For Quick Alerts
  ALLOW NOTIFICATIONS  
  For Daily Alerts

  ಎರಡು ಪುಟದ ಡೈಲಾಗ್‌ನ ದೃಶ್ಯವನ್ನು ಒಂದೇ ಶಾಟ್‌ನಲ್ಲಿ ಮುಗಿಸಿದ್ದರು ಈ 'ಪುಟ್ಟ ಗೌರಿ'

  |

  'ಪುಟ್ಟಗೌರಿ ಮದುವೆ' ಧಾರಾವಾಹಿಯ 'ಪುಟ್ಟ ಗೌರಿ'ಯಾಗಿ ಮನೆಮಾತಾದವರು ನಟಿ ಸಾನ್ಯಾ ಅಯ್ಯರ್. ಅದಕ್ಕೂ ಮುನ್ನ ಅವರು ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದರೂ, 'ಪುಟ್ಟಗೌರಿ'ಯ ಪಾತ್ರಕ್ಕೆ ಬಣ್ಣ ಹಚ್ಚಿ ಆರೇಳು ವರ್ಷ ಕಳೆದಿದ್ದರೂ ಜನರು ಈಗಲೂ ಅವರನ್ನು ಅದೇ ಹೆಸರಿನಿಂದ ಗುರುತಿಸುತ್ತಿದ್ದಾರೆ.

  ಗ್ಲ್ಯಾಮರ್ ಲುಕ್ ನಲ್ಲಿ ಜೂನಿಯರ್ ಪುಟ್ಟಗೌರಿ | Saniya | Junior Puttagowri | Then - Now

  'ಫಿಲ್ಮಿಬೀಟ್'ನ ಫೇಸ್‌ಬುಕ್ ಪುಟದಲ್ಲಿ ಲೈವ್ ಬಂದು ಅಭಿಮಾನಿಗಳೊಂದಿಗೆ ಹರಟಿದ್ದ ಅವರು ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು. ಈ ಸಮಯದಲ್ಲಿ ಮನೆಯಲ್ಲಿಯೇ ಸುರಕ್ಷಿತವಾಗಿರಿ. ಯೂಟ್ಯೂಬ್ ನೋಡಿ ನೀವೇ ಬಗೆಬಗೆಯ ಅಡುಗೆ ಮಾಡಿ ಮನೆಯಲ್ಲಿನ ದೊಡ್ಡವರಿಗೆ ಬಡಿಸಿ. ಮನೆಯಲ್ಲಿಯೇ ಆನ್‌ಲೈನ್ ಕೋರ್ಸ್‌ಗಳನ್ನು ಮಾಡಿ ಮುಂತಾದ ಸಲಹೆಗಳನ್ನು ನೀಡಿದರು. ಮುಂದೆ ಓದಿ...

  ಪುಟ್ಟಗೌರಿಗೆ ಮಚ್ಚೆ ಸಂಕಟ

  ಪುಟ್ಟಗೌರಿಗೆ ಮಚ್ಚೆ ಸಂಕಟ

  ಪುಟ್ಟಗೌರಿ ಮದುವೆ ಧಾರಾವಾಹಿಯ ಸಂದರ್ಭದ ಒಂದು ತಮಾಷೆಯ ಪ್ರಸಂಗವನ್ನು ಅವರು ನೆನಪಿಸಿಕೊಂಡರು. ಸಾನ್ಯಾ ಅವರ ಮೂಗಿನ ಮೇಲೆ ಮಚ್ಚೆ ಇದೆ. 'ಪುಟ್ಟಗೌರಿ'ಯ ಮಚ್ಚೆಯನ್ನು ಆಕೆ ಬೆಳೆದ ಮೇಲೆಯೂ ಉಳಿಸಿಕೊಳ್ಳಬೇಕಲ್ಲ? ಹಾಗಾಗಿ ಗೌರಿ ಪಾತ್ರಧಾರಿ ರಂಜನಿ ರಾಘವನ್ ಅವರ ಮೂಗಿನ ಮೇಲೆ ಮಚ್ಚೆ ಇರಿಸಬೇಕಾಗಿತ್ತು. ಆದರೆ ಪ್ರತಿ ಬಾರಿಯೂ ಅ ಮಚ್ಚೆ ಒಂದೊಂದು ರೀತಿ ಆಗುತ್ತಿತ್ತು ಎಂದಿದ್ದಾರೆ. ಅಂದಹಾಗೆ, ಅವರು ಈ ನೆನಪು ಹಂಚಿಕೊಂಡಿದ್ದು, ಅಭಿಮಾನಿಯೊಬ್ಬರು 'ನಿಮ್ಮ ಮೂಗು ಸುಂದರವಾಗಿದೆ' ಎಂದಾಗ. ನನ್ನ ಮೂಗು ನನಗೆ ಇಷ್ಟವಿಲ್ಲ ಎನ್ನುತ್ತಲೇ ಅವರು ಈ ಸಂಗತಿಯನ್ನು ಜ್ಞಾಪಿಸಿಕೊಂಡರು.

  ಸಾನ್ಯಾ ಇಷ್ಟದ ನಟ ಯಾರು? ಯಾರ ಜೊತೆ ನಟಿಸುವ ಆಸೆ? ಅಭಿಮಾನಿಗಳ ಪ್ರಶ್ನೆಗೆ ಪುಟ್ಟಗೌರಿ ಉತ್ತರಸಾನ್ಯಾ ಇಷ್ಟದ ನಟ ಯಾರು? ಯಾರ ಜೊತೆ ನಟಿಸುವ ಆಸೆ? ಅಭಿಮಾನಿಗಳ ಪ್ರಶ್ನೆಗೆ ಪುಟ್ಟಗೌರಿ ಉತ್ತರ

  ಇನ್ನೂ 10-12 ವರ್ಷ ಆರಾಮಾಗಿ ಇರ್ತೀನಿ

  ಇನ್ನೂ 10-12 ವರ್ಷ ಆರಾಮಾಗಿ ಇರ್ತೀನಿ

  'ನಿಮ್ಮ ಮದುವೆ ಯಾವಾಗ?' ಎಂಬ ಪ್ರಶ್ನೆಗೆ ಸಾನ್ಯಾ ತಬ್ಬಿಬ್ಬಾಗಿದ್ದಾರೆ. ಸೀರಿಯಲ್‌ನಲ್ಲಿ ಬಾಲ್ಯ ವಿವಾಹ ಆಗಿರೋದಕ್ಕೆ ಈಗಲೇ ಮದುವೆ ಮಾಡಿಸ್ತೀರಾ? ಎಂದು ತಮಾಷೆಯಾಗಿ ಮರುಪ್ರಶ್ನೆ ಹಾಕಿದ್ದಾರೆ. ನನಗೆ ಈಗಿನ್ನೂ 18 ವರ್ಷ. ಮದುವೆಗೆ ಇನ್ನೂ ಹತ್ತು ಹನ್ನೆರಡು ವರ್ಷ ಇದೆ ಎಂದಿದ್ದಾರೆ.

  ಒಂದೇ ಶಾಟ್‌ನಲ್ಲಿ ಚಿತ್ರೀಕರಣ

  ಒಂದೇ ಶಾಟ್‌ನಲ್ಲಿ ಚಿತ್ರೀಕರಣ

  ಪುಟ್ಟ ಗೌರಿ ಧಾರಾವಾಹಿಯಲ್ಲಿ ಅಜ್ಜಮ್ಮನಿಗೆ ಹೆದರಿಕೊಂಡು ಕೃಷ್ಣನ ವಿಗ್ರಹದ ಮುಂದೆ ಕುಳಿತು ಅಳುತ್ತಾ ಮಾತನಾಡುವ ದೃಶ್ಯವಿತ್ತು. ಎರಡು ಪುಟಗಳ ಸುದೀರ್ಘ ಸಂಭಾಷಣೆಯಿತ್ತು. ಗ್ಲಿಸರಿನ್ ಇಲ್ಲದೆಯೇ ನೈಜವಾಗಿ ಅಳುತ್ತಾ ಇಡೀ ಸನ್ನಿವೇಶವನ್ನು ಒಂದೇ ಒಂದು ಶಾಟ್‌ನಲ್ಲಿ ಮುಗಿಸಿದ್ದರಂತೆ ಸಾನ್ಯಾ. ಈಗ ಆದರೆ ಅಷ್ಟು ಸುಲಭವಾಗಿ ತಮ್ಮಿಂದ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ ಅವರು.

  ಓದಿನ ಸಲುವಾಗಿ ನಟನೆ ತ್ಯಾಗ

  ಓದಿನ ಸಲುವಾಗಿ ನಟನೆ ತ್ಯಾಗ

  ಎಲ್‌ಕೆಜಿಯಿಂದಲೇ ನಟನೆಯ ವೃತ್ತಿಗೆ ಬಂದವರು ಅವರು. ಎಂಟನೆಯ ತರಗತಿಯವರೆಗೂ ನಟಿಸಿದ್ದರು. ಇದರಿಂದ ಓದು ಹಾಳಾಗುತ್ತದೆ ಎಂಬ ಕಾರಣಕ್ಕೆ ನಟನೆಯನ್ನು ಮೊಟಕುಗೊಳಿಸಿ ವಿದ್ಯಾಭ್ಯಾಸದ ಮೇಲೆ ಗಮನ ಹರಿಸಿದ್ದಾರೆ. ಈಗ ಮೊದಲ ವರ್ಷದ ಪದವಿ ಓದುತ್ತಿದ್ದಾರೆ.

  ಸಿನಿಮಾಗಳ ಆಫರ್

  ಸಿನಿಮಾಗಳ ಆಫರ್

  ಓದಿನ ಬಳಿಕ ಮುಂದೇನು? ಮತ್ತೆ ಬಣ್ಣದ ಬದುಕಿಗೆ ವಾಪಸ್ ಬರಲು ಕಾತರದಿಂದ ಕಾದಿದ್ದಾರೆ. ಚಿತ್ರರಂಗವೇ ತಮ್ಮ ಆಯ್ಕೆ. ಯಾವ ಹೀರೋ ಜತೆ ನಟಿಸಬೇಕು ಎನ್ನುವುದು ಅವರ ಆಯ್ಕೆಯಾಗಿಲ್ಲ. ಬದಲಾಗಿ ಒಳ್ಳೆಯ ಕಥೆ ಇರುವ ಸಿನಿಮಾ ಬೇಕು ಎನ್ನುವುದು ಅವರ ಆದ್ಯತೆ. ಒಳ್ಳೆಯ ಬ್ಯಾನರ್ ಮೂಲಕ ಚಿತ್ರರಂಗಕ್ಕೆ ಕಾಲಿರಿಸುವುದು ಸಾನ್ಯಾ ಬಯಕೆ. ಈಗಾಗಲೇ ಅವರಿಗೆ ಅನೇಕ ಆಫರ್‌ಗಳು ಬಂದಿವೆ. ಒಂದೆರಡು ವರ್ಷದಲ್ಲಿಯೇ ಸಿನಿ ಬದುಕು ಪ್ರಾರಂಭವಾಗಬಹುದು ಎಂಬ ಸೂಚನೆ ನೀಡಿದ್ದಾರೆ.

  English summary
  Actress Sanya Iyer on Facebook live shared her experience with Putta Gowri Maduve serial and other things.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X