bredcrumb

ಖ್ಯಾತ ಬರಹಗಾರ ಮನೋಜ್ ಸಂತೋಷಿ ನಿಧನ..!

By Ghanshyam R
| Published: Monday, March 24, 2025, 21:50 [IST]

ಯಾರ ಬದುಕು ಹೇಗೆ ಕೊನೆಯಾಗುತ್ತದೋ ಗೊತ್ತಾಗುವುದಿಲ್ಲ. ತೀರಾ ಬದುಕಿಬಾಳಬೇಕಾದವರು, ಬೆಳೆದು ಬೆಳಗಬೇಕಿದ್ದವರು ಹಠಾತ್ತನೆ ಕಣ್ಮುಚ್ಚಿದಾಗ ಆಗುವ ನೋವನ್ನು ಸಹಿಸೋದು ಕಷ್ಟ. ಕಿರುತೆರೆಯಲ್ಲಿ ಅಪಾರವಾದ ಹೆಸರನ್ನು ಸಂಪಾದಿಸಿದ ಖ್ಯಾತ ಬರಹಗಾರ ಮನೋಜ್ ಸಂತೋಷಿ  ಯಾವ ಸೂಚನೆಯೂ ಕೊಡದೆ ಎದ್ದು ನಡೆದಿದ್ದಾರೆ. 

Manoj Santoshi, the celebrated writer of 'Bhabhiji Ghar Par Hai,' has passed away
1/4

ಹಿಂದಿ ಕಿರುತೆರೆಯ ಖ್ಯಾತ ಧಾರಾವಾಹಿ ಭಾಬಿಜಿ ಘರ್ ಪರ್ ಹೈ ಚಿತ್ರದ ಯಶಸ್ಸಿನ ಹಿಂದೆ ಇದ್ದ ಪ್ರಮುಖವಾದ್ ವ್ಯಕ್ತಿ, ಖ್ಯಾತ ಬರಹಗಾರ ಮನೋಜ್ ಸಂತೋಷಿ ನಿಧನರಾಗಿದ್ದಾರೆ. ತಮ್ಮ ಹಾಸ್ಯ ಪ್ರಜ್ಞೆಗೆ ಹೆಸರುವಾಸಿಯಾಗಿದ್ದ ಮನೋಜ್ ಧಾರಾವಾಹಿಯ ಮೂಲಕ ಹಾಸ್ಯದ ಮೆಡಿಸನ್ ನೀಡುತ್ತಿದ್ದರು.
Manoj Santoshi, the celebrated writer of 'Bhabhiji Ghar Par Hai,' has passed away
2/4

ಕ್ಯಾನ್ಸರ್‌ದಿಂದ ಬಳಲುತ್ತಿದ್ದ ಮನೋಜ್ ಸಂತೋಷಿ ಈ ಹೋರಾಟದಲ್ಲಿ ಗೆದ್ದು ಬರುವ ವಿಶ್ವಾಸದಲ್ಲಿದ್ದರು. ಆದರೆ ಈ ಹೋರಾಟದಲ್ಲಿ ಸೋಲು ಒಪ್ಪಿಕೊಂಡ ಮನೋಜ್ ಸಂತೋಷಿ ಇಂದು ಮುಂಜಾನೆ ತಮ್ಮ ತವರು ಅಲಿಗಢದಲ್ಲಿ ಕೊನೆಯುಸಿರೆಳೆದಿದ್ದಾರೆ.
Manoj Santoshi, the celebrated writer of 'Bhabhiji Ghar Par Hai,' has passed away
3/4

ಮನೋಜ್ ಸಂತೋಷಿ ಅವರ ನಿಧನಕ್ಕೆ ಕಿರುತೆರೆ ವಲಯ ಕಂಬನಿ ಮಿಡಿದಿದೆ. ಮನೋಜ್ ಸಂತೋಷಿ ಅವರ ಬರವಣಿಗೆಗೆ ಅಭಿಮಾನಿಯಾಗಿದ್ದ ಅನೇಕರು ತಮ್ಮ ದುಖವನ್ನು ವ್ಯಕ್ತಪಡಿಸುತ್ತಿದ್ದಾರೆ. ಮನೋಜ್ ಸಂತೋಷಿ ಅವರ ಕುಟುಂಬಕ್ಕೆ ಧೈರ್ಯವನ್ನು ಹೇಳುತ್ತಿದ್ದಾರೆ. ನಟಿಯರಾದ ಕವಿತಾ ಕೌಶಿಕ್ ಮತ್ತು ಅವರ ಆಪ್ತ ವರ್ಗ ಅಗಲಿದ ಮನೋಜ್ ಅವರನ್ನು ನೆನೆದು ಕಣ್ಣೀರು ಹಾಕಿದೆ. ಆತ್ಮಕ್ಕೆ ಶಾಂತಿಯನ್ನು ಕೋರಿದೆ.
Manoj Santoshi, the celebrated writer of 'Bhabhiji Ghar Par Hai,' has passed away
4/4

ಭಾಬಿಜಿ ಘರ್ ಪರ್ ಹೈ ಧಾರಾವಾಹಿಯನ್ನು ಹೊರತು ಪಡಿಸಿ ಹಪ್ಪು ಕಿ ಉಲ್ತಾನ್ ಪಲ್ತಾಮ್ ಜಿಜಾಜಿ ಛತ್ ಪರ್ ಹೈ ಧಾರಾವಾಹಿಗಳ ಮೂಲಕ ಮನೋಜ್ ಸಂತೋಷಿ ಅನೇಕರ ಹೃದಯವನ್ನು ಗೆದ್ದಿದ್ದರು. ತಮ್ಮ ಕ್ರಿಯಾಶೀಲತೆ ಮತ್ತು ಬರವಣಿಗೆಯಿಂದ ಅನೇಕರನ್ನು ಸೆಳೆಯುತ್ತಿದ್ದ ಮನೋಜ್ ಅಷ್ಟೇ ಸರಳ ವ್ಯಕ್ತಿ ಕೂಡ ಆಗಿದ್ದರು.
X