bredcrumb

ವೀರ ಚಂದ್ರಹಾಸದಲ್ಲಿ ಶಿವಣ್ಣ ಅಬ್ಬರ, ಅನಾರೋಗ್ಯವಿದ್ದರೂ ಅಭಿನಯಿಸಿದ್ದರು ಕರುನಾಡ ಚಕ್ರವರ್ತಿ..!

By Umesh M
| Published: Monday, April 14, 2025, 09:37 [IST]

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕನ್ನಡ ಚಿತ್ರರಂಗ ಕಂಡ ಅಪರೂಪದ ಸ್ಟಾರ್. ಕ್ಲಾಸ್ - ಮಾಸ್ ಸೇರಿದಂತೆ ಯಾವ ಪಾತ್ರಕ್ಕಾದರೂ ಸೈ ಅನ್ನುವಂಥಾ ಮನಸ್ಥಿತಿ ಅವರದ್ದು. ಬಹುಶಃ ಡಾ. ರಾಜ್‌ಕುಮಾರ್ ಅವರನ್ನು ಬಿಟ್ಟರೆ ಶಿವಣ್ಣನಷ್ಟು ವೆರೈಟಿ ಪಾತ್ರಗಳನ್ನು ಮಾಡಿದ, ಹೊಸಾ ಪ್ರಯೋಗಗಳಿಗೂ ಒಗ್ಗಿಕೊಂಡ ಮತ್ತೋರ್ವ ನಟ ಶಿವರಾಜ್ ಕುಮಾರ್. ಇದಕ್ಕೆ ಮತ್ತೊಂದು ಕೈಗನ್ನಡಿ ಎಂಬಂತೆ ಶಿವಣ್ಣ ವೀರ ಚಂದ್ರಹಾಸ ಚಿತ್ರದಲ್ಲಿ ವಿಶೇ‍ಷ ಪಾತ್ರವನ್ನು ನಿರ್ವಹಿಸಿದ್ದಾರೆ. ಅನಾರೋಗ್ಯದ ನಡುವೆ ಕೂಡ ಕಲಾ ಸೇವೆಯನ್ನು ಮಾಡಿದ್ದಾರೆ. 

Shivarajkumar Steals the Spotlight in a Special Role in Veera Chandrahasa
1/5

ಉಗ್ರಂ ಮತ್ತು ಕೆ.ಜಿ.ಎಫ್ ಚಿತ್ರದ ಮೂಲಕ ಮನೆ ಮಾತಾದ, ನಿರ್ದೇಶಕರಾಗಿ ಕೂಡ ಈಗಾಗಲೇ ಗುರುತಿಸಿಕೊಂಡಿರುವ ರವಿ ಬಸ್ರೂರ್ ಸದ್ಯ ವೀರ ಚಂದ್ರಹಾಸ ಎಂಬ ಚಿತ್ರ ಮಾಡಿದ್ದಾರೆ. ಯಕ್ಷಗಾನ ಪ್ರಸಂಗ ಆಧಾರಿತ ಈ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Shivarajkumar Steals the Spotlight in a Special Role in Veera Chandrahasa
2/5

ಇದೇ ಮೊದಲ ಬಾರಿ ಯಕ್ಷಗಾನದ ಹಿನ್ನೆಲೆಯಲ್ಲಿ ನಿರೂಪಿಸಲಾದ ಈ ಚಿತ್ರದಲ್ಲಿ ಅಭಿನಯಿಸುವಾಗ ಶಿವಣ್ಣ ಅನಾರೋಗ್ಯಕ್ಕಿಡಾಗಿದ್ದರು. ಆದರೂ ಕೂಡ ಬೆಳಗ್ಗೆಯಿಂದ ಸಂಜೆಯವರೆಗೆ ಚಿತ್ರದ ಚಿತ್ರೀಕರಣದಲ್ಲಿ ಶಿವಣ್ಣ ಭಾಗಿಯಾಗಿದ್ದರು. ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಲು ತನು ಮನ ಅರ್ಪಿಸಿದರು. ಗಂಟೆ ಗಟ್ಟಲೆ ತಾಳ್ಮೆಯಿಂದ ಕುಳಿತು ಮೇಕಪ್ ಕೂಡ ಮಾಡಿಸಿಕೊಂಡರು.
Shivarajkumar Steals the Spotlight in a Special Role in Veera Chandrahasa
3/5

ಇನ್ನು, ಈ ಪಾತ್ರಕ್ಕೆ ಶಿವಣ್ಣ ಅವರೇ ಸೂಕ್ತ ಎಂದು ಮೊದಲಿಂದ ಅಂದುಕೊಂಡಿದ್ದ ರವಿ ಬಸ್ರೂರ್, ದಕ್ಷಿಣ ಕನ್ನಡ ಜಿಲ್ಲೆಯ ಗಂಡು ಕಲೆಯನ್ನು ಈ ಚಿತ್ರದ ಮೂಲಕ ತೆರೆಯ ಮೇಲೆ ತರುತ್ತಿದ್ದಾರೆ. ಚಂದನ್ ಶೆಟ್ಟಿ, ಪುನೀತ್, ಗರುಡರಾಮ್ ಹೀಗೆ ಅನೇಕರು ಈ ಚಿತ್ರಕ್ಕೆ ಬಣ್ಣ ಹಚ್ಚಿರುವುದು ಮತ್ತೊಂದು ವಿಶೇಷ.
Shivarajkumar Steals the Spotlight in a Special Role in Veera Chandrahasa
4/5

400 ರಿಂದ 500 ಯಕ್ಷಗಾನ ಕಲಾವಿದರು ಈ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಕೇವಲ ಹೆಬ್ಬಾಳದ ಮೈದಾನವೊಂದರಲ್ಲಿಯೇ 35 ರಿಂದ 40 ದಿನ ಈ ಚಿತ್ರದ ಚಿತ್ರೀಕರಣವನ್ನು ರವಿ ಬಸ್ರೂರ್ ಮಾಡಿದ್ದಾರೆ. ಪ್ರಭು ಬಡಿಗೇರ್ ಚಿತ್ರದ ಸೆಟ್‌ಗಳನ್ನು ನಿರ್ಮಾಣ ಮಾಡಿದ್ದು, ಈ ಭಾಗದ ಚಿತ್ರೀಕರಣಕ್ಕೆ 10 ಕೋಟಿ ಹಣವನ್ನು ನಿರ್ಮಾಪಕರು ಸುರಿದಿದ್ದಾರೆ ಎನ್ನುವ ಸುದ್ದಿ ಇದೆ.
Shivarajkumar Steals the Spotlight in a Special Role in Veera Chandrahasa
5/5

ಏಪ್ರಿಲ್ 18ರಂದು ಬಿಡುಗಡೆಯಾಗಲಿರುವ ಈ ಚಿತ್ರವನ್ನು ಗೆಲುವಿನ ದಡಕ್ಕೆ ತಲುಪಿಸುವ ಜವಾಬ್ದಾರಿಯನ್ನು ಹೊಂಬಾಳೆ ಸಂಸ್ಥೆ ವಹಿಸಿಕೊಂಡಿದೆ. ಇನ್ನು ತೆಲುಗು ನಿರ್ಮಾಪಕರು ಈಗಾಗಲೇ ಚಿತ್ರದ ರಿಮೇಕ್ ಹಕ್ಕುಗಳನ್ನು ಕೂಡ ಪಡೆದಿದ್ದಾರೆ ಎನ್ನುವ ಮಾತು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ.
X