X
ಹೋಮ್ ಚಲನಚಿತ್ರಗಳ ಒಳನೋಟ

ಲವ್ ಬ್ರೇಕಪ್ ಬಗ್ಗೆ ಇದ್ದಿದ್ದು ಇದ್ದಹಾಗೆ ಹೇಳಿಕೊಂಡ ಕನ್ನಡದ ನಟಿಯರಿವರು!

Author Sowmya Bairappa | Updated: Thursday, April 3, 2025, 09:58 AM [IST]

ಪ್ರೀತಿ ಎಂಬ ಎರಡಕ್ಷರದ ಪದಕ್ಕೆ ಜೀವನವನ್ನೇ ಬದಲಾಯಿಸುವ ಶಕ್ತಿಯಿದೆ. ಪ್ರೀತಿ ಎಂಬ ಮಾಯೆ ಬದುಕಿನ ಒಂದಲ್ಲ ಒಂದು ಸಂದರ್ಭದಲ್ಲಿ ಎಲ್ಲರಿಗೂ ಕಾಡಿರುತ್ತದೆ. ಪ್ರೀತಿ ನೀಡುವ ಸಂತೋಷ, ನೋವು ಬದುಕಿನಲ್ಲಿ ಪಾಠ ಕಲಿಸಿರುತ್ತದೆ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಲವ್, ರಿಲೇಶನ್‌ಶಿಪ್, ಬ್ರೇಕಪ್ ಸರ್ವೇ ಸಾಧಾರಣ ಎನ್ನುವಂತಾಗಿದೆ. ಇಲ್ಲಿ ಬ್ರೇಕಪ್ ಬಗ್ಗೆ ಇದ್ದಿದ್ದು ಇದ್ದಹಾಗೆ ಹೇಳಿಕೊಂಡ ಕನ್ನಡದ ನಟಿಯರ ಪಟ್ಟಿಯನ್ನು ನೀಡಲಾಗಿದೆ.


cover image
ನಂದಿನಿ (ನಂದು)
1

ಕನ್ನಡ ಬಿಗ್‌ಬಾಸ್‌ ಒಟಿಟಿ ಸೀಸನ್ 1ರಲ್ಲಿ ಭಾಗವಹಿಸಿದ್ದ ಜಶ್ವಂತ್ ಬೋಪಣ್ಣ ಹಾಗೂ ನಂದಿನಿ ತಾವಿಬ್ಬರು ಪ್ರೇಮಿಗಳೆಂದು ಹೇಳಿಕೊಂಡಿದ್ದರು. ಬಿಗ್‌ಬಾಸ್‌ಗೂ ಮುನ್ನ ಹಿಂದಿಯ ರೋಡೀಸ್ ಎಂಬ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಇವರಿಬ್ಬರು ರನ್ನರ್ ಅಪ್ ಕೂಡ ಆಗಿದ್ದರು. ಈ ಮಧ್ಯೆ ಇಬ್ಬರ ನಡುವೆ ಸ್ನೇಹ ಬೆಳೆದು, ಅದು ಪ್ರೀತಿಗೆ ತಿರುಗಿತ್ತು. ಆದರೆ, ಬಿಗ್‌ಬಾಸ್‌ ಮನೆಯಿಂದ ಹೊರಬಂದ ಕೆಲವೇ ದಿನಗಳಲ್ಲಿ ನಂದಿನಿ & ಮತ್ತು ಜಶ್ವಂತ್ ಬ್ರೇಕಪ್ ಮಾಡಿಕೊಂಡಿದ್ದರು.

ಅನುಪಮಾ ಗೌಡ
2

ಅಕ್ಕ ಧಾರಾವಾಹಿಯಲ್ಲಿ ದ್ವಿಪಾತ್ರ ಮಾಡುವ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನಗೆದ್ದ ಅನುಪಮಾ ಗೌಡ, ನಟನೆ ಮಾತ್ರವಲ್ಲ, ನಿರೂಪಣೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಅನುಪಮಾ ಕೂಡ ತಮ್ಮ ಪ್ರೇಮ ವೈಫಲ್ಯದ ಬಗ್ಗೆ ಹೇಳಿಕೊಂಡಿದ್ದರು. ಇತ್ತೀಚೆಗೆ ಆರ್‌ಜೆ ರಾಜೇಶ್ ಯೂಟ್ಯೂಬ್‌ ಚಾನಲ್‌ನಲ್ಲಿ ತಮ್ಮ ವೈಯಕ್ತಿಕ ಜೀವನ, ಕಿರುತೆರೆ, ಸಿನಿಮಾ ಹೀಗೆ ಎಲ್ಲದರ ಬಗ್ಗೆಯೂ ಮಾತನಾಡಿದ್ದರು. ನಾನು ನಟನೊಬ್ಬನ್ನನ್ನು ಪ್ರೀತಿಸುತ್ತಿದ್ದೆ. ಆ ವ್ಯಕ್ತಿಯಿಲ್ಲದೇ ನನ್ನ ಜೀವನವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದುಕೊಂಡಿದ್ದೆ. ಆತ ದೂರವಾದಾಗ ಖಿನ್ನತೆಗೆ ಜಾರಿ ನೋವು ಅನುಭವಿಸಿದ್ದೆ ಅಂತ ಹೇಳಿದ್ದರು.

ಪವಿ ಪೂವಪ್ಪ
3

ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಪವಿ ಪೂವಪ್ಪ, ಬಿಗ್‌ಬಾಸ್‌ ಕನ್ನಡ ಸೀಸನ್ 10ಕ್ಕೆ ವೈಲ್ಡ್‌ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದರು. ಈ ಸಮಯದಲ್ಲಿ ತಮ್ಮ ಬಾಯ್‌ಫ್ರೆಂಡ್ ಬಗ್ಗೆ ಮಾತನಾಡಿದ್ದ ಪವಿ ಪೂವಪ್ಪ, ನನ್ನ ಬಾಯ್‌ಫ್ರೆಂಡ್ ಐರ್‌ಲ್ಯಾಂಡ್‌ನಲ್ಲಿದ್ದಾನೆ. ಶೀಘ್ರದಲ್ಲೇ ತಾವು ಮದುವೆಯಾಗುವುದಾಗಿ ಹೇಳಿದ್ದರು. ಆದರೆ, ಬಿಗ್‌ಬಾಸ್‌ನಿಂದ ಹೊರಬಂದ ಕೆಲವೇ ದಿನಗಳಲ್ಲಿ ಬ್ರೇಕಪ್ ಬಗ್ಗೆ ಮಾತನಾಡಿದ್ದ ಪವಿ, ಸುಮಾರು 5 ವರ್ಷದಿಂದ ತಾವಿಬ್ಬರು ಜೊತೆಯಾಗಿದ್ವಿ. ನಮ್ಮಿಬ್ಬರ ನಡುವೆ ಹೊಂದಾಣಿಕೆ ಕೂಡ ಇತ್ತು. ಆದರೆ, ದಿನ ಕಳೆದಂತೆ ನನ್ನ ನಾಯಿಗಳಿಂದ ಸಮಸ್ಯೆ ಶುರುವಾಯ್ತು ಎಂದಿದ್ದರು.



ಜಯಶ್ರೀ ಆರಾಧ್ಯ
4

ಕನ್ನಡ ಚಿತ್ರರಂಗದ ಹಿರಿಯ ನಟಿ ಮಾರಿಮುತ್ತು ಮೊಮ್ಮಗಳಾದ ಜಯಶ್ರೀ ಆರಾಧ್ಯ ಬಿಗ್‌ಬಾಸ್‌ ಒಟಿಟಿ ಸೀಸನ್‌ನಲ್ಲಿ ಭಾಗವಹಿಸಿದ್ದರು. ಜೊತೆಗೆ ಪುಟ್ಟರಾಜು ಲವರ್ ಆಫ್ ಶಶಿಕಲಾ ಸಿನಿಮಾದಲ್ಲೂ ನಾಯಕಿಯಾಗಿ ನಟಿಸಿದ್ದರು. ಉದ್ಯಮ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದ ಜಯಶ್ರೀ, ಸ್ಟೀವನ್ ಎಂಬುವವರ ಜೊತೆ ಪ್ರೀತಿಲಿ ಬಿದ್ದಿದ್ದರು. ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಈ ಜೋಡಿ, ಮದುವೆಗೂ ಮುನ್ನವೇ 'ರಾಜಾ ರಾಣಿ' ರಿಯಾಲಿಟಿ ಶೋಗೆ ಬಂದಿದ್ದರು. ಇದಾದ ನಂತರ ಇವರಿಬ್ಬರು ಬ್ರೇಕಪ್ ಮಾಡಿಕೊಂಡಿದ್ದರು.


ನಮ್ರತಾ ಗೌಡ
5

ನಾಗಿಣಿ ಸೀರಿಯಲ್ ಮೂಲಕ ಕರ್ನಾಟಕದ ಮನೆಮಾತಾಗಿರುವ ನಮ್ರತಾ ಗೌಡ, ಬಿಗ್‌ಬಾಸ್‌ ಸೀಸನ್‌ 10ರಲ್ಲಿ ಭಾಗವಹಿಸುವ ಮೂಲಕ ಮತ್ತಷ್ಟು ಜನಪ್ರಿಯತೆ ಗಳಿಸಿದರು. ಬಿಗ್‌ಬಾಸ್‌ ಮನೆಯಲ್ಲಿರುವಾಗಲೇ ಬ್ರೇಕಪ್ ಬಗ್ಗೆ ಮಾತನಾಡಿದ್ದ ನಮ್ರತಾ, ಕಾಲೇಜಿನಲ್ಲಿರುವಾಗ ಪ್ರೀತಿಲಿ ಬಿದ್ದಿದ್ದೆ. ಕಾಲೇಜ್‌ನಲ್ಲಿ ತುಂಬಾ ಫೇಮಸ್ ಆಗೋಗಿತ್ತು ಲವ್. ಅಮ್ಮ-ಅಪ್ಪನಿಗೂ ತಿಳಿಸಿದ್ದೆ. ಆಗ ನನಗೆ ಕಮಿಟ್ಮೆಂಟ್, ರಿಲೇಶನ್‌ಶಿಪ್‌ ಏನು ಅಂತ ಗೊತ್ತಿರಲಿಲ್ಲ. ಆಕ್ಚುಲಿ ಅದು ರಾಂಗ್ ಏಜ್. ಪಿಯು ಆದ್ಮೇಲೆ ನಾನು ನಟಿಯಾಗಿ ಕರಿಯರ್ ಆರಂಭಿಸಿದೆ. ಆ ಮನುಷ್ಯನಿಗೆ ಟೈಮ್ ಕೋಡೋಕೆ ಆಗ್ತಿರಲಿಲ್ಲ. ಆಗ ತುಂಬಾ ಮೆಸ್ಸಿ, ಟಾಕ್ಸಿಕ್ ರಿಲೇಶನ್‌ಶಿಪ್ ಆಗೋಯ್ತು. ಇಬ್ಬರಿಗೂ ಆ ರಿಲೇಶನ್‌ಶಿಪ್ ಹೇಗೆ ಹ್ಯಾಂಡಲ್‌ ಮಾಡೋದು ಗೊತ್ತಾಗುತ್ತಿರಲಿಲ್ಲ. ನಾನು ತುಂವಾ ಟ್ರೈ ಮಾಡಿದೆ. ಆದರೆ, ಆಗಲಿಲ್ಲ. ಬ್ರೇಕಪ್ ಮಾಡಿಕೊಂಡೆ. ನಾನೊಬ್ಬಳೇ ಪೋರ್ಸ್‌ ಮಾಡಿ ರಿಲೇಶನ್‌ಶಿಪ್ ಉಳಿಸಿಕೊಳ್ಳುವ ಪ್ರಯತ್ನ ಮಾಡಿದೆ. ಅವರು ಮಾಡಲಿಲ್ಲ. ಒಂದಿನ ಆ ಸಂಬಂಧ ಬಿಟ್ಟೆ ಎಂದಿದ್ದರು.

ಅಮೃತಾ ಅಯ್ಯಂಗಾರ್
6

ಸ್ಯಾಂಡಲ್‌ವುಡ್ ನಟಿ ಅಮೃತಾ ಅಯ್ಯಂಗಾರ್ ಕೂಡ ಇತ್ತೀಚೆಗೆ ಲವ್ ಬ್ರೇಕಪ್ ಬಗ್ಗೆ ಮಾತನಾಡಿದ್ದರು. ಗೋಲ್ಡ್‌ ಕ್ಲಾಸ್ ವಿತ್ ಮಯೂರ ಯೂಟ್ಯೂಬ್ ಸಂದರ್ಶನದಲ್ಲಿ ಈ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದ ಅಮೃತಾ, ನಾನು ಮನುಷ್ಯಳು, ನನಗೂ ಸಾಕಷ್ಟು ಲವ್ ಬ್ರೇಕಪ್ಸ್ ಆಗಿದೆ. ಇದರಿಂದ ಬಹಳ ಕಲಿತ್ತಿದ್ದೇನೆ. ಬ್ರೇಕಪ್‌ಗಳು ನನಗೆ ಸಾಕಷ್ಟು ಕಲಿಸಿದೆ. ಕಾಲೇಜು ದಿನಗಳಲ್ಲಿ ಬಹಳ ಕೆಟ್ಟ ಲವ್ ಬ್ರೇಕಪ್ ಆಗಿತ್ತು. ಇದರಿಂದ ಬಹಳ ಕಷ್ಟವಾಯ್ತು, ಡಿಪ್ರೆಸ್ ಆಗಿದ್ದೆ ಎಂದಿದ್ದರು.









Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+