Just In
Don't Miss!
- News
ನೇಪಾಳ ಕಮ್ಯೂನಿಸ್ಟ್ ಪಕ್ಷದಿಂದ ಕೆಪಿ ಶರ್ಮಾ ಓಲಿ ಉಚ್ಚಾಟನೆ
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಅಗ್ನಿಸಾಕ್ಷಿ' ಧಾರಾವಾಹಿಯಿಂದ ಹೊರ ಬಂದು ಶಾಕ್ ನೀಡಿದ ನಟ ವಿಜಯ್ ಸೂರ್ಯ
ಕಿರುತೆರೆಯ ಖ್ಯಾತ ನಟ, ಸಿದ್ದಾರ್ಥ್ ಅಂತಾನೆ ಮನೆಮಾತಾಗಿರುವ ನಟ ವಿಜಯ್ ಸೂರ್ಯ ಒಂದು ಶಾಕಿಂಗ್ ಸುದ್ದಿ ಹೊರಹಾಕಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಸಿದ್ದಾರ್ಥ್ ಇನ್ಮುಂದೆ ಧಾರಾವಾಹಿಯಲ್ಲಿ ಇರುವುದಿಲ್ಲವಂತೆ.
ಹೀಗಂತ ನಟ ವಿಜಯ್ ಸೂರ್ಯ ಅವರಿಗೆ ಬಹಿರಂಗ ಪಡಿಸಿದ್ದಾರೆ. ವಿಜಯ್ ಮಾತನ್ನು ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅದರಲ್ಲೂ ಮಹಿಳಾ ಅಭಿಮಾನಿಗಳ ಹಾಟ್ ಪೇವರಿಟ್ ಆಗಿದ್ದ ಸಿದ್ದಾರ್ಥ್ ಅಗ್ನಿಸಾಕ್ಷಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದ್ಮೇಲೆ ಧಾರಾವಾಹಿ ಯಾಕೆ ನೋಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
ವೈಷ್ಣವಿ ಬಾಳಲ್ಲಿ ಬಿರುಗಾಳಿ: ಸಿದ್ಧಾರ್ಥ್ ಗೆ ಇನ್ನೊಂದು ಮದುವೆ ಆಗಿದೆ.!
ಸದ್ಯ ಧಾರಾವಾಹಿಯಲ್ಲಿ ರೋಚಕ ತಿರುವುಗಳನ್ನು ಪಡೆದು ಕಷ್ಟ, ಸಂಕಷ್ಟಗಳನ್ನು ದಾಟಿ ಒಂದು ಹಂತಕ್ಕೆ ಬಂದಿದೆ. ಅಲ್ಲದೆ ಸಿದ್ದಾರ್ಥ್ ಸನ್ನಿಧಿ ಸೇರಿದಂತೆ ಇಡೀ ಕುಟುಂಬ ಒಂದಾಗಿದೆ. ಈ ಸಮಯದಲ್ಲಿ ಸಿದ್ದಾರ್ಥ್ ಧಾರಾವಾಹಿಯಿಂದ ಹೊರ ಬಂದಿದ್ದಾರೆ. ಮುಂದೆ ಓದಿ..

ಸಿದ್ದಾರ್ಥ್ ಹೊರ ಬರಲು ಅಸಲಿ ಕಾರಣ
ಸಿದ್ದಾರ್ಥ್ ಧಾರಾವಾಹಿಯಿಂದ ದಿಢೀರನೆ ಹೊರ ಬರಲು ಕಾರಣ ಅವರ ಪಾತ್ರ ಅಲ್ಲಿ ಕೊನೆಯಾಗಿದೆಯಂತೆ. ಧಾರಾವಾಹಿಯಲ್ಲಿ ಸಿದ್ದಾರ್ಥ್ ಈಗಾಗಲೆ ಆಸ್ಟ್ರೇಲಿಯಾಗೆ ಹೋಗಲು ಸಿದ್ದರಾಗಿದ್ದಾರೆ. ಸಿದ್ದಾರ್ಥ್ ಆಸ್ಟ್ರೇಲಿಗೆ ಹೊರಟ ನಂತರ ಅವರ ಪಾತ್ರ ಅಲ್ಲಿಗೆ ಕೊನೆಯಾಗಲಿದೆ.

ಐದು ವರ್ಷದ ಅಗ್ರಿಮೆಂಟ್ ಕೊನೆ
ಅಗ್ನಿಸಾಕ್ಷಿ ಧಾರಾವಾಹಿ ಪ್ರಾರಂಭವಾಗಿ ಐದು ವರ್ಷಗಳು ಆಗಿವೆ. ಸಿದ್ದಾರ್ಥ್ ಐದು ವರ್ಷದ ಅಗ್ರಿಮೆಂಟ್ ಕೂಡ ಮುಕ್ತಾಯವಾಗಿದೆಯಂತೆ. ಅಲ್ಲದೆ ವಿಜಯ್ ಗೆ ಕೊಂಚ ಬ್ರೇಕ್ ಕೂಡ ಬೇಕಂತೆ. ಹಾಗಾಗಿ ಈ ಎಲ್ಲಾ ಕಾರಣಗಳಿಗೆ ಧಾರಾವಾಹಿಯಿಂದ ಹೊರ ನಡೆದಿದ್ದಾರೆ. ದಾರಾವಾಹಿಯಲ್ಲಿ ಸಿದ್ದಾರ್ಥ್ ಕಥೆ ಕೂಡ ಮುಕ್ತಾಯವಾಗಿರುವುದರಿಂದ ಸೀರಿಯಲ್ ನಿಂದ ಹೊರ ಬರುವುದು ಇದೇ ಉತ್ತಮ ಸಮಯವೆಂದು ಭಾವಿಸಿ ಅಗ್ನಿಸಾಕ್ಷಿ ಪಯಣ ಕೊನೆ ಮಾಡುತ್ತಿದ್ದಾರೆ.

ವಿಜಯ್ ಮುಂದಿನ ನಿರ್ಧಾರ
ವಿಜಯ್ ಸೂರ್ಯ ಇತ್ತೀಚಿಗಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಾಗಾಗಿ ಫ್ಯಾಮಿಲಿ ಜೊತೆ ಕಾಲಕಳೆಯಲು ಕೊಂಚ ಬ್ರೇಕ್ ತೆಗೆದುಕೊಂಡಿದ್ದಾರೆ. ಅಗ್ನಿಸಾಕ್ಷಿ ಧಾರವಾಹಿಯ ಪಯಣ ಮುಗಿಸಿರುವ ವಿಜಯ್ ಇನ್ಮುಂದೆ ಬೆಳ್ಳಿತೆರೆ ಮೇಲೆ ಮಿಂಚಲಿದ್ದಾರೆ. ಈಗಾಗಲೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ವಿಜಯ್ ಈಗ ಲಕ್ನೋ ಟು ಮುಂಬೈ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.
ಕಿರುತೆರೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ 'ಅಗ್ನಿಸಾಕ್ಷಿ'

ಸನ್ನಿಧಿ ಪಾತ್ರ ಕೊನೆಗೊಳ್ಳುತ್ತಾ?
ವಿಜಯ್ ಸೂರ್ಯ ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ವೈಷ್ಣವಿ ಕೂಡ ಸೀರಿಯಲ್ ನಿಂದ ಹೊರಬರುತ್ತಾರಾ ಎನ್ನುವ ಅನುಮಾನ ಪ್ರೇಕ್ಷಕರನ್ನು ಕಾಡುತ್ತಿದೆ. ಸಿದ್ದಾರ್ಥ್ ಪತ್ನಿಯಾಗಿ ವೈಷ್ಣವಿ, ಸನ್ನಿಧಿ ಎನ್ನುವ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸನ್ನಿಧಿ ಪಾತ್ರ ಕೂಡ ಸಖತ್ ಖ್ಯಾತಿ ಪಡೆದುಕೊಂಡಿದೆ. ನಾಯಕ ಸಿದ್ದಾರ್ಥ್ ಆಸ್ಟ್ರೇಲಿಯಾ ಹೋಗಲು ನಿರ್ಧರಿಸಿದ್ದಾರೆ. ಹಾಗಾಗಿ ಪತ್ನಿ ಸನ್ನಿಧಿ ಕೂಡ ಅವರ ಜೊತೆ ಹೋಗುತ್ತಾರಾ, ಎನ್ನುವುದಕ್ಕೆ ಧಾರಾವಾಹಿಯಲ್ಲಿಯೆ ಉತ್ತರ ಕೊಟ್ಟಿದ್ದಾರೆ. ಆದ್ರೆ ಸನ್ನಿಧಿ ಪಾತ್ರ ಹಾಗೆ ಮುಂದುವರೆಯಲಿದೆಯಂತೆ.

ಅಗ್ನಿಸಾಕ್ಷಿ ಧಾರಾವಾಹಿ ಮುಗಿಯುತ್ತಾ?
ಧಾರಾವಾಹಿಯ ನಾಯಕನೆ ಹೊರ ಬಂದಮೇಲೆ ಧಾರವಾಹಿ ಇಲ್ಲಿಗೆ ಕೊನೆಗೊಳ್ಳುತ್ತಾ ಎನ್ನುವ ಅನುಮಾನ ಪ್ರೇಕ್ಷಕರಲ್ಲಿದೆ. ಯಾಕಂದ್ರೆ ಚಂದ್ರಿಕಾ ವಿಲನ್ ಅಂತ ಗೊತ್ತಾಗಿ ಮನೆಯಿಂದ ಓಡಿಸಿ ಆಗಿದೆ. ಎಲ್ಲಾ ಸಮಸ್ಯೆಗಳು ಭಗೆಹರಿದು ಸದ್ಯ ನೆಮ್ಮದಿಯ ಜೀವನ ಮಾಡುತ್ತಿದ್ದಾರೆ. ಹಾಗಾಗಿ ಧಾರಾವಾಹಿ ಮುಗಿಯುತ್ತಾ ಎನ್ನುವುದು ಕೂಡ ಗೊಂದಲದಲ್ಲಿದೆ.

ಧಾರಾವಾಹಿ ಮುಂದುವರೆಯುವ ಬಗ್ಗೆ ಚಂದ್ರಿಕಾ ಸುಳಿವು
ಅಗ್ನಿಸಾಕ್ಷಿ ಮುಕ್ತಾಯವಾಗಲಿದೆ ಎನ್ನುವ ಅನುಮಾನ ಪ್ರೇಕ್ಷಕರಲ್ಲಿ ಮೂಡಲಿದೆ ಎನ್ನುವ ಕಾರಣಕ್ಕೆ ಚಂದ್ರಿಕಾ ಇಲ್ಲಿಗೆ ಮುಗಿಯುವುದಿಲ್ಲ. ಸಿದ್ಧಾರ್ಥ್ ಕುಟುಂಬ ಸರ್ವನಾಶವಾಗುವ ವರೆಗು ಕೊನೆಯಾಗುವುದಿಲ್ಲ ಎಂದು ಹೇಳುವ ಮೂಲಕ ಮತ್ತೆ ಮುಂದುವರೆಯಲಿದೆ ಎನ್ನುವ ಸುಳಿವು ನೀಡಿದ್ದಾರೆ.