twitter
    X
    Home ಚಲನಚಿತ್ರಗಳ ಒಳನೋಟ

    ಮೆಜೆಸ್ಟಿಕ್ TO ಕಾಟೇರ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿ ಕರಿಯರ್​​​ನ ದಿ ಬೆಸ್ಟ್ ಸಿನಿಮಾಗಳ ಪಟ್ಟಿ

    Author Sowmya Bairappa | Updated: Thursday, February 15, 2024, 04:36 PM [IST]

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಲೈಟ್​​ಬಾಯ್ ಆಗಿ ಚಿತ್ರರಂಗದಲ್ಲಿ ಕರಿಯರ್ ಆರಂಭಿಸಿ, ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುವ ಮೂಲಕ ಇಂದು ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟರಾಗಿ ಹೊರಹೊಮ್ಮಿದ್ದಾರೆ. ಸ್ಯಾಂಡಲ್​​ವುಡ್​​ನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ದರ್ಶನ್ ಅವರ ದಿ ಬೆಸ್ಟ್ ಎನಿಸಿಕೊಳ್ಳುವ ಸಿನಿಮಾಗಳು ಸಾಕಷ್ಟಿವೆ. ಅದರಲ್ಲಿ ಒಂದಿಷ್ಟು ಸಿನಿಮಾಗಳು ಇಲ್ಲಿವೆ.

    cover image
    ಮೆಜೆಸ್ಟಿಕ್

    ಮೆಜೆಸ್ಟಿಕ್

    1

    ದರ್ಶನ್ ಮೊದಲ ಬಾರಿ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ್ದು ಮೆಜೆಸ್ಟಿಕ್ ಸಿನಿಮಾದಲ್ಲಿ. ಈ ಚಿತ್ರ ಬಾಕ್ಸಾಫೀಸ್​​ನಲ್ಲಿ ಉತ್ತಮ ಗಳಿಕೆ ತಂದುಕೊಟ್ಟಿತು. ಈ ಸಿನಿಮಾವನ್ನು 002ರಲ್ಲಿ ನಿರ್ಮಾಪಕರಾದ ಭಾಮಾ ಹರೀಶ್ ಹಾಗೂ ರಾಮಮೂರ್ತಿ ಸುಮಾರು 30 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣ ಮಾಡಿದ್ದರು. ಪಿ.ಎನ್​. ಸತ್ಯ ನಿರ್ದೇಶನದ ಮೆಜೆಸ್ಟಿಕ್ ಚಿತ್ರ ದರ್ಶನ್ ಸಿನಿಮಾ ಕರಿಯರ್​​​ಗೆ ದೊಡ್ಡ ಬುನಾದಿ ಹಾಕಿ ಕೊಟ್ಟಿತ್ತು.  

    ಕರಿಯ

    ಕರಿಯ

    2

    ಮೆಜೆಸ್ಟಿಕ್ ಚಿತ್ರದಲ್ಲಿ ಗಮನ ಸೆಳೆದ ದರ್ಶನ್​​​​​​ಗೆ ಸ್ಟಾರ್ ಪಟ್ಟ ತಂದುಕೊಟ್ಟ ಚಿತ್ರ 'ಕರಿಯ' ಸಿನಿಮಾ. ರಿಯಲ್ ರೌಡಿಗಳನ್ನು ಬಳಸಿಕೊಂಡು ನಿರ್ದೇಶಕ ಪ್ರೇಮ್ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದರು. ಆನೇಕಲ್ ಬಾಲರಾಜ್ 2003ರಲ್ಲಿ ಈ ಚಿತ್ರವನ್ನು 2 ಕೋಟಿ ಖರ್ಚು ಮಾಡಿ ನಿರ್ಮಾಣ ಮಾಡಿದ್ದರು. ಚಿತ್ರದ ಹಾಡುಗಳ ಜೊತೆಗೆ ರೌಡಿಸಂ ಕಥೆ ಆಧರಿಸಿದ ಕರಿಯ ಚಿತ್ರ 8 ಕೋಟಿ ಕಲೆಕ್ಷನ್ ಮಾಡುವ ಮೂಲಕ ದರ್ಶನ್​​​​​​​​​​ಗೆ ಸ್ಟಾರ್ ವ್ಯಾಲ್ಯೂ ತಂದು ಕೊಡ್ತು. 

    ಲಾಲಿ ಹಾಡು

    ಲಾಲಿ ಹಾಡು

    3

    ಕರಿಯ ಸಕ್ಸಸ್ ನಂತರ ಮತ್ತೊಂದು ಹಿಟ್ ಆದ ಚಿತ್ರ 'ಲಾಲಿಹಾಡು'. ಹೆಚ್​​​​​. ವಾಸು ನಿರ್ದೇಶನದ ಈ ಚಿತ್ರಕ್ಕೆ, ನಿರ್ಮಾಪಕ ಸಾ.ರಾ. ಗೋವಿಂದು 1.5 ಕೋಟಿ ಹಣ ಹೂಡಿದ್ದರು. ಈ ಚಿತ್ರ ಬಾಕ್ಸ್ ಆಫೀಸ್​​​​​​​​​​ನಲ್ಲಿ 3 ಕೋಟಿ ಗಳಿಸುವ ಮೂಲಕ ದರ್ಶನ್​​ಗೆ ಇನ್ನೂ ಹೆಚ್ಚಿನ ಹೆಸರು ನೀಡಿತು.  

     

    ನಮ್ಮ ಪ್ರೀತಿಯ ರಾಮು

    ನಮ್ಮ ಪ್ರೀತಿಯ ರಾಮು

    4

    ರೌಡಿಸಂ ಹಾಗೂ ಲವರ್ ಬಾಯ್ ಪಾತ್ರಗಳಲ್ಲಿ ಮಿಂಚಿದ್ದ ದರ್ಶನ್ ಮೊದಲ ಬಾರಿಗೆ ಅಂಧನಾಗಿ ನಟಿಸಿದ ಚಿತ್ರ 'ನಮ್ಮ ಪ್ರೀತಿಯ ರಾಮು'. ಈ ಚಿತ್ರ ಬಾಕ್ಸಾಫೀಸ್​​ನಲ್ಲಿ ಸದ್ದು ಮಾಡದಿದ್ರೂ ದರ್ಶನ್ ಅಭಿನಯಕ್ಕೆ ಎಲ್ಲರಿಂದ ಪ್ರಶಂಸೆ ದೊರೆಯಿತು. 

    ದಾಸ

    ದಾಸ

    5

     'ದಾಸ' ಮತ್ತೆ ದರ್ಶನ್ ರೌಡಿಯಾಗಿ ಕಾಣಿಸಿಕೊಂಡ ಸಿನಿಮಾ. ಪಿ.ಎನ್.ಸತ್ಯ ನಿರ್ದೇಶನದ ದಾಸ ಚಿತ್ರಕ್ಕೆ ರಮೇಶ್ ಯಾದವ್ ಹಣ ಹೂಡಿದ್ದರು. ಈ ಚಿತ್ರ ಲಾಭ ಮಾಡಿದ್ದು 4 ಕೋಟಿ ರೂಪಾಯಿ. ಹೀಗೆ ಬ್ಯಾಕ್ ಟೂ ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದ ದರ್ಶನ್​​​​ಗೆ ಮೈಸೂರಿನ ಹುಣಸೂರು ತಾಲೂಕಿನ ದೇಸಿಗೌಡ ಎಂಬುವವರು 'ಚಾಲೆಂಜಿಂಗ್ ಹೀರೋ' ಎಂಬ ಬಿರುದು ಕೊಟ್ಟರು.  

     

    ಕಲಾಸಿಪಾಳ್ಯ

    ಕಲಾಸಿಪಾಳ್ಯ

    6

    2004ರಲ್ಲಿ ಬಂದ 'ಕಲಾಸಿಪಾಳ್ಯ' ಸಿನಿಮಾ ಚಾಲೆಂಜಿಂಗ್ ಹೀರೋಗೆ ಇನ್ನೂ ದೊಡ್ಡ ಇಮೇಜ್ ತಂದುಕೊಡ್ತು. ಓಂ ಪ್ರಕಾಶ್ ರಾವ್ ನಿರ್ದೇಶನದ ಕಲಾಸಿಪಾಳ್ಯ ಚಿತ್ರವನ್ನು ನಿರ್ಮಾಪಕ ರಾಮು 3 ಕೋಟಿ ಬಜೆಟ್​​​​ನಲ್ಲಿ ನಿರ್ಮಾಣ ಮಾಡಿದ್ದರು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಗಳಿಸಿದ್ದು 7 ಕೋಟಿ ರೂಪಾಯಿ. ಅಂದಿನಿಂದ ಚಾಲೆಂಜಿಂಗ್ ಹೀರೋ ಆಗಿದ್ದ ದರ್ಶನ್ ಚಾಲೆಂಜಿಂಗ್ ಸ್ಟಾರ್ ಆದರು. ಈ ಸಮಯದಲ್ಲಿ ದರ್ಶನ್ ಮತ್ತು ರಕ್ಷಿತಾ ಜೋಡಿ ಸೂಪರ್ ಹಿಟ್ ಆಗಿತ್ತು. 

    ಅಯ್ಯ

    ಅಯ್ಯ

    7

    ಕಲಾಸಿಪಾಳ್ಯ ಚಿತ್ರದ ಬಳಿಕ ದರ್ಶನ್​​​​ಗೆ ಮತ್ತೊಂದು ಹಿಟ್ ಕೊಟ್ಟ ಚಿತ್ರ 'ಅಯ್ಯ'. ಮೊದಲ ಬಾರಿಗೆ ಪೊಲೀಸ್ ಪಾತ್ರದಲ್ಲಿ ಅವರು ಮಿಂಚಿದರು. ಭೈರೇಗೌಡ ಎಂಬುವರು 2 ಕೋಟಿ ಬಜೆಟ್​​​​​​ನಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಈ ಸಿನಿಮಾವನ್ನು ಕೂಡಾ ಓಂ ಪ್ರಕಾಶ್ ರಾವ್ ನಿರ್ದೇಶಿಸಿದ್ದರು.   

    ಗಜ

    ಗಜ

    8

    ನಂತರ ಸ್ವಾಮಿ, ಮಂಡ್ಯ, ಸುಂಟರಗಾಳಿ, ಅನಾಥರು ಚಿತ್ರಗಳ ನಡುವೆ ಸೂಪರ್ ಹಿಟ್ ಆದ ಸಿನಿಮಾ 'ಗಜ'. ಕೆ. ಮಾದೇಶ ನಿರ್ದೇಶನದ ಈ ಚಿತ್ರವನ್ನು ಸುರೇಶಗೌಡ ಎಂಬ ನಿರ್ಮಾಪಕರು 4 ಕೋಟಿ ಬಜೆಟ್​​​​​​ನಲ್ಲಿ ನಿರ್ಮಾಣ ಮಾಡಿದ್ದರು. 

    ಪೊರ್ಕಿ

    ಪೊರ್ಕಿ

    9

    ಗಜ ಸಿನಿಮಾದ ನಂತರ 'ಪೊರ್ಕಿ' ಸಿನಿಮಾದಲ್ಲಿ ದರ್ಶನ ನಟಿಸಿದ್ದರು. ನಂತರ ದರ್ಶನ್ ಅವರಿಗೆ ಬಿಗ್ ಬ್ರೇಕ್ ನೀಡಿದ್ದು  'ಸಾರಥಿ' ಚಿತ್ರ. ಈ ಸಿನಿಮಾ ವನ್ನು ಸತ್ಯಪ್ರಕಾಶ್ 7 ಕೋಟಿ ಬಜೆಟ್​​​​​​​​ನಲ್ಲಿ ನಿರ್ಮಾಣ ಮಾಡಿದ್ದು, 14 ಕೋಟಿ ರೂಪಾಯಿ ಲಾಭ ಮಾಡುವ ಮೂಲಕ ಈ ಸಿನಿಮಾ ಹಿಟ್ ಆಗಿತ್ತು.  

     

    ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ

    ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ

    10

    ಮೊದಲ ಬಾರಿ ದರ್ಶನ್ ನಟಿಸಿದ ಐತಿಹಾಸಿಕ ಚಿತ್ರ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ'. ದರ್ಶನ್ ಸಿನಿಮಾ ಕರಿಯರ್​​​ನಲ್ಲಿ 30 ಕೋಟಿ ಬಂಡವಾಳ ಹೂಡಿದ ಮೊದಲ ಸಿನಿಮಾ ಇದು. ಈ ಚಿತ್ರದಲ್ಲಿ ದರ್ಶನ್ ರಾಯಣ್ಣನಾಗಿ ಮಿಂಚಿದ್ದರು.

    ಬುಲ್ ಬುಲ್

    ಬುಲ್ ಬುಲ್

    11

    ನಂತರ ದರ್ಶನ  ತಮ್ಮದೇ ಬ್ಯಾನರ್​​​​​​​​​​​​​​​ನಲ್ಲಿ ಸುಮಾರು 15 ಕೋಟಿ ರೂಪಾಯಿ ಬಜೆಟ್ನಲ್ಲಿ  'ಬುಲ್ ಬುಲ್' ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಗಿದ್ದು, ದು 25 ಕೋಟಿ ರೂಪಾಯಿ ಗಳಿಸಿತ್ತು.  

    ಯಜಮಾನ

    ಯಜಮಾನ

    12

    ಬಳಿಕ ಬಂದ ಪೊನ್ನಮ್ ಕುಮಾರ್ ಮತ್ತು ವಿ. ಹರಿಕೃಷ್ಣ ನಿರ್ದೇಶನದ 'ಯಜಮಾನ' ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ 40 ಕೋಟಿ ಬಾಚಿತ್ತು. ಯಜಮಾನ ಸಿನಿಮಾ  ಆ್ಯಕ್ಷನ್ ಜೊತೆಗೆ ಫ್ಯಾಮಿಲಿ ಸೆಂಟಿಮೆಂಟ್ ಹೊಂದಿತ್ತು. 

    ಕುರುಕ್ಷೇತ್ರ

    ಕುರುಕ್ಷೇತ್ರ

    13

    ಸಂಗೊಳ್ಳಿ ರಾಯಣ್ಣ ನಂತರ ದರ್ಶನ್ 'ಕುರುಕ್ಷೇತ್ರ' ಎಂಬ ಐತಿಹಾಸಿಕ ಸಿನಿಮಾ ಮಾಡಿದರು. ನಿರ್ಮಾಪಕ ಮುನಿರತ್ನ 60 ಕೋಟಿ ಬಜೆಟ್​​​​ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಈ ಸಿನಿಮಾ 100 ಕೋಟಿ  ಗಳಿಕೆ ಮಾಡಿತ್ತು. 

    ರಾಬರ್ಟ್

    ರಾಬರ್ಟ್

    14

    'ರಾಬರ್ಟ್' ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 53ನೇ ಚಿತ್ರವಾಗಿದ್,ದು ಚೌಕ ಖ್ಯಾತಿಯ ನಿರ್ದೇಶಕ ತರುಣ ಸುಧೀರ್ ನಿರ್ದೇಶಿಸಿದ್ದರು. ಈ ಸಿನಿಮಾ ಸೂಪರ್​ ಹಿಟ್ ಕೂಡ ಸೂಪರ್ ಹಿಟ್ ಆಗಿತ್ತು. 

     

    ಕಾಟೇರ

    ಕಾಟೇರ

    15

    2023ರ ಕೊನೆಯಲ್ಲಿ ಬಿಡುಗಡೆಯಾದ ಚಾಲೆಂಜಿಂಗ್ ಸ್ಟಾರ್‌ ದರ್ಶನ್ ತೂಗುದೀಪ್ ಅಭಿನಯದ 'ಕಾಟೇರ' ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇದೊಂದು ಪಕ್ಕಾ ಹಳ್ಳಿ ಸೊಗಡಿನ ಸಿನಿಮಾ. ನಟ ದರ್ಶನ್ ತಮ್ಮ ಪಾತ್ರದಲ್ಲಿ ಅಕ್ಷರಶಃ ಜೀವಿಸಿದ್ದು, ಕಥೆಯ ಗೇಜ್ ಅರಿತು ಹಾಗೂ ತಮ್ಮ ಇಮೇಜ್ ಪಕ್ಕಕ್ಕಿಟ್ಟು ಈ ಪಾತ್ರ ಮಾಡಿದ್ದರು. ಈ ಚಿತ್ರದಲ್ಲಿ ಜಾತಿವ್ಯವಸ್ಥೆ, ಅಸ್ಪೃಶ್ಯತೆ, ಮೇಲು ಕೀಳು ಎನ್ನುವ ಭೇದ ಭಾವ ಆ ಕಾಲದಲ್ಲಿ ಎಷ್ಟರಮಟ್ಟಿಗಿತ್ತು ಎನ್ನುವುದನ್ನು ತೋರಿಸಲಾಗಿತ್ತು. 'ಉಳುವವನೆ ಭೂಮಿಯ ಒಡೆಯ ಕಾಯ್ದೆ' ದೇಶದಲ್ಲಿ ಎಂತಹ ಬದಲಾವಣೆಗಳನ್ನು ತಂದಿತ್ತು. ತಮ್ಮ ಕಾಲಡಿ ಇರುವವರು ಈ ಕಾಯ್ದೆಯಿಂದ ಎದ್ದು ನಿಲ್ತಾರೆ ಎಂದಾಗ, ಅದನ್ನೆಲ್ಲಾ ಸಹಿಸದವರು ಏನೆಲ್ಲಾ ಮಾಡಿರಬಹುದು? ಎನ್ನುವುದನ್ನು ನಿಮಾದಲ್ಲಿ ಹೇಳಲಾಗಿತ್ತು. ಮನುಷ್ಯ ಸಂಬಂಧಗಳ ಬಗ್ಗೆಯೂ ಚಿತ್ರ ಮಾತಾಡುತ್ತದೆ. 

     

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X