bredcrumb

ತಿರುಪತಿ ಅನ್ನದಾನಕ್ಕೆ ಪವನ್ ಪತ್ನಿ ದೇಣಿಗೆ

By Umesh M
| Published: Monday, April 14, 2025, 16:37 [IST]

ಆಂಧ್ರ ಡಿಸಿಎಂ, ನಟ ಪವನ್ ಕಲ್ಯಾಣ್ ಪುತ್ರ ಮಾರ್ಕ್ ಶಂಕರ್ ಬೆಂಕಿ ಅವಘಡದಲ್ಲಿ ಗಾಯಗೊಂಡಿದ್ದಾನೆ. ಸಿಂಗಾಪುರದ ಶಾಲೆಯಲ್ಲಿ ಮಾರ್ಕ್ ಓದುತ್ತಿದ್ದ. ಇತ್ತೀಚೆಗೆ ಆತ ಓದುತ್ತಿದ್ದ ಶಾಲೆಯಲ್ಲಿ ಬೆಂಕಿ ಅವಘಡ ಸಂಭವಿಸಿ ಪವನ್ ಪುತ್ರ ಗಾಯಗೊಂಡು ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾನೆ. ಆತನನ್ನು ಹೈದರಾಬಾದ್‌ಗೆ ಪವನ್ ಕರೆತಂದಿದ್ದಾರೆ. ಇನ್ನು ಪವನ್ ಪತ್ನಿ ಅನ್ನಾ ಮಗ ಬೇಗ ಚೇತರಿಸಿಕೊಳ್ಳಲಿ ಎಂದು ತಿರುಪತಿ ತಿಮ್ಮಪ್ಪನಿಗೆ ಹರಕೆ ಮಾಡಿಕೊಂಡಿದ್ದರು. ತಿರುಪತಿಗೆ ಭೇಟಿ ನೀಡಿರುವ ಪವನ್ ಪತ್ನಿ 17 ಲಕ್ಷ ರೂ. ಹಣವನ್ನು ಅನ್ನದಾನಕ್ಕಾಗಿ ದೇಣಿಗೆ ನೀಡಿದ್ದಾರೆ.

Pawan Kalyan's Wife Anna donated Rs 17 lakhs for Annadanam at Tirumala
1/4

ತಿರುಮಲ ತಿರುಪತಿ ದೇವಸ್ಥಾನದಲ್ಲಿ ಪ್ರತಿದಿನ ಲಕ್ಷಾಂತರ ಜನರಿಗೆ ಅನ್ನದಾನ ನಡೆಯುತ್ತದೆ. ಇದೀಗ ಅನ್ನದಾನಕ್ಕಾಗಿ ಪವನ್ ಕಲ್ಯಾಣ್ ಪತ್ನಿ ಅನ್ನಾ ಕೊನಿದೇಲ 17 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಇತ್ತೀಚೆಗೆ ಆಕೆ ದೇವಸ್ಥಾನಕ್ಕೆ ಭೇಟಿ ನೀಡಿ ಮುಡಿಕೊಟ್ಟು ಪೂಜೆ ಸಲ್ಲಿಸಿದ್ದರು.
Pawan Kalyan's Wife Anna donated Rs 17 lakhs for Annadanam at Tirumala
2/4

ತಿರುಪತಿಯಲ್ಲಿ ಅನ್ನದಾನ ನಡೆಯುವ ಜಾಗಕ್ಕೆ ಭೇಟಿ ನೀಡಿ ಅನ್ನಾ ಕೊನಿದೇಲ ಕೆಲವರಿಗೆ ತಮ್ಮ ಕೈಯಾರೆ ಊಟ ಬಡಿಸಿದ್ದಾರೆ. ದೇಶ ಬೇರೆ ಆಗಿದ್ದರೂ, ಧರ್ಮ ಬೇರೆ ಆಗಿದ್ದರೂ ಆಕೆಯ ತಿಮ್ಮಪ್ಪನಲ್ಲಿ ಆಕೆಯ ಭಕ್ತಿಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.
Pawan Kalyan's Wife Anna donated Rs 17 lakhs for Annadanam at Tirumala
3/4

ಭಕ್ತರ ಜೊತೆ ತಾವು ಸರತಿ ಸಾಲಿನಲ್ಲಿ ಕೂತು ತಿರುಪತಿ ಪ್ರಸಾದವನ್ನು ಅನ್ನಾ ಕೋನಿದೇಲ ಸ್ವೀಕರಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋ ಸಖತ್ ವೈರಲ್ ಆಗುತ್ತಿದೆ.
Pawan Kalyan's Wife Anna donated Rs 17 lakhs for Annadanam at Tirumala
4/4

ಸಿಂಗಾಪುರದ ಶಾಲೆಯಲ್ಲಿ ನಡೆದ ಬೆಂಕಿ ಅವಘಡದಲ್ಲಿ ಪವನ್-ಅನ್ನಾ ದಂಪತಿ ಪುತ್ರ ಗಾಯಗೊಂಡಿದ್ದ. ಆತ ಬೇಗ ಚೇತರಿಸಿಕೊಳ್ಳಲಿ ಎಂದು ಅನ್ನಾ ಹರಕೆ ಹೊತ್ತಿದ್ದರು. ಮಗನನ್ನು ಭಾರತಕ್ಕೆ ಕರೆತಂದಿದ್ದು ತಿರುಪತಿಗೆ ಭೇಟಿ ನೀಡಿ ಅನ್ನಾ ಮುಡಿ ಕೊಟ್ಟು ಹರಕೆ ತೀರಿಸಿದ್ದಾರೆ.
X