twitter
    X
    Home ಚಲನಚಿತ್ರಗಳ ಒಳನೋಟ

    ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ 2020 ರಲ್ಲಿ ಪ್ರಶಸ್ತಿ ಗೆದ್ದ ಕನ್ನಡ ಚಲನಚಿತ್ರಗಳು

    Author Administrator | Updated: Tuesday, June 2, 2020, 12:49 PM [IST]

    ಫೆಬ್ರವರಿ 26, 2020 ರಿಂದ ಮಾರ್ಚ್ 4 ವರೆಗೆ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ ಜರುಗಿತು. ವಿವಿಧ ವಿಭಾಗಗಳಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಚಲನಚಿತ್ರಗಳು ಪ್ರದರ್ಶನಗೊಂಡವು. ಇವುಗಳಲ್ಲಿ ಎಂಟು ಕನ್ನಡ ಚಲನಚಿತ್ರಗಳು ಪ್ರಶಸ್ತಿ ಗಳಿಸಿದವು. ಜನಪ್ರಿಯ ಸಿನಿಮಾ ವಿಭಾಗದಲ್ಲಿ ದರ್ಶನ್ ರ ಕುರುಕ್ಷೇತ್ರ ಮೊದಲ ಪ್ರಶಸ್ತಿ ಪಡೆದರೆ, ಸ್ಪರ್ಧಾ ವಿಭಾಗದಲ್ಲಿ ಕವಲುದಾರಿ ಚಿತ್ರ ಮೊದಲ ಪ್ರಶಸ್ತಿ ಗಳಿಸಿತು.2020 ನೇ ಸಾಲಿನ ಬೆಂಗಳೂರು ಸಿನಿಮೋತ್ಸವದಲ್ಲಿ ಪ್ರಶಸ್ತಿ ಪಡೆದ ಎಂಟು ಕನ್ನಡ ಚಿತ್ರಗಳು ಇಲ್ಲಿವೆ ನೋಡಿ..

    cover image
    ಕುರುಕ್ಷೇತ್ರ

    ಕುರುಕ್ಷೇತ್ರ

    1

    ಕನ್ನಡ ಜನಪ್ರಿಯ ಸಿನಿಮಾ ವಿಭಾಗದಲ್ಲಿ ಪ್ರದರ್ಶನಗೊಂಡ ಹತ್ತು ಚಲನಚಿತ್ರಗಳಲ್ಲಿ ಮುನಿರತ್ನರ ಕುರುಕ್ಷೇತ್ರ ಈ ವರ್ಷದ ಕನ್ನಡದ ಅತಿ ಜನಪ್ರಿಯ ಚಲನಚಿತ್ರ ಪ್ರಶಸ್ತಿ ಪಡೆಯಿತು. ಚಾಲೆಂಜಿಂಗ್ ದರ್ಶನ್ ರ ಐವತ್ತನೇ ಚಿತ್ರವಾದ ಈ ಸಿನಿಮಾದಲ್ಲಿ ದರ್ಶನ್ ದುರ್ಯೋಧನನ ಪಾತ್ರದಲ್ಲಿ ಮಿಂಚಿದ್ದರು. ಪ್ರಶಸ್ತಿಗೆ ನೀಡಿದ ಕಾರಣ: ``ಅಪರೂಪದ ಐತಿಹಾಸಿಕ ಚಿತ್ರ, ಉತ್ತಮ ವಸ್ತ್ರ ವಿನ್ಯಾಸ ಮತ್ತು ಉತ್ತಮ ಸಂಭಾಷಣೆಗಳು''

    ಬೆಲ್ ಬಾಟಮ್

    ಬೆಲ್ ಬಾಟಮ್

    2

    ಕನ್ನಡ ಜನಪ್ರಿಯ ಸಿನಿಮಾ ವಿಭಾಗದಲ್ಲಿ ಪ್ರದರ್ಶನಗೊಂಡ ಹತ್ತು ಚಲನಚಿತ್ರಗಳಲ್ಲಿ ಜಯತೀರ್ಥರ ಬೆಲ್ ಬಾಟಂ, ಈ ವರ್ಷದ ಕನ್ನಡದ ಎರಡನೇ ಅತಿ ಹೆಚ್ಚು ಜನಪ್ರಿಯ ಚಲನಚಿತ್ರ ಪ್ರಶಸ್ತಿ ಪಡೆಯಿತು. ರಿಷಭ್ ಶೆಟ್ಟಿ ಮತ್ತು ಹರಿಪ್ರಿಯಾ ಮುಖ್ಯಪಾತ್ರಗಳಲ್ಲಿ ನಟಿಸಿದ್ದರು. ಪ್ರಶಸ್ತಿಗೆ ನೀಡಿದ ಕಾರಣ: `` ತಿಳಿ ಹಾಸ್ಯ, ಕುತೂಹಲಕಾರಿ ಕಥೆ ಮತ್ತು ಚಿತ್ರಕಥೆ, ಭರಪೂರ ಮನರಂಜನೆ.

    ಯಜಮಾನ

    ಯಜಮಾನ

    3

    ಕನ್ನಡ ಜನಪ್ರಿಯ ಸಿನಿಮಾ ವಿಭಾಗದಲ್ಲಿ ಪ್ರದರ್ಶನಗೊಂಡ ಹತ್ತು ಚಲನಚಿತ್ರಗಳಲ್ಲಿ ಶೈಲಜಾ ನಾಗ್ ರ ಯಜಮಾನ, ಈ ವರ್ಷದ ಕನ್ನಡದ ಮೂರನೇ ಅತಿ ಹೆಚ್ಚು ಜನಪ್ರಿಯ ಚಲನಚಿತ್ರ ಪ್ರಶಸ್ತಿ ಪಡೆಯಿತು. ದರ್ಶನ್, ರಶ್ಮಿಕಾ ಮತ್ತು ತಾನ್ಯಾ ಹೋಪ್ ಮುಖ್ಯಪಾತ್ರಗಳಲ್ಲಿ ನಟಿಸಿದ್ದರು. ಪ್ರಶಸ್ತಿಗೆ ನೀಡಿದ ಕಾರಣ: `` ವಾಣಿಜ್ಯಾತ್ಮಕತೆ ಮತ್ತು ಮನರಂಜನೆಯೊಂದಿಗೆ ಸಮಾಜಿಕ ಸಂದೇಶ ನೀಡಿದ ಚಲನಚಿತ್ರ''

    ಕವಲುದಾರಿ

    ಕವಲುದಾರಿ

    4

    ಕನ್ನಡ ಸಿನಮಾ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನಗೊಂಡ 14 ಚಲನಚಿತ್ರಗಳಲ್ಲಿ ಹೇಮಂತ್ ರಾವ್ ರವರ ಕವಲುದಾರಿ, ಈ ವರ್ಷದ ಕನ್ನಡದ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆಯಿತು. ರಿಷಿ ಮತ್ತು ಅನಂತನಾಗ್ ಮುಖ್ಯಪಾತ್ರಗಳಲ್ಲಿ ನಟಿಸಿದ್ದರು. ಪ್ರಶಸ್ತಿಗೆ ನೀಡಿದ ಕಾರಣ: `` ಮೈನವಿರೇಳುಸುವ ಕಥೆ, ರೋಚಕಗೊಳಿಸುವ ಹಿನ್ನಲೆ ಸಂಗೀತ, ನೈಸರ್ಗಿಕ ಅಭಿನಯ ಮತ್ತು ಸಮರ್ಥ ನಿರ್ದೇಶನ''

    ಒಂದು ಶಿಕಾರಿಯ ಕಥೆ

    ಒಂದು ಶಿಕಾರಿಯ ಕಥೆ

    5

    ಕನ್ನಡ ಸಿನಮಾ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನಗೊಂಡ 14 ಚಲನಚಿತ್ರಗಳಲ್ಲಿ ಸಚಿನ್ ಶೆಟ್ಟಿಯವರ ಒಂದು ಶಿಕಾರಿಯ ಕಥೆ, ಮೊದಲ ರನ್ನರ್ ಅಪ್ ಆಯಿತು. ಪ್ರಮೋದ್ ಶೆಟ್ಟಿ ಒಬ್ಬ ಬರಹಗಾರನ ಪಾತ್ರದಲ್ಲಿ ನಟಿಸಿದ್ದರು. ಪ್ರಶಸ್ತಿಗೆ ನೀಡಿದ ಕಾರಣ: `` ಮನುಷ್ಯನ ಸ್ವಾರ್ಥದ ಪರಿಣಾಮ, ಉತ್ತಮ ಚಿತ್ರಕಥೆ, ಉತ್ತಮ ದೃಶ್ಯ ಮತ್ತು ನಿರ್ದೇಶನ''.

    ರಂಗನಾಯಕಿ

    ರಂಗನಾಯಕಿ

    6

    ಕನ್ನಡ ಸಿನಮಾ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನಗೊಂಡ 14 ಚಲನಚಿತ್ರಗಳಲ್ಲಿ ದಯಾಳ್ ಪದ್ಮನಾಭನ್ ರವರ ರಂಗನಾಯಕಿ, ಎರಡನೇ ರನ್ನರ್ ಅಪ್ ಆಯಿತು. ಆದಿತಿ ಪ್ರಭುದೇವ ಒಬ್ಬ ಅತ್ಯಾಚಾರ ಸಂತ್ರಸ್ಥೆ ಪಾತ್ರದಲ್ಲಿ ನಟಿಸಿದ್ದರು. ಪ್ರಶಸ್ತಿಗೆ ನೀಡಿದ ಕಾರಣ: ``ಸಮಾಜದಲ್ಲಿ ಒಬ್ಬ ಅತ್ಯಾಚಾರ ಸಂತ್ತಸ್ಥೆಯ ಹೋರಾಟವನ್ನು ಸಮರ್ಥ ಸಂಭಾಷಣೆ ಮತ್ತು ಮುಖ್ಯ ಪಾತ್ರಧಾರಿಯ ಉತ್ತಮ ಅಭಿನಯದ ಮೂಲಕ ಬಿಂಬಿಸಿರುವುದು''.

    ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ

    ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ

    7

    ಕನ್ನಡ ಸಿನಮಾ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನಗೊಂಡ 14 ಚಲನಚಿತ್ರಗಳಲ್ಲಿ ಆರ್ ಮಧುಚಂದ್ರರವರ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ, ವಿಮರ್ಶಕರ ಆಯ್ಕೆ ಆಯಿತು. ಸೃಜನ್ ಲೋಕೇಶ್ ಮತ್ತು ಮೇಘನಾ ರಾಜ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಪ್ರಶಸ್ತಿಗೆ ನೀಡಿದ ಕಾರಣ: ``ಮೊಬೈಲ್ ಗಳ ಅತಿ ವ್ಯಾಮೋಹ ಮತ್ತು ಮಕ್ಕಳ ಮೇಲೆ ಅವುಗಳ ಪರಣಾಮವನ್ನು ಸರಳ ಕಥೆಯ ಮೂಲಕ ಬಿಂಬಿಸಿರುವುದು''.

    ಪಿಂಗಾರ

    ಪಿಂಗಾರ

    8

    ಕನ್ನಡ ಸಿನಮಾ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನಗೊಂಡ 14 ಚಲನಚಿತ್ರಗಳಲ್ಲಿ ಆರ್ ಪ್ರೀತಮ್ ಶೆಟ್ಟಿಯವರ ಪಿಂಗಾರ ಚಿತ್ರ NETPAC ( Network for the Promotion of Asian Cinema) ಅಂತರಾಷ್ಟ್ರೀಯ ಪ್ರಶಸ್ತಿ ಪಡೆಯಿತು. ನೀಮಾ ರೇ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಪ್ರಶಸ್ತಿಗೆ ನೀಡಿದ ಕಾರಣ: ``ಮಾನವನ ಸೂಕ್ಷ್ಮ ಭಾವನೆಗಳ ಪ್ರದರ್ಶನ, ಜಾತಿಗಳ ಮಧ್ಯೆ ಸಮಾನತೆ, ದೈವದ ಮುಂದೆ ತಪ್ಪೊಪಿಗೆ ಮತ್ತು ತುಳುನಾಡ ಸಂಸ್ಕೃತಿಯ ಚಿತ್ರಣ ''.

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X