By
Umesh M
| Published: Wednesday, April 23, 2025, 09:40 [IST]
ಸಮಸ್ಯೆಗಳಿಗೆ ಆತ್ಮಹತ್ಯೆ ಒಂದೇ ಪರಿಹಾರ ಅಲ್ಲ. ಸಮಸ್ಯೆಗಳನ್ನು ಎದುರಿಸಿ ಬದುಕುವ ಶಕ್ತಿ ಹೊಂದಬೇಕು. ಸಮಸ್ಯೆ ಬಂದಾಗ ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಆದರೆ ವಿಶ್ವದೆಲ್ಲೆಡೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಕೇವಲ ಜನಸಾಮಾನ್ಯರು ಮಾತ್ರವಲ್ಲ. ಬೆಳ್ಳಿತೆರೆ ಮತ್ತು ಕಿರುತೆರೆಯಲ್ಲಿ ಹೆಸರು ಮಾಡಿದವರು ಕೂಡ ಈ ಒತ್ತಡದ ಬದುಕಿನಿಂದ ಬೇಸತ್ತು ಸಾವಿಗೆ ಶರಣಾಗುತ್ತಿದ್ದಾರೆ. ಇದಕ್ಕೆ ಮತ್ತೊಂದು ಕೈಗನ್ನಡಿ ಎಂಬಂತೆ ಬಾಳಿ ಬದುಕಬೇಕಿದ್ದ 36 ವರ್ಷದ ಖ್ಯಾತ ಕಿರುತೆರೆ ನಟ ಲಲಿತ್ ಮಂಚಂದ ಆತ್ಮಹತ್ಯೆಗೆ ಶರಣಾಗಿದ್ದಾರೆ.
1/5
36ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದ ಖ್ಯಾತ ನಟ ಲಲಿತ್ ಮಂಚಂದ ಹಿನ್ನಲೆ ಏನು ? | Who Exactly Is Lalit Manchanda From The Show Taarak Mehta Ka Ooltah Chashmah - Filmibeat Kannada
/photo-gallery/who-exactly-is-lalit-manchanda-from-the-show-taarak-mehta-ka-ooltah-chashmah-fb102312.html
ಹಿಂದಿಯ ಪ್ರಸಿದ್ಧ ಧಾರಾವಾಹಿ ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ ಖ್ಯಾತಿಯ ಲಲಿತ್ ಮಂಚಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಉತ್ತರ ಪ್ರದೇಶದ ಮೀರತ್‌ನಲ್ಲಿರುವ ತಮ್ಮ ನಿವಾಸದಲ್ಲಿ 36ರ ಹರೆಯದ ಲಲಿತ್ ಮಂಚಂದ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದು ಹಿಂದಿ ಕಿರುತೆರೆ ಲೋಕ ಈ ಸುದ್ದಿಯನ್ನು ಕೇಳಿ ಶೋಕದಲ್ಲಿ ಮುಳುಗಿದೆ. ಸಂತಾಪ ಸೂಚಿಸಿದೆ.
2/5
36ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದ ಖ್ಯಾತ ನಟ ಲಲಿತ್ ಮಂಚಂದ ಹಿನ್ನಲೆ ಏನು ? | Who Exactly Is Lalit Manchanda From The Show Taarak Mehta Ka Ooltah Chashmah - Filmibeat Kannada
/photo-gallery/who-exactly-is-lalit-manchanda-from-the-show-taarak-mehta-ka-ooltah-chashmah-fb102312.html#photos-1
ಆತ್ಮಹತ್ಯೆಗೆ ನಿಖರವಾದ ಕಾರಣ ಸದ್ಯ ಗೊತ್ತಾಗದಿದ್ದರು ಲಲಿತ್ ಮಂಚಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಹಣಕಾಸಿನ ಕೊರತೆಯಿಂದಾಗಿ ಆರು ತಿಂಗಳ ಹಿಂದೆ ಮುಂಬೈನ ಮನೆ ಖಾಲಿ ಮಾಡಿ ಮರಳಿ ತಮ್ಮೂರು ಮೀರತ್‌ಗೆ ತೆರಳಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
3/5
36ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದ ಖ್ಯಾತ ನಟ ಲಲಿತ್ ಮಂಚಂದ ಹಿನ್ನಲೆ ಏನು ? | Who Exactly Is Lalit Manchanda From The Show Taarak Mehta Ka Ooltah Chashmah - Filmibeat Kannada
/photo-gallery/who-exactly-is-lalit-manchanda-from-the-show-taarak-mehta-ka-ooltah-chashmah-fb102312.html#photos-2
ಇನ್ನು ಸ್ಥಳೀಯ ಮಾಧ್ಯಮಗಳು ಲಲಿತ್ ಮಂಚಂದ ಇತ್ತೀಚಿನ ದಿನಗಳಲ್ಲಿ ಮಾನಸಿಕ ಒತ್ತಡಕ್ಕೊಳಗಾಗಿದ್ದರು, ವ್ಯೆಯಕ್ತಿಕ ಬದುಕಿನಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದರು ಎಂದು ವರದಿಯನ್ನು ಮಾಡಿವೆ. ಸದ್ಯ ಲಲಿತ್ ಮಂಚಂದ ಅವರ ಸಾವಿನ ಕುರಿತು ತನಿಖೆಯನ್ನು ಮಾಡುತ್ತಿರುವ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
4/5
36ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದ ಖ್ಯಾತ ನಟ ಲಲಿತ್ ಮಂಚಂದ ಹಿನ್ನಲೆ ಏನು ? | Who Exactly Is Lalit Manchanda From The Show Taarak Mehta Ka Ooltah Chashmah - Filmibeat Kannada
/photo-gallery/who-exactly-is-lalit-manchanda-from-the-show-taarak-mehta-ka-ooltah-chashmah-fb102312.html#photos-3
ಲಲಿತ್ ಮಂಚಂದ ಅವರ ಅಕಾಲಿಕ ನಿಧನಕ್ಕೆ ಸಿನಿ ಮತ್ತು ಟಿವಿ ಆರ್ಟಿಸ್ಟ್ ಅಸೋಸಿಯೇಶನ್ (CINTAA) ಕಂಬನಿ ಮಿಡಿದಿದ್ದು ಕಿರುತೆರೆಯ ಅನೇಕರು ಈ ಸುದ್ದಿಯನ್ನು ಕೇಳಿ ದಿಗ್ಬ್ರಾಂತಿಗೆ ಒಳಗಾಗಿದ್ದಾರೆ. ಲಲಿತ್ ಮಂಚಂದ ಅಶ್ರುತರ್ಪಣ ಸಲ್ಲಿಸಿದ್ದಾರೆ.
5/5
36ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದ ಖ್ಯಾತ ನಟ ಲಲಿತ್ ಮಂಚಂದ ಹಿನ್ನಲೆ ಏನು ? | Who Exactly Is Lalit Manchanda From The Show Taarak Mehta Ka Ooltah Chashmah - Filmibeat Kannada
/photo-gallery/who-exactly-is-lalit-manchanda-from-the-show-taarak-mehta-ka-ooltah-chashmah-fb102312.html#photos-4
'ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ' ಹೊರತು ಪಡಿಸಿದರೆ ಲಲಿತ್ ಮಂಚಂದ 'ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ' , 'ಇಂಡಿಯಾಸ್ ಮೋಸ್ಟ್ ವಾಟೆಂಡ್' , 'ಕ್ರೈಮ್ ಪೆಟ್ರೋಲ್' , 'ಸೇವಾಂಚಲ ಕೀ ಪ್ರೇಮ ಕಥಾ' , ಹೀಗೆ ಹಲವು ಧಾರಾವಾಹಿಗಳಲ್ಲಿ ಲಲಿತ್ ಅಭಿನಯಿಸಿದ್ದರು. ಪತ್ನಿ ತಾರು, 18 ವರ್ಷದ ಮಗ ಉಜ್ವಲ್ ಮತ್ತು ಮಗಳು ಶ್ರೇಯಾ ಅವರನ್ನು ಲಲಿತ್ ಮಂಚಂದ ಅಗಲಿದ್ದಾರೆ.