For Quick Alerts
  ALLOW NOTIFICATIONS  
  For Daily Alerts

  Hitler Kalyana: ಸತ್ಯ ತಿಳಿದ ಎಜೆ: ಲೀಲಾ ಕಥೆ ಮುಗೀತಾ..?

  By ಪ್ರಿಯಾ ದೊರೆ
  |

  'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಲೀಲಾ ಲವ್‌ನಲ್ಲಿ ಬಿದ್ದಿರುತ್ತಾಳೆ. ಅವಳಿಗೆ ಎಜೆ ಮೇಲಿನ ಪ್ರೀತಿಯನ್ನು ಎಕ್ಸ್ ಪ್ರೆಸ್ ಮಾಡಲು ಬರುವುದಿಲ್ಲ. ಇದಕ್ಕಾಗಿ ಲೀಲಾ ಪ್ರ್ಯಾಕ್ಟೀಸ್ ಕೂಡ ಮಾಡುತ್ತಾಳೆ.

  ಲೀಲಾಗೆ ವಿಶ್ವರೂಪ್ ಸಪೋರ್ಟ್ ಮಾಡುತ್ತಾನೆ. ಲೀಲಾ ಪ್ರೀತಿ ನಿವೇದನೆ ಮಾಡಿಕೊಳ್ಳುವುದು ಹೇಗೆ ಎಂದು ಹೇಳಿಕೊಡುತ್ತಾನೆ. ಲೀಲಾ ಸಿನಿಮಾಗಳಲ್ಲಿ ಮಾಡಿದಂತೆ ಪ್ರಪೋಸ್ ಮಾಡಲು ಅಭ್ಯಾಸ ಮಾಡುತ್ತಾಳೆ. ಆಮೇಲೆ ಅದೆಲ್ಲಾ ಬೇಡ ತನಗೆ ಬೇಕಾದ ಹಾಗೆ ಪ್ರಪೋಸ್ ಮಾಡಿದರೆ ಆಯ್ತು ಎಂದು ಅಂದುಕೊಳ್ಳುತ್ತಾಳೆ.

  'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಎಜೆ- ಅಂತರ ಲವ್ ಸ್ಟೋರಿ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಎಜೆ- ಅಂತರ ಲವ್ ಸ್ಟೋರಿ

  ಲೀಲಾಗೆ ಅಜ್ಜಿಯ ಸಪೋರ್ಟ್ ಕೂಡ ಇರುತ್ತದೆ. ಮಗ ಮತ್ತು ಸೊಸೆ ಒಂದಾಗಿ ಬಾಳಬೇಕು ಎಂಬುದು ಅಜ್ಜಿಯ ಆಲೋಚನೆ. ಹಾಗಾಗಿ ಲೀಲಾಗೆ ಪ್ರತಿ ಸಲವೂ ಎಲ್ಲಾ ವಿಚಾರದಲ್ಲೂ ಸಪೋರ್ಟ್ ಮಾಡುತ್ತಿರುತ್ತಾಳೆ.

  ಸಿಡಿ ವಿಚಾರದ ಬಗ್ಗೆ ಹೇಳಿದ ದುರ್ಗಾ

  ಸಿಡಿ ವಿಚಾರದ ಬಗ್ಗೆ ಹೇಳಿದ ದುರ್ಗಾ

  ಸಿಡಿ ವಿಚಾರವನ್ನು ಬಹಿರಂಗ ಪಡಿಸಿ, ಎಜೆಯನ್ನು ಜೈಲಿಗೆ ಕಳುಹಿಸಿದ್ದು ವಿಕ್ರಂ ಮತ್ತು ಛಾಯಾ ಎಂದು ಗೊತ್ತಾಗುತ್ತದೆ. ಆಗ ಎಜೆ, ಛಾಯಾಳನ್ನು ಪ್ರಶ್ನೆ ಮಾಡುತ್ತಾನೆ. ಛಾಯಾ ಗಾಬರಿ ಆಗುತ್ತಾಳೆ. ಎಜೆಗೆ ಎಲ್ಲಾ ಸತ್ಯ ಗೊತ್ತಾಗಿದೆ. ಇದನ್ನು ತನ್ನನ್ನು ಉಳಿಸುವುದಿಲ್ಲ ಎಂದು ಭಯವಾಗುತ್ತದೆ. ಆಗ ಎಜೆ ಕೇಳುವ ಪ್ರಶ್ನೆಗಳಿಗೆಲ್ಲಾ ತಬ್ಬಿಬ್ಬಾಗುತ್ತಾಳೆ. ಅಷ್ಟರಲ್ಲಿ ದುರ್ಗಾ ಬರುತ್ತಾಳೆ. ವಿಕ್ರಂ ಮತ್ತು ಛಾಯಾಗೆ ಸಿಡಿ ಸಿಗಲು ಕಾರಣ ಲೀಲಾ ಎಂದು ಹೇಳುತ್ತಾಳೆ. ಲೀಲಾಳನ್ನು ಎಜೆ ಮನೆಯಿಂದ ಹೊರಗೆ ಹಾಕಲಿ ಎಂದು ದುರ್ಗಾ ಪ್ಲ್ಯಾನ್ ಮಾಡಿರುತ್ತಾಳೆ. ಎಜೆಗೆ ದುರ್ಗಾ ಹೇಳಿದ ಮಾತುಗಳನ್ನು ಕೇಳಿ ಶಾಕ್ ಆಗುತ್ತದೆ.

  ಕೋಪದಲ್ಲಿರುವ ಎಜೆ

  ಕೋಪದಲ್ಲಿರುವ ಎಜೆ

  ಲೀಲಾ ಬೇಕಂತಲೇ ನಿಮ್ಮನ್ನ ಮದುವೆಯಾಗಿದ್ದು, ನಿಮ್ಮ ಮೇಲೆ ದ್ವೇಷ ಸಾಧಿಸಲು ಸಿಡಿಯನ್ನು ಬಯಲು ಮಾಡಿದ್ದಾಳೆ ಎಂದು ದುರ್ಗಾ ಎಜೆಗೆ ಹೇಳುತ್ತಾಳೆ. ಎಜೆಗೆ ಲೀಲಾ ಬಗ್ಗೆ ಕೇಳಿ ಶಾಕ್ ಆಗುವುದರ ಜೊತೆಗೆ ಕೋಪವೂ ಬರುತ್ತದೆ. ಲೀಲಾಳನ್ನು ತನ್ನ ಮನೆಯಿಂದ ದೂರ ಹಾಕಬೇಕು ಎಂದು ಯೋಚಿಸುತ್ತಿರುತ್ತಾನೆ. ಅಷ್ಟರಲ್ಲಿ ಅಜ್ಜಿ ಬಂದು ನಿನಗಾಗಿ ಎಲ್ಲರೂ ಕಾಯುತ್ತಿದ್ದಾರೆ. ನಿನಗೇನೋ ಸರ್ಪ್ರೈಸ್ ಕೊಡಬೇಕು ಎಂದು ಅಂದುಕೊಂಡಿದ್ದಾರೆ. ರೆಡಿಯಾಗಿ ಬೇಗ ಬಾ ಎಂದು ಕರೆಯುತ್ತಾರೆ.

  ಎಜೆಗೆ ಪ್ರಪೋಸ್ ಮಾಡಲು ಮುಂದಾದ ಲೀಲಾ

  ಎಜೆಗೆ ಪ್ರಪೋಸ್ ಮಾಡಲು ಮುಂದಾದ ಲೀಲಾ

  ಇತ್ತ ಲೀಲಾ ಎಜೆಯ ಹುಟ್ಟುಹಬ್ಬಕ್ಕೆ ಪಾರ್ಟಿಯನ್ನು ಅರೇಂಜ್ ಮಾಡಿರುತ್ತಾಳೆ. ಚುಕ್ಕಿಗೆ ಸ್ಪೆಷಲ್ ಆಗಿ ಕೇಕ್ ರೆಡಿ ಮಾಡಲು ಹೇಳಿರುತ್ತಾಳೆ. ಇದೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಎಜೆಗೆ ಎಲ್ಲರೆದುರಿಗೂ ಪ್ರಪೋಸ್ ಮಾಡಿ ತನ್ನ ಜೀವನವನ್ನು ಮುನ್ನೆಡೆಸಬೇಕು ಎಂದು ಲೀಲಾ ನಿರ್ಧಾರ ಮಾಡಿರುತ್ತಾಳೆ. ಇದಕ್ಕೋಸ್ಕರ ಲೀಲಾ ತಯಾರಿಯನ್ನೂ ನಡೆಸಿರುತ್ತಾಳೆ. ಬರ್ತಡೇ ಪಾರ್ಟಿಗೆ ಎಲ್ಲರನ್ನೂ ಇನ್ವೈಟ್ ಮಾಡಿರುತ್ತಾಳೆ. ಆದರೆ ಎಜೆಗೆ ಲೀಲಾ ಮೇಲೆ ಕೋಪವಿರುತ್ತದೆ. ಕೋಪದಲ್ಲೇ ಪಾರ್ಟಿಗೆ ಎಂಟ್ರಿಕೊಡುತ್ತಾನೆ. ಎಜೆ ಬಂದ ಮೇಲೆ ಲೀಲಾ ಮಾತನಾಡಲು ಶುರು ಮಾಡುತ್ತಾಳೆ.

  ಕುತೂಹಲ ಮೂಡಿಸಿದ ಎಜೆ ನಡೆ

  ಕುತೂಹಲ ಮೂಡಿಸಿದ ಎಜೆ ನಡೆ

  ಲೀಲಾ ಹುಟ್ಟುಹಬ್ಬದ ಮಹತ್ವವನ್ನು ಹೇಳುತ್ತಾಳೆ. ನಂತರ ಎನ್ನ ಹಾಗೂ ಎಜೆ ಬದುಕಿನ ಬಗ್ಗೆ ಎಲ್ಲರಿಗೂ ಹೇಳುತ್ತಾಳೆ. ಎಜೆಯನ್ನು ಹೊಗಳಿ ಹೊಗಳಿ ಅಟ್ಟಕ್ಕೇರಿಸುವ ಲೀಲಾ ಕೊನೆಗೆ ಪ್ರಪೋಸ್ ಮಾಡುತ್ತಾಳೆ. ಆದರೆ, ಎಜೆ ಮಾತ್ರ ಸಿಕ್ಕಾಪಟ್ಟೆ ಸಿಟ್ಟಿನಲ್ಲಿರುತ್ತಾನೆ. ಮನೆಯ ಸೊಸೆಯಂದಿರು ಎಜೆ ಲೀಲಾಳನ್ನು ಓಡಿಸಲಿ ಎಂದು ಕಾಯುತ್ತಿರುತ್ತಾರೆ. ಪ್ರೋಮೋದಲ್ಲಿ ತೋರಿಸಿದ ಪ್ರಕಾರ ಎಜೆ ಲೀಲಾ ಮೇಲೆ ಕೂಗಾಡುತ್ತಾನೆ. ಅವಳ ಕತ್ತಲ್ಲಿರುವ ತಾಳಿಯನ್ನು ಕಿತ್ತು ಹಾಕುತ್ತಾನೆ. ಆದರೆ, ನಿಜವಾಗಿಯೂ ಲೀಲಾಳನ್ನು ಮನೆಯಿಂದ ಎಜೆ ಹೊರಗೆ ಹಾಕುತ್ತಾನಾ..? ಇಲ್ಲ ಸತ್ಯ ತಿಳಿದು ಲೀಲಾಳ ಪ್ರೀತಿ ನಿವೇಧನೆಯನ್ನು ಒಪ್ಪಿಕೊಳ್ಳುತ್ತಾನಾ ಎಂಬ ಕುತೂಹಲವಿದೆ.

  English summary
  Hitler Kalyana Serial 07th January Episode Written Update. Leela prepares for AJ birthday party. She tells chukka to prepare special cake for AJ.
  Sunday, January 8, 2023, 11:01
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X