bredcrumb

ವೈಷ್ಣವಿ ಗೌಡ ಎಂಗೇಜ್‌ಮೆಂಟ್ ಫೋಟೊಗಳು

By Umesh M
| Published: Tuesday, April 15, 2025, 13:38 [IST]

ಕನ್ನಡ ಕಿರುತೆರೆ ನಟಿ ವೈಷ್ಣವಿ ಗೌಡ ಮದುವೆ ಫಿಕ್ಸ್ ಆಗಿದೆ. ಏರ್‌ಫೋರ್ಸ್‌ನಲ್ಲಿ ಕೆಲಸ ಮಾಡುವ ಅನುಕೂಲ್ ಮಿಶ್ರಾ ಎಂಬುವವರ ಜೊತೆ ವೈಷ್ಣವಿ ಹೊಸ ಜೀವನಕ್ಕೆ ಕಾಲಿಡಲು ಮುಂದಾಗಿದ್ದಾರೆ. ತಮ್ಮ ಎಂಗೇಜ್‌ಮೆಂಟ್ ಫೋಟೊಗಳನ್ನು ಸ್ವತಃ ವೈಷ್ಣವಿ ಹಂಚಿಕೊಂಡಿದ್ದಾರೆ. ಒಂದು ವ್ಲಾಗ್ ವೀಡಿಯೋವನ್ನು ಕೂಡ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಜೋಡಿಗೆ ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.

Vaishnavi Gowda shares photos with Anukool Mishra from engagement
1/6

ಸ್ಯಾಂಡಲ್‌ವುಡ್ ಅಂಗಳದಲ್ಲಿ ಶುಭಾ ಸಮಾರಂಭಗಳ ಪರ್ವ ಮುಂದುವರೆದಿದೆ. ಕನ್ನಡ ಕಿರುತೆರೆ ನಟಿ ವೈಷ್ಣವಿ ಗೌಡ ಇದೀಗ ಹಸೆಮಣೆ ಏರಲು ಸಜ್ಜಾಗಿದ್ದಾರೆ. 'ಅಗ್ನಿಸಾಕ್ಷಿ', 'ಸೀತಾರಾಮ' ಧಾರಾವಾಹಿಗಳಲ್ಲಿ ನಟಿಸಿ ವೈಷ್ಣವಿ ಮೋಡಿ ಮಾಡಿದ್ದಾರೆ. ಇದೀಗ ಅನುಕೂಲ್ ಮಿಶ್ರಾ ಎಂಬುವವರ ಜೊತೆ ಮದುವೆಗೆ ಸಜ್ಜಾಗುತ್ತಿದ್ದಾರೆ.
Vaishnavi Gowda shares photos with Anukool Mishra from engagement
2/6

ಖಾಸಗಿ ರೆಸಾರ್ಟ್‌ನಲ್ಲಿ ವೈಷ್ಣವಿ ಗೌಡ ಹಾಗೂ ಅನುಕೂಲ್ ಮಿಶ್ರಾ ಎಂಗೇಜ್‌ಮೆಂಟ್ ಬಹಳ ಅದ್ಧೂರಿಯಾಗಿ ನಡೆದಿದೆ. ಬೆಳಗ್ಗೆ ಸಂಪ್ರದಾಯಬದ್ಧವಾಗಿ ನಿಶ್ಚಿತಾರ್ಥ ಶಾಸ್ತ್ರ ನಡೆದಿದ್ದು ಸಂಜೆ ಭರ್ಜರಿ ಪಾರ್ಟಿ ಮಾಡಿ ಎಂಜಾಯ್ ಮಾಡಿದ್ದಾರೆ. ಮುಖ್ಯಮಂತ್ರಿ ಚಂದ್ರು, ಅಮೂಲ್ಯ ಸೇರಿ ಹಲವರು ಈ ಸಮಾರಂಭಕ್ಕೆ ಸಾಕ್ಷಿ ಆಗಿದ್ದಾರೆ.
Vaishnavi Gowda shares photos with Anukool Mishra from engagement
3/6

ಈ ಹಿಂದೆ ಬೆಂಗಳೂರು ಏರ್‌ಶೋನಲ್ಲಿ ವೈಷ್ಣವಿ ಗೌಡ ಭಾಗಿ ಆಗಿದ್ದರು. ಆಗ ಅಕಾಯ್‌ಗೆ ಥ್ಯಾಂಕ್ಸ್ ಹೇಳಿ ಪೋಸ್ಟ್ ಮಾಡಿದ್ದರು. ಅದೇ ಸಮಯದಲ್ಲಿ ಕೆಲವರು ಅನುಮಾನ ಮೂಡಿತ್ತು. ಕೆಲ ದಿನಗಳ ಹಿಂದೆಯೇ ಇಬ್ಬರ ಮದುವೆ ಫಿಕ್ಸ್ ಆಗಿತ್ತು. ಇದೀಗ ಎಂಗೇಜ್‌ಮೆಂಟ್ ನಡೆದಿದೆ.
Vaishnavi Gowda shares photos with Anukool Mishra from engagement
4/6

ನಿಶ್ಚಿತಾರ್ಥ ಶಾಸ್ತ್ರದಲ್ಲಿ ವೈಷ್ಣವಿ ಕ್ರೀಮ್ ಕಲರ್ ಲೆಹಂಗಾದಲ್ಲಿ ಮಿಂಚಿದ್ದಾರೆ. ಇನ್ನು ಅನುಕೂಲ್ ಶೇರ್ವಾಣಿ ಧರಿಸಿ ಕಾಣಿಸಿಕೊಂಡಿದ್ದಾರೆ. ಎಂಗೇಜ್‌ಮೆಂಟ್ ಸಮಯದಲ್ಲಿ ಮಳೆ ಬಂದಿದ್ದು ಜೋಡಿ ಕೊಡೆ ಹಿಡಿದು ಓಡಾಡಿರುವುದನ್ನು ವೀಡಿಯೋದಲ್ಲಿ ಸೆರೆಹಿಡಿಯಲಾಗಿದೆ.
Vaishnavi Gowda shares photos with Anukool Mishra from engagement
5/6

ಈ ಹಿಂದೆ ವಿದ್ಯಾಭರಣ್ ಎಂಬುವವರ ಜೊತೆ ವೈಷ್ಣವಿ ಗೌಡ ಮದುವೆ ಮಾತುಕತೆ ನಡೆದಿತ್ತು. ಹೂ ಮುಡಿಸುವ ಶಾಸ್ತ್ರ ಕೂಡ ಮುಗಿದಿತ್ತು. ಅಷ್ಟರಲ್ಲಿ ಒಂದು ಆಡಿಯೋ ಕ್ಲಿಪ್ ವೈರಲ್ ಆಗಿ ವಿವಾದ ಶುರುವಾಗಿತ್ತು. ಬಳಿಕ ಆ ಸಂಬಂಧ ಮುರಿದು ಬಿದ್ದಿತ್ತು. ಇದೀಗ ಅನುಕೂಲ್ ಜೊತೆ ವೈಷ್ಣವಿ ಮದುವೆಗೆ ಸಜ್ಜಾಗುತ್ತಿದ್ದಾರೆ.
Vaishnavi Gowda shares photos with Anukool Mishra from engagement
6/6

ವೈಷ್ಣವಿ - ಅನುಕೂಲ್ ಮದುವೆ ದಿನಾಂಕ ನಿಗದಿಯಾಗಿಲ್ಲ. ಸದ್ಯ ಜೋಡಿಗೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಅಭಿನಂದನೆ ತಿಳಿಸುತ್ತಿದ್ದಾರೆ. ಆಪ್ತರು, ಸ್ನೇಹಿತರು ಈ ಎಂಗೇಜ್‌ಮೆಂಟ್ ಸಮಾರಂಭಕ್ಕೆ ಸಾಕ್ಷಿ ಆಗಿದ್ದಾರೆ. ಜೋಡಿ ವೇದಿಕೆಯಲ್ಲಿ ಡ್ಯಾನ್ಸ್ ಮಾಡಿ ಎಂಜಾಯ್ ಮಾಡಿದೆ.
X