X
ಕಾಟೇರ

ಕಾಟೇರ

Action | Drama | Period | 29 Dec 2023 | U/A | 183 Mins
Kannada

2.5 /5 Users

0 /5 Filmibeat

ಕಾಟೇರ ಕಥೆ

ಚಾಲೆಂಜಿಂಗ್ ಸ್ಟಾರ್  ದರ್ಶನ್  ಅವರ 56ನೇ ಚಿತ್ರವಾದ 'ಕಾಟೇರ್ ಅನ್ನು  ತರುಣ್ ಸುಧೀರ್  ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಮಾಲಾಶ್ರೀ ಮತ್ತು ರಾಮು ಪುತ್ರಿ  ಆರಾಧನಾ ಆರ್  ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಶ್ರುತಿ, ಬಿರಾದಾರ್, ಕುಮಾರ್ ಗೋವಿಂದ್, ಜಗಪತಿ ಬಾಬು, ಮಾಸ್ಟರ್ ರೋಹಿತ್ ಮುಂತಾದವರು ತಾರಾಗಣದಲ್ಲಿದ್ದಾರೆ.  ಚಿತ್ರಕ್ಕೆ ಚಿತ್ರಕ್ಕೆ  ರಾಕಲೈನ್ ವೆಂಕಟೇಶ್  ಬಂಡವಾಳ ಹೂಡಿದ್ದಾರೆ. ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ 'ಕಾಟೇರ' ಚಿತ್ರಕ್ಕೆ ವಿ. ಹರಿಕೃಷ್ಣ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಸುಧಾಕರ್ ಎಸ್‌ ರಾಜ್ ಛಾಯಾಗ್ರಹಣ ಹಾಗೂ ಕೆ ಎಂ ಪ್ರಕಾಶ್ ಸಂಕಲನ ಚಿತ್ರಕ್ಕಿದೆ. 70ರ ದಶಕದಲ್ಲಿ ನಡೆದ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಜಡೇಶ್ ಹಂಪಿ ಹಾಗೂ ತರುಣ್ ಸುಧೀರ್ 'ಕಾಟೇರ' ಚಿತ್ರಕ್ಕೆ ಕಥೆ ಸಿದ್ಧಪಡಿಸಿದ್ದು, ಮಾಸ್ತಿ ಸಂಭಾಷಣೆ ಚಿತ್ರಕ್ಕಿದೆ. ಮೋಷನ್ ಪೋಸ್ಟರ್‌ನಲ್ಲಿ 'ಪ್ರತಿ ಮಚ್ಚು ಎರಡು ದಪ ಕೆಂಪಾಗ್ತೈತೆ, ಬೆಂಕಿಲಿ ಬೆಂದಾಗ ರಕ್ತದಲ್ಲಿ ನೆಂದಾಗ' ಎನ್ನುವ ಡೈಲಾಗ್ ಅಭಿಮಾನಿಗಳಿಗೆ ಕಿಕ್ ಕೊಡ್ತಿದೆ.    ಟೈಟಲ್: ದರ್ಶನ್ ಅವರ ಹುಟ್ಟುಹಬ್ಬದ ಪ್ರಯುಕ್ತ 2023ರ ಫೆಬ್ರವರಿ 14ರಂದು ಅವರ  56ನೇ ಚಿತ್ರದ ಟೈಟಲ್ ಹಾಗೂ ಪೋಸ್ಟರ್  ರಿವೀಲ್ ಮಾಡಲಾಗಿದ್ದು, ಕಾಟೇರ ಎಂದು ಹೆಸರಿಡಲಾಗಿತ್ತು.  ಕಥೆ: 1989ರ ಸಮಯ. ಭೀಮನಹಳ್ಳಿ, ಮಲ್ಲನಹಳ್ಳಿ ಜನ ಊರ ಜಾತ್ರೆಗೆ ಸಿದ್ಧತೆ ನಡೆಸಿರುತ್ತಾರೆ. ತನ್ನ ಊರಿಗಾಗಿ ಹೋರಾಡಿ ಜೈಲು ಸೇರಿದ ಕಾಟೇರನಿಗೆ ಇಡೀ ಊರು ಕಾಯುತ್ತಿರುತ್ತದೆ. 10 ದಿನಗಳ ಕಾಲ ಪೆರೋಲ್ ಮೇಲೆ ಹೊರ ಬರುವ ಆತ ಊರಿನ ಹಾದಿ ಹಿಡಿಯುತ್ತಾನೆ. ಮತ್ತೊಂದು ಕಡೆ ನಾಲೆ ಅಗೆಯುವ ವೇಳೆ ಒಂದೇ ಜಾಗದಲ್ಲಿ 107ರ ಜನರ ಅಸ್ತಿಪಂಜರ ಸಿಕ್ಕಿರುತ್ತದೆ. ಅದು ಯಾರ ಅಸ್ಥಿಪಂಜರ? ಒಮ್ಮೆಲೆ ಅಷ್ಟು ಜನ ಸತ್ತು ಮಣ್ಣಾಗಿದ್ದೇಗೆ? ಅವರಿಗೂ ಕಾಟೇರನಿಗೂ ಏನು ಸಂಬಂಧ? 70ರ ದಶಕದಲ್ಲಿ ಆ ಎರಡೂ ಊರುಗಳಲ್ಲಿ ನಡೆದ ಘಟನೆಗಳೇನು? 'ಕಾಟೇರ' ಜೈಲು ಸೇರೋದ್ಯಾಕೆ? ಎಂಬುದೇ ಸಿನಿಮಾ ಕಥೆ. ಬಿಡುಗಡೆ: ಬಹುನಿರೀಕ್ಷಿತ ಕಾಟೇರ ಸಿನಿಮಾ 2023ರ ಡಿಸೆಂಬರ್ 29ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು... 
Read More

ಕಾಟೇರ ಕಲಾವಿದರು ಮತ್ತು ಸಿಬ್ಬಂದಿ

ಕಾಟೇರ ಕ್ರೂ ಮಾಹಿತಿ

ನಿರ್ದೇಶಕ ತರುಣ್ ಸುಧೀರ್
ಕಥೆ ಜಡೇಶ್ ಕುಮಾರ್ ಹಂಪಿ
ಸಿನಿಮಾಟೋಗ್ರಫಿ ಸುಧಾಕರ್ ಎಸ್ ರಾಜ್
ಸಂಪಾದಕ ಕೆ.ಎಂ.ಪ್ರಕಾಶ್
ಸಂಗೀತ ವಿ ಹರಿಕೃಷ್ಣ
ನಿರ್ಮಾಪಕ ರಾಕ್ ಲೈನ್ ವೆಂಕಟೇಶ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಕಾಟೇರ ವಿಮರ್ಶಕರ ವಿಮರ್ಶೆ

kannada.filmibeat.com
'ಕಾಟೇರ' ಸಿನಿಮಾ 70 ಹಾಗೂ 80ರ ದಶಕದಲ್ಲಿ ನಡೆಯುವ ಕಥೆ. ಅದನ್ನು ಸೊಗಸಾಗಿ ಕಟ್ಟಿಕೊಡುವಲ್ಲಿ ಚಿತ್ರತಂಡ ಬಹುತೇಕ ಸಕ್ಸಸ್ ಕಂಡಿದೆ. ದರ್ಶನ್ ಅಭಿಮಾನಿಗಳು ಕೇಳುವ ಮಾಸ್ ಅಂಶಗಳನ್ನು ಬೆರಸಿ ಒಂದು ಹಳ್ಳಿ ಕಥೆಯನ್ನು ತರುಣ್ ಸುಧೀರ್ ಕಟ್ಟಿಕೊಟ್ಟಿದ್ದಾರೆ.

ಕಾಟೇರ ಟ್ರೇಲರ್

Video Thumbnail

ಕಾಟೇರ ಪಾಟ್ಲುಗಳು

ಕಾಟೇರ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಕಾಟೇರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+