Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Hitler Kalyana: ಲೀಲಾಗೆ ಮನೆಯಲ್ಲಿ ಬೆಲೆಯೇ ಇಲ್ಲ: ನಂಬಿಕೆ ದ್ರೋಹಿ ಎಂದ ಎಜೆ
'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಗ್ಯಾರೇಜ್‌ನಲ್ಲಿದ್ದ ಅಂತರಾ ಮತ್ತು ಆತನ ಸಿಡಿಯನ್ನು ಲೀಲಾನೇ ಆಚೆ ತಂದಿದ್ದು ಎಂದು ತಿಳಿದ ಕಾರಣ ಎಲ್ಲರ ಮುಂದೆ ಅವಮಾನ ಮಾಡಿ ಇನ್ಮುಂದೆ ನೀನು ನನ್ನ ಹೆಂಡತಿಯೇ ಅಲ್ಲ ಎಂದು ತಾಳಿಯನ್ನು ಕಿತ್ತು ಹಾಕುತ್ತಾನೆ.
ಸೊಸೆಯಂದಿರುವ ಲೀಲಾಳಿಗೆ ಇಷ್ಟು ದಿನ ಮೆರೆಯುತ್ತಿದ್ದೆ. ಈಗ ನೀನು ಇಂಥಹ ತಪ್ಪು ಮಾಡಿ ಅದು ಹೇಗೆ ಇಲ್ಲಿರುತ್ತೀಯಾ ಎಂದೆಲ್ಲಾ ಹೀಯಾಳಿಸುತ್ತಾರೆ. ಅಜ್ಜಿಯೂ ಕೂಡ ಲೀಲಾಳಿಗೆ ಬೈಯುತ್ತಾರೆ.
Paaru:
ಅಖಿಲಾಂಡೇಶ್ವರಿ
ಧರ್ಮಾಧಿಕಾರಿ
ಪಟ್ಟ
ಏರಲು
ಮಗನೇ
ಅಡ್ಡಿ!
ಎಜೆ ಲೀಲಾ ಮಾಡಿದ ಕೆಲಸವನ್ನು ನೆನಪಿಸಿಕೊಂಡು ತುಂಬಾ ಬೇಸರ ಮಾಡಿಕೊಂಡಿರುತ್ತಾನೆ. ಲೀಲಾ ಹೀಗೆ ಮಾಡಿದಳಲ್ಲಾ ಎಂದು ಯೋಚಿಸುತ್ತಿರುತ್ತಾನೆ.

ಲೀಲಾ ಮೇಲೆ ಕೆಂಡ ಕಾರಿದ ದುರ್ಗಾ
ಲೀಲಾ ಬಳಿ ಬಂದ ದುರ್ಗಾ ತನ್ನ ಮನದಾಳದ ಮಾತುಗಳನ್ನು ಆಡುತ್ತಾಳೆ. ತಾನೇಕೆ ಲೀಲಾ ಜೊತೆಗೆ ಸ್ನೇಹದಿಂದ ಇದ್ದಿದ್ದು, ಲೀಲಾ ಈ ಮನೆಗೆ ಸೊಸೆಯಾಗಿ ಬಂದಿರುವುದು ತನಗೆ ಇಷ್ಟವಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತಾಳೆ. ಲೀಲಾಗೆ ದುರ್ಗಾ ಮಾತುಗಳನ್ನು ಕೇಳಿ ಶಾಕ್ ಆಗುತ್ತದೆ. ಇನ್ನು ಎಜೆ ನಿನ್ನನ್ನು ಕತ್ತು ಹಿಡಿದು ಆಚೆಗೆ ದಬ್ಬಲಿಲ್ಲ. ನೀನು ಹೆಣ್ಣಾಗಿ ಹುಟ್ಟಿ ತಪ್ಪು ಮಾಡಿದ್ದೀಯಾ. ಆದರೆ ನಾನು ನಿನ್ನನ್ನ ಆಚೆಗೆ ಹಾಕುತ್ತೀನಿ. ಈ ಮನೆಯಲ್ಲಿ ನೀನು ಇರುವ ಪ್ರತಿಯೊಂದು ಕ್ಷಣವೂ ನರಕ ಅನುಭವಿಸುವಂತೆ ನಾನು ಮಾಡುತ್ತೀನಿ ಎಂದು ಹೇಳುತ್ತಾಳೆ. ಇಷ್ಟು ದಿನದ್ದು ಒಂದು ಲೆಕ್ಕ ಆದರೆ, ಇನ್ಮುಂದೆ ಕೊಡೋದು ಬೇರೆ ಲೆಕ್ಕಾ ಎಂದು ಹೇಳಿ ಹೋಗುತ್ತಾಳೆ.

ನಂಬಿಕೆ ದ್ರೋಹಿ ಎಂದು ಬೈದ ಎಜೆ
ಎಜೆ ಕಾಲಿಗೆ ಗಾಯವಾಗಿರುತ್ತದೆ. ಇದನ್ನು ನೋಡಿದ ಲೀಲಾ ಔಷಧಿಯನ್ನು ತಂದು ಹಚ್ಚುತ್ತಾಳೆ. ಎಜೆಗೆ ಕೋಪ ಬರುತ್ತದೆ. ನೀನ್ಯಾಕೆ ಬಂದೆ ಎಂದು ಕೂಗಾಡುತ್ತಾನೆ. ಆಗ ಲೀಲಾ ಗಾಯಕ್ಕೆ ಔಷಧಿ ಹಚ್ಚದಿದ್ದರೆ ತೊಂದರೆಯಾಗುತ್ತೆ ಎಂದು ಹೇಳಿದ್ದಕ್ಕೆ, ಎಜೆ ಈ ಗಾಯ ಬೇಗ ವಾಸಿಯಾಗುತ್ತೆ. ಆದರೆ ನೀನು ಮಾಡಿರುವ ಗಾಯ ಜೀವನ ಪೂರ್ತಿ ನನ್ನನ್ನು ಕಾಡುತ್ತೆ ಎಂದು ಬೈಯುತ್ತಾನೆ. ನಿನ್ನಂತಹ ನಂಬಿಕೆ ದ್ರೋಹಿಯಿಂದ ಅಮೃತ ಕುಡಿದರೂ ಅದು ವಿಷ ಆಗುತ್ತೆ, ಗೆಟ್ ಔಟ್ ಎಂದು ಹೇಳುತ್ತಾನೆ.

ಲೀಲಾಗೆ ಬೈದ ಅಜ್ಜಿ
ಇದೇ ವೇಳೆಗೆ ಅಜ್ಜಿ ಬಂದು, ನನ್ನ ಮಗನನ್ನ ನೋಡಿಕೊಳ್ಳುವುದು ನನ್ನ ಜವಾಬ್ದಾರಿ. ನನ್ನ ಮಗ ಸೇವೆ ಮಾಡುವುದಕ್ಕೆ ನಾನಿದ್ದೀನಿ. ಬೇರೆಯವರಿಂದ ಮಾಡಿಸುವ ದುರ್ಗತಿ, ದುಃಸ್ಥಿತಿ ನನಗೆ ಇನ್ನೂ ಬಂದಿಲ್ಲ ಎಂದು ಬೈಯುತ್ತಾಳೆ. ನಿನ್ನನ್ನ ಸೊಸೆಯಿಂದ ಒಪ್ಪಿಕೊಂಡು ಜೊತೆಗಿದ್ದೆ ಆದರೆ ಈಗ ನಿನ್ನ ಮುಖ ನೋಡುವುದಕ್ಕೆ ನನ್ನ ಕೈಯಲ್ಲಿ ಆಗುತ್ತಿಲ್ಲ. ಇದನ್ನೆಲ್ಲಾ ಅರ್ಥ ಮಾಡಿಕೊಂಡು ಹೊರಟು ಹೋಗು ಎಂದು ಹೇಳುತ್ತಾಳೆ. ಬಳಿಕ ಎಜೆ ಜೊತೆಗೆ ಅಜ್ಜಿ ಕಣ್ಣಿರು ಹಾಕುತ್ತಾ ಕುಳಿತುಕೊಂಡು ಸಮಾಧಾನ ಮಾಡುತ್ತಾರೆ. ಲೀಲಾನ ನಂಬಿದೆ, ಆದರೆ ಅವಳು ನಂಬಿಕೆ ದ್ರೋಹ ಮಾಡಿದಳು. ಇನ್ನು ನಾನು ಯಾರನ್ನೂ ನಂಬುವುದಿಲ್ಲ ಎಂದು ಹೇಳುತ್ತಾನೆ. ಅಜ್ಜಿ ಇದ್ಯಾವುದೂ ಶಾಶ್ವತ ಅಲ್ಲ. ಎಲ್ಲಾ ಸರಿ ಹೋಗುತ್ತೆ ಎಂದು ಸಮಾಧಾನ ಮಾಡುತ್ತಾಳೆ.

ಲೀಲಾ ಪರ ಇರುವ ವಿಶ್ವರೂಪ್
ಇನ್ನು ವಿಶ್ವರೂಪ್ ಈ ಮನೆಯಲ್ಲಿ ಯಾರಿಗೂ ಸತ್ಯ ಗಿತ್ತಿಲ್ಲ. ಸದ್ಯಕ್ಕೆ ಈ ಮನೆಯಲ್ಲಿ ನೀವು ಇರುವುದು ಬೇಡ. ತವರು ಮನೆಗೆ ಹೋಗಿ ಬಿಡಿ. ನಾನೇ ಹೇಳುತ್ತೀನಿ ಆಮೇಲೆ ಬನ್ನಿ ಎಂದು ಹೇಳುತ್ತಾನೆ. ಆದರೆ ಲೀಲಾ, ವಿಶ್ವರೂಪ್ ಮಾತನ್ನು ಕೇಳುವುದಿಲ್ಲ. ಇದೇ ವೇಳೆಗೆ ಸರಸ್ವತಿ ಮತ್ತು ಲಕ್ಷ್ಮೀ ಬಂದು ಲೀಲಾಗೆ ಚುಚ್ಚಿ ಮಾತನಾಡುತ್ತಾರೆ. ಎಜೆಗೆ ಊಟ ಬಡಿಸುವಾಗಲೂ ಲೀಲಾಗೆ ಸೊಸೆಯಂದಿರು ಮತ್ತು ಅಜ್ಜಿ ಬೈಯುತ್ತಾರೆ.