»   » ಗಾಂಚಲಿ ಬಿಡಿ, ಕನ್ನಡ ಸಿನಿಮಾ ಮಾಡಿ: 'ಕಿರಿಕ್' ಹುಡುಗಿಗೆ ಕನ್ನಡಿಗರ ವಾರ್ನಿಂಗ್!

ಗಾಂಚಲಿ ಬಿಡಿ, ಕನ್ನಡ ಸಿನಿಮಾ ಮಾಡಿ: 'ಕಿರಿಕ್' ಹುಡುಗಿಗೆ ಕನ್ನಡಿಗರ ವಾರ್ನಿಂಗ್!

Posted By: Naveen
Subscribe to Filmibeat Kannada

'ಕಿರಿಕ್ ಪಾರ್ಟಿ' ಸಿನಿಮಾದ ನಟಿ ಸಂಯುಕ್ತ ಹೆಗಡೆ ಈಗ ದೊಡ್ಡ ಕಿರಿಕ್ ಮಾಡಿಕೊಂಡಿದ್ದಾರೆ. ಕನ್ನಡದ ಎರಡು ಸಿನಿಮಾಗಳನ್ನ ಒಪ್ಪಿಕೊಂಡು ಯಾವುದೋ ಒಂದು ತಮಿಳು ಸಿನಿಮಾ ಬಂತು ಅಂತ ಕನ್ನಡ ಚಿತ್ರಗಳಿಗೆ ಕೈ ಕೊಡಲು ಸಂಯುಕ್ತ ಮುಂದಾಗಿದ್ದರಂತೆ.['ಕಾಲೇಜ್ ಕುಮಾರ್'ನಿಗೆ ಕ್ಲಾಪ್ ಮಾಡಿದ ಕಿಚ್ಚ ಸುದೀಪ್]

ಡೇಟ್ಸ್ ಪ್ರಾಬ್ಲಂ ನಿಂದಾಗಿ 'ಕಾಲೇಜ್ ಕುಮಾರ್' ಮತ್ತು 'ವಾಸು, ನಾನ್ ಪಕ್ಕ ಕಮರ್ಷಿಯಲ್' ಎಂಬ ಎರಡು ಕನ್ನಡ ಚಿತ್ರಗಳಲ್ಲಿ ನಟಿಸುವುದಿಲ್ಲ ಅಂತ ಸಂಯುಕ್ತ ಹೇಳಿದ್ದಾರೆ ಎಂದು ಇಂದು ಬೆಳಗ್ಗೆ ಸುದ್ದಿ ಆಗಿತ್ತು. ಈ ಬಗ್ಗೆ 'ಕಾಲೇಜ್ ಕುಮಾರ್' ನಿರ್ಮಾಪಕ ಪದ್ಮನಾಭ ನಿರ್ಮಾಪಕರ ಸಂಘ ಮೊರೆ ಹೋದ್ಮೇಲೆ ನಟಿ ಸಂಯುಕ್ತ ಕನ್ನಡ ಚಿತ್ರಗಳಿಗೆ ಕೊಟ್ಟ ಡೇಟ್ಸ್ ಅನುಗುಣವಾಗಿ ನಟಿಸುವುದಾಗಿ ಒಪ್ಪಿಕೊಂಡಿದ್ದಾರೆ.[ಟಿವಿಯಲ್ಲಿ ಬಂದಿದೆಲ್ಲಾ ನಿಜ ಅಲ್ಲ ಎಂದ 'ಕಿರಿಕ್' ನಟಿ ಸಂಯುಕ್ತ ಹೆಗಡೆ.!]

ಕನ್ನಡದ 'ಕಿರಿಕ್ ಪಾರ್ಟಿ' ಸಿನಿಮಾದ ಮೂಲಕ ದೊಡ್ಡ ಜನಪ್ರಿಯತೆ ಗಳಿಸಿದ ನಟಿ ಈಗ ಕನ್ನಡ ಚಿತ್ರಕ್ಕೆ ಕೈ ಕೊಡಲು ಮನಸ್ಸು ಮಾಡಿರುವುದನ್ನು ನೋಡಿರುವ ಕನ್ನಡಿಗರು 'ಗಾಂಚಲಿ ಬಿಡಿ, ಕನ್ನಡ ಸಿನಿಮಾ ಮಾಡಿ' ಎನ್ನುತ್ತಿದ್ದಾರೆ. 'ಕಿರಿಕ್ ಹುಡುಗಿ'ಗೆ ಕನ್ನಡಿಗರು ನೀಡಿದ ಖಡಕ್ ವಾರ್ನಿಂಗ್ ಮುಂದಿದೆ ಓದಿ...

ಟ್ರೋಲ್ ಶುರುವಾಗಿದೆ

ತಮಿಳು ಸಿನಿಮಾಗಾಗಿ ಕನ್ನಡ ಚಿತ್ರಕ್ಕೆ ಕೈ ಕೊಡಲು ಮುಂದಾಗಿದ್ದ ನಟಿ ಸಂಯುಕ್ತ ಹೆಗಡೆ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಗಳು ಶುರುವಾಗಿದೆ. 'ಅಲ್ಪನಿಗೆ ಐಶ್ವರ್ಯ ಬಂದ್ರೆ, ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದ್ನಂತೆ' ಎಂದು ಕನ್ನಡಿಗರು ಟ್ರೋಲ್ ಮಾಡುತ್ತಿದ್ದಾರೆ.[ಕ್ಯಾತೆ ತೆಗೆದು ವಿವಾದ ಮೈಮೇಲೆ ಎಳ್ಕೊಂಡ 'ಕಿರಿಕ್' ಹುಡುಗಿ ಸಂಯುಕ್ತ]

ಕಿರಿಕ್ ಹುಡುಗಿಗೆ 'ಕಿರಿಕ್'

ಸಿನಿಮಾದಲ್ಲಿ ಕಿರಿಕ್ ಮಾಡಿದ ಸಂಯುಕ್ತಗೆ ಅವರ ಸ್ಟೈಲ್ ನಲ್ಲಿ ಸಿನಿಮಾದ ಡೈಲಾಗ್ ರೀತಿಯೇ ಟ್ರೋಲ್ ಮಾಡಿ ಬುದ್ದಿ ಹೇಳಿದ್ದಾರೆ.

ಗಾಂಚಲಿ ಬೇಡ

ಇಂತಹ ಟ್ರೋಲ್ ಗಳಿಗೆ ಅನೇಕ ಕನ್ನಡಿಗರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಗಾಂಚಲಿ ಮಾಡಿಕೊಂಡು ಹೋದ್ರೆ ವಾಪಸ್ ಬಂದಾಗ ಧಾರಾವಾಹಿಗಳಲ್ಲಿಯೂ ಚಾನ್ಸ್ ಸಿಗಲ್ಲ ಎಂದಿದ್ದಾರೆ ಕನ್ನಡಿಗರು.[ತಮಿಳು ಸಿನಿಮಾ ಆಸೆಗೆ ಕನ್ನಡ ಚಿತ್ರಕ್ಕೆ ಕೈ ಕೊಡಲು ರೆಡಿ ಇದ್ರಾ ಕನ್ನಡತಿ ಸಂಯುಕ್ತ.?]

ಎಲಾದ್ರೂ ಹೋಗು

ಕನ್ನಡ ಬಿಟ್ಟು ತಮಿಳು ಸಿನಿಮಾ ಮಾಡುತ್ತೀನಿ ಅಂದ್ರೆ ಸರಿ.... ಎಲ್ಲಾದ್ರೂ ಹೋಗು. ಆದ್ರೆ, ಕನ್ನಡ ಸಿನಿಮಾದಿಂದ ಕೆರಿಯರ್ ಶುರು ಮಾಡಿದ್ದನ್ನ ಮಾತ್ರ ಮರೆಯಬೇಡ ಎಂದಿದ್ದಾರೆ.

ಇದೆಲ್ಲ ಬೇಕಿತ್ತಾ.?

ಸಂಯುಕ್ತ ಹೆಗಡೆ ಸುಮ್ನೆ ತಾವೇ ಕಿರಿಕ್ ಮಾಡಿಕೊಂಡಿದ್ದಾರೆ. ಚಿತ್ರತಂಡದೊಂದಿಗೆ ಸರಿಯಾಗಿ ಮಾತಾಡಿಕೊಂಡು ಡೇಟ್ ಪ್ರಾಬ್ಲಂ ಸರಿಪಡಿಸಿಕೊಳ್ಳುವುದು ಬಿಟ್ಟು ಇದೆಲ್ಲ ಬೇಕಿತ್ತಾ ಅಂತ ಪ್ರಶ್ನೆ ಮಾಡ್ತಿದ್ದಾರೆ.['ರೋಡೀಸ್'ನಲ್ಲಿ ಕಿಸ್ ಕೊಟ್ಟ 'ಕಿರಿಕ್' ಹುಡುಗಿ: ಬಯಲಾಯ್ತು ಸಂಯುಕ್ತ ಲವ್ ಸ್ಟೋರಿ!]

English summary
Kannada Actresses Samyuktha Hegde gets trolled in Facebook
Please Wait while comments are loading...