bredcrumb

ಕಲಾವಿದ' ನಟಿ ಹೀರಾ ರಾಜಗೋಪಾಲ್ ಪ್ರೀತಿ; ಬ್ರೇಕಪ್ ಬಳಿಕ ಆಕೆ 'ಡ್ರಗ್‌ ಅಡಿಕ್ಟ್' ಎಂದಿದ್ದ ಅಜಿತ್

By Syed Ameenuddin
| Published: Tuesday, January 14, 2025, 10:36 [IST]

ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್ ಮದುವೆಗೂ ಮುನ್ನ ನಟಿ ಹೀರಾ ರಾಜ್‌ಗೋಪಾಲ್ ಪ್ರೀತಿಯಲ್ಲಿ ಬಿದ್ದಿದ್ದರು. ಇದು ಅವರ ಬದುಕಿನ ಅಧ್ಯಾಯಗಳಲ್ಲಿ ಒಂದು. ಈ ನಟಿ ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿದ ಕಲಾವಿದ ಹಾಗೂ ಯಾರೇ ನೀನು ಚೆಲುವೆ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಅಜಿತ್ ಹಾಗೂ ಹೀರಾ ರಾಜ್‌ಗೋಪಾಲ್ 'ಕಾದಲ್ ಕೊಟ್ಟೈ' ಹಾಗೂ 'ತೋಡರು' ಸಿನಿಮಾದಲ್ಲಿ ನಟಿಸುವ ವೇಳೆ ಪ್ರೀತಿಯಲ್ಲಿ ಬಿದ್ದಿದ್ದರು.  ಆದರೆ, ಇವರ ಪ್ರೀತಿ 1998ರಲ್ಲಿ ಮುರಿದು ಬಿತ್ತು. ಬಳಿಕ ಶಾಲಿನಿಯನ್ನು 2000ರಲ್ಲಿ ವಿವಾಹವಾದರು. 

Ajith Kumar affair with Heera Rajagopal
1/5

ಕನ್ನಡದಲ್ಲಿ ರವಿಚಂದ್ರನ್ ಸಿನಿಮಾಗಳಲ್ಲಿ ನಟಿಸಿರುವ ನಟಿ ಹೀರಾ ರಾಜ್‌ಗೋಪಾಲ್ ದಕ್ಷಿಣ ಭಾರತದಲ್ಲಿ ಫೇಮಸ್. ತಮಿಳು, ತೆಲುಗು,ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. 1991ರಲ್ಲಿ ತೆರೆಕಂಡ 'ಇದಯಂ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.
Ajith Kumar affair with Heera Rajagopal
2/5

ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್ ಹಾಗೂ ಹೀರಾ ರಾಜ್‌ಗೋಪಾಲ್ ಇಬ್ಬರೂ 'ಕಾದಲ್ ಕೊಟ್ಟೈ' (1996) ಹಾಗೂ 'ತೋಡರುಂ' (1997) ಸಿನಿಮಾದ ಶೂಟಿಂಗ್ ವೇಳೆ ಪ್ರೀತಿಯಲ್ಲಿ ಬಿದ್ದಿದ್ದರು.
Ajith Kumar affair with Heera Rajagopal
3/5

ಅಜಿತ್ ಕುಮಾರ್ ಹಾಗೂ ಹೀರಾ ರಾಜ್‌ಗೋಪಾಲ್ ಎರಡು ವರ್ಷಗಳ ಕಾಲ ಪ್ರೀತಿ ಮಾಡಿದ್ದರು. ಅಜಿತ್ ನಟಿ ಹೀರಾ ರಾಜ್‌ಗೋಪಾಲ್‌ಗೆ ಲವ್ ಲೆಟರ್ ಬರೆದಿದ್ದು, ರೊಮ್ಯಾನ್ಸ್ ಎಲ್ಲವೂ ಚಿತ್ರರಂಗಕ್ಕೆ ತಿಳಿದಿತ್ತು.
Ajith Kumar affair with Heera Rajagopal
4/5

1996ರಲ್ಲಿ ಶುರುವಾಗಿದ್ದ ಇವರ ಪ್ರೀತಿ ಕೇವಲ ಎರಡೇ ವರ್ಷಗಳಲ್ಲಿ ಕೊನೆಯಾಗಿತ್ತು. 1998ರಲ್ಲಿ ಇಬ್ಬರೂ ಬೇರೆಯಾದರು. ಹೀರಾ ರಾಜ್‌ಗೋಪಾಲ್ ವರ್ತನೆಯಲ್ಲಿ ಬದಲಾವಣೆ ಕಾಣಿಸಿಕೊಂಡಿತ್ತು ಎಂದು ಅಜಿತ್ ಹೇಳಿದ್ದರು. ಅಷ್ಟೇ ಅಲ್ಲದೆ. 'ಡ್ರಗ್ ಅಡಿಕ್ಟ್' ಆಗಿದ್ದರು ಎಂದು ಸಂದರ್ಶನದಲ್ಲಿ ಹೇಳಿದ್ದರು.
Ajith Kumar affair with Heera Rajagopal
5/5

ಹೀರಾ ರಾಜ್‌ಗೋಪಾಲ್ ಜೊತೆ ಬ್ರೇಕಪ್ ಮಾಡಿಕೊಂಡ ಬಳಿಕ ಅಜಿತ್ ಕುಮಾರ್ ನಟಿ ಶಾಲಿನಿಯೊಂದಿಗೆ 2000ದಲ್ಲಿ ವಿವಾಹವಾದರು. ಅವರಿಗೆ ಇಬ್ಬರು ಮಕ್ಕಳು ಇದ್ದಾರೆ.
X