twitter
    X
    Home ಚಲನಚಿತ್ರಗಳ ಒಳನೋಟ

    2022ರಲ್ಲಿ ಬಿಡುಗಡೆಯಾದ ನಟಿ ಅದಿತಿ ಪ್ರಭುದೇವ ನಟನೆಯ 7 ಸಿನಿಮಾಗಳಿವು!

    Author Sowmya Bairappa | Published: Monday, January 2, 2023, 03:45 PM [IST]

    ಕನ್ನಡ ಚಿತ್ರರಂಗದ ಕ್ಯೂಟ್ ನಟಿಯರಲ್ಲಿ ಅದಿತಿ ಪ್ರಭುದೇವ ಕೂಡ ಒಬ್ಬರು. ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಅದಿತಿ ಬೇಡಿಕೆ ಹೆಚ್ಚಿರುವಾಗಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 2022ರಲ್ಲಿ ಅದಿತಿ ನಟನೆಯ ಏಳು ಸಿನಿಮಾಗಳು ತೆರೆಗೆ ಬಂದಿದೆ. ಆದರೆ, ಈ ಎಲ್ಲಾ ಸಿನಿಮಾಗಳು ಅಷ್ಟೇನೂ ಹಿಟ್ ಆಗಲಿಲ್ಲ. ಹಾಗಾದ್ರೆ 2022ರಲ್ಲಿ ಬಿಡುಗಡೆಯಾದ ಅದಿತಿ ನಟನೆಯ ಸಿನಿಮಾಗಳು ಯಾವವು ಎಂಬ ಮಾಹಿತಿ ಇಲ್ಲಿದೆ.

    cover image
    ಒಂಬತ್ತನೇ ದಿಕ್ಕು

    ಒಂಬತ್ತನೇ ದಿಕ್ಕು

    1

    ಅದಿತಿ ಮತ್ತು ಲೂಸ್ ಮಾದ ಯೋಗೇಶ್ ಅಭಿನಯದ ಒಂಬತ್ತನೇ ದಿಕ್ಕು ಸಿನಿಮಾ 2022ರ ಜನವರಿ 28ರಂದು ಬಿಡುಗಡೆಯಾಗಿತ್ತು. ದಯಾಳ್ ಪದ್ಮನಾಭನ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಸಾಯಿ ಕುಮಾರ್, ಪ್ರಶಾಂತ್ ಸಿದ್ಧಿ, ಯೋಗಿ ಸಹೋದರ ಮಹೇಶ್ ಮುಂತಾದ ಪೋಷಕ ನಟರನ್ನು ಹೊಂದಿದ್ದ ಈ ಸಿನಿಮಾ ಹಿಟ್ ಆಗಲಿಲ್ಲ. 

    ಓಲ್ಡ್ ಮಾಂಕ್

    ಓಲ್ಡ್ ಮಾಂಕ್

    2

    ಎಂ.ಜಿ. ಶ್ರೀನಿವಾಸ್ ನಿರ್ದೇಶಿಸಿ, ನಟಿಸಿರುವ 'ಓಲ್ಡ್ ಮಾಂಕ್' ಸಿನಿಮಾದಲ್ಲಿ ಅದಿತಿ ನಾಯಕಿಯಾಗಿ ನಟಿಸಿದ್ದರು. ಇದೊಂದು ರೊಮ್ಯಾಂಟಿಕ್, ಕಾಮಿಡಿ ಸಿನಿಮಾವಾಗಿದ್ದು, ಸೌರಭ್ ವೈಭವ್ ಸಂಗೀತ ನೀಡಿದ್ದರು. ಈ ಸಿನಿಮಾ ಪ್ರೇಕ್ಷಕರ ಮನಗೆದ್ದಿದ್ದು, ಅಷ್ಟೇನೂ ಹಿಟ್ ಆಗಲಿಲ್ಲ.  ಈ ಸಿನಿಮಾ 2022ರ ಫೆಬ್ರವರಿ 25ರಂದು ಬಿಡುಗಡೆಯಾಗಿತ್ತು.  

    ಗಜಾನನ And ಗ್ಯಾಂಗ್

    ಗಜಾನನ And ಗ್ಯಾಂಗ್

    3

    ಅಭಿಷೇಕ್ ಶೆಟ್ಟಿ ನಿರ್ದೇಶಿಸಿರುವ `ಗಜಾನನ ಆ್ಯಂಡ್ ಗ್ಯಾಂಗ್' ಚಿತ್ರದಲ್ಲಿ ಶ್ರೀ ಮಹಾದೇವ್ ಹಾಗೂ ಅದಿತಿ ಪ್ರಭುದೇವ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಸುಚೇಂದ್ರ ಪ್ರಸಾದ್, ವಿಜಯ್ ಚೆಂಡೂರು, ರಘು ರಾಮನಕೊಪ್ಪ ಮುಂತಾದ ಕಲಾವಿದರ ದಂಡೇ ಚಿತ್ರದಲ್ಲಿತ್ತು. ಚಿತ್ರದ ಹಾಡೊಂದಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಧ್ವನಿಯಾಗಿದ್ದರು. ಈ ಸಿನಿಮಾ ಕೂಡ ಹಿಟ್ ಆಗಲಿಲ್ಲ. 

    ತೋತಾಪುರಿ ಚಾಪ್ಟರ್ 1

    ತೋತಾಪುರಿ ಚಾಪ್ಟರ್ 1

    4

    ವಿಜಯಪ್ರಸಾದ್ ನಿರ್ದೇಶನದಲ್ಲಿ ಮೂಡಿಬಂದಿರುವ 'ತೋತಾಪುರಿ' ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್, ಡಾಲಿ ಧನಂಜಯ್, ಸುಮನ್ ರಂಗನಾಥನ್ ಮತ್ತು ಆದಿತಿ ಪ್ರಭುದೇವ ಮುಖ್ಯಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾದ ಮೇಲೆ ನಿರೀಕ್ಷೆಗಳು ಹೆಚ್ಚಿದ್ದವು. ಆದರೆ, ಸಿನಿಮಾ ಅಂದುಕೊಂಡಂತೆ ಹಿಟ್ ಆಗಲಿಲ್ಲ. ಈ ಸಿನಿಮಾ 2022ರ ಸೆಪ್ಟೆಂಬರ್ 30ರಂದು ಬಿಡುಗಡೆಯಾಗಿತ್ತು. 

    ಚಾಂಪಿಯನ್

    ಚಾಂಪಿಯನ್

    5

    ಸಚಿನ್ ಧನಪಾಲ್ ಮತ್ತು ಆದಿತಿ ಪ್ರಭುದೇವ ಮುಖ್ಯಪಾತ್ರದಲ್ಲಿ ನಟಿಸಿರುವ 'ಚಾಂಪಿಯನ್' ಸಿನಿಮಾವನ್ನು ಶಾಹುರಾಜ್ ಶಿಂಧೆ ನಿರ್ದೇಶನ ಮಾಡಿದ್ದರು.ಈ ಸಿನಿಮಾದ ಹಾಡೊಂದಕ್ಕೆ ಬಾಲಿವುಡ್ ನಟಿ ಸನ್ನಿ ಲಿಯೋನ್ ವಿಶೇಷವಾಗಿ ಹೆಜ್ಜೆ ಹಾಕಿದ್ದರು. ಈ ಸಿನಿಮಾ 2022ರ  ಅಕ್ಟೋಬರ್ 14ರಂದು ತೆರೆಗೆ ಬಂದಿದ್ದು, ಅಂದುಕೊಂಡಂತೆ ಯಶಸ್ಸು ಕಾಣಲಿಲ್ಲ. 

    ತ್ರಿಬಲ್ ರೈಡಿಂಗ್

    ತ್ರಿಬಲ್ ರೈಡಿಂಗ್

    6

    ಶ್ರೀ ಮಹೇಶ್ ಗೌಡ ನಿರ್ದೇಶನದ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸಿದ್ದರು. ಅದಿತಿ ಪ್ರಭುದೇವ, ಮೇಘ ಶೆಟ್ಟಿ ಮತ್ತು ರಚನಾ ಇಂದರ್ ನಾಯಕಿಯರಾಗಿ ನಟಿಸಿದ್ದರು. 2022ರ ನವೆಂಬರ್ 25ರಂದು ಬಿಡುಗಡೆಯಾದ ಈ ಸಿನಿಮಾ ಸಿನಿರಸಿಕರಿಗೆ ಇಷ್ಟವಾಗಿತ್ತು.  

    Once Upon A Time In ಜಮಾಲಿಗುಡ್ಡ

    Once Upon A Time In ಜಮಾಲಿಗುಡ್ಡ

    7

    ಕುಶಾಲ್ ಗೌಡ ನಿರ್ದೇಶಿಸಿರುವ ' ಒನ್ಸ್ ಅಪಾನ್ ಅ ಟೈಮ್ ಇನ್ ಜಮಾಲಿಗುಡ್ಡ' ಚಿತ್ರದಲ್ಲಿ ನಟರಾಕ್ಷಸ ಡಾಲಿ ಧನಂಜಯ್ ಮತ್ತು ಆದಿತಿ ಪ್ರಭುದೇವ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಡಿಸೆಂಬರ್ 30ರಂದು ಬಿಡುಗಡೆಯಾಗಿದ್ದು, 2022ರಲ್ಲಿ ಬಿಡುಗಡೆಯಾದ ಅದಿತಿ ನಟನೆಯ ಕೊನೆಯ ಸಿನಿಮಾ. 

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X