bredcrumb

ಮತ್ತೆ ಹೃತಿಕ್ ಜೋಡಿಯಾಗಿ ಪ್ರಿಯಾಂಕ ಚೋಪ್ರಾ

By Umesh M
| Published: Friday, April 11, 2025, 14:00 [IST]

ಪ್ರಿಯಾಂಕ ಚೋಪ್ರಾ ಇತ್ತೀಚೆಗೆ ಬಾಲಿವುಡ್‌ಗೆ ದೂರಾಗಿಬಿಟ್ಟಿದ್ದಾರೆ. ಮದುವೆ ಬಳಿಕ ವಿದೇಶದಲ್ಲಿ ನೆಲೆಸಿರುವ ಚೆಲುವೆ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಸದ್ಯ ರಾಜಮೌಳಿ ನಿರ್ದೇಶನದ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಇನ್ನು ಹೃತಿಕ್ ರೋಷನ್ ನಿರ್ದೇಶಿಸಿ ನಟಿಸುವ 'ಕ್ರಿಶ್- 4' ಚಿತ್ರದಲ್ಲಿ ಮತ್ತೆ ನಟಿಸಲಿದ್ದಾರೆ. ಶೀಘ್ರದಲ್ಲೇ ಈ ಬಹುನಿರೀಕ್ಷಿತ ಸಿನಿಮಾ ಸೆಟ್ಟೇರಲಿದೆ.

Priyanka Chopra will be with Hrithik Roshan in Krrish- 4
1/5

ಬಿಂದಾಸ್ ಬೆಡಗಿ ಪ್ರಿಯಾಂಕಾ ಚೋಪ್ರಾ ಮತ್ತೆ ಹೃತಿಕ್ ಜೊತೆ ನಟಿಸೋದು ಖಚಿತವಾಗ್ತಿದೆ. ಇತ್ತೀಚೆಗೆ ಇಬ್ಬರೂ ಭೇಟಿ ಆಗಿದ್ದು ಇಂತಾದೊಂದು ಚರ್ಚೆಗೆ ಪುಷ್ಠಿ ನೀಡಿದೆ.
Priyanka Chopra will be with Hrithik Roshan in Krrish- 4
2/5

'ಕ್ರಿಶ್'- 4 ಚಿತ್ರವನ್ನು ಹೃತಿಕ್ ರೋಷನ್ ನಿರ್ದೇಶಿಸಿ ನಟಿಸೋದು ಪಕ್ಕಾ ಆಗಿದೆ. ಚಿತ್ರದಲ್ಲಿ ತ್ರಿಪಾತ್ರದಲ್ಲಿ ನಟಿಸಲಿದ್ದಾರೆ. ಇನ್ನು 'ಕ್ರಿಶ್' ಹಾಗೂ 'ಕ್ರಿಶ್-3' ಚಿತ್ರಗಳಲ್ಲಿ ಮಾಡಿದ್ದ ಪ್ರಿಯಾ ಪಾತ್ರವನ್ನು ಈಗ ಮಂದುವರೆಸಲಿದ್ದಾರೆ.
Priyanka Chopra will be with Hrithik Roshan in Krrish- 4
3/5

ಅಭಿಮಾನಿಗಳು ಇವರಿಬ್ಬರನ್ನು ಒಟ್ಟಿಗೆ ನೋಡಲು ಕಾಯುತ್ತಿದ್ದಾರೆ. ಸದ್ಯ ರಾಜಮೌಳಿ ನಿರ್ದೇಶನದ ಚಿತ್ರದಲ್ಲಿ ಮಹೇಶ್ ಬಾಬು ಜೊತೆ ಪಿಗ್ಗಿ ನಟಿಸುತ್ತಿದ್ದಾರೆ.
Priyanka Chopra will be with Hrithik Roshan in Krrish- 4
4/5

ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಜೊತೆ ಸೇರಿ ರಾಕೇಶ್ ರೋಷನ್ 'ಕ್ರಿಶ್'-4 ಸಿನಿಮಾ ನಿರ್ಮಾಣ ಮಾಡಲಿದ್ದಾರೆ. ಈ ಬಾರಿ ಕಥೆ ಹೇಗಿರುತ್ತದೆ ಎನ್ನುವ ಕುತೂಹಲ ಮೂಡಿದೆ.
Priyanka Chopra will be with Hrithik Roshan in Krrish- 4
5/5

ಸರಣಿಯ ಹಿಂದಿನ ಸಿನಿಮಾಗಳಲ್ಲಿ ಪ್ರಿಯಾಂಕ ನಟಿಸಿರುವುದರಿಂದ ಆಕೆಯನ್ನೇ ನಾಯಕಿಯಾಗಿ ಮುಂದುವರೆಸಬೇಕಿದೆ. ಅನಿವಾರ್ಯ ಕಾರಣಗಳಿಂದ ಆಕೆ ನಟಿಸದಿದ್ದರೆ ಬೇರೆ ಏನಾದರೂ ಪ್ಲ್ಯಾನ್ ಮಾಡಿ ಆ ಪಾತ್ರವನ್ನು ತೆರೆಗೆ ತರಬಹುದು.
X
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+