bredcrumb

ಬಿಳಿ ಬ್ಲೇಜರ್.. ಬ್ಯಾಗಿ ಪ್ಯಾಂಟ್ ಧರಿಸಿ ಲುಕ್ ಕೊಟ್ಟ ಮೋಹಕತಾರೆ; ಭಟ್ರ ಸಿನಿಮಾ ಕನಸು ಕಂಡ ಫ್ಯಾನ್ಸ್

By Umesh M
| Published: Friday, April 4, 2025, 10:13 [IST]

ಮೋಹಕತಾರೆ ರಮ್ಯಾ ಉರ್ಫ್ ದಿವ್ಯಾ ಸ್ಪಂದನಾ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ. ಆಗಾಗ ಫೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ. ಈಗ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕೆಲವು ಫೋಟೊಗಳನ್ನು ಶೇರ್ ಮಾಡಿದ್ದಾರೆ. ಆ ಫೋಟೊಗಳು ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಬಿಳಿ ಬಣ್ಣದ ಬ್ಲೇಜರ್ ಹಾಘೂ ಕ್ಲಾಸಿಕ್ ಡೆನಿಮ್ ಬ್ಯಾಗಿ ಜೀನ್ಸ್ ತೊಟ್ಟು ಮಿಂಚಿದ್ದಾರೆ. ಈ ಫೋಟೊಗಳು ಈಗ ಟ್ರೆಂಡಿಂಗ್‌ನಲ್ಲಿವೆ. 

Ramya new photoshoot
1/5

ಫ್ಯಾಷನ್‌ ಸೆನ್ಸ್‌ ಇರುವ ಸ್ಯಾಂಡಲ್‌ವುಡ್‌ ನಟಿಯರ ಸಾಲಿನಲ್ಲಿ ಮೋಹಕತಾರೆ ರಮ್ಯಾ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಇದೂವರೆಗೂ ಸೌಂದರ್ಯಕ್ಕೆ ಅಷ್ಟೇ ಅಲ್ಲ. ಅವರ ಫ್ಯಾಷನ್ ಸೆನ್ಸ್‌ಗೆ ಕೂಡ ಅಭಿಮಾನಿಗಳು ಇದ್ದಾರೆ. ರಮ್ಯಾ ಬಿಳಿ ಬಣ್ಣದ ಬ್ಲೇಜರ್‌ ಧರಿಸಿ, ಕ್ಲಾಸಿಕ್ ಡೆನಿಮ್ ಬ್ಯಾಗಿ ಜೀನ್ಸ್ ತೊಟ್ಟು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಇದರಲ್ಲಿ ರಮ್ಯಾ ಸಖತ್ ಆಗಿ ಕಾಣಿಸುತ್ತಿದ್ದಾರೆ.
Ramya new photoshoot
2/5

ಮೋಹಕತಾರೆ ಈ ಫೋಟೊಶೂಟ್‌ಗೆ ನೆಟ್ಟಿಗರಿಂದ ಮೆಚ್ಚುಗೆ ಸಿಕ್ಕಿದೆ. ಡೆನಿಮ್ ಬ್ಯಾಗಿ ಜೀನ್ಸ್ ಮೇಲೆ ಬಿಳಿ ಬಣ್ಣದ ಡಿಸೈನರ್ ಬ್ಲೇಸರ್‌ ಸಖತ್ ಆಗಿ ಸೂಟ್ ಆಗಿದೆ. ಈ ಔಟ್‌ನಲ್ಲಿ ರಮ್ಯಾ ನೋಡಿ ಅವರ ಅಭಿಮಾನಿಗಳು ಬಾಯ್ತುಂಬ ಹೊಗಳುತ್ತಿದ್ದಾರೆ.
Ramya new photoshoot
3/5

ರಮ್ಯಾ ಕೇವಲ ಔಟ್‌ಫಿಟ್‌ ಕಡೆಯಷ್ಟೇ ಗಮನ ಹರಿಸುವುದಿಲ್ಲ. ಫೋಟೊಶೂಟ್ ಆಗುತ್ತಿದೆ ಅಂದರೆ, ಅವರು ಮೇಕಪ್‌ ಕಡೆಗೂ ಹೆಚ್ಚು ಗಮನ ಹರಿಸುತ್ತಾರೆ. ಈ ಫೋಟೊಶೂಟ್‌ನಲ್ಲಿ ಸಿಂಪಲ್ ಮೇಕಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
Ramya new photoshoot
4/5

ರಮ್ಯಾಗೆ ಫೋಟೊಶೂಟ್ ಹೊಸದೇನು ಅಲ್ಲ. ಆಗಾಗ ಕ್ರಿಯೇಟಿವ್ ಆಗಿ ಫೋಟೊಗಳನ್ನು ಶೇರ್‌ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗೆ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದರು. ಕೆಲವೊಮ್ಮೆ ಆರೋಗ್ಯದ ಬಗ್ಗೆ, ಮೇಕಪ್‌ ಬಗ್ಗೆ ಹೀಗೆ ತಮ್ಮ ಮನಸ್ಸಿನಲ್ಲಿ ಏನಿದೆಯೋ ಅದಕ್ಕೆ ಅನುಸಾರವಾಗಿ ಫೋಟೊ ಶೇರ್ ಮಾಡುತ್ತಾರೆ.
Ramya new photoshoot
5/5

ಮೋಹಕತಾರೆ ರಮ್ಯಾ ಸ್ಯಾಂಡಲ್‌ವುಡ್‌ಗೆ ಕಮ್‌ ಬ್ಯಾಕ್ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಯೋಗರಾಜ್‌ ಭಟ್ ನಿರ್ದೇಶನದ ಸಿನಿಮಾದಲ್ಲಿ ರಮ್ಯಾ ನಟಿಸುತ್ತಾರೆ ಅನ್ನೋ ಮಾತು ಹೇಳಿ ಬರುತ್ತಿದೆ. ಸದ್ಯ ಭಟ್ರು ಹೇಳಿದ ಕಥೆ ಕೂಡ ಇಷ್ಟ ಆಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
X