್ ಕಪೂರ್ ಅವರಿಂದ ದೂರವಾಗಿರುವ ಮಲೈಕಾ ಸದ್ಯ ಫ್ಯಾಷನ್ ಶೋ, ರಿಯಾಲಿಟಿ ಕಾರ್ಯಕ್ರಮ ಎಂದು ಓಡಾಡಿಕೊಂಡು ಇದ್ದಾರೆ. ಸಭೆ ಸಮಾರಂಭಗಳಲ್ಲಿ ಕೂಡ ಭಾಗವಹಿಸುತ್ತಿದ್ದಾರೆ. ಚಿತ್ರದ ವಿಚಾರಕ್ಕೆ ಬಂದರೆ ಸದ್ಯಕ್ಕೆ ಹೇಳಿಕೊಳ್ಳುವಂತಹ ಅವಕಾಶಗಳಿಲ್ಲ.
X