For Quick Alerts
  ALLOW NOTIFICATIONS  
  For Daily Alerts

  ಬೆಟ್ಟದ ಹೂ: ರಾಹುಲ್ ಹಿಂದೆ ಹಿಂದೆ ಹೋದರು ಬಗ್ಗುತ್ತಿಲ್ಲ ಹೂವಿ: ಮನಸ್ಸು ಕಲ್ಲಾಗಿದ್ದು ಯಾಕೆ..?

  By ಎಸ್ ಸುಮಂತ್
  |

  ಇತ್ತೀಚೆಗಷ್ಟೇ ರಾಹುಲ್ ಬದಲಾವಣೆ ಕಂಡು ಹೂವಿ ಕರಗಿದ್ದಳು.‌ ಮನಸ್ಸಲ್ಲಿಯೇ ಸಂತಸ ಪಡುತ್ತಿದ್ದಳು. ಗಂಡನ ಪ್ರೀತಿ ಸಿಕ್ಕಿದ್ದಕ್ಕೆ ನಾನೇ ಪುಣ್ಯವಂತೆ ಎಂದಿದ್ದಳು. ಆದರೆ ರಾಹುಲ್ ಮತ್ತದೆ ಹಳೆ ವರಸೆ ತೆಗೆದು ಹೂವಿಯ ಮನಸ್ಸು ಹಾಳು ಮಾಡಿದ್ದಾನೆ. ಶಾಂತವಾಗಿದ್ದ ಹೂವಿಯ ಮನಸ್ಸು ಕೆರಳಿ ಕೆಂಡದಂತಾಗಿದೆ. ಈಗ ರಾಹುಲ್ ಅದೆಷ್ಟೇ ಶಾಂತಗೊಳಿಸಲು ಹೋದರು ಸರಿಯಾಗುತ್ತಿಲ್ಲ. ಮತ್ತೆ ಮತ್ತೆ ಕೋಪಗೊಳ್ಳುತ್ತಿದ್ದಾಳೆ.

  ಓದಲೇಬೇಕು, ಒಳ್ಳೆಯ ಹುದ್ದೆಗೆ ಸೇರಲೇಬೇಕು ಎಂದು ಹೂವಿ ಹಠ ಮಾಡಿದ್ದಾಳೆ. ಯಾರ ಮೇಲೆಯೂ ಅವಲಂಬನೆಯಾಗಬಾರದು ಎಂದೇ ನಿರ್ಧರಿಸಿದ್ದಾಳೆ. ಅದಕ್ಕೆಂದೇ ಕಷ್ಟಪಟ್ಟು, ಮನಸಿಟ್ಟು ಓದುತ್ತಿದ್ದಾಳೆ. ರಾಹುಲ್ ಮನಸ್ಸಿಗೆ ನೋವು ಮಾಡಿರುವ ಕಾರಣ ಓದುವ ಹಠ ಹೂವಿಗೆ ಹೆಚ್ಚಾಗಿದೆ. ದೊಡ್ಡ ಅಧಿಕಾರಿಯಾಗಲೇಬೇಕೆಂದು ಕನಸು ಕಾಣುತ್ತಿದ್ದಾಳೆ.

  ಪುಟ್ಟಕ್ಕನ ಮಕ್ಕಳು: ಸುಮಾ ಕ್ಲಾಸ್‌ಗೆ ಬಂದಿಲ್ಲ? ಮೇಷ್ಟ್ರ ಬಳಿ ಕ್ಷಮೆ ಯಾಚಿಸುತ್ತಾಳಾ?ಪುಟ್ಟಕ್ಕನ ಮಕ್ಕಳು: ಸುಮಾ ಕ್ಲಾಸ್‌ಗೆ ಬಂದಿಲ್ಲ? ಮೇಷ್ಟ್ರ ಬಳಿ ಕ್ಷಮೆ ಯಾಚಿಸುತ್ತಾಳಾ?

  ಹೂವಿಗೆ ಮತ್ತೊಂದು ಮದುವೆಯಾಗಲೂ ಒತ್ತಾಯ

  ಹೂವಿಗೆ ಮತ್ತೊಂದು ಮದುವೆಯಾಗಲೂ ಒತ್ತಾಯ

  ಹೂವಿ ಬೆಂಗಳೂರು ಬಿಟ್ಟು ಚನ್ನವಲ್ಸೆಗೆ ವಾಪಾಸ್ ಬರುವುದಕ್ಕೆ ಮದುವೆಯ ವಿಚಾರವೇ ಕಾರಣವಾಗಿತ್ತು. ಮದುವೆಯಾಗಿದ್ದರೂ, ಗಂಡ ಜೊತೆಯಲ್ಲಿಯೇ ಇದ್ದರೂ ಸತ್ಯವನ್ನು ಹೇಳಲು ಆಗದೆ, ಮದುವೆಯಾಗದ ರೀತಿಯೇ ಇದ್ದಳು. ಯಾವುದೇ ಖುಷಿ ಇಲ್ಲದೆ ಹೋದರು ಆ ಘಟನೆಯಿಂದ ಅಷ್ಟೊಂದು ನೋವಾಗಿರಲಿಲ್ಲ. ಆದರೆ ರಾಹುಲ್ ಅದ್ಯಾವಾಗ ಮತ್ತೊಂದು ಮದುವೆಯಾಗು ಎಂದಿದ್ದಕ್ಕೆ ಮನಸ್ಸಿಗೆ ನೋವು ಮಾಡಿಕೊಂಡು ಬೆಂಗಳೂರು ಬಿಟ್ಟು ಚನ್ನವಲ್ಸೆಗೆ ಬಂದಿದ್ದಾಳೆ. ಆದರೆ ಮತ್ತೆ ರಾಹುಲ್ ಬಾಯಿಯಿಂದ ಮತ್ತೊಂದು ಮದುವೆಯ ಬಗ್ಗೆಯೇ ವಿಚಾರ ಬಂದಿದ್ದು, ಇಬ್ಬರ ಮನಸ್ತಾಪ, ಕೋಪಕ್ಕೆ ಮತ್ತೊಂದು ಮದುವೆ ಎಂಬ ವಿಚಾರವೇ ಕಾರಣವಾಗಿದೆ.

  ಜೊತೆಜೊತೆಯಲಿ: ಅನುಗೆ ಪ್ರಜ್ಞೆ ಬಂದಾಯ್ತು: ಝೇಂಡೇ ಪ್ಲ್ಯಾನ್‌ ಮತ್ತೆ ಠುಸ್‌ ಆಯ್ತು..ಜೊತೆಜೊತೆಯಲಿ: ಅನುಗೆ ಪ್ರಜ್ಞೆ ಬಂದಾಯ್ತು: ಝೇಂಡೇ ಪ್ಲ್ಯಾನ್‌ ಮತ್ತೆ ಠುಸ್‌ ಆಯ್ತು..

  ಹೂವಿಯ ಜೀವನ ಹಾಳಾಗುತ್ತಿದೆ ಎಂದ ಕಾಳವ್ವ

  ಹೂವಿಯ ಜೀವನ ಹಾಳಾಗುತ್ತಿದೆ ಎಂದ ಕಾಳವ್ವ

  ಹುಲಿಯಾ ಸಾಕಿದ ಮಗ ಪುರ್ಶಿ. ಹೂವಿ ಕಂಡರೆ ಪುರ್ಶಿಗೂ ಪ್ರೀತಿಯೂ ಇದೆ. ಆದರೆ ಅವಳಿಗೆ ಮದುವೆಯಾಗಿರುವ ಕಾರಣ ಅದನ್ನು ಮನಸ್ಸಲ್ಲಿಯೇ ಅದುಮಿಟ್ಟುಕೊಂಡಿದ್ದಾನೆ. ಇದನ್ನು ರಾಹುಲ್ ಗಮನಿಸುವುದಕ್ಕೆ ಕಷ್ಟವೇನು ಅಲ್ಲ. ಹೂವಿ ಮತ್ತು ರಾಹುಲ್ ಮಾತಾಡುವಾಗ ಮಾತು ತಾರಕಕ್ಕೇರಿದೆ. ನೀನು ಪುರ್ಶಿಯನ್ನು ಮದುವೆಯಾಗು ಎಂದು ರಾಹುಲ್ ಹೇಳಿದ್ದಾನೆ. ಈ ಮಾತು ಮುಸ್ಲಿ ಕಾಳವ್ವನ ಕಿವಿಗೆ ಬಿದ್ದಿದೆ. ಈ ವಿಚಾರವನ್ನೇ ಇಟ್ಟುಕೊಂಡು ಕಾಳವ್ವ ರಾದ್ಧಾಂತ ಮಾಡಿದ್ದಾಳೆ. ಹೂವಿಯ ಬದುಕು ಹಾಳಾಗುತ್ತಿದೆ. ಪ್ಯಾಟೆ ಮನುಷ್ಯ ಹೂವಿಯನ್ನು ಬಿಟ್ಟು ಹೊರಟಿದ್ದಾನೆ. ಹೂವಿಗೆ ನ್ಯಾಯ ಕೊಡಿಸ್ರಪ್ಪ ಅಂತ ಊರಿನ ಯಜಮಾನನಿಂದ ಹಿಡಿದು ಎಲ್ಲರನ್ನು ತನ್ನ ಬಾಯಿ ಮೂಲಕ ಅನೌನ್ಸ್ ಮಾಡಿ ಕರೆದಿದ್ದಾಳೆ. ಅದೇ ಜಾಗಕ್ಕೆ ಹೂವಿ ಬಂದಾಗ ಮುಸ್ಲಿಯ ನಾಟಕ ನೋಡಿ ದಂಗಾಗಿದ್ದಾಳೆ. ನಾನೇ ಕೇಳಿಸಿಕೊಂಡಿದ್ದೇನೆ ಸತ್ಯ ಹೇಳು ಎಂದಾಗ ಒಂದು ಕ್ಷಣ ಹೂವಿ ಗಾಬರಿಯಾಗಿದ್ದಾಳೆ.

  ಗಂಡು-ಹೆಣ್ಣೆಂಬ ಬೇಧಕ್ಕೆ ಹೂವಿ ಬೇಸರ

  ಗಂಡು-ಹೆಣ್ಣೆಂಬ ಬೇಧಕ್ಕೆ ಹೂವಿ ಬೇಸರ

  ಕಾಳವ್ವ ಮಾಡಿದ ಗಲಾಟೆಯಿಂದ ಹೂವಿ ಮತ್ತೆ ಸಂಕಟಕ್ಕೆ ಸಿಲುಕಿಕೊಂಡಳು. ಆದರೆ ಜೋರು ಧ್ವನಿಯಲ್ಲಿ "ನನಗೆ ಮತ್ತೆ ರಾಹುಲ್ ಸರ್‌ಗೆ ಇನ್ನು ಎಷ್ಟು ಕಾಟ ಕೊಡುತ್ತೀರಾ..? ನಾವಿಬ್ಬರು ಚೆನ್ನಾಗಿಯೇ ಇದ್ದೀವಿ. ಗಂಡ ಹೆಂಡತಿ ಎಂದ ಮೇಲೆ ಜಗಳ ಸಾಮಾನ್ಯ ಎಂದಾಗಲೂ ವಾದ ಪ್ರತಿವಾದಗಳು ನಡೆಯುತ್ತಿದ್ದವು. ಆದರೆ ಅದೇ ಸಮಯಕ್ಕೆ ರಾಹುಲ್ ಬಂದು ನನ್ನ ಹೆಂಡತಿಯನ್ನು ನಾನೇಕೆ ಬಿಟ್ಟು ಕೊಡಲಿ. ಅವಳಿಲ್ಲದೆ ಇರುವುದಕ್ಕೆ ನನಗೆ ಆಗುವುದಿಲ್ಲ ಎಂದಾಗ ಎಲ್ಲರು ನಂಬಿ ಹೋಗಲು ಯತ್ನಿಸಿದರು. ಆದರೆ ಇದೇ ಹೂವಿಯ ಮನಸ್ಸುಗೆ ಬೇಸರ ತರಿಸಿದ್ದು. ಗಂಡು ಮಕ್ಕಳು ಹೇಳಿದರೆ ಎಲ್ಲದನ್ನು ನಂಬುತ್ತೀರಿ, ಹೆಣ್ಣೆಂಬ ಕಾರಣಕ್ಕೆ ನನ್ನ ಮಾತು ನಂಬುವುದಿಲ್ಲ. ಮೊದಲು ಇಬ್ಬರನ್ನು ಒಂದೇ ರೀತಿ ಕಾಣಬೇಕು" ಎಂದು ಬೇಸರ ವ್ಯಕ್ತಪಡಿಸಿದಳು.

  ರಾಹುಲ್ ಜೊತೆ ಇರಲು ಒಪ್ಪದ ಹೂವಿ

  ರಾಹುಲ್ ಜೊತೆ ಇರಲು ಒಪ್ಪದ ಹೂವಿ

  ಇಷ್ಟೆಲ್ಲಾ ನಡೆದ ಮೇಲೆ ರಾಹುಲ್ ಹೂವಿಯ ಹಿಂದೆ ಹಿಂದೆಯೇ ಹೋಗ ತೊಡಗಿದ್ದಾನೆ. ಆದರೆ ಹೂವಿ ಮನಸ್ಸು ತುಂಬಾ ಕಠಿಣವಾಗಿದೆ. ಇದಕ್ಕಾಗಿಯೇ ನನ್ನ ಹಿಂದೆ ಬರಬೇಡಿ, ನೀವು ಹೊರಡಿ ಎಂದು ನಿಷ್ಕ್ರುಷ್ಟವಾಗಿಯೇ ನುಡಿದ್ದಳು. ಆದರೆ ರಾಹುಲ್ ನೀನು ಬೆಂಗಳೂರಿಗೆ ಬರುವುದೇ ಇಲ್ಲವ ಎಂದಾಗ, ಬಂದರೂ ನಿಮ್ಮ ಮನೆಯಲ್ಲಿ ಇರಲ್ಲ. ಪಿಜಿಯಲ್ಲಿ ಇದ್ದುಕೊಂಡು ಓದುತ್ತೇನೆ ಎಂದಿದ್ದಾಳೆ. ಪಿಜಿಯಲ್ಲಿ ಮದುವೆಯಾದವರಿಗೆ ಅವಕಾಶ ಇರಲ್ಲ ಎಂದು ರಾಹುಲ್ ಹೂವಿಯನ್ನು ಒಪ್ಪಿಸಲು ಯತ್ನಿಸಿದಾಗ, ನಿಮ್ನ ಮನೆಯಲ್ಲಿ ಹೇಗೆ ಇದ್ದೆನೋ ಅದೇ ರೀತಿ ಪಿಜಿಯಲ್ಲೂ ಅದೇ ರೀತಿ ಇರುತ್ತೇನೆ ಎಂದಾಗ ರಾಹುಲ್ ಮನಸ್ಸಿಗೆ ತುಂಬಾ ನೋವಾಗಿದೆ. ತಾಳಿ‌-ಕಾಲುಂಗರ ತೆಗೆಯುತ್ತೇನೆ ಎಂದಿದ್ದು ರಾಹುಲ್ ಮನಸ್ಸನ್ನು ಘಾಸಿಗೊಳಿಸಿದೆ.

  English summary
  Star Suvarna Serial Bettada Hoo Written Update on July 22nd Episode. Here is the details.
  Friday, July 22, 2022, 21:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X