ಅತೀ ದೊಡ್ಡ ಹಗರಣವನ್ನು ನೈಜ ಘಟನೆಗಳನ್ನು ಆಧರಿಸಿ ನಿರ್ಮಿಸಿದ ಸಿನಿಮಾಗಳು ಓಟಿಟಿಯಲ್ಲಿ ಸದ್ದು ಮಾಡುತ್ತಿದೆ. ವೀಕ್ಷಕರಿಗೆ ಇದೊಂದು ಅದ್ಭುತ ಅನುಭವವನ್ನು ನೀಡುತ್ತಿದೆ. ಇತ್ತೀಚೆಗೆ ಬಂದ ಲಕ್ಕಿ ಭಾಸ್ಕರ್‌ನಿಂದ ಹಿಡಿದು, ರೈಡ್, ಸ್ಕ್ಯಾಮ್ 1992, ಫರ್ಜಿ, ಬ್ಯಾಡ್ ಬಾಯ್ ಬಿಲಿಯನೇರ್, ವೈ ಚೀಟ್ ಇಂಡಿಯಾ, ಜಮ್ತಾರಾ ದಂತಹ ಸಿನಿಮಾಗಳು ವೀಕ್ಷಕರ ಕಣ್ಣನ್ನು ಅರಳಿಸಿವೆ. ಸಿನಿಮಾ ಪ್ರಿಯರು ನೋಡಲೇ ಬೇಕಾದ ಈ ಸಿನಿಮಾಗಳ ಬಗ್ಗೆ ಮಾಹಿತಿ ಇಲ್ಲಿದೆ.
1/7
Best Scam Movies On OTT: ಅತೀ ದೊಡ್ಡ ಹಗರಣದ ಸಿನಿಮಾಗಳನ್ನು ಓಟಿಟಿಯಲ್ಲಿ ನೋಡ್ಬೇಕಂದ್ರೆ ಇಲ್ಲಿದೆ ಲಿಸ್ಟ್ | Scam 1992, Raid, Farzi, Lucky Bhaskar, Jamtara Best Scam Movies On OTT - Filmibeat Kannada
/photo-gallery/scam-1992-raid-farzi-lucky-bhaskar-jamtara-best-scam-movies-on-ott-fb99341.html
Scam 1992 (SonyLiv): ಸ್ಕ್ಯಾಮ್ ಅನ್ನುವ ಪದವನ್ನು ಒಂದಿಷ್ಟು ದಿನ ಟ್ರೆಂಡಿಂಗ್‌ನಲ್ಲಿ ಇಟ್ಟಿದ್ದು ಬಿಗ್ ಬುಲ್ ಹರ್ಷದ್ ಮೆಹ್ತಾ ಕಥೆಯನ್ನು ಆಧರಿಸಿದ 'ಸ್ಕ್ಯಾಮ್ 1992'. ಸ್ಟಾಕ್ ಮಾರ್ಕೆಟ್‌ನಲ್ಲಿ 'ಬಚ್ಚನ್ ಆಫ್ ಬಿಎಸ್‌ಇ' ಅಂತಲೇ ಜನಪ್ರಿಯರಾಗಿದ್ದ ಹರ್ಷದ್ ಮೆಹ್ತಾ ಮಧ್ಯಮ ಕುಟುಂಬದಿಂದ ಬಂದು ಹೇಗೆ ಸ್ಟಾಕ್ ಮಾರ್ಕೆಟ್ ಅನ್ನು ಕಬಳಿಸಿದ ಅನ್ನೋದನ್ನು ತೋರಿಸಲಾಗಿದೆ. ಹರ್ಷದ್ ಮೆಹ್ತಾ ಪಾತ್ರದಲ್ಲಿ ಪ್ರತೀಕ್ ಗಾಂಧಿ ನಟಿಸಿದ್ದು, ಸೋನಿ ಲೈವ್‌ನಲ್ಲಿ ಈ ಸೀರಿಸ್ ಲಭ್ಯವಿದೆ.
2/7
Best Scam Movies On OTT: ಅತೀ ದೊಡ್ಡ ಹಗರಣದ ಸಿನಿಮಾಗಳನ್ನು ಓಟಿಟಿಯಲ್ಲಿ ನೋಡ್ಬೇಕಂದ್ರೆ ಇಲ್ಲಿದೆ ಲಿಸ್ಟ್ | Scam 1992, Raid, Farzi, Lucky Bhaskar, Jamtara Best Scam Movies On OTT - Filmibeat Kannada
/photo-gallery/scam-1992-raid-farzi-lucky-bhaskar-jamtara-best-scam-movies-on-ott-fb99341.html#photos-1
Raid (SonyLiv):ಭಾರತದಲ್ಲಿ ನಡೆದ ಹಗರಣಗಳನ್ನು ಇಟ್ಟುಕೊಂಡು ಹೆಣೆದ ಕಥೆಗಳಲ್ಲಿ 'ರೇಡ್' ಕೂಡ ಒಂದು. 1980ರಲ್ಲಿ ಆಧಾಯ ತೆರಿಗೆ ಇಲಾಖೆಯ ಅಧಿಕಾರಿ ಸರ್ದಾರ್ ಇಂದರ ಸಿಂಗ್ ಮಾಡಿದ ರೇಡ್ ಅನ್ನು ಒಟ್ಟುಕೊಂಡು ಸಿನಿಮಾ ಮಾಡಲಾಗಿತ್ತು. ಅಜಯ್ ದೇವಗನ್ ನಟಿಸಿರುವ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿತ್ತು. ಈಗ ಓಟಿಟಿಯಲ್ಲೂ ಸದ್ದು ಮಾಡುತ್ತಿದೆ. ಜನಪ್ರಿಯ ರಾಜಕಾರಣಿಯೊಬ್ಬರ ಮನೆಯೊಳಗೆ ಅಕ್ರಮವಾಗಿ ಅಡಗಿಸಿಟ್ಟ ಹಣವನ್ನು ಹುಡುಕಿ ತೆಗೆಯವ ರೋಚಕ ದೃಶ್ಯಗಳು ಪ್ರೇಕ್ಷಕರಿಗೆ ಇಷ್ಟ ಆಗಿತ್ತು.
3/7
Best Scam Movies On OTT: ಅತೀ ದೊಡ್ಡ ಹಗರಣದ ಸಿನಿಮಾಗಳನ್ನು ಓಟಿಟಿಯಲ್ಲಿ ನೋಡ್ಬೇಕಂದ್ರೆ ಇಲ್ಲಿದೆ ಲಿಸ್ಟ್ | Scam 1992, Raid, Farzi, Lucky Bhaskar, Jamtara Best Scam Movies On OTT - Filmibeat Kannada
/photo-gallery/scam-1992-raid-farzi-lucky-bhaskar-jamtara-best-scam-movies-on-ott-fb99341.html#photos-2
Farzi (Prime Video): 'ಫ್ಯಾಮಿಲಿ ಮ್ಯಾನ್' ಅಂತಹ ಜನಪ್ರಿಯ ಸೀರಿಸ್ ನಿರ್ದೇಶಿಸಿದ ರಾಜ್ & ಡಿಕೆ 'ಫರ್ಜಿ'ಯನ್ನು ನಿರ್ದೇಶಿಸಿದ್ದರು. ಕ್ರೈಂ ಥ್ರಿಲ್ಲರ್ ಸೀರಿಸ್ ಓಟಿಟಿಯಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಶಾಹಿದ್ ಕಪೂರ್ ಹಾಗೂ ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಹಾಗೇ ಕೆ ಕೆ ಮೆನನ್, ರಾಶಿ ಖನ್ನಾ, ಭುವನ್ ಅರೋರಾ ಅವರಿಗೆ ಪ್ರಮುಖ ಪಾತ್ರವಿತ್ತು. ನಕಲಿ ನೋಟಿನ ಸುತ್ತ ಸಾಗುವ ಈ ಸೀರಿಸ್ ವೀಕ್ಷಕರಿಗೆ ಕಿಕ್ ಕೊಟ್ಟಿತ್ತು. ಶಾಹಿದ್ ಕಪೂರ್ ಹಾಗೂ ವಿಜಯ್ ಸೇತುಪತಿ ನಟನೆ ಹಿಂದಿ ಆಡಿಯನ್ಸ್ ಕೂಡ ಫಿದಾ ಆಗಿದ್ದರು.
4/7
Best Scam Movies On OTT: ಅತೀ ದೊಡ್ಡ ಹಗರಣದ ಸಿನಿಮಾಗಳನ್ನು ಓಟಿಟಿಯಲ್ಲಿ ನೋಡ್ಬೇಕಂದ್ರೆ ಇಲ್ಲಿದೆ ಲಿಸ್ಟ್ | Scam 1992, Raid, Farzi, Lucky Bhaskar, Jamtara Best Scam Movies On OTT - Filmibeat Kannada
/photo-gallery/scam-1992-raid-farzi-lucky-bhaskar-jamtara-best-scam-movies-on-ott-fb99341.html#photos-3
Lucky Bhaskar (Netflix): ದುಲ್ಖರ್ ಸಲ್ಮಾನ್ ನಟಿಸಿರುವ ಲಕ್ಕಿ ಭಾಸ್ಕರ್ ಓಟಿಟಿಯಲ್ಲಿ ಸದ್ದು ಮಾಡುತ್ತಿದೆ. ಮೈ ತುಂಬಾ ಸಾಲವಿರುವ ಬ್ಯಾಂಕ್‌ನ ಕ್ಯಾಶಿಯರ್ ತನ್ನ ಶ್ರಮಕ್ಕೆ ಬೆಲೆ ಸಿಗದೇ ಇದ್ದಾಗ, ಹೇಗೆ ಬದಲಾಗುತ್ತಾನೆ. ಬ್ಯಾಂಕ್‌ನಲ್ಲಿ ಇದ್ದು ಕೊಂಡು ಹೇಗೆ ಹಗರಣಗಳನ್ನು ಮಾಡುತ್ತಾನೆ ಅನ್ನೋದು ಕತೆ. ಈ ಥ್ರಿಲ್ಲಿಂಗ್ ಸ್ಟೋರಿ ವೀಕ್ಷಕರಿಗೆ ಸಿಕ್ಕಾಪಟ್ಟೆ ಹಿಡಿಸಿದೆ.
5/7
Best Scam Movies On OTT: ಅತೀ ದೊಡ್ಡ ಹಗರಣದ ಸಿನಿಮಾಗಳನ್ನು ಓಟಿಟಿಯಲ್ಲಿ ನೋಡ್ಬೇಕಂದ್ರೆ ಇಲ್ಲಿದೆ ಲಿಸ್ಟ್ | Scam 1992, Raid, Farzi, Lucky Bhaskar, Jamtara Best Scam Movies On OTT - Filmibeat Kannada
/photo-gallery/scam-1992-raid-farzi-lucky-bhaskar-jamtara-best-scam-movies-on-ott-fb99341.html#photos-4
Bad Boy Billionaires (Netflix): ನೆಟ್‌ಫ್ಲಿಕ್ಸ್‌ನ 'ಬ್ಯಾಡ್ ಬಾಯ್ ಬಿಲಿಯನೇರ್' ಡಾಕ್ಯೂ ಸೀರಿಸ್ ಫೈನಾನ್ಷಿಯಲ್ ಹಗರಣಗಳನ್ನು ಇಟ್ಟುಕೊಂಡು ನಿರ್ಮಿಸಲಾಗಿದೆ. ಪ್ರತಿಯೊಂದು ಎಪಿಸೋಡ್ ಕೂಡ ಒಂದೊಂದು ಹಗರಣವನ್ನು ಎತ್ತಿ ಹಿಡಿಯುತ್ತಿದೆ. ಹಣ, ಅಧಿಕಾರ ಹಾಗೂ ಭ್ರಷ್ಟಾಚಾರವನ್ನು ಎತ್ತಿಹಿಡಿಯಲಾಗಿದೆ.
6/7
Best Scam Movies On OTT: ಅತೀ ದೊಡ್ಡ ಹಗರಣದ ಸಿನಿಮಾಗಳನ್ನು ಓಟಿಟಿಯಲ್ಲಿ ನೋಡ್ಬೇಕಂದ್ರೆ ಇಲ್ಲಿದೆ ಲಿಸ್ಟ್ | Scam 1992, Raid, Farzi, Lucky Bhaskar, Jamtara Best Scam Movies On OTT - Filmibeat Kannada
/photo-gallery/scam-1992-raid-farzi-lucky-bhaskar-jamtara-best-scam-movies-on-ott-fb99341.html#photos-5
Why Cheat India (Zee5):'ವೈ ಚೀಟ್ ಇಂಡಿಯಾ' ಇದು ಭಾರತದ ಅತೀ ದೊಡ್ಡ ಶೈಕ್ಷಣಿಕ ಹಗರಣ ಎಂದೇ ಹೇಳಲಾಗುತ್ತೆ. ಇಮ್ರಾನ್ ಹಾಶ್ಮಿ ನಟಿಸಿರುವ ಈ ಸಿನಿಮಾ ಜೀ 5ನಲ್ಲಿ ಲಭ್ಯವಿದೆ. ರಾಕೇಶ್ ಕುಮಾರ್ ಎಂಬ ಬುದ್ದಿವಂತ ಹುಡುಗ ಮೆಡಿಕಲ್ ಸೀಟ್ ಪಡೆಯುವ ಚೀಟ್ ಮಾಡಿದ ಬಳಿಕ ಈ ಹಗರಣದಲ್ಲಿ ಸಿಲುಕಿಕೊಳ್ಳವ ಕಥೆ ಇದಾಗಿದೆ.
7/7
Best Scam Movies On OTT: ಅತೀ ದೊಡ್ಡ ಹಗರಣದ ಸಿನಿಮಾಗಳನ್ನು ಓಟಿಟಿಯಲ್ಲಿ ನೋಡ್ಬೇಕಂದ್ರೆ ಇಲ್ಲಿದೆ ಲಿಸ್ಟ್ | Scam 1992, Raid, Farzi, Lucky Bhaskar, Jamtara Best Scam Movies On OTT - Filmibeat Kannada
/photo-gallery/scam-1992-raid-farzi-lucky-bhaskar-jamtara-best-scam-movies-on-ott-fb99341.html#photos-6
Jamtara (Netflix): ಜಾರ್ಖಂಡ್‌ನ ಪುಟ್ಟ ಪಟ್ಟಣದಲ್ಲಿ ಯುವಕರ ಗುಂಪೊಂದು ಇಂಟರ್‌ನೆಟ್‌ನ ಸ್ಕ್ಯಾಮ್ ಮಾಡುವುದು ಜಮ್ತಾರಾ ಸೀರಿಸ್‌ನ ತಿರುಳು. ಇಂದಿನ ಡಿಜಿಟಲ್ ಏಜ್‌ಗೆ ಸರಿ ಹೊಂದುವ ಸಿರೀಸ್ ಇದಾಗಿದ್ದ, ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ.