bredcrumb

ವೈರಲ್ ಆಯ್ತು ಅನಿಲ್ ಕಪೂರ್ ತಮ್ಮನ ಮಗಳ ಬೋಲ್ಡ್ ಲುಕ್...!

By Ghanshyam R
| Published: Monday, March 24, 2025, 21:45 [IST]

ಅನಿಲ್ ಕಪೂರ್ ಸಹೋದರ ಸಂಜಯ್ ಕಪೂರ್ ಅವರ ಮುದ್ದಿನ ಮಗಳು ಶನಾಯಾ ಕಪೂರ್. ಸ್ಟಾರ್ ಕಿಡ್ ಎಂಬ ಕಾರಣಕ್ಕೆ ಮೊದಲಿಂದ ತುಸು ಹೆಚ್ಚೇ  ಲೈಮ್ ಲೈಟ್‌ನಲ್ಲಿರುವ ಶನಾಯಾ ನೋಡಲು ರೂಪವತಿ ಕೂಡ ಹೌದು. ಈಗಾಗಲೇ ಹಿಂದಿ ಚಿತ್ರರಂಗಕ್ಕೆ ನಾಯಕಿಯಾಗಿ ಪ್ರವೇಶಿಸಿರುವ ಶನಾಯಾ  ಮೋಹನ್ ಲಾಲ್‌ ಅವರ ಚಿತ್ರದಲ್ಲಿ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ವಿಶೇಷ ಅಂದರೆ ಈ ಚಿತ್ರಕ್ಕೆ ಕನ್ನಡಿಗ ನಂದಕಿಶೋರ್ ನಿರ್ದೇಶನ ಇದೆ. ಇಂಥಾ ಶನಾಯಾ ಸದ್ಯ ಹೊಸ ಫೋಟೊಶೂಟ್ ಮೂಲಕ ಪಡ್ಡೆಹುಡುಗರ ಹೃದಯಕ್ಕೆ ಕಿಚ್ಚು ಹಚ್ಚಿದ್ದಾರೆ. 

Shanaya Kapoor Stuns in a Bold Olive Green Outfit
1/5

ಆಲಿವ್ ಗ್ರೀನ್ ಕಲರ್‌ ಬಟ್ಟೆಯಲ್ಲಿ ಶನಯಾ ಮಿರ ಮಿರ ಮಿಂಚಿದ್ದಾರೆ. ಮಿನಿ ಸ್ಕರ್ಟ್‌ ಮತ್ತು ಹಳದಿ ಬಣ್ಣದ ಹೈ ಹೀಲ್ ಶೂಗಳನ್ನು ಹಾಕಿಕೊಂಡಿರುವ ಶನಾಯಾ ಸದ್ಯ ತಮ್ಮ ಈ ಹೊಸ ಫೋಟೊಶೂಟ್ ಮೂಲಕ ಅನೇಕರ ಕಣ್ಮನ ಸೆಳೆಯುತ್ತಿದ್ದಾರೆ.
Shanaya Kapoor Stuns in a Bold Olive Green Outfit
2/5

ಒದ್ದೆ ಕೂದಲು, ನೀಳಕಾಯದ ಸೊಂಟ, ಕಣ್ಣಲ್ಲೇ ಕೊಲ್ಲುವ ನೋಟ ಮತ್ತು ಮಾದಕ ಮೈಮಾಟವನ್ನು ಕಂಡ ಪಡ್ಡೆ ಹುಡುಗರು ಸದ್ಯ ಶನಾಯಾ ಅವರ ಸೌಂದರ್ಯವನ್ನು ಹಾಡಿ ಹೊಗಳುತ್ತಿದ್ದಾರೆ. ಮೇಲಿಂದ ಮೇಲೆ ಈ ತರಹದ ಫೋಟೊಗಳನ್ನು ಹಂಚಿಕೊಳ್ಳಿ ಎಂದು ಮನವಿಯನ್ನು ಮಾಡಿಕೊಳ್ಳುತ್ತಿದ್ದಾರೆ.
Shanaya Kapoor Stuns in a Bold Olive Green Outfit
3/5

ಸದ್ಯ ಶನಾಯಾ ಅವರ ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಅನೇಕರ ಕಣ್ಣು ಕುಕ್ಕುತ್ತಿವೆ. ವೈರಲ್ ಆಗುತ್ತಿವೆ. ಕೇವಲ ನಾಲ್ಕು ಗಂಟೆಯಲ್ಲಿ 70,000 ಕ್ಕೂ ಅಧಿಕ ಲೈಕ್‌ಗಳು ಈ ಫೋಟೊಗಳಿಗೆ ಸಿಕ್ಕಿವೆ ಎಂದರೆ ಶನಾಯಾ ಮಾಡಿರುವ ಮೋಡಿ ಎಂತಹದ್ದು ಎನ್ನುವುದನ್ನು ನೀವೆ ಊಹಿಸಿ.
Shanaya Kapoor Stuns in a Bold Olive Green Outfit
4/5

4. ಇನ್ನುಳಿದಂತೆ ಶನಾಯಾ ಕಪೂರ್ ''ಬೇಧಡಕ್'' ಎಂಬ ಚಿತ್ರದ ಮೂಲಕ ಚಿತ್ರರಂಗವನ್ನು ಈಗಾಗಲೇ ಪ್ರವೇಶಿಸಿದ್ದಾರೆ. ಆದರೆ ಅಂದುಕೊಂಡ ಹೆಸರು ಆಗಲಿ ಅಥವಾ ಗೆಲುವು ಆಗಲಿ ಇವರಿಗೆ ಈ ಚಿತ್ರದ ಮೂಲಕ ಸಿಗಲಿಲ್ಲ.
Shanaya Kapoor Stuns in a Bold Olive Green Outfit
5/5

ಹೀಗಾಗಿಯೇ ದಕ್ಷಿಣದ ಕಡೆ ವಲಸೆ ಬಂದಿರುವ ಶನಾಯಾ ಕಪೂರ್, ಮೋಹನ್ ಲಾಲ್ ಅಭಿನಯದ ವೃಷಭ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ. ಹಾಲಿವುಡ್ ಮಾದರಿಯಲ್ಲಿ ನಿರ್ಮಾಣವಾಗುತ್ತಿರುವ ಭಾರತದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ ಈ ಚಿತ್ರವನ್ನು ಕನ್ನಡದ ಸ್ಟಾರ್ ಡೈರೆಕ್ಟರ್ ನಂದಕಿಶೋರ್ ನಿರ್ದೇಶನ ಮಾಡುತ್ತಿರುವುದು ಒಂದು ವಿಶೇಷವಾದರೆ ರಾಗಿಣಿ ದ್ವಿವೇದಿ ಕೂಡ ಈ ಚಿತ್ರದ ಪಾತ್ರಕ್ಕೆ ಬಣ್ಣ ಹಚ್ಚಿರುವುದು ಮತ್ತೊಂದು ವಿಶೇ‍ಷ.
X