By
Kannada Filmibeat Photos
| Updated: Tuesday, March 4, 2025, 17:03 [IST]
ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಕನ್ನಡ ನಟಿ ರಾನ್ಯಾ ರಾವ್ ಬಂಧನವಾಗಿದೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ರಾತ್ರಿ DRI ಅಧಿಕಾರಿಗಳು ಆಕೆಯನ್ನು ವಶಕ್ಕೆ ಪಡೆದಿದ್ದರು. ಬಳಿಕ ವಿಚಾರಣೆ ನಡೆಸಿ ಬಂಧಿಸಲಾಗಿದೆ. ಅಂದಾಜು 15 ಕೆಜಿ ಚಿನ್ನವನ್ನು ದುಬೈನಿಂದ ದೆಹಲಿ ಮಾರ್ಗವಾಗಿ ಆಕೆ ಬೆಂಗಳೂರಿಗೆ ಸಾಗಾಟ ಮಾಡುತ್ತಿದ್ದರು ಎನ್ನಲಾಗ್ತಿದೆ. ಕನ್ನಡದ 'ಮಾಣಿಕ್ಯ' ಹಾಗೂ 'ಪಟಾಕಿ' ಚಿತ್ರಗಳಲ್ಲಿ ಆಕೆ ನಟಿಸಿದ್ದರು.
1/5
ಬಂಧನವಾಗಿರುವ ನಟಿ ರಾನ್ಯ ರಾವ್ ಯಾರು? ಹಿನ್ನೆಲೆ ಏನು? | Who Is Ranya Rao? Everything You Need To Know About The Actress Arrested For Gold Smuggling Case - Filmibeat Kannada
/photo-gallery/who-is-ranya-rao-everything-you-need-to-know-about-the-actress-arrested-for-gold-smuggling-case-fb101165.html
ನಟಿ ರಾನ್ಯಾ ಅವರನ್ನು ನಟ ಸುದೀಪ್ ಚಿತ್ರರಂಗಕ್ಕೆ ಪರಿಚಯಿಸಿದ್ದರು. ಸುದೀಪ್ ನಿರ್ದೇಶಿಸಿ ನಟಿಸಿದ್ದ 'ಮಾಣಿಕ್ಯ' ಚಿತ್ರದಲ್ಲಿ ಆಕೆ ಮೊದಲಿಗೆ ನಟಿಸಿದ್ದರು. ಬಳಿಗ ಗಣೇಶ್ ಜೊತೆ 'ಪಟಾಕಿ' ಚಿತ್ರಕ್ಕೆ ಬಣ್ಣ ಹಚ್ಚಿದ್ದರು.
2/5
ಬಂಧನವಾಗಿರುವ ನಟಿ ರಾನ್ಯ ರಾವ್ ಯಾರು? ಹಿನ್ನೆಲೆ ಏನು? | Who Is Ranya Rao? Everything You Need To Know About The Actress Arrested For Gold Smuggling Case - Filmibeat Kannada
/photo-gallery/who-is-ranya-rao-everything-you-need-to-know-about-the-actress-arrested-for-gold-smuggling-case-fb101165.html#photos-1
ಚಿಕ್ಕಮಗಳೂರಿನಲ್ಲಿ ಹುಟ್ಟಿ ಬೆಳೆದ ರಾನ್ಯ ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನಲ್ಲಿ ಪದವಿ ವಿದ್ಯಾಭ್ಯಾಸ ಮಾಡಿದ್ದರು. ಬಳಿಕ ಮುಂಬೈನ ನಮಿತ್ ಕಿಶೋರ್ ಆಕ್ಟಿಂಗ್ ಸ್ಕೂಲ್ ಸೇರಿ ಕಲಿತಿದ್ದರು.
3/5
ಬಂಧನವಾಗಿರುವ ನಟಿ ರಾನ್ಯ ರಾವ್ ಯಾರು? ಹಿನ್ನೆಲೆ ಏನು? | Who Is Ranya Rao? Everything You Need To Know About The Actress Arrested For Gold Smuggling Case - Filmibeat Kannada
/photo-gallery/who-is-ranya-rao-everything-you-need-to-know-about-the-actress-arrested-for-gold-smuggling-case-fb101165.html#photos-2
ಡಿಜಿ ರಾಮಚಂದ್ರ ರಾವ್ ಅವರಿಗೆ ನಟಿ ರನ್ಯಾ ಮಲ ಮಗಳು. ಆಗಾಗ್ಗೆ ದುಬೈ ಪ್ರವಾಸ ಕೈಗೊಳ್ಳುತ್ತಿದ್ದರು. ಡಿಜಿ ಮಗಳು ಎಂದು ಹೇಳಿ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ತಪಾಸಣೆ ತಪ್ಪಿಸಿಕೊಳ್ಳುತ್ತಿದ್ದರು ಎನ್ನಲಾಗ್ತಿದೆ.
4/5
ಬಂಧನವಾಗಿರುವ ನಟಿ ರಾನ್ಯ ರಾವ್ ಯಾರು? ಹಿನ್ನೆಲೆ ಏನು? | Who Is Ranya Rao? Everything You Need To Know About The Actress Arrested For Gold Smuggling Case - Filmibeat Kannada
/photo-gallery/who-is-ranya-rao-everything-you-need-to-know-about-the-actress-arrested-for-gold-smuggling-case-fb101165.html#photos-3
ಕಾಲೇಜು ದಿನಗಳಲ್ಲಿ ರಾನ್ಯಾ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರ್ತಿಸಿಕೊಂಡಿದ್ದರು. ಹಾಗಾಗಿ ಚಿತ್ರರಂಗಕ್ಕೆ ಬರುವುದು ಕಷ್ಟವಾಗಲಿಲ್ಲ. 'ಮಾಣಿಕ್ಯ' ಚಿತ್ರದ 2ನೇ ನಾಯಕಿಯಾಗಿ ಅವಕಾಶ ಪಡೆದಿದ್ದರು.
5/5
ಬಂಧನವಾಗಿರುವ ನಟಿ ರಾನ್ಯ ರಾವ್ ಯಾರು? ಹಿನ್ನೆಲೆ ಏನು? | Who Is Ranya Rao? Everything You Need To Know About The Actress Arrested For Gold Smuggling Case - Filmibeat Kannada
/photo-gallery/who-is-ranya-rao-everything-you-need-to-know-about-the-actress-arrested-for-gold-smuggling-case-fb101165.html#photos-4
ರಾನ್ಯಾ ರಾವ್ ಚಿತ್ರರಂಗದಲ್ಲಿ ಹೆಚ್ಚು ದಿನ ಉಳಿಯಲಿಲ್ಲ. ತಮಿಳಿನ 'ವಾಘಾ' ಚಿತ್ರದಲ್ಲಿ ನಟಿಸಿ ಬಂದರು. ಐಷಾರಾಮಿ ಜೀವನ ನಡೆಸುತ್ತಿದ್ದ ಆಕೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ಆಕ್ಟೀವ್ ಆಗಿ ಇರಲಿಲ್ಲ.