bredcrumb

ರಾಮ್‌ಚರಣ್ 'ಪೆದ್ದಿ' ಅವತಾರ ನೋಡಿದ್ರಾ?

By Umesh M
| Published: Thursday, March 27, 2025, 20:02 [IST]

ತೆಲುಗು ನಟ ರಾಮ್‌ಚರಣ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ದಿನದಂದು 'ಪೆದ್ದಿ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ರಗಡ್ ಅವತಾರದಲ್ಲಿ ಚರಣ್ ಖದರ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಬುಚ್ಚಿಬಾಬು ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು ಜಾನ್ವಿ ಕಪೂರ್ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಕನ್ನಡ ನಟ ಶಿವರಾಜ್‌ಕುಮಾರ್ ಕೂಡ ಮುಖ್ಯವಾದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

Ramcharan's Peddi first look poster out on his birthday
1/6

ತೆಲುಗಿನ 'ಪೆದ್ದಿ' ಸಿನಿಮಾ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ರಾಮ್‌ಚರಣ್ ಹುಟ್ಟುಹಬ್ಬದ ವಿಶೇಷವಾಗಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್‌ಗಳು ರಿವೀಲ್ ಆಗಿದೆ.
Ramcharan's Peddi first look poster out on his birthday
2/6

ಬುಚ್ಚಿಬಾಬು ನಿರ್ದೇಶನದ ಚಿತ್ರದಲ್ಲಿ ಸಿಕ್ಕಾಪಟ್ಟೆ ರಗಡ್ ಲುಕ್‌ನಲ್ಲಿ ಚರಣ್ ದರ್ಶನ ಕೊಟ್ಟಿದ್ದಾರೆ. ದಟ್ಟ ಗಡ್ಡ ಹಾಗೂ ಮೀಸೆ ಬಿಟ್ಟು ರಾಮ್‌ಚರಣ್ ಕಾಣಿಸಿಕೊಂಡಿದ್ದಾರೆ.
Ramcharan's Peddi first look poster out on his birthday
3/6

'ಪೆದ್ದಿ' ಚಿತ್ರದಲ್ಲಿ ಘಟಾನುಘಟಿ ಕಲಾವಿದರು ನಟಿಸುತ್ತಿದ್ದಾರೆ. ಶಿವಣ್ಣ ಮುಖ್ಯವಾದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ನಾಯಕಿಯಾಗಿ ಜಾನ್ವಿ ಕಪೂರ್ ಮಿಂಚಿದ್ದಾರೆ. ಜಗಪತಿ ಬಾಬು ಕೂಡ ತಾರಾಗಣದಲ್ಲಿದ್ದಾರೆ.
Ramcharan's Peddi first look poster out on his birthday
4/6

ಇದು ರಾಮ್‌ಚರಣ್ ನಟನೆಯ 16ನೇ ಸಿನಿಮಾ. ಹಾಗಾಗಿ ಇಷ್ಟು ದಿನ RC16 ಎಂದು ಚಿತ್ರವನ್ನು ಕರೆಯಲಾಗುತ್ತಿತ್ತು. ಇದೀಗ ಖಡಕ್ ಟೈಟಲ್ ಸಿಕ್ಕಿದೆ. ಆದರೆ ಕೆಲ ದಿನಗಳ ಹಿಂದೆಯೇ ಈ ಟೈಟಲ್ ಲೀಕ್ ಆಗಿತ್ತು.
Ramcharan's Peddi first look poster out on his birthday
5/6

ಬೀಡಿ ಹಚ್ಚುತ್ತಾ ಖಡಕ್ ಆಗಿ ನೋಡುತ್ತಿರುವ 'ಪೆದ್ದಿ' ಅವತಾರ ಅಭಿಮಾನಿಗಳ ಮನಗೆದ್ದಿದೆ. ಮತ್ತೊಂದು ಪೋಸ್ಟರ್‌ನಲ್ಲಿ ಪಕ್ಕಕ್ಕೆ ತಿರುಗಿ ಕೋಪದಿಂದ ನೋಡುತ್ತಿರುವ ನಾಯಕನನ್ನು ನೋಡಬಹುದು.
Ramcharan's Peddi first look poster out on his birthday
6/6

ಇದೊಂದು ಸ್ಪೋರ್ಟ್ಸ್ ಡ್ರಾಮಾ ಎಂದು ಹೇಳಲಾಗುತ್ತಿದೆ. 'ಪೆದ್ದಿ' ಚಿತ್ರಕ್ಕಾಗಿ ಸೆಟ್‌ಗಳನ್ನು ನಿರ್ಮಿಸಿ ಹೊಸ ಪ್ರಪಂಚವನ್ನೇ ಕಟ್ಟಿಕೊಡಲಾಗುತ್ತಿದೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಚಿತ್ರಕ್ಕೆ ಹಣ ಹೂಡುತ್ತಿದೆ. ಮುಂದಿನ ವರ್ಷ ಸಂಕ್ರಾಂತಿಗೆ ಸಿನಿಮಾ ತೆರೆಗೆ ಬರಲಿದೆ.
X