twitter
    X
    Home ಚಲನಚಿತ್ರಗಳ ಒಳನೋಟ

    2021 ರಲ್ಲಿ ನಿಧನರಾದ ಕನ್ನಡ ಸಿನಿ ಕಲಾವಿದರು

    Author Administrator | Updated: Wednesday, May 18, 2022, 11:09 AM [IST]

    ಕನ್ನಡ ಚಿತ್ರರಂಗ 2021 ರಲ್ಲಿ ಎರಡು ದೊಡ್ಡ ಆಘಾತಗಳನ್ನು ಎದುರಿಸಬೇಕಾಯಿತು. ತನ್ನ ಅದ್ಭುತ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದು ಈಗಷ್ಟೇ ಕನ್ನಡದಲ್ಲಿ ಭದ್ರ ತಳಪಾಯ ಊರುತ್ತಿದ್ದ ಸಂಚಾರಿ ವಿಜಯ್ ಅಪಮೃತ್ಯುಕ್ಕೀಡಾದರು. ಬಾಲ್ಯನಟನಾಗಿ ರಾಷ್ಟ್ರ ಪ್ರಶಸ್ತಿ ಪಡೆದು, ನಂತರ ಕನ್ನಡದ ಒಬ್ಬ ಸೂಪರ್ ಸ್ಟಾರ್ ನಟನಾಗಿ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ನೀಡಿ, ನಿರ್ಮಾಪಕನಾಗಿ ನವ ಪ್ರತಿಭೆಗಳನ್ನು ಪೋಷಿಸುತ್ತಿದ್ದ ಪುನೀತ್ ರಾಜಕುಮಾರ್ ಅಕಾಲಿಕ ಮರಣ ಕನ್ನಡ ಚಿತ್ರರಂಗದ ದುರ್ದೈವ. ತಮ್ಮ ಬಹುಮುಖಿ ಸಮಾಜಮುಖಿ ಕಾರ್ಯಗಳನ್ನು ಪ್ರಚಾರದಿಂದ ದೂರವಿಟ್ಟಿದ್ದ ಅಪ್ಪು ಹೃದಯ ಸ್ತಂಭನದಿಂದ ವಿಧಿವಶರಾದರು. ಇಲ್ಲಿ ಈ ವರ್ಷ ನಿಧನರಾದ ಕನ್ನಡ ಸಿನಿತಾರೆಯರಿದ್ದಾರೆ.

    cover image
    Death: 29 October 2021, Age - 46

    Death: 29 October 2021, Age - 46

    1

    ಕನ್ನಡ ಕಲಾರಸಿಕರ ಆರಾಧ್ಯ ಡಾ. ರಾಜಕುಮಾರ್ ರವರ ಮುದ್ದಿನ ಮಗ, ಬಾಲನಟನಾಗಿ ರಾಷ್ಟ್ರ ಪ್ರಶಸ್ತಿ ಪಡೆದು, ನಂತರ ನಾಯಕನಾಗಿ ತಮ್ಮ ಅಭಿನಯದಿಂದ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ಪುನೀತ್ ರಾಜಕುಮಾರ್ ರವರ ಅಕಾಲಿಕ ನಿಧನ ಕನ್ನಡ ಚಿತ್ರರಂಗದ ದುರಂತ ಅಧ್ಯಾಯಗಳಲ್ಲಿ ಒಂದು. ತಮ್ಮ ನಟನೆ, ನೃತ್ಯ, ಸಾಹಸ ದೃಶ್ಯಗಳು, ಅದಕ್ಕಿಂತ ಮೇಲಾದ ಅವರ ಮುದ್ದು ನಗುವಿನಿಂದ ಕನ್ನಡಿಗರ ಮನ ಗೆದ್ದಿದ್ದ ಪುನೀತ್ ರವರು ಆಕ್ಟೋಬರ್ 29, 2021 ರಂದು ಹೃದಯ ಸ್ತಂಭನದಿಂದ ವಿಧಿವಶರಾದರು. ಸಕಲ ಸರ್ಕಾರಿ ಗೌರವಗಳೊಂದಿಗೆ ನೆಡೆದ ಅಪ್ಪುವಿನ ಅಂತ್ಯಕ್ರಿಯೆಗೆ ದಾಖಲೆಯಷ್ಟು ಜನ ಸೇರಿದ್ದರು.

    Death: 15 June 2021 , Age - 37

    Death: 15 June 2021 , Age - 37

    2

    ತಮ್ಮ ಸೂಕ್ಷ್ಮ ಮತ್ತು ಪ್ರಬುದ್ಧ ನಟನೆಯಿಂದ ಕನ್ನಡ ಚಿತ್ರರಂಗದಲ್ಲಿ ಅರಳುತ್ತಿದ್ದ ಸಂಚಾರಿ ವಿಜಯ್ ಅಪಮೃತ್ಯುಕ್ಕೀಡಾಗಿದ್ದು ವಿಷಾದಕರ. `ನಾನು ಅವನಲ್ಲ ಅವಳು' ಚಿತ್ರದ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ವಿಜಯ್ ತಮ್ಮನ್ನು ವಿಶಿಷ್ಟ ಪಾತ್ರಗಳಲ್ಲಿ ಪ್ರಯೋಗಿಸಿಕೊಳ್ಳುತ್ತಿದ್ದರು. ಸ್ನೇಹಿತನ ಬೈಕ್ ಮೇಲೆ ಸವಾರಿ ಮಾಡುವಾಗ ಅಪಘಾತಕ್ಕೀಡಾಗಿ ಮೆದುಳಿಗೆ ಪೆಟ್ಟು ಬಿದ್ದು ನಿಧನರಾದರು. `ನಾತಿ ಚರಾಮಿ',`ನಾನು ಅವನಲ್ಲ ಅವಳು','ತೆಲೆದಂಡ',' 6ನೇ ಮೈಲಿ' ಮುಂತಾದ ಚಿತ್ರಗಳಲ್ಲಿ ವಿಜಯ್ ಮನೋಘ್ನ ಅಭಿನಯ ನೀಡಿದ್ದಾರೆ.

    Death: 10 October 2021, Age - 72

    Death: 10 October 2021, Age - 72

    3

    ಸತ್ಯಜಿತ್ ಎಂದೇ ಪ್ರಸಿದ್ಧರಾಗಿರುವ ಸಯ್ಯದ್ ನಿಜಾಮುದ್ದೀನ್ ಕನ್ನಡದ ಹಲವು ಚಿತ್ರಗಳಲ್ಲಿ ಖಳನಾಯಕನಾಗಿ ಮತ್ತು ಪೋಷಕ ನಟನಾಗಿ ನಟಿಸಿ ಖ್ಯಾತಿ ಪಡೆದಿದ್ದಾರೆ. ಸುಮಾರು ಆರನೂರ ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರು ಚಿತ್ರರಂಗಕ್ಕೆ ಬರುವ ಮುನ್ನ ಬಸ್ ಡ್ರೈವರ್ ಆಗಿದ್ದರು. ಅಂಬರೀಶ್ ರ `ಮೈಸೂರು ಜಾಣ' ಚಿತ್ರದಿಂದ ಜನಪ್ರಿಯತೆ ಪಡೆದ ಸತ್ಯಜಿತ್ ಮುಂದೆ ಕನ್ನಡದ ಪ್ರಮುಖ ಖಳನಟನಾಗಿ ಹೊರಹೊಮ್ಮಿದರು. ಡಯಾಬಿಟೀಸ್ ಮತ್ತು ಗ್ಯಾಂಗ್ರೀನ್ ನಿಂದ ಬಳಲುತಿದ್ದ ಸತ್ಯಜಿತ್ ವಯೋಸಹಜ ಕಾಯಿಲೆಗಳಿಂದ ಆಕ್ಟೋಬರ್ 10, 2021 ರಂದು ನಿಧನರಾದರು.

    Death-  July 26, 2021, Age - 76

    Death- July 26, 2021, Age - 76

    4

    ಜಯಂತಿ ಕನ್ನಡ ಚಿತ್ರರಂಗದಲ್ಲಿ ಅಭಿನಯ ಶಾರದೆ ಎಂದೇ ಪ್ರಸಿದ್ಧರಾಗಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಮರಾಠಿ ಭಾಷೆಗಳು ಸೇರಿ ಐನರೂಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಡಾ. ರಾಜ್ ಜೊತೆ ಸುಮಾರು 40 ಕ್ಕೂ ಹೆಚ್ಚು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ಜುಲೈ 26, 2021 ರಂದು, ತಮ್ಮ 76 ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾದರು.

    Death - April 26, 2021, Age - 52

    Death - April 26, 2021, Age - 52

    5

    ಲಕ್ಷಗಳ ವೆಚ್ಚದಲ್ಲಿ ಬಂಡವಾಳ ಹೂಡುತ್ತಿದ್ದ ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ಕೋಟಿಗಳ ವೆಚ್ಚದಲ್ಲಿ ಚಿತ್ರಗಳನ್ನು ನಿರ್ಮಿಸಿ ರಾಮು, ಕೋಟಿ ರಾಮು ಎಂದೇ ಹೆಸರು ಪಡೆದರು. ಸಿಂಹದ ಮರಿ, ಲಾಕಪ್ ಡೆತ್, ಸರ್ಕಲ್ ಇನ್ಸ್‌ಪೆಕ್ಟರ್, ಚಾಮುಂಡಿ, ಭಾವ ಬಾಮೈದ ಮುಂತಾದ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿದ್ದಾರೆ. ಸುಮಾರು ಮೂವತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿ ವಿತರಿಸಿದ್ದಾರೆ. ಎಪ್ರಿಲ್ 26, 2021 ರಂದು ಕೋವಿಡ್ 19 ಸೋಂಕಿಗೆ ಬಲಿಯಾದರು.

    Death: 04/12/2021, Age - 84

    Death: 04/12/2021, Age - 84

    6

    ಪೋಷಕ ನಟನಾಗಿ ಕನ್ನಡ ಚಿತ್ರರಂಗದಲ್ಲಿ ಆರು ದಶಕಗಳಿಗೂ ಹೆಚ್ಚು ಕಾಲ ನಟಿಸಿದ್ದ ಶಿವರಾಮ್ 2021 ಡಿಸೆಂಬರ್ 4 ರಂದು ಮನೆಯಲ್ಲಿ ಜಾರಬಿದ್ದು, ಮೆದುಳಿನ ರಕ್ತಸ್ರಾವದಿಂದ ನಿಧನರಾದರು.

    ಕೆ.ವಿ.ರಾಜು

    ಕೆ.ವಿ.ರಾಜು

    7

    ಹಲವು ಹಿಟ್ ಚಿತ್ರಗಳ ನಿರ್ದೇಶಕ ಮತ್ತು ನಿರ್ಮಾಪಕ ಕೆ.ವಿ ರಾಜು ತಮ್ಮ 67 ನೇ ವಯಸ್ಸಿನಲ್ಲಿ ನಿಧನರಾದರು. ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ರಾಜುರವರು ಹೃದಯಾಘಾತದಿಂದ 2021 ಡಿಸೆಂಬರ್ 24 ರಂದು ನಿಧನರಾದರು. ಯುದ್ಧಕಾಂಡ, ಬೆಳ್ಳಿ ಮೋಡಗಳು, ಸಂಗ್ರಾಮ, ಇಂದ್ರಜಿತ್ ಮುಂತಾದ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ.

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X