»   » 'ರೋಡೀಸ್'ನಲ್ಲಿ ಕಿಸ್ ಕೊಟ್ಟ 'ಕಿರಿಕ್' ಹುಡುಗಿ: ಬಯಲಾಯ್ತು ಸಂಯುಕ್ತ ಲವ್ ಸ್ಟೋರಿ!

'ರೋಡೀಸ್'ನಲ್ಲಿ ಕಿಸ್ ಕೊಟ್ಟ 'ಕಿರಿಕ್' ಹುಡುಗಿ: ಬಯಲಾಯ್ತು ಸಂಯುಕ್ತ ಲವ್ ಸ್ಟೋರಿ!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಬ್ಲಾಕ್ ಬಸ್ಟರ್ 'ಕಿರಿಕ್ ಪಾರ್ಟಿ' ಚಿತ್ರದ ನಾಯಕಿ ಸಂಯುಕ್ತ ಹೆಗಡೆ ಹೃದಯಕ್ಕೆ ಕಚಗುಳಿ ಇಟ್ಟಂಗಾಗಿದೆ. ಅರ್ಥಾತ್ ಸಂಯುಕ್ತ ಹೆಗಡೆ ಪ್ರೀತಿಯ ಬಲೆಗೆ ಬೀಳುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ.

ಇನ್ನು ಕೆಲವೇ ದಿನಗಳಲ್ಲಿ 'ನಿದಿರೆ ಬರದಿರೆ ಏನಂತಿ... ಲವ್ವೋ... ಲವ್ವೋ... ಲವ್ವೋ' ಎಂದು ಸಂಯುಕ್ತ ಹಾಡು ಹೇಳಲು ಶುರು ಮಾಡಿದರೆ ನೀವ್ಯಾರೂ ಅಚ್ಚರಿ ಪಡಬೇಡಿ. ಅಷ್ಟರಮಟ್ಟಿಗೆ ಅವರನ್ನ ಇಂಪ್ರೆಸ್ ಮಾಡಿದ್ದಾರೆ ಹೈದರಾಬಾದ್ ನ ಓರ್ವ ಯುವಕ.!['ಕಿರಿಕ್ ಪಾರ್ಟಿ' ಹುಡುಗಿ ಪ್ರತಿಭೆಗೆ ಮನಸೋತ 'ರೋಡೀಸ್' ಗ್ಯಾಂಗ್ ಲೀಡರ್ಸ್]

ಆ ಯುವಕ ಯಾರು.? ಎಂಟಿವಿ ವಾಹಿನಿಯಲ್ಲಿ ನಟಿ ಸಂಯುಕ್ತ ಹೆಗಡೆ ಕಿಸ್ ಕೊಟ್ಟಿರುವುದು ಯಾರಿಗೆ.? ಎಂಬುದರ ಕುರಿತು ಸಂಪೂರ್ಣ ವರದಿ ಇಲ್ಲಿದೆ ಓದಿರಿ....

'ರೋಡೀಸ್'ನಲ್ಲಿ ಶುರುವಾಗಿದೆ ನಟಿ ಸಂಯುಕ್ತ ಲವ್ ಸ್ಟೋರಿ

ಎಂಟಿವಿ ವಾಹಿನಿಯ ಜನಪ್ರಿಯ 'ರೋಡೀಸ್ ರೈಸಿಂಗ್' ರಿಯಾಲಿಟಿ ಶೋಗೆ ನಟಿ ಸಂಯುಕ್ತ ಹೆಗಡೆ ಸೆಲೆಕ್ಟ್ ಆಗಿದ್ದಾರೆ ಎಂಬ ವರದಿಯನ್ನ ಇದೇ ಫಿಲ್ಮಿಬೀಟ್ ಕನ್ನಡದಲ್ಲಿ ನೀವೆಲ್ಲ ಓದಿದ್ರಿ. ಮಾರ್ಚ್ ತಿಂಗಳಿನಲ್ಲಿ 'ರೋಡೀಸ್ ರೈಸಿಂಗ್' ಜರ್ನಿ ಮುಗಿದಿದ್ದು, ಅದರ ಕಂತುಗಳು ಇದೀಗ ಎಂಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಅದೇ ಶೋನಲ್ಲಿ ನಟಿ ಸಂಯುಕ್ತ ಹೆಗೆಡೆ ಲವ್ ಸ್ಟೋರಿ ಶುರು ಆಗಿದೆ.[ಹಿಂದಿ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟ 'ಕಿರಿಕ್ ಪಾರ್ಟಿ' ಹೀರೋಯಿನ್]

ಸಂಯುಕ್ತಗೆ ಬಸೀರ್ ಕಂಡ್ರೆ ಅಚ್ಚುಮೆಚ್ಚು

ಎಂಟಿವಿ ವಾಹಿನಿಯ 'ರೋಡೀಸ್ ರೈಸಿಂಗ್' ರಿಯಾಲಿಟಿ ಶೋನಲ್ಲಿ ನಟಿ ಸಂಯುಕ್ತ, ರನ್ ವಿಜಯ್ ಗ್ಯಾಂಗ್ ನಲ್ಲಿದ್ರೆ, ಬಸೀರ್ ಎಂಬ ಹೈದರಾಬಾದ್ ಮೂಲದ ಯುವಕ ಪ್ರಿನ್ಸ್ ನರುಲಾ ಗ್ಯಾಂಗ್ ನಲ್ಲಿದ್ದಾರೆ. ಗ್ಯಾಂಗ್ ಬೇರೆ ಬೇರೆ ಆಗಿದ್ದರೂ, 'ರೋಡೀಸ್ ರೈಸಿಂಗ್' ಜರ್ನಿಯಲ್ಲಿ ಸಂಯುಕ್ತ ಮತ್ತು ಬಸೀರ್ ನಡುವೆ ಸಂಥಿಂಗ್ ಸಂಥಿಂಗ್ ಶುರುವಾಗಿದೆ.

ಬಸೀರ್ ಗೆ ಕಿಸ್ ಕೊಟ್ಟ ನಟಿ ಸಂಯುಕ್ತ

'ರೋಡೀಸ್ ರೈಸಿಂಗ್' ಜರ್ನಿಯಲ್ಲಿ ಬಸೀರ್ ಗೆ ನಟಿ ಸಂಯುಕ್ತ ಹೆಗಡೆ ಕಿಸ್ ಕೊಟ್ಟಿದ್ದಾರೆ. ಬಸೀರ್ ಕೆನ್ನೆ ಮೇಲೆ ಸಂಯುಕ್ತ ರವರ ತಿಳಿ ಕೆಂಪು ತುಟಿಗಳು ಅಚ್ಚಾಗಿರುವುದು ಹೀಗೆ... ನೀವೇ ನೋಡಿ...

ಇಬ್ಬರೂ ಮ್ಯಾಚಿಂಗ್-ಮ್ಯಾಚಿಂಗ್

ಬಸೀರ್ ಕೆನ್ನೆಗೆ ತುಟಿ ಒತ್ತಿರುವುದು ಮಾತ್ರ ಅಲ್ಲ. ಇಬ್ಬರೂ ಮ್ಯಾಚಿಂಗ್-ಮ್ಯಾಚಿಂಗ್ ಎನ್ನುವಂತೆ ಪಿಂಕ್ ಟಿ-ಶರ್ಟ್ ತೊಟ್ಟಿದ್ದು 'ರೋಡೀಸ್ ರೈಸಿಂಗ್' ಜರ್ನಿಯಲ್ಲಿ ಎಲ್ಲರನ್ನ ಆಶ್ಚರ್ಯಚಕಿತಗೊಳಿಸಿತು.

ನಿರೂಪಕಿ ಕಣ್ಸೆಳೆದ ಬಸೀರ್ ಕೆನ್ನೆ

ಬಸೀರ್ ಕೆನ್ನೆ ಮೇಲೆ ಲಿಪ್ ಸ್ಟಿಕ್ ಅಚ್ಚಾಗಿದ್ದು 'ರೋಡೀಸ್ ರೈಸಿಂಗ್' ನಿರೂಪಕಿ ಗೇಲಿನ್ ಕಣ್ಸೆಳೆಯಿತು. ಇದೇ ವಿಚಾರದ ಕುರಿತು ಗೇಲಿನ್ ಪ್ರಶ್ನೆ ಮಾಡಿದಾಗ, ''ಅದು ಲೇಡಿ ಲಕ್ (ಅದೃಷ್ಟ ದೇವತೆ) ಕೊಟ್ಟಿದ್ದು'' ಎಂದು ಬಸೀರ್ ಹೇಳಿದರು.

ಯಾರು ಕೊಟ್ಟಿದ್ದು.?

''ಮುತ್ತು ಕೊಟ್ಟಿದ್ದು ಯಾರು'' ಎಂದು ನಿರೂಪಕಿ ಗೇಲಿನ್ ಕೇಳಿದಾಗ ''ನಾನು ಹಾಕಿರುವ ಶರ್ಟ್ ಕಲರ್ ನೋಡಿದ್ರೆ ಗೊತ್ತಾಗುತ್ತೆ'' ಎಂದು ಬಸೀರ್ ಸುಳಿವು ನೀಡಿದ್ರು. ಅಲ್ಲಿಗೆ, ಮ್ಯಾಚಿಂಗ್ ಉಡುಪು ಧರಿಸಿ ಬಂದಿದ್ದ ನಟಿ ಸಂಯುಕ್ತ ರವರೇ ಬಸೀರ್ ಕೆನ್ನೆಗೆ ಮುತ್ತು ಕೊಟ್ಟಿದ್ದು ಎಂದು ಜಗಜ್ಜಾಹೀರಾಯ್ತು.

ಸಂಯುಕ್ತ ಕೆನ್ನೆ ಕೆಂಪಾದವೋ...

ಅಷ್ಟರಲ್ಲಾಗಲೇ, ಸಂಯುಕ್ತ ಮೊಗದಲ್ಲಿ ಮಂದಹಾಸ ಮೂಡಿ... ಅವರ ಕೆನ್ನೆ ಕೆಂಪಾಗಿದ್ದವು.

ಲವ್ ಸ್ಟೋರಿ ಶುರು.?

''ಸಂಯುಕ್ತ-ಬಸೀರ್ ನಡುವೆ ಸಂಥಿಂಗ್ ಸಂಥಿಂಗ್ ಶುರುವಾಗಿದ್ಯಾ.?'' ಎಂದು ನಿರೂಪಕಿ ಗೇಲಿನ್ ಕೇಳಿದಾಗ, ''ಇನ್ನೂ ಏನೂ ಶುರು ಆಗಿಲ್ಲ'' ಎಂದು ಸಂಯುಕ್ತ ಉತ್ತರ ಕೊಟ್ಟರು.

ನೇಹಾ ಧೂಪಿಯಾ ಹೇಳಿದ್ದೇನು ಗೊತ್ತಾ.?

ಈ ವೇಳೆ ಮಾತಿಗಿಳಿದ ಬಾಲಿವುಡ್ ನಟಿ ಕಮ್ 'ರೋಡೀಸ್ ರೈಸಿಂಗ್' ಗ್ಯಾಂಗ್ ಲೀಡರ್ ನೇಹಾ ಧೂಪಿಯಾ, ''ಒಂದು ಹುಡುಗಿ ಇನ್ನೂ ಏನೂ ಶುರು ಆಗಿಲ್ಲ ಅಂತ ಹೇಳ್ತಾಳೆ ಅಂದ್ರೆ ಅಲ್ಲಿಗೆ ಲವ್ ಆಗಿದೆ ಅಂತರ್ಥ. ಇದು ನಮಗೂ ಗೊತ್ತು'' ಎಂದರು.

ಸಂಯುಕ್ತ ಹೇಳುವುದೇನು.?

''ನನ್ನ ಮತ್ತು ಬಸೀರ್ ನಡುವಿನ ಗೆಳೆತನ ಚೆನ್ನಾಗಿದೆ. ಇಲ್ಲಿಯವರೆಗೂ ನಾವಿಬ್ಬರು ಒಳ್ಳೆಯ ಫ್ರೆಂಡ್ಸ್. ಬಸೀರ್ ಅಂದ್ರೆ ನನಗೆ ಅಚ್ಚುಮೆಚ್ಚು'' ಎನ್ನುತ್ತಾರೆ ನಟಿ ಸಂಯುಕ್ತ ಹೆಗಡೆ.

ಬಸೀರ್ ಹೇಳುವುದೇನು.?

''ನಾವಿಬ್ಬರೂ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಿದ್ದೇವೆ. ನೋಡೋಣ ಮುಂದೆ ಏನಾಗುತ್ತೆ'' ಅಂತಾರೆ ಬಸೀರ್.

'ಟ್ರೂತ್ ಅಂಡ್ ಡೇರ್' ಆಟದಲ್ಲೂ ಇದೇ ಉತ್ತರ

'ರೋಡೀಸ್ ರೈಸಿಂಗ್' ನಲ್ಲಿ 'ಟ್ರೂತ್ ಅಂಡ್ ಡೇರ್' ಆಟ ಆಡುವಾಗಲೂ, ''ಬಸೀರ್ ಗೆ ಯಾರನ್ನ ಕಂಡ್ರೆ ಇಷ್ಟ.?'' ಎಂಬ ಪ್ರಶ್ನೆ ತೂರಿ ಬಂದಿತ್ತು. ಆಗ ಬಸೀರ್ ಕೊಟ್ಟ ಉತ್ತರ, ''ಆ ತರಹ ಏನಿಲ್ಲ. ಆದ್ರೆ, ನನಗೆ ಸಂಯುಕ್ತ ಕಂಡ್ರೆ ಇಷ್ಟ''.

ಸಂಯುಕ್ತ ಹೃದಯದಲ್ಲಿ ಕಚಗುಳಿ

''ಬಸೀರ್ ಕೊಟ್ಟ ಉತ್ತರ ಮನದಾಳದಿಂದ ಬಂದಿದ್ದು. ಎಲ್ಲರ ಮುಂದೆ ಬಸೀರ್ ಹಾಗೆ ಹೇಳಿದ್ದು ನನಗೆ ತುಂಬಾ ಖುಷಿ ಆಯ್ತು'' ಎಂದಿದ್ದರು ಸಂಯುಕ್ತ ಹೆಗಡೆ.

ಬಸೀರ್ ಯಾರು.?

21 ವರ್ಷದ ಹೈದರಾಬಾದ್ ಮೂಲದ ಹುಡುಗ ಬಸೀರ್. 'ರೋಡೀಸ್ ರೈಸಿಂಗ್' ರಿಯಾಲಿಟಿ ಶೋನಲ್ಲಿ ಭಾಗವಹಿಸಿರುವ ಬಸೀರ್ ಈಗಷ್ಟೇ ಡಿಗ್ರಿ ಮುಗಿಸಿದ್ದಾರೆ. 'ಹಬೀಬಿಝ್ ವೈನ್ಸ್' ಎಂಬ ಯೂಟ್ಯೂಬ್ ಚಾನೆಲ್ ಗಾಗಿ ಬಸೀರ್ ವಿಡಿಯೋಗಳನ್ನ ತಯಾರು ಮಾಡಿದ್ದಾರೆ.

English summary
Kannada Actress Samyukta Hegde of 'Kirik Party' fame kisses Baseer in MTV Roadies reality show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada