bredcrumb

ಉಪ್ಪಿ 'UI' ಸಿನಿಮಾ ಕಿರುತೆರೆಗೆ ಎಂಟ್ರಿ; ಮುಹೂರ್ತ ಫಿಕ್ಸ್

By Umesh M
| Published: Thursday, March 27, 2025, 20:31 [IST]

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ನಟಿಸಿದ 'ಯುಐ' ಸಿನಿಮಾ ಟಿವಿಗೆ ಬರ್ತಿದೆ. ಯುಗಾದಿ ಹಬ್ಬದ ಸಂಭ್ರಮದಲ್ಲಿ ಇದೇ ಭಾನುವಾರ ಚಿತ್ರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಕಳೆದ ವರ್ಷ ಕೊನೆಗೆ ಸಿನಿಮಾ ತೆರೆಗೆ ಬಂದಿತ್ತು. ಬಹಳ ತಡವಾಗಿ ಟಿವಿ ಹಾಗೂ ಓಟಿಟಿಗೆ ಬರ್ತಿದೆ. 10 ವರ್ಷಗಳ ಬಳಿಕ ಉಪ್ಪಿ ನಿರ್ದೇಶಿಸಿದ್ದ ಚಿತ್ರ ಇದು. ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು.

Upendra starrer UI locks its worldwide TV premiere date
1/5

ಅಂತೂ ಇಂತೂ 'ಯುಐ' ಸಿನಿಮಾ ಸ್ಮಾಲ್ ಸ್ಕ್ರೀನ್‌ಗೆ ಎಂಟ್ರಿ ಕೊಡುತ್ತಿದೆ. ಇದೇ ಭಾನುವಾರ(ಮಾರ್ಚ್ 30) ಯುಗಾದಿ ಸಂಭ್ರಮದಲ್ಲಿ ಸಿನಿಮಾ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿದೆ. ಸಂಜೆ 4.30ಕ್ಕೆ ಸಿನಿಮಾ ಹಾಕುವುದಾಗಿ ಪ್ರೋಮೊ ಸಹ ಬಿಡುಗಡೆ ಆಗಿದೆ.
Upendra starrer UI locks its worldwide TV premiere date
2/5

ಡಿಸೆಂಬರ್ 20ರಂದಯ 'ಯುಐ' ಸಿನಿಮಾ ತೆರೆಗೆ ಬಂದಿತ್ತು. ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಕೆಲವರಿಗೆ ಅದ್ಭುತ ಎನಿಸಿದರೆ ಮತ್ತೆ ಕೆಲವರಿಗೆ ಬೇಸರ ಮೂಡಿಸಿತ್ತು. ಮಿಶ್ರ ಪ್ರತಿಕ್ರಿಯೆ ನಡುವೆಯೂ ಸಿನಿಮಾ ಉತ್ತಮ ಪ್ರದರ್ಶನ ಕಂಡಿತ್ತು.
Upendra starrer UI locks its worldwide TV premiere date
3/5

'ಯುಐ' ಸಿನಿಮಾ ತೆರೆಕಂಡ 5 ದಿನಗಳ ಬಳಿಕ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ರಿಲೀಸ್ ಆಗಿತ್ತು. ಹಾಗಾಗಿ ಮಿಶ್ರಪ್ರತಿಕ್ರಿಯೆ ಪಡೆದಿದ್ದ 'ಯುಐ' ಚಿತ್ರದ ಗಳಿಕೆ ಕುಸಿಯಿತು. ಜನರ ಫೋಕಸ್ ಆಕ್ಷನ್ ಥ್ರಿಲ್ಲರ್ 'ಮ್ಯಾಕ್ಸ್' ಸಿನಿಮಾ ಕಡೆ ತಿರುಗಿತು.
Upendra starrer UI locks its worldwide TV premiere date
4/5

ಬಾಕ್ಸಾಫೀಸ್‌ನಲ್ಲಿ 'ಯುಐ' ಹಾಗೂ 'ಮ್ಯಾಕ್ಸ್' ಚಿತ್ರಗಳ ನಡುವೆ ಭಾರೀ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ 'ಮ್ಯಾಕ್ಸ್' ಸಿನಿಮಾ ಗೆದ್ದಿತ್ತು. ಉಪ್ಪಿ ತಮ್ಮ ವಿಭಿನ್ನ ಆಲೋಚನೆಯ ಸಿನಿಮಾ ಮೂಲಕ ಮತ್ತೊಮ್ಮೆ ಗಮನ ಸೆಳೆದರು.
Upendra starrer UI locks its worldwide TV premiere date
5/5

ಸಾಮಾನ್ಯವಾಗಿ ಸಿನಿಮಾಗಳು ಓಟಿಟಿಗೆ ಬಂದ ಬಳಿಕ ಟಿವಿಯಲ್ಲಿ ಪ್ರಸಾರ ಆಗುತ್ತವೆ. ಆದರೆ 'ಯುಐ' ಸಿನಿಮಾ ಇನ್ನು ಓಟಿಟಿಗೂ ಬಂದಿಲ್ಲ. ಭಾನುವಾರ ಸಂಜೆ ಜೀ ಕನ್ನಡ ವಾಹಿನಿ ಜೊತೆಗೆ ಜೀ-5 ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಕೂಡ ಸಿನಿಮಾ ವೀಕ್ಷಣೆಗೆ ಸಿಗುವ ಸಾಧ್ಯತೆಯಿದೆ.
X