twitter
    X
    Home ಚಲನಚಿತ್ರಗಳ ಒಳನೋಟ

    ಸೈಮಾ 2021: ಪ್ರಶಸ್ತಿ ವಿಜೇತ ಕನ್ನಡ ತಾರೆಯರು ಮತ್ತು ಚಲನಚಿತ್ರಗಳು

    Author Administrator | Updated: Tuesday, September 21, 2021, 01:08 PM [IST]

    ಇತ್ತೀಚಿಗಷ್ಟೆ ಸೈಮಾ 2019 ನೇ ಸಾಲಿನ ಪ್ರಶಸ್ತಿ ಹೈದರಾಬಾದ್ ನಲ್ಲಿ ನೆಡೆಯಿತು. 2019 ರಲ್ಲಿ ತೆರೆಕಂಡ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಅತ್ಯುತ್ತಮ ಚಲನಚಿತ್ರಗಳನ್ನು ಮತ್ತು ಕಲಾವಿದರನ್ನು ಪ್ರಶಸ್ತಿಗಳಿಂದ ಗೌರವಿಸಲಾಯಿತು. ಇಲ್ಲಿ ಕನ್ನಡ ಭಾಷೆಯಲ್ಲಿ 2019 ನೇ ಸಾಲಿನಲ್ಲಿ ಸೈಮಾ ಪ್ರಶಸ್ತಿ ಪಡೆದ ಚಲನಚಿತ್ರಗಳನ್ನು ಮತ್ತು ಕಲಾವಿದರನ್ನು ಪಟ್ಟಿ ಮಾಡಿದೆ.

    cover image
    ಅತ್ಯುತ್ತಮ ನಟ ಕ್ರಿಟಿಕ್ಸ್​ ಅವಾರ್ಡ್​ ( ಅವನೇ ಶ್ರೀಮನ್ನಾರಾಯಣ)

    ಅತ್ಯುತ್ತಮ ನಟ ಕ್ರಿಟಿಕ್ಸ್​ ಅವಾರ್ಡ್​ ( ಅವನೇ ಶ್ರೀಮನ್ನಾರಾಯಣ)

    1

    ಸಚಿನ್ ರವಿ ನಿರ್ದೇಶನದಲ್ಲಿ ಮೂಡಿಬಂದ ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಮತ್ತು ಶಾನ್ವಿ ಶ್ರೀವಾತ್ಸವ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ರಕ್ಷಿತ್ ಪೋಲಿಸ್ ಪಾತ್ರದಲ್ಲಿ ಅದ್ಭುತ ಅಭಿನಯ ನೀಡಿದ್ದರು. ನಿಧಿಯೊಂದರ ಅನ್ವೇಷಣೆಗಾಗಿ ಹಲವು ಗುಂಪುಗಳು ನೆಡೆಸುವ ಸಂಘರ್ಷದ ಕಥೆಯನ್ನು ಚಿತ್ರ ಹೊಂದಿದೆ.

    ಅತ್ಯುತ್ತಮ ನಟಿ ಕ್ರಿಟಿಕ್ಸ್​ ಅವಾರ್ಡ್​: ರಶ್ಮಿಕಾ ಮಂದಣ್ಣ

    ಅತ್ಯುತ್ತಮ ನಟಿ ಕ್ರಿಟಿಕ್ಸ್​ ಅವಾರ್ಡ್​: ರಶ್ಮಿಕಾ ಮಂದಣ್ಣ

    2

    ವಿ ಹರಿಕೃಷ್ಣ ಮತ್ತು ಪೊನ್ ಕುಮಾರ ನಿರ್ದೇಶನದ ಯಜಮಾನ ಚಿತ್ರದಲ್ಲಿ ದರ್ಶನ್ ಜೊತೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ರೈತರ ಹೋರಾಟದ ಬಗ್ಗೆ ಈ ಚಿತ್ರದಲ್ಲಿನ ರಶ್ಮಿಕಾ ಅಭಿನಯಕ್ಕೆ ಸೈಮಾ ಅತ್ಯುತ್ತಮ ನಟಿ ಕ್ರಿಟಿಕ್ಸ್ ಅವಾರ್ಡ್ ಪ್ರಶಸ್ತಿ ಪಡೆದರು.

    ಅತ್ಯುತ್ತಮ ನಟಿ: ಆಯುಷ್ಮಾನ್​ ಭವ

    ಅತ್ಯುತ್ತಮ ನಟಿ: ಆಯುಷ್ಮಾನ್​ ಭವ

    3

    ಪಿ ವಾಸು ನಿರ್ದೇಶನದಲ್ಲಿ ಮೂಡಿಬಂದಿದ್ದ ಆಯುಷ್ಮಾನ್ಭವ ಚಿತ್ರದಲ್ಲಿ ಶಿವಣ್ಣ ಜೊತೆ ರಚಿತಾ ರಾಮ್ ನಾಯಕಿಯಾಗಿ ನಟಿಸಿದ್ದರು. ಚಿತ್ರದಲ್ಲಿ ಮಾನಸಿಕ ಅಸ್ವಸ್ತೆ ರೂಪದಲ್ಲಿ ನಟಿಸಿದ್ದ ರಚಿತಾ ಸೈಮಾ 2019 ನೇ ಸಾಲಿನ ಸೈಮಾ ಅತ್ಯುತ್ತಮ ನಾಯಕಿ ಪ್ರಶಸ್ತಿ ಪಡೆದರು.

    ಅತ್ಯುತ್ತಮ ನಟ: ಯಜಮಾನ

    ಅತ್ಯುತ್ತಮ ನಟ: ಯಜಮಾನ

    4

    ವಿ ಹರಿಕೃಷ್ಣ ಮತ್ತು ಪೊನ್ ಕುಮಾರ ನಿರ್ದೇಶನದ ಯಜಮಾನ ಚಿತ್ರದಲ್ಲಿ ದರ್ಶನ್, ರಶ್ಮಿಕಾ ಮಂದಣ್ಣ ಮತ್ತು ತಾನ್ಯಾ ಹೋಪ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ರೈತರ ಹೋರಾಟದ ಬಗ್ಗೆ ಈ ಚಿತ್ರದಲ್ಲಿನ ದರ್ಶನ್ ರ ಅಭಿನಯಕ್ಕೆ ಸೈಮಾ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು.

    ಅತ್ಯುತ್ತಮ ಹೊಸ ನಟ: ಅಮರ್​

    ಅತ್ಯುತ್ತಮ ಹೊಸ ನಟ: ಅಮರ್​

    5

    ಪಿ ನಾಗಶೇಖರ್ ನಿರ್ದೇಶನದಲ್ಲಿ ಮೂಡಿಬಂದ ಅಮರ್ ಚಿತ್ರದ ಮೂಲಕ ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ನಾಯಕನಾಗಿ ಚಂದನವನ ಪ್ರವೇಶಿಸಿದರು. ಮೊದಲ ಚಿತ್ರದಲ್ಲಿಯೇ ತಮ್ಮ ಅಭಿನಯ ಸಾಮರ್ಥ್ಯ ಪ್ರದರ್ಶಿಸಿದ ಅಭಿ‍ಷೇಕ್ 2019 ರ ಸೈಮಾ ಅತ್ಯುತ್ತಮ ಹೊಸ ನಟ ಪ್ರಶಸ್ತಿ ಪಡೆದರು.

    ಅತ್ಯುತ್ತಮ ಪೋಷಕ ನಟಿ: ಮನೆ ಮಾರಾಟಕ್ಕಿದೆ

    ಅತ್ಯುತ್ತಮ ಪೋಷಕ ನಟಿ: ಮನೆ ಮಾರಾಟಕ್ಕಿದೆ

    6

    ಮಂಜು ಸ್ವರಾಜ್ ನಿರ್ದೇಶನದ ಮನೆ ಮಾರಾಟಕ್ಕಿದೆ ಚಿತ್ರದಲ್ಲಿ ಶೃತಿ ಹರಿಹರನ್, ಕಾರುಣ್ಯ ರಾಮ್, ಕುರಿ ಪ್ರತಾಪ್, ಚಿಕ್ಕಣ್ಣ, ಸಾಧು ಕೋಕಿಲಾ ಮತ್ತು ರವಿಶಂಕರ್ ಗೌಡ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು.ಈ ಚಿತ್ರದಲ್ಲಿ ಕಾಮಿನಿ ಪಾತ್ರದಲ್ಲಿ ನಟಿಸಿದ್ದ ಕಾರುಣ್ಯ ರಾಮ್ ಸೈಮಾ 2019 ರ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದರು.

    ಅತ್ಯುತ್ತಮ ಚೊಚ್ಚಲ ನಿರ್ದೇಶನ: ಕನ್ನಡ್​ ಗೊತ್ತಿಲ್ಲ

    ಅತ್ಯುತ್ತಮ ಚೊಚ್ಚಲ ನಿರ್ದೇಶನ: ಕನ್ನಡ್​ ಗೊತ್ತಿಲ್ಲ

    7

    ಹರಿಪ್ರಿಯಾ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಕ್ರೈಮ್ ಥ್ರಿಲ್ಲರ್ ಚಿತ್ರ `ಕನ್ನಡ ಗೊತ್ತಿಲ್ಲ'ವನ್ನು ಮಯೂರ ರಾಘವೇಂದ್ರ ನಿರ್ದೇಶಿಸಿದ್ದರು. ಮಯೂರ ಪ್ರಥಮ ಪ್ರಯತ್ನಕ್ಕೆ ಸೈಮಾ 2019 ರ ಅತ್ಯುತ್ತಮ ಚೊಚ್ಚಲ ನಿರ್ದೇಶನ ಪ್ರಶಸ್ತಿ ಪಡೆದರು.

    ಅತ್ಯುತ್ತಮ ಹಾಸ್ಯ ಕಲಾವಿದ: ಯಜಮಾನ

    ಅತ್ಯುತ್ತಮ ಹಾಸ್ಯ ಕಲಾವಿದ: ಯಜಮಾನ

    8

    ವಿ ಹರಿಕೃಷ್ಣ ಮತ್ತು ಪೊನ್ ಕುಮಾರ ನಿರ್ದೇಶನದ ಯಜಮಾನ ಚಿತ್ರದಲ್ಲಿ ದರ್ಶನ್, ರಶ್ಮಿಕಾ ಮಂದಣ್ಣ ಮತ್ತು ತಾನ್ಯಾ ಹೋಪ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ರೈತಪರ ಹೋರಾಟದ ಈ ಚಿತ್ರದಲ್ಲಿನ ಸಾಧು ಕೋಕಿಲಾರ ಪಾತ್ರಕ್ಕೆ ಸೈಮಾ ಅತ್ಯುತ್ತಮ ಹಾಸ್ಯ ನಟ ಪ್ರಶಸ್ತಿ ಪಡೆದರು.

    ಹರಿಕೃಷ್ಣ & ಪೋನ್​ ಕುಮಾರ್; ಅತ್ಯುತ್ತಮ ನಿರ್ದೇಶನ: ​ ಯಜಮಾನ

    ಹರಿಕೃಷ್ಣ & ಪೋನ್​ ಕುಮಾರ್; ಅತ್ಯುತ್ತಮ ನಿರ್ದೇಶನ: ​ ಯಜಮಾನ

    9

    ದರ್ಶನ್, ತಾನ್ಯಾ ಹೋಪ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಯಜಮಾನ ಚಿತ್ರವನ್ನು ವಿ ಹರಿಕೃಷ್ಣ ಮತ್ತು ಪೊನ್ ಕುಮಾರ್ ನಿರ್ದೇಶನ ಮಾಡಿದ್ದರು. ಈ ಚಿತ್ರದ ನಿರ್ದೇಶನಕ್ಕೆ ಸೈಮಾ 2019 ಸಾಲಿನ ಅತ್ಯುತ್ತಮ ನಿರ್ದೇಶನ ಪ್ರಶಸ್ತಿ ಪಡೆದರು.

    ಅತ್ಯುತ್ತಮ ಖಳನಟ:  ಭರಾಟೆ

    ಅತ್ಯುತ್ತಮ ಖಳನಟ: ಭರಾಟೆ

    10

    ಚೇತನ್ ಕುಮಾರ್ ನಿರ್ದೇಶನದ ಭರಾಟೆ ಚಿತ್ರದಲ್ಲಿ ಶ್ರೀಮುರಳಿ ಜೊತೆ ಶ್ರೀಲೀಲಾ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಖಳನಾಯಕನಾಗಿ ನಟಿಸಿದ್ದ ಸಾಯಿ ಕುಮಾರ್ ಗೆ ಸೈಮಾ 2019 ಸಾಲಿನ ಅತ್ಯುತ್ತಮ ಖಳ ನಟ ಪ್ರಶಸ್ತಿ ಪಡೆದರು.

    ಅತ್ಯುತ್ತಮ ಸಂಗೀತ ನಿರ್ದೇಶನ: ಯಜಮಾನ

    ಅತ್ಯುತ್ತಮ ಸಂಗೀತ ನಿರ್ದೇಶನ: ಯಜಮಾನ

    11

    ದರ್ಶನ್ ಅಭಿನಯದ ಯಜಮಾನ ಚಿತ್ರದಲ್ಲಿ ಒಟ್ಟು ಐದು ಗೀತೆಗಳಿವೆ. ವಿ ಹರಿಕೃಷ್ಣ ಸಂಗೀತ ನೀಡಿದ್ದ ಈ ಚಿತ್ರದ ಐದು ಗೀತೆಗಳು ಹಿಟ್ ಆದವು. ಚಿತ್ರದ ಸಂಗೀತಕ್ಕಾಗಿ ವಿ ಹರಿಕೃಷ್ಣ ಸೈಮಾ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಪಡೆದರು.

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X