By
Kannada Filmibeat Photos
| Published: Wednesday, March 26, 2025, 22:29 [IST]
ಈ ವಾರ ಟಾಲಿವುಡ್ ಸಿನಿಮಾ ರಾಬಿನ್‌ಹುಡ್ ರಿಲೀಸ್ ಆಗುತ್ತಿದೆ. ತೆಲುಗು ನಟ ನಿತಿನ್, ಶ್ರೀಲೀಲಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾದ ಪ್ರಮುಖ ಆಕರ್ಷಣೆ ಅಂದರೆ, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರ ಡೇವಿಡ್ ವಾರ್ನರ್. ಇದರೊಂದಿಗೆ ತೆಲುಗಿನ ಜನಪ್ರಿಯ ಕಲಾವಿದರು, ತಂತ್ರಜ್ಞರು ಈ ಸಿನಿಮಾಗಾಗಿ ಕೆಲಸ ಮಾಡಿದ್ದಾರೆ. ಅವರ ಸಂಭಾವನೆ ಹೀಗಿದೆ.
1/7
ರಾಬಿನ್‌ಹುಡ್ ಸಿನಿಮಾಗೆ ಶ್ರೀಲೀಲಾ ಪಡೆದ ಸಂಭಾವನೆ ಎಷ್ಟು? ಯಾರ್‍ಯಾರಿಗೆ ಎಷ್ಟೆಷ್ಟು ಹಣ ಸಿಕ್ಕಿದೆ? | Nithiin Sreeleela Starrer Telugu Movie Robinhood Cast And Crew Salaries - Filmibeat Kannada
/photo-gallery/nithiin-sreeleela-starrer-telugu-movie-robinhood-cast-and-crew-salaries-fb101723.html
Nithiin: ರಾಬಿನ್‌ಹುಡ್ ಸಿನಿಮಾದಲ್ಲಿ ನಿತಿನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಲೀಡ್ ರೋಲ್‌ನಲ್ಲಿ ನಟಿಸುತ್ತಿರುವ ನಿತಿನ್‌ಗೆ ಬರೋಬ್ಬರಿ 8 ಕೋಟಿ ರೂಪಾಯಿ ಸಂಭಾವನೆ ಸಿಕ್ಕಿದೆ ಎನ್ನಲಾಗಿದೆ. ಈ ಸಿನಿಮಾದಲ್ಲಿ ಕಳ್ಳ ಹಾಗೂ ಬಾಡಿಗಾರ್ಡ್ ಪಾತ್ರದಲ್ಲಿ ನಿತಿನ್ ಕಾಣಿಸಿಕೊಳ್ಳಲಿದ್ದಾರೆ.
2/7
ರಾಬಿನ್‌ಹುಡ್ ಸಿನಿಮಾಗೆ ಶ್ರೀಲೀಲಾ ಪಡೆದ ಸಂಭಾವನೆ ಎಷ್ಟು? ಯಾರ್‍ಯಾರಿಗೆ ಎಷ್ಟೆಷ್ಟು ಹಣ ಸಿಕ್ಕಿದೆ? | Nithiin Sreeleela Starrer Telugu Movie Robinhood Cast And Crew Salaries - Filmibeat Kannada
/photo-gallery/nithiin-sreeleela-starrer-telugu-movie-robinhood-cast-and-crew-salaries-fb101723.html#photos-1
Sreeleela: ತೆಲುಗು ಚಿತ್ರರಂಗ ಬಹುಬೇಡಿಕೆಯ ನಟಿ ಶ್ರೀಲೀಲಾ. ಈಗ ಬಾಲಿವುಡ್‌ಗೂ ಹಾರಿರುವ ಈ ನಟಿ ರಾಬಿನ್‌ಹುಡ್ ಸಿನಿಮಾದಲ್ಲಿ ಹೀರೋಯಿನ್. ಈ ಸಿನಿಮಾಗೆ ಇವರು 2 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನುತ್ತಿವೆ ಟಾಲಿವುಡ್ ಮೂಲಗಳು.
3/7
ರಾಬಿನ್‌ಹುಡ್ ಸಿನಿಮಾಗೆ ಶ್ರೀಲೀಲಾ ಪಡೆದ ಸಂಭಾವನೆ ಎಷ್ಟು? ಯಾರ್‍ಯಾರಿಗೆ ಎಷ್ಟೆಷ್ಟು ಹಣ ಸಿಕ್ಕಿದೆ? | Nithiin Sreeleela Starrer Telugu Movie Robinhood Cast And Crew Salaries - Filmibeat Kannada
/photo-gallery/nithiin-sreeleela-starrer-telugu-movie-robinhood-cast-and-crew-salaries-fb101723.html#photos-2
Vennela Kishore: ಟಾಲಿವುಡ್‌ನ ಬಹುಬೇಡಿಕೆಯ ಹಾಸ್ಯ ನಟ ವೆನ್ನೆಲಾ ಕಿಶೋರ್ ಕುಮಾರ್. ಈ ಸಿನಿಮಾ ಹಾಸ್ಯ ನಟನಾಗಿ ಕಾಣಿಸಿಕೊಂಡಿದ್ದಾರೆ. ರಾಬಿನ್‌ಹುಡ್ ಸಿನಿಮಾದಲ್ಲಿ ನಟಿಸಿದ್ದಕ್ಕಾಗಿ ಇವರಿಗೆ 50 ಲಕ್ಷ ರೂಪಾಯಿ ಸಂಭಾವನೆ ಸಿಕ್ಕಿದೆ.
4/7
ರಾಬಿನ್‌ಹುಡ್ ಸಿನಿಮಾಗೆ ಶ್ರೀಲೀಲಾ ಪಡೆದ ಸಂಭಾವನೆ ಎಷ್ಟು? ಯಾರ್‍ಯಾರಿಗೆ ಎಷ್ಟೆಷ್ಟು ಹಣ ಸಿಕ್ಕಿದೆ? | Nithiin Sreeleela Starrer Telugu Movie Robinhood Cast And Crew Salaries - Filmibeat Kannada
/photo-gallery/nithiin-sreeleela-starrer-telugu-movie-robinhood-cast-and-crew-salaries-fb101723.html#photos-3
Rajendra Prasad: ತೆಲುಗು ಚಿತ್ರರಂಗದ ಹಿರಿಯ ನಟ ರಾಜೇಂದ್ರ ಪ್ರಸಾದ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಇವರಿಗೆ ಈ ಸಿನಿಮಾದ ನಟನೆಗಾಗಿ 75 ಲಕ್ಷ ರೂಪಾಯಿ ಸಂಭಾವನೆ ಸಿಕ್ಕಿದೆ.
5/7
ರಾಬಿನ್‌ಹುಡ್ ಸಿನಿಮಾಗೆ ಶ್ರೀಲೀಲಾ ಪಡೆದ ಸಂಭಾವನೆ ಎಷ್ಟು? ಯಾರ್‍ಯಾರಿಗೆ ಎಷ್ಟೆಷ್ಟು ಹಣ ಸಿಕ್ಕಿದೆ? | Nithiin Sreeleela Starrer Telugu Movie Robinhood Cast And Crew Salaries - Filmibeat Kannada
/photo-gallery/nithiin-sreeleela-starrer-telugu-movie-robinhood-cast-and-crew-salaries-fb101723.html#photos-4
Director Venky Kudumula: ರಾಬಿನ್‌ಹುಡ್ ಸಿನಿಮಾವನ್ನು ವೆಂಕಿ ಕುಡುಮುಲಾ ನಿರ್ದೇಶನ ಮಾಡಿದ್ದಾರೆ. ಈ ಆಕ್ಷನ್, ಕಾಮಿಡಿ ಡ್ರಾಮ ಸಿನಿಮಾದ ನಿರ್ದೇಶನ ಹಾಗೂ ಸ್ಕ್ರೀನ್‌ಪ್ಲೇಗಾಗಿ 4 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ.
6/7
ರಾಬಿನ್‌ಹುಡ್ ಸಿನಿಮಾಗೆ ಶ್ರೀಲೀಲಾ ಪಡೆದ ಸಂಭಾವನೆ ಎಷ್ಟು? ಯಾರ್‍ಯಾರಿಗೆ ಎಷ್ಟೆಷ್ಟು ಹಣ ಸಿಕ್ಕಿದೆ? | Nithiin Sreeleela Starrer Telugu Movie Robinhood Cast And Crew Salaries - Filmibeat Kannada
/photo-gallery/nithiin-sreeleela-starrer-telugu-movie-robinhood-cast-and-crew-salaries-fb101723.html#photos-5
Music Composer GV Prakash Kumar: ತಮಿಳಿನ ಜನಪ್ರಿಯ ಸಂಗೀತ ನಿರ್ದೇಶಕ ಜಿವಿ ಪ್ರಕಾಶ್ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಸುಮಧುರ ಹಾಡುಗಳಿಗೆ ಜನಪ್ರಿಯರಾಗಿರುವ ಇವರಿಗೆ ನಿರ್ಮಾಪಕರು ಒಂದು ಕೋಟಿ ರೂಪಾಯಿ ಸಂಭಾವನೆ ನೀಡಿದ್ದಾರೆ ಎನ್ನಲಾಗಿದೆ.
7/7
ರಾಬಿನ್‌ಹುಡ್ ಸಿನಿಮಾಗೆ ಶ್ರೀಲೀಲಾ ಪಡೆದ ಸಂಭಾವನೆ ಎಷ್ಟು? ಯಾರ್‍ಯಾರಿಗೆ ಎಷ್ಟೆಷ್ಟು ಹಣ ಸಿಕ್ಕಿದೆ? | Nithiin Sreeleela Starrer Telugu Movie Robinhood Cast And Crew Salaries - Filmibeat Kannada
/photo-gallery/nithiin-sreeleela-starrer-telugu-movie-robinhood-cast-and-crew-salaries-fb101723.html#photos-6
Production Budget: ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾಗೆ ಬೆನ್ನುಲುಬಾಗಿ ನಿಂತಿದ್ದು, ಈ ಸಿನಿಮಾ ಒಟ್ಟು ಬಜೆಟ್ 60 ಕೋಟಿ ರೂಪಾಯಿ ಎಂದು ಹೇಳಲಾಗಿದೆ.