For Quick Alerts
  ALLOW NOTIFICATIONS  
  For Daily Alerts

  ತೆಲುಗಿನಿಂದ ನಟ ಚಂದನ್ ಬ್ಯಾನ್ ಮಾಡುವಂತೆ ಪತ್ರ!

  |

  'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಖ್ಯಾತಿಯ ನಟ ಚಂದನ್ ಮೇಲೆ ತೆಲುಗು ಧಾರಾವಾಹಿ ಶೂಟಿಂಗ್ ಸೆಟ್‌ನಲ್ಲಿ ಹಲ್ಲೆ ಮಾಡಿರುವ ಘಟನೆ ನಡೆದಿದೆ. ತೆಲುಗಿನ 'ಸಾವಿತ್ರಮ್ಮಗಾರಿ ಅಬ್ಬಾಯಿ' ಧಾರಾವಾಹಿಯಲ್ಲಿ ಚಂದನ್ ನಟಿಸ್ತಿದ್ದು, ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದೆ.

  ಧಾರಾವಾಹಿಯಲ್ಲಿ ಕೆಲಸ ಮಾಡುವ ತಂತ್ರಜ್ಞರು ಚಂದನ್‌ಗೆ ಕಪಾಳ ಮೋಕ್ಷ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ನಡೆದ ಬಳಿಕ ನಟ ಚಂದನ್ ಕುಮಾರ್ ಬೆಂಗಳೂರಿಗೆ ಬಂದರು. ಬಳಿಕ ಬೆಂಗಳೂರಿನಲ್ಲಿ ಚಂದನ್ ಕುಮಾರ್ ಸುದ್ದಿಗೋಷ್ಟಿ ನಡೆಸಿದರು.

  ಗಲಾಟೆ ಬಳಿಕ ತಾಯಿ ನೋಡಲು ಬರುತ್ತಿರುವ ನಟ ಚಂದನ್; ಸಂಜೆ ಸುದ್ದಿಗೋಷ್ಠಿಗಲಾಟೆ ಬಳಿಕ ತಾಯಿ ನೋಡಲು ಬರುತ್ತಿರುವ ನಟ ಚಂದನ್; ಸಂಜೆ ಸುದ್ದಿಗೋಷ್ಠಿ

  ಈ ವೇಳೆ ಚಂದನ್ ಅಲ್ಲಿ ನಡೆದ ಘಟನೆಯನ್ನೂ ಸಂಪೂರ್ಣವಾಗಿ ಮಾಧ್ಯಮದ ಮುಂದೆ ವಿವರಿಸಿದ್ದಾರೆ. ತಮ್ಮ ತಪ್ಪು ಇಲ್ಲ, ಅವರು ನಡೆದುಕೊಂಡ ರೀತಿ ತಪ್ಪು ಎಂದು ಬೆಂಗಳೂರಿನ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಇದೇ ಬೆನ್ನಲ್ಲೇ ಈಗ ಈ ವಿವಾದ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ.

  ಚಂದನ್ ಅನ್ನು ಬ್ಯಾನ್ ಮಾಡುವಂತೆ ಪತ್ರ!

  ತೆಲುಗು ಧಾರಾವಾಹಿ ಶೂಟಿಂಗ್ ಸೆಟ್‌ನಲ್ಲಿ ನಡೆದ ಹಲ್ಲೆ ಪ್ರಕರಣದ ಬೆನ್ನಲ್ಲೇ ಕನ್ನಡದ ನಟ ಚಂದನ್‌ರನ್ನು ತೆಲುಗು ಧಾರಾವಾಹಿಯಿಂದ ಬ್ಯಾನ್ ಮಾಡುವಂತೆ ಒತ್ತಾಯ ಕೇಳಿಬಂದಿದೆ. ತೆಲುಗು ಟಿಲಿವಿಶನ್ ಟೆಕ್ನೀಶಿಯನ್ಸ್ ಹಾಗು ವರ್ಕರ್ಸ್ ಫೆಡರೇಶನ್ ನಿಂದ ಚಂದನ್ ಕುಮಾರ್ ಬ್ಯಾನ್ ಮಾಡುವಂತೆ ಪತ್ರ ಬರೆದಿದ್ದಾರೆ. ಅಂದಹಾಗೆ ಈ ಹಲ್ಲೆ ಪ್ರಕರಣ ಬಳಿಕ ಚಂದನ್ ಕುಮಾರ್ ಮತ್ತೆ ತೆಲುಗು ಧಾರಾವಾಹಿ ಮಾಡಲ್ಲ ಎಂದು ಹೇಳಿದ್ದರು. ಈಗ ಚಂದನ್ ಅವರನ್ನು ಬ್ಯಾನ್ ಮಾಡಲಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಚಂದನ್ ಬ್ಯಾನ್ ಮಾಡುವಂತೆ ಒತ್ತಾಯಿಸಿ ತೆಲುಗು ಟೆಲಿವಿಶನ್ ಟೆಕ್ನಿಶಿಯನ್ ಬರೆದಿರುವ ಪತ್ರ ವೈರಲ್ ಆಗಿದೆ.

  ಒಟಿಟಿ, ಸೀರಿಯಲ್‌ನಿಂದ ಬ್ಯಾನ್?

  ತೆಲುಗು‌ ಟೆಲಿವಿಶನ್ ನಿರ್ಮಾಪಕರ ಮಂಡಳಿಗೆ, ತೆಲುಗು ಟಿಲಿವಿಶನ್ ಟೆಕ್ನೀಶಿಯನ್ಸ್ ಹಾಗು ವರ್ಕರ್ಸ್ ಫೆಡರೇಶನ್ ನಿಂದ ಪತ್ರಬರೆದಿದ್ದಾರೆ. ಪತ್ರದಲ್ಲಿ ಚಂದನ್ ಅವರನ್ನು ತೆಲುಗು ಸೀರಿಯಲ್ ಹಾಗು ಒಟಿಟಿಗಳಿಂದ ಬ್ಯಾನ್ ಮಾಡುವಂತೆ ಒತ್ತಾಯ ಮಾಡಲಾಗಿದೆ. ತೆಲುಗು‌ ಟೆಲಿವಿಶನ್ ನಿರ್ಮಾಪಕರ ಮಂಡಳಿ ಚಂದನ್ ವಿರುದ್ಧ ಕ್ರಮ ಮುಂದಾಗುವಂತೆ ಮನವಿ ಮಾಡಲಾಗಿದೆ. ಆದರೆ ಚಂದನ್ ಈ ಮೊದಲೇ ಮತ್ತೆ ಅಲ್ಲಿ ನಟಿಸದಿರಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

  ಚಂದನ್ ಮೇಲೆ ಹಲ್ಲೆ!

  ಕನ್ನಡ ಕಿರುತೆರೆಯಲ್ಲಿ ಮಾತ್ರವಲ್ಲದೇ ತೆಲುಗು ಕಿರುತೆರೆಯಲ್ಲೂ ಚಂದನ್ ಬಹುಬೇಡಿಕೆಯ ನಟನಾಗಿ ಗುರ್ತಿಸಿಕೊಂಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಚಂದು ತೆಲುಗಿನ 'ಸಾವಿತ್ರಮ್ಮಗಾರಿ ಅಬ್ಬಾಯಿ' ಧಾರಾವಾಹಿಯಲ್ಲಿ ಬಾಲರಾಜು ಪಾತ್ರದಲ್ಲಿ ನಟಿಸುತ್ತಿದ್ದಾರೆ. ಊಟದ ಬಿಡುವಿನ ಸಮಯದಲ್ಲಿ ಚಂದನ್ ನಿದ್ದೆ ಮಾಡುತ್ತಿದ್ದ ವೇಳೆ ಸಹ ನಿರ್ದೇಶಕ ಶೂಟಿಂಗ್‌ಗೆ ಕರಿದಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದು ಗಲಾಟೆ ವಿಕೋಪಕ್ಕೆ ತಿರುಗಿದೆ. ಕ್ಯಾಮರಾ ಅಸಿಸ್ಟೆಂಟ್‌ಗೆ ಹಲ್ಲೆ ಮಾಡಿದ ನಟ ಚಂದನ್‌ಗೆ ತಂತ್ರಜ್ಞರು ಕಪಾಳ ಮೋಕ್ಷ ಮಾಡಿದ್ದಾರೆ.

  Recommended Video

  BigBoss OTT Kannada | ಇಷ್ಟು ದಿನ ಆದ್ರು ಈ ಪ್ರಶ್ನೆ ಯಾರು ಕೇಳಿರ್ಲಿಲ್ಲ. | Kiccha Sudeep

  ಶೂಟಿಂಗ್ ಸೆಟ್‌ನಲ್ಲಿ ನಡೆದಿದ್ದು ಏನು?

  ತಾಯಿಗೆ ಹುಷಾರಿಲ್ಲ ಅನ್ನುವ ಟೆಶ್ಯನ್‌ನಲ್ಲಿದ್ದ ಚಂದನ್ ಶೂಟಿಂಗ್ ಬರೋಕೆ ಆಗೋದಿಲ್ಲ ಎಂದು ಆತನನ್ನು ತಳ್ಳಿದರಂತೆ. ಇದರಿಂದ ಬೇರಸಗೊಂಡ ಆತ ತಂಡದವರನ್ನು ಕರೆದು ಜಗಳ ಮಾಡಿ, ತಂತ್ರಜ್ಞರ ಸಂಘಕ್ಕೆ ದೂರು ಕೊಟ್ಟಿದ್ದಾರೆ. ಗಲಾಟೆ ವೇಳೆ ಚಂದನ್ ಅವಾಚ್ಯ ಶಬ್ಧದಲ್ಲಿ ನಿಂದಿಸಿದರು ಅನ್ನುವ ವಿಚಾರವೂ ಚರ್ಚೆಗೆ ಬಂದಿದ್ದು, ಅದನ್ನು ವೀಡಿಯೋದಲ್ಲಿಯೂ ಗಮನಿಸಬಹುದು. ಘಟನೆ ಬಗ್ಗೆ ನಟ ಚಂದನ್ ಕುಮಾರ್ ಫಿಲ್ಮಿ ಬೀಟ್‌ಗೆ ಸ್ಪಷ್ಟನೆ ನೀಡಿದ್ದಾರೆ. ಇದೀಗ ಚಂದನ್ ರ ಗೆಳೆಯನೂ ಆಗಿರುವ ನಟ ಕಿರಿಕ್ ಕೀರ್ತಿ ಚಂದನ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇನ್ ಸ್ಟಾಗ್ರಾಂನಲ್ಲಿ ವಿಡಿಯೋ ಸಹ ಪ್ರಕಟಿಸಿದ್ದಾರೆ.

  English summary
  After Controversy Telugu Television Technician Write A Letter To Ban Actor Chandan Kumar, Know More.
  Tuesday, August 2, 2022, 17:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X