'ರೋಡೀಸ್' ಶೋನಲ್ಲಿ 'ಕಿರಿಕ್' ಸಂಯುಕ್ತ ವಿರುದ್ಧ ಆರೋಪಗಳ ಸುರಿಮಳೆ.!

By ಫಿಲ್ಮಿಬೀಟ್ ಪ್ರತಿನಿಧಿ

'ಕಿರಿಕ್ ಪಾರ್ಟಿ' ಚಿತ್ರದ ಸೆಕೆಂಡ್ ಹಾಫ್ ನಲ್ಲಿ ನಾಯಕಿ ಆಗಿ ಮಿಂಚಿದ್ದ ನಟಿ ಸಂಯುಕ್ತ ಹೆಗಡೆ ನಿಜಜೀವನದಲ್ಲಿಯೂ 'ಕಿರಿಕ್' ಪಾರ್ಟಿ ಅಂತ ಸ್ಯಾಂಡಲ್ ವುಡ್ ಮಂದಿಗೆ ಗೊತ್ತಾಗಿದ್ದು ಕೆಲವೇ ದಿನಗಳ ಹಿಂದೆಯಷ್ಟೇ.

ತಮಿಳು ಸಿನಿಮಾದ ಆಸೆಗಾಗಿ... ಅದಾಗಲೇ ಒಪ್ಪಿಕೊಂಡಿದ್ದ ಕನ್ನಡ ಚಿತ್ರಗಳಿಗೆ ಕೈ ಎತ್ತಿದ್ದ ನಟಿ ಸಂಯುಕ್ತ ಹೆಗಡೆ ವಿರುದ್ಧ 'ಕಾಲೇಜ್ ಕುಮಾರ್' ಮತ್ತು 'ವಾಸು' ಚಿತ್ರದ ನಿರ್ಮಾಪಕರು ಬೇಸರ ವ್ಯಕ್ತಪಡಿಸಿದ್ದರು. ಕಡೆಗೆ ಈ ವಿವಾದ ನಿರ್ಮಾಪಕರ ಸಂಘದ ಮೆಟ್ಟಿಲೇರಿದ್ಮೇಲೆ, 'ಕಾಲೇಜ್ ಕುಮಾರ್' ಚಿತ್ರದಲ್ಲಿ ನಟಿಸುವುದಾಗಿ ಒಪ್ಪಿಕೊಂಡ ಸಂಯುಕ್ತ, 'ವಾಸು'ಗೆ ಟಾಟಾ ಹೇಳಿದ್ದು ಎಲ್ಲರೂ ಗೊತ್ತು.[ತಮಿಳು ಸಿನಿಮಾ ಆಸೆಗೆ ಕನ್ನಡ ಚಿತ್ರಕ್ಕೆ ಕೈ ಕೊಡಲು ರೆಡಿ ಇದ್ರಾ ಕನ್ನಡತಿ ಸಂಯುಕ್ತ.?]

ಇದೀಗ ನಟಿ ಸಂಯುಕ್ತ ಹೆಗಡೆ ಬಗ್ಗೆ 'ರೋಡೀಸ್' ರಿಯಾಲಿಟಿ ಶೋನಲ್ಲೂ ಆರೋಪಗಳ ಸುರಿಮಳೆ ಕೇಳಿ ಬಂದಿದೆ. ಸಂಯುಕ್ತ ಬಗ್ಗೆ 'ರೋಡೀಸ್' ಕಾರ್ಯಕ್ರಮದ ಇತರೆ ಸ್ಪರ್ಧಿಗಳೇ ಬಹಿರಂಗ ಆರೋಪ ಮಾಡಿದ್ದಾರೆ. ಅವೆಲ್ಲದರ ಸಂಪೂರ್ಣ ವರದಿ ಇಲ್ಲಿದೆ ಓದಿರಿ...

ಮೂಗು ತೂರಿಸುವ ಸಂಯುಕ್ತ

ಮೂಗು ತೂರಿಸುವ ಸಂಯುಕ್ತ

ಎಲ್ಲ ವಿಷಯಗಳಲ್ಲೂ ನಟಿ ಸಂಯುಕ್ತ ಮೂಗು ತೂರಿಸುತ್ತಾರಂತೆ. ತಮಗೆ ಸಂಬಂಧಪಡದ ವಿಚಾರ ಆಗಿದ್ದರೂ, 'ನಂದೆಲ್ಲಿಡ್ಲಿ ನಂದಗೋಪಾಲ' ಎಂದು ಮಧ್ಯ ಪ್ರವೇಶಿಸುತ್ತಾರಂತೆ ಸಂಯುಕ್ತ.[ಗಾಂಚಲಿ ಬಿಡಿ, ಕನ್ನಡ ಸಿನಿಮಾ ಮಾಡಿ: 'ಕಿರಿಕ್' ಹುಡುಗಿಗೆ ಕನ್ನಡಿಗರ ವಾರ್ನಿಂಗ್!]

ಎಲ್ಲವೂ ಕ್ಯಾಮರಾಗಾಗಿ

ಎಲ್ಲವೂ ಕ್ಯಾಮರಾಗಾಗಿ

''ಕ್ಯಾಮರಾಗಾಗಿ... ಫುಟೇಜ್ ಗಾಗಿ ಸಂಯುಕ್ತ ಬೇಕಾಬಿಟ್ಟಿ ಮಾತನಾಡುತ್ತಾರೆ'' ಎಂದು ಪ್ರತಿಸ್ಪರ್ಧಿ ವರುಣ್ ಬಹಿರಂಗ ಆರೋಪ ಮಾಡಿದರು.[ಕೊನೆಗೂ ಕನ್ನಡ ಸಿನಿಮಾಗೆ ಕೈ ಕೊಟ್ಟ ಕನ್ನಡತಿ 'ಕಿರಿಕ್' ಸಂಯುಕ್ತ]

ಇವೆಲ್ಲ ಹೊರಗೆ ಬಂದಿದ್ದು 'ಟಾಸ್ಕ್' ನಲ್ಲಿ.!

ಇವೆಲ್ಲ ಹೊರಗೆ ಬಂದಿದ್ದು 'ಟಾಸ್ಕ್' ನಲ್ಲಿ.!

ಕಳೆದ ಶನಿವಾರ ಎಂ.ಟಿ.ವಿ ವಾಹಿನಿಯಲ್ಲಿ ಪ್ರಸಾರವಾದ 'ರೋಡೀಸ್' ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಗೆ ಒಂದು ಟಾಸ್ಕ್ ನೀಡಲಾಗಿತ್ತು. ಅದರ ಅನ್ವಯ, ಮಹಿಳಾ ಸ್ಪರ್ಧಿಗಳಿಗೆ ಕೆಲ ಪ್ರಶ್ನೆಗಳನ್ನ ಕೇಳಲಾಯ್ತು. ಅಷ್ಟಕ್ಕೂ, ಆ ಪ್ರಶ್ನೆಗಳೆಲ್ಲವೂ 'ರೋಡೀಸ್' ಸ್ಪರ್ಧಿಗಳ ಸುತ್ತ ಹೆಣೆಯಲಾಗಿತ್ತು. ಬಂದ ಉತ್ತರಗಳ ಪೈಕಿ ನಟಿ ಸಂಯುಕ್ತ ಹೆಗಡೆ ತುಂಬಾ ಶೋ ಆಫ್ ಮಾಡುತ್ತಾರೆ, ಆಕೆ ತುಂಬಾ ಅಟೆಂಷನ್ ಸೀಕರ್, ಕ್ಯಾಮರಾಗಾಗಿ ಬೇಕಾಬಿಟ್ಟಿ ಮಾತನಾಡುತ್ತಾರೆ ಎಂಬ ಉತ್ತರಗಳೇ ಹೆಚ್ಚಾಗಿದ್ದವು. [ಕನ್ನಡ ಚಿತ್ರಕ್ಕೆ ಕೈ ಎತ್ತಿದ ನಟಿ ಸಂಯುಕ್ತ ಬಗ್ಗೆ ಫೇಸ್ ಬುಕ್ ನಲ್ಲಿ ಲೇವಡಿ]

ಸಂಯುಕ್ತ 'ದೊಡ್ಡ ಶೋ ಆಫ್'

ಸಂಯುಕ್ತ 'ದೊಡ್ಡ ಶೋ ಆಫ್'

ಸಂಯುಕ್ತ ವರ್ತನೆಯಲ್ಲಿ 'ತೋರಿಕೆ' ಜಾಸ್ತಿ ಅಂತೆ. ಹೀಗಂತ ಹೇಳಿದವರು 'ರೋಡೀಸ್' ಸ್ಪರ್ಧಿಗಳೇ.! ಸಂಯುಕ್ತ 'ದೊಡ್ಡ ಶೋ ಆಫ್' ಎಂದು ಐವರು ಮಹಿಳಾ ಸ್ಪರ್ಧಿಗಳು ಹೇಳಿದರು.

ಕಾರಣ ಏನು.?

ಕಾರಣ ಏನು.?

ಸಂಯುಕ್ತ 'ಶೋ ಆಫ್' ಎಂದು ಸ್ಪರ್ಧಿಗಳಿಗೆ ಅನಿಸಲು ಕಾರಣವೇನು ಎಂಬ ಪ್ರಶ್ನೆಗೆ 'ರೋಡೀಸ್' ಸ್ಪರ್ಧಿ ಶ್ವೇತ ಉತ್ತರ ಕೊಟ್ಟರು. ''ತಮ್ಮ ಹೊಸ ಚಿತ್ರದ ಬಗ್ಗೆ ಸಂಯುಕ್ತ ಯಾವಾಗಲೂ ಮಾತನಾಡುತ್ತಿರುತ್ತಾರೆ. ಆಕೆ 'ದೊಡ್ಡ ಶೋ ಆಫ್'' ಎಂದು ಶ್ವೇತ ಹೇಳಿದರು.

ಕಣ್ಣೀರಿಟ್ಟ ಸಂಯುಕ್ತ

ಕಣ್ಣೀರಿಟ್ಟ ಸಂಯುಕ್ತ

ಸಂಯುಕ್ತ 'ಶೋ ಆಫ್' ಎಂದು ಎಲ್ಲರೂ ಬೆಟ್ಟು ಮಾಡುತ್ತಿದ್ದಂತೆಯೇ ನಟಿ ಸಂಯುಕ್ತ ಕಣ್ಣೀರು ಸುರಿಸಲು ಆರಂಭಿಸಿದರು.

ಸಂಯುಕ್ತ ಏನಂದರು.?

ಸಂಯುಕ್ತ ಏನಂದರು.?

''ನಾನು ಯಾವತ್ತೂ ನನ್ನ ಸಿನಿಮಾದ ಬಗ್ಗೆ, ನನ್ನ ವೃತ್ತಿ ಬದುಕಿನ ಬಗ್ಗೆ ಮಾತನಾಡಿಲ್ಲ. ನಾನು ಇಲ್ಲಿ ಸಾಮಾನ್ಯ ಸ್ಪರ್ಧಿ ಆಗಿರಲು ಇಷ್ಟ ಪಡುತ್ತೇನೆ. ಆದ್ರೆ, ಅದನ್ನ ಯಾರೂ ಒಪ್ಪಿಕೊಳ್ಳುತ್ತಿಲ್ಲ. ನಾನೇನು ಮಾಡ್ಲಿ.?'' ಎಂಬ ಉತ್ತರ ಕೊಟ್ಟರು ಸಂಯುಕ್ತ.

ವರುಣ್ ಗೆ ತಿರುಗೇಟು

ವರುಣ್ ಗೆ ತಿರುಗೇಟು

''ಕ್ಯಾಮಾರಾಗಾಗಿ ನಾನು ಬೇಕಾಬಿಟ್ಟಿ ಮಾತನಾಡುತ್ತೇನೆ ಎನ್ನುತ್ತಾರೆ ವರುಣ್. ಆದ್ರೆ, ಕ್ಯಾಮರಾಗಾಗಿ ನಾನು ಮಾತನಾಡುತ್ತೇನೆ ಎಂದಾದರೆ ನಾನು ಇಲ್ಲಿಗೆ ಬರುತ್ತಲೇ ಇರಲಿಲ್ಲ'' ಎಂದು ಸಮರ್ಥನೆ ಮಾಡಿಕೊಂಡರು ಸಂಯುಕ್ತ.

'ರೋಡೀಸ್'ಗೆ ಬಂದಿದ್ಯಾಕೆ.?

'ರೋಡೀಸ್'ಗೆ ಬಂದಿದ್ಯಾಕೆ.?

''ರೋಡೀಸ್' ನನ್ನ ಕನಸು. ರನ್ ವಿಜಯ್ ರವರನ್ನ ನಾನು ನೋಡಬೇಕಿತ್ತು. ಹೀಗಾಗಿ ನಾನು ಇಲ್ಲಿಗೆ ಬಂದೆ. ಇದನ್ನ ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ'' - ನಟಿ ಸಂಯುಕ್ತ

'ಆತ್ಮೀಯ' ಬಸೀರ್ ಏನಂದರು.?

'ಆತ್ಮೀಯ' ಬಸೀರ್ ಏನಂದರು.?

'ರೋಡೀಸ್' ರಿಯಾಲಿಟಿ ಶೋನಲ್ಲಿ ಬಸೀರ್ ಮತ್ತು ಸಂಯುಕ್ತ ಪ್ರೇಮ ಪಕ್ಷಿಗಳು ಎಂದೇ ಹೆಸರುವಾಸಿ. ಸಂಯುಕ್ತ ಬಗ್ಗೆ ಆರೋಪಗಳು ಕೇಳಿಬರುತ್ತಿದ್ದಂತೆಯೇ, ಆಕೆಯ ಪರ ಬ್ಯಾಟಿಂಗ್ ಆರಂಭಿಸಿದ ಬಸೀರ್, ''ನಾನು 'ರೋಡೀಸ್' ಜರ್ನಿಯಲ್ಲಿ ಅತಿ ಹೆಚ್ಚು ಸಮಯವನ್ನ ಸಂಯುಕ್ತ ಜೊತೆ ಕಳೆದಿದ್ದೇನೆ. ಆದ್ರೆ, ಯಾವತ್ತೂ ಅವರ ನೂರು ಕೋಟಿ ಸಿನಿಮಾ ಬಗ್ಗೆ ಚರ್ಚೆ ಮಾಡಿಲ್ಲ. ಎಲ್ಲರೂ ಆಕೆಯನ್ನೇ ಬಂದು ಕೇಳುತ್ತಿರುತ್ತಾರೆ, ಟ್ವಿಟ್ಟರ್ ಹಾಗೂ ಇನ್ಸ್ಟಾ ಗ್ರಾಮ್ ನಲ್ಲಿ ಹೆಚ್ಚು ಫಾಲೋವರ್ಸ್ ಇದ್ದಾರೆ ಎಂಬ ಕಾರಣಕ್ಕೆ. ಆದ್ರೆ, ಸಂಯುಕ್ತ ಈ ಬಗ್ಗೆ ಹೇಳಿಕೊಂಡಿದ್ದನ್ನ ನಾನು ಗಮನಿಸಿಲ್ಲ'' ಎಂದರು. ['ರೋಡೀಸ್'ನಲ್ಲಿ ಕಿಸ್ ಕೊಟ್ಟ 'ಕಿರಿಕ್' ಹುಡುಗಿ: ಬಯಲಾಯ್ತು ಸಂಯುಕ್ತ ಲವ್ ಸ್ಟೋರಿ!]

ಗ್ಯಾಂಗ್ ಲೀಡರ್ಸ್ ಏನಂತಾರೆ.?

ಗ್ಯಾಂಗ್ ಲೀಡರ್ಸ್ ಏನಂತಾರೆ.?

''ಒಂದ್ವೇಳೆ ನನ್ನ ಸಿನಿಮಾ ನೂರು ಕೋಟಿ ಆದರೆ, ನಾನು ಖಂಡಿತ ಶೋ ಆಫ್ ಮಾಡುತ್ತೇನೆ'' ಎಂದರು ಗ್ಯಾಂಗ್ ಲೀಡರ್ ಪ್ರಿನ್ಸ್ ನರುಲಾ.['ಕಿರಿಕ್ ಪಾರ್ಟಿ' ಹುಡುಗಿ ಪ್ರತಿಭೆಗೆ ಮನಸೋತ 'ರೋಡೀಸ್' ಗ್ಯಾಂಗ್ ಲೀಡರ್ಸ್]

ರಣ್ ವಿಜಯ್ ಹೇಳಿದ್ದೇನು.?

ರಣ್ ವಿಜಯ್ ಹೇಳಿದ್ದೇನು.?

''ನನಗೆ ಗೊತ್ತು ನೀನು ಇಲ್ಲಿಗೆ ಯಾಕೆ ಬಂದೆ ಅಂತ. ಮಾತನಾಡುವವರು ಮಾತನಾಡಿಕೊಳ್ಳಲಿ'' ಎಂದು ಸಂಯುಕ್ತಗೆ ಆಕೆಯ ಗ್ಯಾಂಗ್ ಲೀಡರ್ ರಣ್ ವಿಜಯ್ ಹುರಿದುಂಬಿಸಿದರು.

ಎಲ್ಲವೂ ಅಟೆನ್ಷನ್ ಗಾಗಿ...

ಎಲ್ಲವೂ ಅಟೆನ್ಷನ್ ಗಾಗಿ...

''ಯಾವಾಗಲೂ ತನಗೆ attention ಬೇಕು ಎನ್ನುವ ಹಾಗೆ ಸಂಯುಕ್ತ ವರ್ತಿಸುತ್ತಾರೆ. ಆಕೆ ಅಟೆನ್ಷನ್ ಸೀಕರ್. ಒಂದೇ ಕ್ಷಣದಲ್ಲಿ ಆಕೆಯ ಕಣ್ಣಲ್ಲಿ ನೀರು ಬರುತ್ತದೆ. ಅದು ಹೇಗೆ ಸಾಧ್ಯ'' ಎಂದು ಪ್ರಶ್ನಿಸುತ್ತಾರೆ ಪ್ರತಿಸ್ಪರ್ಧಿ ರಾಖಿ.

ನೋಡಿದರೆ ಗೊತ್ತಾಗುತ್ತೆ

ನೋಡಿದರೆ ಗೊತ್ತಾಗುತ್ತೆ

''ಬರೀ ಮಾತಿನಿಂದ ಮಾತ್ರ ಅಲ್ಲ, ಆಕೆಯ ಬಾಡಿ ಲ್ಯಾಂಗ್ವೇಜ್ ಹಾಗೂ ವರ್ತನೆ ನೋಡಿದರೆ ಸಂಯುಕ್ತ ಎಷ್ಟು ಶೋ ಆಫ್ ಮಾಡುತ್ತಾರೆ ಎಂದು ಅರ್ಥ ಆಗುತ್ತದೆ'' ಎಂದರು ಪ್ರತಿಸ್ಪರ್ಧಿ ಮೀನಲ್

'ಫ್ಲರ್ಟ್' ಮಾಡುತ್ತಾರಂತೆ ಸಂಯುಕ್ತ

'ಫ್ಲರ್ಟ್' ಮಾಡುತ್ತಾರಂತೆ ಸಂಯುಕ್ತ

ಇನ್ನೂ ಸಂಯುಕ್ತ ಎಲ್ಲ ಹುಡುಗರ ಜೊತೆ ಫ್ಲರ್ಟ್ ಮಾಡುತ್ತಾರೆ ಎಂಬ ಮಾತು ಕೂಡ ಕೇಳಿಬಂತು. ಇದಕ್ಕೆ ಹುಡುಗರು ಒಪ್ಪಿಕೊಳ್ಳಲಿಲ್ಲ. ಆದ್ರೆ, ಸಂಯುಕ್ತ-ಬಸೀರ್ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿರುವುದು 'ರೋಡೀಸ್' ಕ್ಯಾಂಪ್ ನಲ್ಲಿರುವ ಎಲ್ಲರಿಗೂ ಗೊತ್ತು.

'ರೋಡೀಸ್'ನಲ್ಲೂ ಸಂಯುಕ್ತ ಕಿರಿಕ್

'ರೋಡೀಸ್'ನಲ್ಲೂ ಸಂಯುಕ್ತ ಕಿರಿಕ್

ತಮ್ಮ ಗ್ಯಾಂಗ್ ತೆಗೆದುಕೊಳ್ಳುವ ನಿರ್ಧಾರಗಳಿಗೆ ಸಂಯುಕ್ತ ಬದ್ಧವಾಗಿರಲ್ಲ. ವೋಟ್ ಔಟ್ ಸೀಕ್ರೆಟ್ ಗಳನ್ನ ಸಂಯುಕ್ತ ಬೇರೆ ಗ್ಯಾಂಗ್ ಜೊತೆ ಹಂಚಿಕೊಳ್ಳುತ್ತಾರೆ ಎಂಬ ಕಾರಣಕ್ಕೆ ಸಂಯುಕ್ತ ಕಂಡ್ರೆ ಆಕೆಯ ಗ್ಯಾಂಗ್ ಮೆಂಬರ್ಸ್ ಗೆ ಆಗ್ಬರುತ್ತಿಲ್ಲ.

ಪರ್ಫಾಮೆನ್ಸ್ ಕೂಡ ಅಷ್ಟಕಷ್ಟೆ

ಪರ್ಫಾಮೆನ್ಸ್ ಕೂಡ ಅಷ್ಟಕಷ್ಟೆ

ಒಂದೆರಡು ಗ್ರೂಪ್ ಟಾಸ್ಕ್ ಗಳನ್ನು ಬಿಟ್ಟರೆ, 'ರೋಡೀಸ್' ನಲ್ಲಿ ಸಂಯುಕ್ತ ಪರ್ಫಾಮೆನ್ಸ್ ಕೂಡ ಅಷ್ಟಕಷ್ಟೆ. ರೂಲಿಂಗ್ ಗ್ಯಾಂಗ್ ನಲ್ಲಿದ್ದ ಸಂಯುಕ್ತ ಇಷ್ಟು ದಿನ ಸೇಫ್ ಆಗಿದ್ದರು. ಇನ್ಮುಂದೆ ಅವರ ಜರ್ನಿ ಹೇಗಿರುತ್ತೋ, ಕಾದು ನೋಡಬೇಕು.

More from Filmibeat

English summary
Read the article to know the Allegations against Kannada Actress Samyukta Hegde in MTV Roadies reality show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X