Don't Miss!
- News
ಕೂತಹಲ ಮೂಡಿಸಿದೆ ಈಶ್ವರಪ್ಪ ಸಿಎಂ ಭೇಟಿ; ನನಗೆ ಸಚಿವ ಸ್ಥಾನ ಬೇಡ- ಈಶ್ವರಪ್ಪ ಅಸಮಾಧಾನಕ್ಕೆ ಕಾರಣವೇನು?
- Finance
Adani Stocks: ಅದಾನಿ ಸಂಸ್ಥೆ ಮೌಲ್ಯ ಅರ್ಧದಷ್ಟು ಇಳಿಕೆ, 108 ಬಿಲಿಯನ್ ಡಾಲರ್ ನಷ್ಟ
- Technology
ನಿಮ್ಮ ರಕ್ಷಣೆಗೆ ನೆರವಾಗಲಿವೆ ಈ ಗ್ಯಾಜೆಟ್ಗಳು; ಮಹಿಳೆಯರಿಗಂತೂ ಅಗತ್ಯ!
- Automobiles
ಮಾರುತಿ, ಟಾಟಾ ಕಾರುಗಳ ಪ್ರಾಬಲ್ಯದ ನಡುವೆ ದಾಖಲೆ ಮಟ್ಟದ ಮಾರಾಟವಾದ ಹ್ಯುಂಡೈ ಕ್ರೆಟಾ
- Sports
ಸ್ಪಿನ್ನರ್ಗಳ ವಿರುದ್ಧ ಪರದಾಡುವ ಕೊಹ್ಲಿಗೆ ಆಸಿಸ್ ಸರಣಿಗೂ ಮುನ್ನ ಪಠಾಣ್ 'ಆಕ್ರಮಣಕಾರಿ' ಸಲಹೆ!
- Lifestyle
ಗಂಡಾಗಿ ಬದಲಾಗಿದ್ದ ಮಂಗಳಮುಖಿ ಜಿಹಾದ್ ಈಗ ಗರ್ಭಿಣಿ: 8 ತಿಂಗಳ ಗರ್ಭಿಣಿ ಈ ಜಿಹಾದ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕಳೆದ ವಾರ ಟಿಆರ್‌ಪಿಯಲ್ಲಿ ಟಾಪ್‌ನಲ್ಲಿದ್ದ 10 ಧಾರಾವಾಹಿಗಳು ಪಟ್ಟಿ ಇಲ್ಲಿದೆ!
ಜೀ ಕನ್ನಡದಲ್ಲಿ ಪ್ರಸಾರವಾಗುವ 'ಪುಟ್ಟಕ್ಕನ ಮಕ್ಕಳು' ಹಾಗೂ 'ಗಟ್ಟಿಮೇಳ' ಧಾರಾವಾಹಿಗಳು ತಮ್ಮ ಟಾಪ್ ಒನ್ ಸ್ಥಾನವನ್ನು ಹಾಗೇ ಉಳಿಸಿಕೊಂಡಿವೆ. ಪುಟ್ಟಕ್ಕನ ಮೊದಲ ಮಗಳು ಸಹನಾ ಮದುವೆ ಸಂಭ್ರಮದಲ್ಲಿ ಇದ್ದಾಳೆ. ಈ ಧಾರಾವಾಹಿ 9.08 ಟಿಆರ್‌ಪಿಯನ್ನು ಪಡೆದುಕೊಂಡಿದೆ.
'ಗಟ್ಟಿಮೇಳ' ಸೀರಿಯಲ್ ಸಹ ಟಾಪ್ ಒನ್ ಸ್ಥಾನದಲ್ಲಿಯೇ ಸ್ಥಾನವನ್ನು ಪಡೆದುಕೊಂಡಿದೆ. ಅಮ್ಮನ ಹುಡುಕಾಟದಲ್ಲಿರುವ ವೇದಾಂತ್‌ಗೆ ಸತ್ಯ ತಿಳಿಯುವ ಕಾಲ ಸನ್ನಿಹಿತವಾಗಿದೆ. ಕೌಟುಂಬಿಕ ಧಾರಾವಾಹಿ ಆಗಿರುವ ಕಾರಣ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಧಾರಾವಾಹಿ ಸಹ 9.08 ಟಿಆರ್‌ಪಿಯನ್ನು ಈ ವಾರ ಪಡೆದುಕೊಂಡಿದೆ.
'ಅಂಜಲಿ'
ಧಾರಾವಾಹಿಯ
ಮುದ್ದು
ಗುಮ್ಮ
ಈಗೇನು
ಮಾಡ್ತಿದ್ದಾರೆ
ಗೊತ್ತಾ?

'ಶ್ರೀರಸ್ತು ಶುಭಮಸ್ತು'
ಟಾಪ್ 2ನಲ್ಲಿ 'ಶ್ರೀರಸ್ತು ಮತ್ತು ಶುಭಮಸ್ತು' ಧಾರಾವಾಹಿ ಸ್ಥಾನವನ್ನು ಪಡೆದುಕೊಂಡಿದೆ. ಅತ್ತೆ ಸೊಸೆ ಮಗನ ನಡುವಿನ ಭಾಂದವ್ಯ ನೋಡುಗರಿಗೆ ಬಹಳ ಇಷ್ಟವಾಗಿದೆ. ಇದು ಟಿಆರ್‌ಪಿಯಲ್ಲಿ 8.08 ಪಡೆದುಕೊಂಡಿದೆ.

'ಭಾಗ್ಯಲಕ್ಷ್ಮೀ'
'ಭಾಗ್ಯಲಕ್ಷ್ಮೀ' ಟಾಪ್ 3ರಲ್ಲಿ ಭಾಗ್ಯಲಕ್ಷ್ಮೀ ಸ್ಥಾನವನ್ನು ಪಡೆದುಕೊಂಡಿದೆ. ಅಕ್ಕ ತಂಗಿಯ ಭಾಂದವ್ಯವನ್ನು ನೋಡುವಂತೆ ಮಾಡುವಲ್ಲಿ ಭಾಗ್ಯಲಕ್ಷ್ಮೀ ಧಾರಾವಾಹಿ ಹಿಡಿದಿಟ್ಟುಕೊಂಡಿದೆ. ಇದು 7.3 ಟಿಆರ್‌ಪಿಯನ್ನು ಪಡೆದುಕೊಂಡಿದೆ.

'ಸತ್ಯ'
ಟಾಪ್ 4ರಲ್ಲಿ 'ಸತ್ಯ' ತನ್ನ ಸ್ಥಾನವನ್ನು ಪಡೆದುಕೊಂಡಿದೆ. 'ಸತ್ಯ' ಧಾರಾವಾಹಿಯನ್ನು ಜನರು ನೋಡುತ್ತಿದ್ದಾರೆ. ಇದರಲ್ಲಿ ಸತ್ಯ ಪಾತ್ರ ಎಲ್ಲರಿಗೂ ಇಷ್ಟವಾಗಿದೆ. ಇದು ಟಿಆರ್‌ಪಿಯಲ್ಲಿ 7.1 ಸ್ಥಾನವನ್ನು ಪಡೆದುಕೊಂಡಿದೆ.

'ಹಿಟ್ಲರ್ ಕಲ್ಯಾಣ'
ಟಾಪ್ 5ರಲ್ಲಿ 'ಹಿಟ್ಲರ್ ಕಲ್ಯಾಣ' ತನ್ನ ಸ್ಥಾನವನ್ನು ಪಡೆದುಕೊಂಡಿದೆ. ಪ್ರೇಕ್ಷಕರು 'ಹಿಟ್ಲರ್ ಕಲ್ಯಾಣ'ವನ್ನು ನೋಡುತ್ತಿದ್ದಾರೆ. ಈಗ ಎಜೆ ಲೀಲಾಳನ್ನು ಹೇಗೆ ಮನೆಗೆ ಕರೆದುಕೊಂಡು ಬರುತ್ತಾನೆ ಎಂದು ನೋಡುಗರಿಗೆ ಕುತೂಹಲಕಾರಿಯಾಗಿದೆ. ಟಿಆರ್‌ಪಿಯಲ್ಲಿ 6.8 ಪಡೆದಿದೆ.

'ಜೊತೆ ಜೊತೆಯಲ್ಲಿ'
ಜೀ ಕನ್ನಡದಲ್ಲಿ ಪ್ರಸಾರವಾಗುವ 'ಜೊತೆ ಜೊತೆಯಲ್ಲಿ' ಸೀರಿಯಲ್ ತನ್ನದೇ ಅದ ಪ್ರೇಕ್ಷಕರ ಬಳಗವನ್ನು ಹೊಂದಿದೆ. ಟಾಪ್ 6ರಲ್ಲಿ 'ಜೊತೆ ಜೊತೆಯಲಿ' ಸೀರಿಯಲ್ ಸ್ಥಾನವನ್ನು ಪಡೆದಿದೆ. ಇದು 5.7 ಟಿಆರ್‌ಪಿಯನ್ನು ಪಡೆದುಕೊಂಡಿದೆ.

'ಕೆಂಡಸಂಪಿಗೆ'
ಟಾಪ್ 7ರಲ್ಲಿ 'ಕೆಂಡಸಂಪಿಗೆ' ಧಾರಾವಾಹಿ ಸ್ಥಾನವನ್ನು ಪಡೆದುಕೊಂಡಿದೆ. ಕಾರ್ಪೊರೇಟರ್ ತೀರ್ಥ ಬಡ ಹುಡುಗಿಯನ್ನು ಮದುವೆಯಾಗಿ ಹೇಗೆ ಎಂಎಲ್‌ಎ ಪಟ್ಟ ಅಲಂಕರಿಸುವ ರೀತಿ ಧಾರಾವಾಹಿ ಕಥೆಯಾಗಿದೆ. ಇದು 5.5 ಟಿಆರ್‌ಪಿಯನ್ನು ಪಡೆದುಕೊಂಡಿದೆ.

'ಗೀತಾ'
ಟಾಪ್ 8ರಲ್ಲಿ ಗೀತಾ ಧಾರಾವಾಹಿ ಸ್ಥಾನವನ್ನು ಪಡೆದುಕೊಂಡಿದೆ. ತಂದೆ ಸಾವಿಗೆ ಸೇಡು ತೀರಿಸಿಕೊಳ್ಳಲು ಸಾಯಿಸಿದವರನ್ನು ಹುಡುಕಾಟ ಮಾಡುತ್ತಿದ್ದಾನೆ. ಇದರ ನಡುವೆ ಗೀತಾ ಸಹ ವಿಜಿಗೆ ಬೆನ್ನೆಲುಬಾಗಿ ನಿಂತಿದ್ದಾಳೆ. ಟಿಆರ್‌ಪಿಯಲ್ಲಿ 5.2 ಸ್ಥಾನವನ್ನು ಪಡೆದುಕೊಂಡಿದೆ.

'ಕನ್ನಡತಿ'
'ಕನ್ನಡತಿ' ಧಾರಾವಾಹಿ ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳನ್ನು ಪಡೆದುಕೊಂಡು ಪ್ರೇಕ್ಷಕರನ್ನು ರಂಜಿಸುತ್ತಿದೆ. ಟಾಪ್ 9ರಲ್ಲಿ ಕನ್ನಡತಿ ತನ್ನ ಸ್ಥಾನ ಪಡೆದುಕೊಂಡಿದೆ. ಇದು ಟಿಆರ್‌ಪಿಯಲ್ಲಿ 5.1 ಸ್ಥಾನ ಪಡೆದಿದೆ.

'ಪಾರು'
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಪಾರು' ಧಾರಾವಾಹಿ ಕೌಟುಂಬಿಕ ಸಾಗುತ್ತಿದ್ದು ಟಾಪ್ 10 ರಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡಿದೆ. ಟಿಆರ್‌ಪಿಯಲ್ಲಿ 5.0ನ್ನು ಪಡೆದುಕೊಂಡಿದೆ.

'ರಾಮಾಚಾರಿ'
ರಾಮಾಚಾರಿ ಹಾಗೂ ಚಾರು ಯಾವಾಗ ಪ್ರೀತಿಯಲ್ಲಿ ಬೀಳುತ್ತಾರೆ ಎಂದು ಜನರು ನೋಡುತ್ತಿದ್ದಾರೆ. ಇದರ ನಡುವಲ್ಲಿ ಟಾಪ್ 11ರಲ್ಲಿ ರಾಮಾಚಾರಿ ಸ್ಥಾನವನ್ನು ಪಡೆದುಕೊಂಡಿದೆ. ಟಿಆರ್‌ಪಿಯನ್ನು 4.7 ಸ್ಥಾನವನ್ನು ಪಡೆದಿದೆ.