bredcrumb

ಸೀರೆ ಸೆರಗು ಗಾಳಿಯಲ್ಲಿ ತೇಲಿಸಿದ ನಿವೇದಿತಾ ಗೌಡ, ಅಬ್ಬಬ್ಬಾ ಎಂದ ಫ್ಯಾನ್ಸ್ !

By Kannada Filmibeat Photos
| Published: Sunday, April 13, 2025, 12:15 [IST]

ಚಂದನ್ ಶೆಟ್ಟಿ ಅವರಿಂದ ದೂರವಾದ ನಂತರ ಟ್ರೋಲಿಗರ ಪಾಲಿಗೆ ತಾಂಬೂಲವಾಗಿರುವರು ನಿವೇದಿತಾ ಗೌಡ. ಆದರೂ ಕೂಡ ನಿವೇದಿತಾ ಗೌಡ ಅವರದ್ದು ಡೋಂಟ್ ಕೇರ್ ವ್ಯಕ್ತಿತ್ವ. ಯಾರೇ ಕೂಗಾಡಲಿ, ಸೋಶಿಯಲ್ ಮೀಡಿಯಾನೇ ಅಲ್ಲಾಡಲಿ, ನನ್ನ ನೆಮ್ಮದಿಗೆ ಭಂಗ ಇಲ್ಲವೆಂಬಂತೆ ನಿವೇದಿತಾ ಗೌಡ ತಮ್ಮ ಪಾಡಿಗೆ ರೀಲ್ಸ್‌ಗಳನ್ನು ಮಾಡುತ್ತಲೇ ಇದ್ದಾರೆ. ಈ ಮೂಲಕ ನಿರಂತರವಾಗಿ ಸುದ್ದಿಯಲ್ಲಿ ಇರುತ್ತಾರೆ. ಇಂಥಾ ನಿವೇದಿತಾ ಗೌಡ ಸದ್ಯ ಹೊಸ ಫೋಟೊಶೂಟ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

Niveditha Gowda's Eternal Saree Elegance: Sunset Radiance
1/5

ಯಾರು ಏನು ಹೇಳಿದರೂ ಕೂಡ ನಿವೇದಿತಾ ಗೌಡ ತಲೆ ಕೆಡಿಸಿಕೊಳ್ಳಲ್ಲ. ಟ್ರೋಲ್‌ಗಳಿಗಂತೂ ಉತ್ತರವನ್ನು ಕೂಡ ಕೊಡುವುದಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ನಿವೇದಿತಾ ಗೌಡ ತಮ್ಮ ಹಲವು ಫೋಟೊ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದಕ್ಕೆ ಇನ್ನೊಂದು ಉದಾಹರಣೆ ಸೀರೆಯಲ್ಲಿ ನಿವೇದಿತಾ ಹಂಚಿಕೊಂಡ ಫೋಟೊಗಳು.
Niveditha Gowda's Eternal Saree Elegance: Sunset Radiance
2/5

ಹೌದು, ಅಸಲಿಗೆ ಬೇಸಿಗೆ ಕಾಲಕ್ಕೆ ಅಂತಾನೇ ಎಲ್ಲರೂ ಒಂದಷ್ಟು ಡ್ರೆಸ್‌ಗಳನ್ನು ಎತ್ತಿಡುವುದು ಉಂಟು. ಯಾಕಂದ್ರೆ, ಶೆಕೆಗೆ ಡ್ರೆಸ್ ಕಿರಿಕಿರಿ ಆಗಬಾರದು ಅಂತ. ಅದರಲ್ಲೂ ಈ ಬಿಡು ಬೇಸಿಗೆಯಲ್ಲಿ ಸೀರೆ ಉಡುವುದು ಅಂದ್ರೆ ಒಂದು ದೊಡ್ಡ ಸಾಹಸವೇ ಸರಿ. ಆದರೆ, ಬೇಸಿಗೆಗೂ ಹಿತ ಎನಿಸುವಂತ ಸೀರೆ ಉಡುವುದಾದರೇ ಯಾವ ಥರದ ಸೀರೆ ಉಡಬಹುದು ಎಂಬ ಐಡಿಯಾ ಇರಬೇಕು ಅಷ್ಟೇ. ನಿವೇದಿತಾ ಗೌಡ ಇದೀಗ ಅದಕ್ಕೊಂದು ಪರ್ಫೆಕ್ಟ್ ಐಡಿಯಾ ಕೊಟ್ಟಿದ್ದಾರೆ. ನೋಡುವುದಕ್ಕೂ ಅಂದ, ಉಡುವುದಕ್ಕೂ ಚೆಂದ ಎನಿಸುವ ಸೀರೆಯುಟ್ಟು ತೋರಿಸಿದ್ದಾರೆ.
Niveditha Gowda's Eternal Saree Elegance: Sunset Radiance
3/5

ಮರೂನ್ ಕಲರ್ ಬಣ್ಣದ ಕಾಟನ್‌ ಸೀರೆಯಲ್ಲಿ ನಿವೇದಿತಾ ಗೌಡ ಕಂಗೊಳಿಸಿದ್ದು, ಬಾರ್ಬಿ ಡಾಲ್ ಹಾಕಿರುವ ಈ ಸೀರೆಯ ಮೇಲೆ ಬಿಳಿ ಬಣ್ಣದ ಹಾರ್ಟ್ ಡಿಸೈನ್ ಮಾಡಲಾಗಿದೆ. ಅದಕ್ಕೆ ಮ್ಯಾಚ್ ಆಗುವಂತ ವೈಟ್ ಕಲರ್‌ನ ಸ್ಲೀವ್ ಲೆಸ್ ಬ್ಲೌಸ್ ಧರಿಸಿದ್ದಾರೆ. ಮೊದಲೇ ಹಾಟ್ ಬೇಬಿ. ಸೀರೆಯಲ್ಲಿ ಸೌಂದರ್ಯ ಇನ್ನಷ್ಟು ಚೆಂದ ಕಾಣಿಸ್ತಾ ಇದೆ. ಸೆರಗನ್ನು ಸಿಂಗಲ್ ಪಿನ್ ಮಾಡಿರುವ ನಿವಿ ಅದೇ ಖುಷಿಯಲ್ಲಿ ಸ್ಟೆಪ್ ಹಾಕಿದ್ದಾರೆ.
Niveditha Gowda's Eternal Saree Elegance: Sunset Radiance
4/5

ನಿವೇದಿತಾ ಗೌಡ ರೀಲ್ಸ್ ಮಾಡುವುದರಲ್ಲಿ ಸದಾ ಮುಂದು. ಟ್ರೆಂಡಿಂಗ್ ಸಾಂಗ್‌ಗಳಿಗೆ ಮೈ ಬಳುಕಿಸುತ್ತಾ ಇರುತ್ತಾರೆ. ಅವರ ಮೈಮಾಟಕ್ಕೆ ಸೋತವರು ಕಡಿಮೆ ಮಂದಿಯೇನು ಅಲ್ಲ. ನಿವೇದಿತಾ ಸೌಂದರ್ಯಕ್ಕೆ ಮಾರು ಹೋದವರಲ್ಲಿ ನೆಗೆಟಿವ್ ಕಮೆಂಟ್‌ಗಳನ್ನೇ ಹಾಕುವವರು ಹೆಚ್ಚು. ಆರಂಭದಲ್ಲಿ ತಲೆ ಕೆಡಿಸಿಕೊಳ್ಳುತ್ತಿದ್ದ ನಿವೇದಿತಾ, ಈಗ ನಿರ್ಲಕ್ಷ್ಯದ ದಾರಿ ಹಿಡಿದಿದ್ದಾರೆ.
Niveditha Gowda's Eternal Saree Elegance: Sunset Radiance
5/5

ಇನ್ನು ಸದ್ಯ ನಿವೇದಿತಾ ಗೌಡ ಚಿತ್ರರಂಗದಲ್ಲಿ ಒಂದೊಂದೆ ಹೆಜ್ಜೆ ಇಡುತ್ತಿದ್ದಾರೆ. ಮಾಜಿ ಪತಿ ಚಂದನ್ ಶೆಟ್ಟಿ ಜೊತೆ ಮುದ್ದು ರಾಕ್ಷಸಿ ಎಂಬ ಚಿತ್ರದಲ್ಲಿ ನಿವೇದಿತಾ ಗೌಡ ನಟಿಸಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಚಿತ್ರೀಕರಣ ಮುಗಿದಿದ್ದು ಶೀಘ್ರದಲ್ಲಿಯೇ ಚಿತ್ರ ತೆರೆಗೆ ಬರುವ ನಿರೀಕ್ಷೆ ಇದೆ. ಸೃಜನ್ ಲೊಕೇಶ್ ಜೊತೆ ನಿವೇದಿತಾ ಗೌಡ ಅಭಿನಯದ ಜಿಎಸ್‌ಟಿ ಚಿತ್ರ ಸದ್ಯದಲ್ಲಿಯೇ ತೆರೆಗೆ ಬರಲಿದೆ.
X