bredcrumb

ಪೆದ್ದಮ್ಮ ತಲ್ಲಿ ಮೊರೆ ಹೋದ ತಮನ್ನಾ, ವಸಿಷ್ಠ

By Kannada Filmibeat Photos
| Published: Wednesday, March 26, 2025, 22:24 [IST]

ತೆಲುಗಿನ 'ಒದೆಲಾ-2' ಸಿನಿಮಾ ಏಪ್ರಿಲ್ 17ರಂದು ತೆರೆಗೆ ಬರ್ತಿದೆ. ಅಶೋಕ್ ತೇಜಾ ನಿರ್ದೇಶನದ ಥ್ರಿಲ್ಲರ್ ಚಿತ್ರದಲ್ಲಿ ತಮನ್ನಾ ನಟಿಸಿದ್ದಾರೆ. ಮತ್ತೊಂದು ಮುಖ್ಯ ಪಾತ್ರದಲ್ಲಿ ಕನ್ನಡ ನಟ ವಸಿಷ್ಠ ಸಿಂಹ ಅಬ್ಬರಿಸಿದ್ದಾರೆ. ಸದ್ಯ ಸಿನಿಮಾ ಪ್ರಚಾರ ಆರಂಭಿಸಿದೆ ಚಿತ್ರತಂಡ. ಇದೇ ವೇಳೆ ಹೈದರಾಬಾದ್‌ನಲ್ಲಿರುವ ಪೆದ್ದಮ್ಮ ತಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

Tamannaah and team seeks blessings at Peddamma thalli temple for odela- 2
1/5

ಹೈದರಾಬಾದ್‌ನಲ್ಲಿರುವ ಪೆದ್ದಮ್ಮ ತಲ್ಲಿ ಆಲಯಕ್ಕೆ 'ಒದೆಲಾ- 2' ಚಿತ್ರತಂಡ ಭೇಟಿ ನೀಡಿದೆ. ಚಿತ್ರದ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿದೆ. ಅಶೋರ್ ತೇಜಾ ನಿರ್ದೇಶನದ ಚಿತ್ರದಲ್ಲಿ ತಮನ್ನಾ ಲೀಡ್ ರೋಲ್‌ನಲ್ಲಿ ಮಿಂಚಿದ್ದಾರೆ.
Tamannaah and team seeks blessings at Peddamma thalli temple for odela- 2
2/5

ಹಳದಿ ಬಣ್ಣದ ಸಲ್ವಾರ್ ಧರಿಸಿದ್ದ ತಮನ್ನಾ ಕೆಂಪು ಬಣ್ಣದ ಶಾಲು ತೊಟ್ಟು ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ನಿರ್ದೇಶಕ ನಟ ವಸಿಷ್ಠ ಸಿಂಹ ಕೂಡ ಈ ವೇಳೆ ಜೊತೆಗಿದ್ದರು.
Tamannaah and team seeks blessings at Peddamma thalli temple for odela- 2
3/5

'ಒದೆಲಾ- 2' ಚಿತ್ರದ ನಿರ್ದೇಶಕ ಅಶೋಕ್ ತೇಜ, ಬರಹಗಾರ ಸಂಪತ್ ನಂದಿ ಕೂಡ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಏಪ್ರಿಲ್ 17ಕ್ಕೆ ಸಿನಿಮಾ ತೆರೆಗೆ ಬರಲಿದೆ. ಚಿತ್ರದ ಪ್ರಚಾರ ದೊಡ್ಡಮಟ್ಟದಲ್ಲಿ ನಡೆಯಲಿದೆ.
Tamannaah and team seeks blessings at Peddamma thalli temple for odela- 2
4/5

ಪ್ರಯಾಗ್‌ರಾಜ್ ಕುಂಭಮೇಳದಲ್ಲಿ 'ಒದೆಲಾ- 2' ಚಿತ್ರದ ಟೀಸರ್ ರಿಲೀಸ್ ಮಾಡಿ ಚಿತ್ರತಂಡ ಗಮನ ಸೆಳೆದಿತ್ತು. ಇದೀಗ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದ್ದಾರೆ.
Tamannaah and team seeks blessings at Peddamma thalli temple for odela- 2
5/5

'ಒದೆಲಾ ರೈಲ್ವೆ ಸ್ಟೇಷನ್' ಚಿತ್ರದ ಸೀಕ್ವೆಲ್ ಇದು. ಆ ಚಿತ್ರದಲ್ಲಿ ತಿರುಪತಿ ಎಂಬ ಪಾತ್ರದಲ್ಲಿ ಮಿಂಚಿದ್ದ ವಸಿಷ್ಠ 2ನೇ ಭಾಗದಲ್ಲಿ ಅದೇ ಪಾತ್ರ ಮುಂದುವರೆಸುತ್ತಿದ್ದಾರೆ. 'ಒದೆಲಾ- 2' ಸಿನಿಮಾ ಕುತೂಹಲ ಮೂಡಿಸಿದೆ.
X