bredcrumb

ದಳಪತಿ ವಿಜಯ್ ನಟನೆ ಕೊನೆಯ ಸಿನಿಮಾ ಜನ ನಾಯಗನ್ ಸಿನಿಮಾ ರಿಲೀಸ್ ಡೇಟ್ ಅನೌನ್ಸ್

By Umesh M
| Published: Tuesday, March 25, 2025, 10:32 [IST]

ದಳಪತಿ ವಿಜಯ್ ಕೊನೆಯ ಸಿನಿಮಾ 'ಜನ ನಾಯಗನ್' ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ವಿಜಯ್ ನಟಿಸುತ್ತಿರುವ ಕೊನೆಯ ಸಿನಿಮಾ ಆಗಿದ್ದರಿಂದ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾ ಜನವರಿ 9, 2026ರಂದು ರಿಲೀಸ್ ಆಗಲಿದೆ ಎಂದು ಅಧಿಕೃತವಾಗಿ ಅನೌನ್ಸ್ ಮಾಡಲಾಗಿದೆ. ಎಚ್.ವಿನೋದ್ ನಿರ್ದೇಶಿಸುತ್ತಿರುವ ಈ ಆಕ್ಷನ್ ಕಮ್ ಪೊಲಿಟಿಕಲ್ ಡ್ರಾಮಗಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.  

Thalapathy Vijay last film Jana Nayagan official release date announced
1/4

ದಳಪತಿ ವಿಜಯ್ ನಟನೆಯ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಜನ ನಾಯಗನ್'. ಈ ಸಿನಿಮಾಗಾಗಿ ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಇದು ವಿಜಯ್ ನಟಿಸುತ್ತಿರುವ ಕೊನೆಯ ಸಿನಿಮಾ ಆಗಿದೆ. ಈ ಸಿನಿಮಾವನ್ನು ಎಚ್.ವಿನೋದ್ ನಿರ್ದೇಶಿಸುತ್ತಿದ್ದು, ಕೆವಿಎನ್ ಪ್ರೊಡಕ್ಷನ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಈ ಸಿನಿಮಾ ಜನವರಿ 9, 2026ರಂದು ರಿಲೀಸ್ ಆಗುತ್ತಿದೆ.
Thalapathy Vijay last film Jana Nayagan official release date announced
2/4

2026ರ ಪೊಂಗಲ್‌ಗೆ ರಿಲೀಸ್ ಆಗುತ್ತಿರುವ ಈ ಸಿನಿಮಾ ಮೇಲೆ ನಿರೀಕ್ಷೆ ದುಪ್ಪಟ್ಟಿದೆ. ಈ ಸಿನಿಮಾದಲ್ಲಿ ವಿಜಯ್ ಒಬ್ಬ ಜನ ನಾಯಕನಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಪೋಸ್ಟರ್ ಸಿಕ್ಕಾಪಟ್ಟೆ ಹವಾ ಸೃಷ್ಟಿಸಿತ್ತು. ಈ ಸಿನಿಮಾದಲ್ಲಿ ರಾಜಕೀಯದ ಎಲಿಮೆಂಟ್ಸ್ ಜೊತೆ ಜೊತೆಗೆ ಆಕ್ಷನ್ ಕೂಡ ನಿರೀಕ್ಷೆ ಮಾಡಬಹುದಾಗಿದೆ.
Thalapathy Vijay last film Jana Nayagan official release date announced
3/4

'ಜನ ನಾಯಗನ್' ಇದು ದಳಪತಿ ವಿಜಯ್ ನಟನೆಯ 69ನೇ ಸಿನಿಮಾ. ಈಗಾಗಲೇ ಇದು ವಿಜಯ್ ನಟನೆಯ ಕೊನೆಯ ಸಿನಿಮಾ ಎಂದು ವರದಿಯಾಗಿದೆ. ಈ ಸಿನಿಮಾದಲ್ಲಿ ವಿಜಯ್ ಜೊತೆ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಪ್ರಿಯಾಮಣಿ, ಗೌತಮ್ ವಾಸುದೇವ್ ಮೆನನ್ ಹಾಗೂ ಪ್ರಕಾಶ್ ರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾಗೆ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ನೀಡುತ್ತಿದ್ದು, ಕೊನೆಯ ಸಿನಿಮಾ ಪವರ್‌ಫುಲ್ ಸಾಂಗ್ ಅನ್ನು ಕಂಪೋಸ್ ಮಾಡುತ್ತಿದ್ದಾರೆ.
Thalapathy Vijay last film Jana Nayagan official release date announced
4/4

ಈ ಸಿನಿಮಾ ರಾಜಕೀಯ ಹಿನ್ನೆಲೆಯುಳ್ಳ ಸಿನಿಮಾ ಎಂದು ನಿರೀಕ್ಷೆ ಮಾಡಲಾಗಿದೆ. ಜೊತೆಗೆ ಹೈ ಆಕ್ಷನ್ ಸೀನ್‌ಗಳನ್ನು ನೋಡಬಹುದು. ತಮಿಳು ನಾಡಿನ ರಾಜಕೀಯ ಹಿನ್ನೆಲೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ ಎನ್ನಲಾಗಿದೆ. ವಿಜಯ್ ಕೊನೆಯ ಸಿನಿಮಾ ಆಗಿರುವುದರಿಂದ ಬ್ಲಾಕ್ ಬಸ್ಟರ್ ಮಾಡುವುದಕ್ಕೆ ತಂಡ ಪಣ ತೊಟ್ಟಿದೆ ಎನ್ನಲಾಗಿದೆ.
X