India
  For Quick Alerts
  ALLOW NOTIFICATIONS  
  For Daily Alerts

  ಬೆಟ್ಟದ ಹೂ: ಹೂವಿಯನ್ನು ಮತ್ತೆ ಕರೆತರಲು ಅಡ್ಡಗಾಲಾಕುತ್ತಿದ್ದಾಳೆ ಮಾಲಿನಿ..!

  By ಎಸ್ ಸುಮಂತ್
  |

  ಹೂವಿಯನ್ನು ಯಾವತ್ತಿಗೂ ಮನೆಕೆಲಸದವಳಂತೆ ಯಾರೂ ಕಾಣಲೇ ಇಲ್ಲ. ಮಾಲಿನಿ ಕೂಡ ಹೂವಿಯನ್ನು ಆ ರೀತಿ ನೋಡಿದವಳೇ ಅಲ್ಲ. ಆದರೆ ಮಾಲಿನಿ ತಾಯಿ ಮಂದ್ರಾಳ ಮಾತಿನಿಂದಾಗಿ ಅಂದಿನಿಂದ ಇಂದಿನವರೆಗೆ ಹೂವಿಯನ್ನು ಕಂಡರೆ ಒಳಗೊಳಗೆ ಕೆಂಡಕಾರುತ್ತಿದ್ದಾಳೆ ಮಾಲಿನಿ.

  ತನ್ನ ಸ್ಥಾನಕ್ಕೆ ಬಂದು ಬಿಡುತ್ತಾಳೆ ಎಂಬ ಕೋಪವೋ, ರಾಹುಲ್‌ಗೆ ತನಗಿಂತಲೂ ಆತ್ಮೀಯವಾಗಿರುತ್ತಾನೆ ಎಂಬುದಕ್ಕೋ ಏನೋ ಹೂವಿಯ ಮೇಲೆ ನಿಗಿ ನಿಗಿ ಕೆಂಡಕಾರುತ್ತಿದ್ದಾಳೆ.

  ಸದ್ಯ ಹೂವಿ ಮನೆಬಿಟ್ಟು ಚನ್ನವಲ್ಸೆ ಸೇರಿದ್ದಾಳೆ. ಮತ್ತೆ ಕರೆತರುವ ವಿಚಾರ ಮಾಲಿನಿಗೆ ಹಿಡಿಸುತ್ತಿಲ್ಲ. ಇದೇ ಕಾರಣಕ್ಕೆ ಮನೆಯವರೆಲ್ಲಾ ಹೇಳಿದರು ವ್ಯಂಗ್ಯವಾಗಿಯೇ ಮಾತನಾಡುತ್ತಿದ್ದಾಳೆ. ಇದು ಹೂವಿಯನ್ನು ಕೂಡ ತನ್ನ ಮನೆಯವಳೆ ಎಂದುಕೊಂಡಿದ್ದವರ ಮನಸ್ಸಿಗೆ ನೋವಾಗಿದೆ. ಆದರೆ ರಾಹುಲ್ ಇದೆಲ್ಲವನ್ನು ಮೀರಿ ಹೂವಿಯನ್ನು ಕರೆದುಕೊಂಡು ಬರುತ್ತಾನಾ ಎಂಬುದನ್ನು ನೋಡಬೇಕಿದೆ.

  ಸೊಸೆಯ ಮಾತಿಗೆ ಮನೆಯವರ ಬೇಸರ

  ಸೊಸೆಯ ಮಾತಿಗೆ ಮನೆಯವರ ಬೇಸರ

  ಹೂವಿ ಚಕ್ರವರ್ತಿ ಮನೆಗೆ ಬಂದಾಗಿನಿಂದ ಇಲ್ಲಿಯವರೆಗೂ ಮನೆಯ ಕೆಲಸದವಳು ಎಂದು ಯಾರು ಎಂದುಕೊಂಡಿಲ್ಲ. ಹೂವಿ ತನ್ನ ನಿಜ ಸಂಬಂಧವನ್ನು ತಿಳಿಸಲು ಸಾಧ್ಯವಾಗದೆ ಮನೆಯ ಕೆಲಸದವಳಂತೆ ಇದ್ದರೂ ಸಹ, ಮನೆಯ ಮಗಳಂತೆಯೇ ನೋಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ ಹೂವಿ ಎಂದರೆ ಮನೆಯವರಿಗೆಲ್ಲಾ ಸಿಕ್ಕಾಪಟ್ಟೆ ಇಷ್ಟ. ಅವಳಿದ್ದರೆ ನಗುವೆ ಹೆಚ್ಚು. ಮನೆಯ ಎಲ್ಲಾ ಸಮಯವೂ ಫಟಾಫಟ್ ಎಂದು ಮುಗಿದೇ ಹೋಗುತ್ತೆ. ಕೆಲಸದ ಜೊತೆಗೆ ಮನೆಯವರೆಲ್ಲರನ್ನು ಖುಷಿಯಿಂದ ಇಟ್ಟುಕೊಳ್ಳುವುದು ಇದೇ ಹೂವಿ. ಆದರೆ ಮನೆಯ ಸಿಸೆಯ ಬಾಯಲ್ಲಿ ಹೂವಿಯ ಬಗ್ಗೆ ಮನೆಕೆಲಸದವಳೆಂದು ಬಂದಿದ್ದು ಎಲ್ಲರಿಗೂ ನೋವು ತಂದಿದೆ.

  ಮಾಲಿನಿಯನ್ನು ಮೀರಿ ಹೋಗುವನೆ ರಾಹುಲ್

  ಮಾಲಿನಿಯನ್ನು ಮೀರಿ ಹೋಗುವನೆ ರಾಹುಲ್

  ಹೂವಿ ಚನ್ನವಲ್ಸೆಗೆ ಹೋಗಿರುವುದು ಮನೆಯವರಿಗೆಲ್ಲಾ ಬೇಸರ ತಂದಿದೆ. ಕಾದು ಕಾದು ಸಾಕಾದ ಮನೆಯವರು ಹೂವಿ ಮತ್ತೆ ಬರುವುದಿಲ್ಲವೇನೋ ಎಂಬ ಭಯದಲ್ಲಿದ್ದಾರೆ. ಅದೇ ಕಾರಣಕ್ಕೆ ರಾಹುಲ್‌ನನ್ನು ಕಳುಹಿಸಲು ಯತ್ನಿಸುತ್ತಿದ್ದಾರೆ. ಚನ್ನವಲ್ಸೆಗೆ ಹೋಗಿ ರಾಹುಲ್ ಹೂವಿಯನ್ನು ಕರೆತರಬೇಕೆಂಬ ಚರ್ಚೆ ಮನೆಯಲ್ಲಿ ನಡೆಯುತ್ತಿದೆ. ಆದರೆ ಈ ಮಧ್ಯೆ ಮಾಲಿನಿ ಇದಕ್ಕೆ ಒಪ್ಪುತ್ತಿಲ್ಲ. ಇದು ಮನೆಯವರಿಗೆ ಆಶ್ಚರ್ಯವನ್ನುಂಟು ಮಾಡಿದೆ. ಆದರೆ ರಾಹುಲ್‌ಗೆ ತನಗೆ ಸರಿ ಎನಿಸಿದ್ದನ್ನು ಮಾಡುವ ಜಾಯಮಾನದವನು. ಹೀಗಾಗಿ ಮಾಲಿನಿಗೆ ಸಮಾಧಾನ ಮಾಡಿಯಾದರೂ ಹೂವಿಯನ್ನು ಕರೆದುಕೊಂಡು ಬರುತ್ತಾನೆ ಎಂಬ ವಿಶ್ವಾಸ ನೋಡುಗರದ್ದು.

  ರಾಹುಲ್ ನಿರ್ಧಾರವೇ ಹೂವಿಗೆ ನೋವು

  ರಾಹುಲ್ ನಿರ್ಧಾರವೇ ಹೂವಿಗೆ ನೋವು

  ಇತ್ತೀಚೆಗೆ ಸಾಕಷ್ಟು ಬೆಳವಣಿಗೆಗಳು ರಾಹುಲ್ ಮತ್ತು ಹೂವಿ ಜೀವನದಲ್ಲಿ ನಡೆದಿದೆ. ರಾಹುಲ್‌ನನ್ನು ಹಲವು ಬಾರಿ ಪ್ರಾಣಾಪಾಯದಿಂದ ಕಾಪಾಡಿದ್ದು ಇದೇ ಹೂವಿ. ರಾಹುಲ್ ಕಷ್ಟಕ್ಕೆ ಸಿಲುಕಿದಾಗೆಲ್ಲಾ ಹೂವಿ ದೇವತೆಯಾಗಿ ಬಂದು ಕಾಪಾಡುತ್ತಾಳೆ. ಈ ಬಾರಿ ರಾಹುಲ್‌ನನ್ನು ಕೇಡಿಗಳು ಕಿಡ್ನ್ಯಾಪ್ ಮಾಡಿ, ಅದ್ಯಾವುದೋ ಸುದ್ದಿಯ ವಿಚಾರಕ್ಕೆ ಬೆದರಿಕೆ ಹಾಕಿದ್ದರು. ಅಷ್ಟೇ ಅಲ್ಲ ಇದೇ ವೇಳೆ ರಾಹುಲ್ ಜೀವಕ್ಕೂ ಅಪಾಯ ಬಂದಿತ್ತು. ಆದರೆ ಇದನ್ನು ಗಮನಿಸಿದ್ದ ಹೂವಿ, ಪೊಲೀಸರನ್ನು ಕರೆದುಕೊಂಡು ಬಂದು ರಾಹುಲ್ ಪ್ರಾಣ ಉಳಿಸಿದ್ದಳು. ಆದರೆ ರಾಹುಲ್ ಆಡಿದ ಬೇರೆಯವರನ್ನು ಮದುವೆಯಾಗಿ, ನೀನು ಚೆನ್ನಾಗಿರು ಎಂದಿದ್ದೆ ಹೂವಿಯ ಮನಸ್ಸಿಗೆ ಆಘಾತ ತಂದಿತ್ತು. ಇದೇ ಕಾರಣಕ್ಕಾಗಿಯೇ ಹೂವಿ ಚನ್ನವಲ್ಸೆ ಕಡೆಗೆ ಪಯಣ ಬೆಳೆಸಿದ್ದಾಳೆ. ಇದೀಗ ರಾಹುಲ್ ಕ್ಷಮೆಯಾಚಿಸಿ, ಕೊನೆವರೆಗೂ ನಾನೆ ನಿನ್ನ ಗಂಡ ಎಂದು ಹೇಳುವ ತನಕ ಹೂವಿ ಮತ್ತೆ ಚಕ್ರವರ್ತಿ ಗೂಡು ಸೇರುವುದು ಅನುಮಾನವಾಗಿದೆ.

  ಅತಿಥಿ ಪಾತ್ರದಲ್ಲಿ ಸುಷ್ಮಾ ಎಂಟ್ರಿ

  ಅತಿಥಿ ಪಾತ್ರದಲ್ಲಿ ಸುಷ್ಮಾ ಎಂಟ್ರಿ

  ಹೂವಿ ಚನ್ನವಲ್ಸೆಗೆ ಹೋಗುವ ನಿರ್ಧಾರವನ್ನೇನೋ ಮಾಡಿದಳು. ಆದರೆ ಕೈಯಲ್ಲಿ ನಯಾ ಪೈಸೆಯನ್ನು ಇಟ್ಟುಕೊಳ್ಳದೆ ಬಸ್ ಹತ್ತಿ ಕೂತರೆ ಸಮಸ್ಯೆ ಬಾರದೆ ಇರುತ್ತದೆಯೇ. ಟಿಕೆಟ್ ತೆಗೆದುಕೊಳ್ಳಲು ಹಣವಿಲ್ಲ ಎಂದ ಕಂಡಕ್ಟರ್‌ಗೆ ಹೂವಿಯ ತಾಳಿ ಮೇಲೆಯೇ ಕಣ್ಣು ಹೋಗಿದ್ದು. ಅಸಹಾಯಕ ಸ್ಥಿತಿಯಲ್ಲಿದ್ದ ಹೂವಿಯನ್ನು ಕಾಪಾಡಿದ್ದು ಡಾ.ಭಾವನಾ. ಈ ಬಾರಿ ಡಾ. ಭಾವನಾ ರೂಪದಲ್ಲಿ ಸುಷ್ಮಾ ವಿ. ರಾವ್ ಎಂಟ್ರಿಯಾಗಿದ್ದಾರೆ. ಹೂವಿಯ ತಾಳಿ ಕಾಪಾಡಿ, ಚನ್ನವಲ್ಸೆಗೆ ಹುಷಾರಾಗಿ ಹೋಗುವಂತೆ ನೋಡಿಕೊಂಡಿದ್ದಾಳೆ. ಅಷ್ಟೇ ಅಲ್ಲ ತಾಳಿ ಮತ್ತು ಹೆಣ್ಣಿನ ಬೆಲೆಯನ್ನು ತಿಳಿಸಿದ್ದಾರೆ.

  English summary
  Bettada Hoo Serial Written Update on July 1st Episode. Here is the details.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X