»   » ಉದಯ ಟಿವಿಯ 'ಸರಯೂ'ಗೆ 300 ಸಂಚಿಕೆಗಳ ಸಂಭ್ರಮ

ಉದಯ ಟಿವಿಯ 'ಸರಯೂ'ಗೆ 300 ಸಂಚಿಕೆಗಳ ಸಂಭ್ರಮ

Posted By:
Subscribe to Filmibeat Kannada

ಉದಯ ಟಿವಿಯಲ್ಲಿ ಜನರ ಕಣ್ಮನ ಸೆಳೆಯುತ್ತಿರುವ ಧಾರಾವಾಹಿ 'ಸರಯೂ'. ಈ ಧಾರಾವಾಹಿ ಇದೀಗ 300 ಕಂತುಗಳನ್ನು ಪೂರೈಸಿದೆ. ಮೊಟ್ಟಮೊದಲ ಬಾರಿಗೆ ಕನ್ನಡ ಕಿರುತೆರೆಯಲ್ಲಿ ಬ್ಯಾಂಕಾಕ್ ನಲ್ಲಿ ಚಿತ್ರೀಕರಣಗೊಂಡ ಹೆಗ್ಗಳಿಕೆ ಈ ಧಾರಾವಾಹಿಯದ್ದು.

'ಸರಯೂ' ಒಬ್ಬ ಬಡ ಅರ್ಚಕನ ಮುಗ್ದ ಮಗಳು. ಅಪ್ಪನ ಆದರ್ಶವನ್ನೇ ಪಾಲಿಸುವ ಈಕೆಗೆ ಎದುರಾಗುವ ದೇಶಪಾಂಡೆ ಮನೆ ಹುಡುಗ ಎಬಿಡಿ (ಅಭಿರಾಮ್ ದೇಶಪಾಂಡೆ). ಇವನು ಮಾಡುವ ಕ್ರೂರ ಕೆಲಸವನ್ನು ಕಣ್ಣಾರೆ ನೋಡುವ ಸರಯೂ, ಅವನ ಮೇಲೆ ದೂರು ನೀಡುತ್ತಾಳೆ. ಅದಕ್ಕೆ ಸೇಡು ತೀರಿಸಿಕೊಳ್ಳಲು ಎಬಿಡಿ ಅವಳನ್ನ ಪ್ರೀತಿಸುವ ನಾಟಕವಾಡಿ ಅವಳನ್ನ ಮದುವೆಯಾಗುತ್ತಾನೆ.

300 episodes for Udaya TV's 'Sarayu'

ಮದುವೆಯಾದ ಮೇಲೂ ಇವನ ದ್ವೇಷ ಇನ್ನೂ ಹೆಚ್ಚಾಗಿ ಸರಯೂಳಿಗೆ ನರಕಯಾತನೆ ಅನುಭವಿಸುವಂತೆ ಮಾಡುತ್ತಾನೆ. ಸಾಲದಕ್ಕೆ, ವಿಚ್ಛೇದನ ಕೊಡಲು ಮುಂದಾಗುತ್ತಾನೆ. ಆದರೆ ಎಬಿಡಿಯ ಅತ್ತೆ ನಿರ್ಮಲಾ ಅದನ್ನು ತಡೆದು ಸರಯೂ ಅದೇ ಮನೆಯಲ್ಲೇ ಇರುವಂತೆ ಮಾಡುತ್ತಾಳೆ. ಹಾಗೆ ಎಬಿಡಿಯ ಒರಟುತನದ ಕಾರಣವನ್ನು ಸರಯೂಳಿಗೆ ತಿಳಿಸಿ ಪ್ರೀತಿಯಿಂದಲೇ ಎಬಿಡಿಯನ್ನು ಬದಲಾಯಿಸಲು ಸೂಚಿಸುತ್ತಾರೆ.

ಸರಯೂಳ ಪ್ರೀತಿಗೆ ಕಲ್ಲಾಗಿದ್ದ ಎಬಿಡಿ ಬೆಂಕಿಗೆ ಕರ್ಪೂರ ಕರಗುವ ಹಾಗೆ ಅವನ ಕ್ರೂರತೆ ಕರಗಿ ಪ್ರೀತಿಯ ಭಾವನೆಗಳು ಮೂಡುತ್ತದೆ.

ಸರಯೂಳ ಬೆಳವಣಿಗೆ ಸಹಿಸದ ಪವಿತ್ರಾ ಯಾರಿಗೂ ತಿಳಿಯದಂತೆ ಸರಯೂಳಿಗೆ ಸ್ಲೋ ಪಾಯ್ಸನ್ ಕೊಡುತ್ತಿರುತ್ತಾಳೆ. ಎಬಿಡಿ ಅವನ ಪ್ರೀತಿಯನ್ನು ಮುಕ್ತವಾಗಿ ಹೇಳಿಕೊಳ್ಳುವಾಗ ಸರಯೂ ಸಾವಿನ ಬಾಗಿಲಲ್ಲಿ ನಿಂತಿರುತ್ತಾಳೆ.

ಹಳ್ಳಿಯ ಆರ್ಕೇಸ್ಟ್ರಾದಲ್ಲಿ ಕುಣಿಯುತ್ತಿದ್ದ ಮೈಥಿಲಿ ಸರಯೂಳನ್ನೇ ಹೋಲುವಂತಿರುತ್ತಾಳೆ. ಮೈಥಿಲಿಯನ್ನ ಸರಯೂಳಂತೆ ಮನೆಗೆ ಕರೆದುಕೊಂಡು ಬರುವ ಅಭಿ ಸರಯೂಳ ಸಾವಿನ ಹಿಂದಿರುವ ಸತ್ಯವೇನೆಂದು ಕಂಡು ಹಿಡಿಯಲು ಮುಂದಾಗುತ್ತಾನೆ. ಅದಕ್ಕೆ ಮೈಥಿಲಿ ಎಬಿಡಿಗೆ ಸಹಾಯ ಮಾಡುತ್ತಾಳೆ.

ಮೈಥಿಲಿ ಎಬಿಡಿಯ ಒಳ್ಳೆಯತನಕ್ಕೆ ಅವಳಿಗೆ ಅರಿವಿಲ್ಲದೆ ಮನಸೋಲುತ್ತಾಳೆ. ಸರಯೂಳ ಸಾವಿನ ಹಿಂದಿರುವ ಸತ್ಯವನ್ನ ಅಭಿಗೆ ತಿಳಿಯುವ ಹಾಗೆ ಮಾಡ್ತಾಳಾ ಮೈಥಿಲಿ? ಎಂಬುದೇ 300ರ ನಂತರದ ಸಂಚಿಕೆಯ ಕಥೆ.

ಹೀಗೆ ಹಲವಾರು ತಿರುವುಗಳನ್ನು ಪಡೆದುಕೊಳುತ್ತಾ 300 ಕಂತುಗಳನ್ನು ಪೂರೈಸಿರೋ ಹರುಷದಲ್ಲಿದ್ದಾರೆ ಸರಯೂ ತಂಡ. ಶ್ರೀ ದುರ್ಗಾ ಕ್ರಿಯೇಶನ್ಸ್ ನ ಗಣಪತಿ ಭಟ್ ನಿರ್ಮಾಣದ ಈ ಧಾರಾವಾಹಿಯ ನಿರ್ದೇಶಕರು ಮಹೇಶ್ ಸಾರಂಗ್. ಇನ್ನು ಮುಂದೆ ಕೂಡ ಸರಯೂ ವಿಶಿಷ್ಟ ತಿರುವುಗಳೊಂದಿಗೆ ಮುಂದುವರಿಯಲಿದ್ದು ನೋಡುಗರಿಗೆ ಮೆಚ್ಚುಗೆಯಾಗಲಿದೆ ಎಂಬ ಭರವಸೆಯನ್ನ ವ್ಯಕ್ತ ಪಡಿಸುತ್ತಾರೆ ನಿರ್ದೇಶಕ ಮಹೇಶ್ ಸಾರಂಗ್.

ಇಲ್ಲಿಯವರೆಗೂ ಕೂಡ ಉತ್ತಮ ಗುಣಮಟ್ಟದಲ್ಲೇ ಈ ಧಾರಾವಾಹಿಯನ್ನು ಚಿತ್ರೀಕರಿಸುತ್ತಿದ್ದು, ಅದೇ ನಮ್ಮ ಯಶಸ್ಸಿಗೆ ಕಾರಣ, ಮುಂದೆ ಕೂಡ ಅದನ್ನೇ ಮುಂದುವರಿಸುವುದಾಗಿ ನಿರ್ಮಾಪಕರಾದ ಗಣಪತಿ ಭಟ್ ಹೇಳುತ್ತಾರೆ.

ಸರಯೂ ನನ್ನ ಮೊದಲ ಪ್ರಾಜೆಕ್ಟ್ ನಮ್ಮಂತ ಕಾಲಾವಿದರನ್ನ ಗುರುತಿಸಿ ಪ್ರೋತ್ತಾಹಿಸುತ್ತಿರುವುದು ತುಂಬಾ ಸಂತೋಷ ಹಾಗೆ 300 ಕಂತುಗಳು ಮುಗಿಸಿ ಇನ್ನೂ ಮುನ್ನುಗ್ಗುತ್ತಿರುವುದಕ್ಕೆ ಹೆಚ್ಚು ಸಂತೋಷ ವ್ಯಕ್ತ ಪಡುತ್ತಿದ್ದಾರೆ ಕಥಾ ನಾಯಕ ಅಭಿಶೇಕ್ ದಾಸ್.

ಸರಯೂ ಪಾತ್ರಕ್ಕಿಂತ ಈಗ ಮೈಥಿಲಿ ಪಾತ್ರವು ನನ್ನ ನಟನೆಗೆ ಸಾವಾಲಿಗಿದೆ ಹಾಗೆ ನನ್ನ ಪಾತ್ರವನ್ನು ಜನ ಮೆಚ್ಚುತಿದ್ದಾರೆ. 'ಸರಯೂ' ಹೀಗೆ ಯಶಸ್ವಿ ಕಾಣುತ್ತಾ ಸಾಗಲೆಂದು ಕಥಾ ನಾಯಕಿ ಶ್ವೇತಾ ಹೆಗಡೆ ಆಶಯ ವ್ಯಕ್ತ ಪಡಿಸಿದರು.

ಅಭಿಶೇಕ್ ದಾಸ್, ಶ್ವೇತಾ ಹೆಗಡೆ, ಶಂಕರ್ ಭಟ್, ತನೀಷಾ, ಸುನಿಲ್ ಮೊದಲಾದವರು ಅಭಿನಯಿಸುತ್ತಿರುವ ಸರಯೂ, ಉದಯ ಟಿವಿಯಲ್ಲಿ ಸೋಮವಾರದಿಂದ ಶುಕ್ರವಾರ ರಾತ್ರಿ 10 ಗಂಟೆಗೆ ಪ್ರಸಾರವಾಗುತ್ತದೆ.

English summary
300 episodes for Udaya TV's 'Sarayu' serial.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X