Don't Miss!
- Automobiles
ಕಡಿಮೆ ಬೆಲೆಯ ಟಾಟಾ ಎಲೆಕ್ಟ್ರಿಕ್ ಕಾರಿನ ವಿತರಣೆ ಪ್ರಾರಂಭ: 2,000 ಕಾರುಗಳ ಹಸ್ತಾಂತರ
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- News
Namma Metro: ನೆಲಮಂಗಲದ BIEC ವರೆಗೂ ಗ್ರೀನ್ ಲೈನ್ ವಿಸ್ತರಣೆ- ಆಸ್ತಿ ಖರೀದಿದಾರರಿಗೆ ಸ್ಪರ್ಗ ಸೃಷ್ಟಿ, ಯಾರ್ಯಾರಿಗೆ ಲಾಭ?
- Finance
ಅದಾನಿ ಗ್ರೂಪ್ ಬಿಕ್ಕಟ್ಟಿನ ಮಧ್ಯೆ ಭರವಸೆ ನೀಡಿದ ವಿತ್ತ ಸಚಿವೆ, ಹೇಳಿದ್ದೇನು?
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Hitler Kalyana: ಮನೆ ಬಿಟ್ಟು ಹೊರಟ ಲೀಲಾ: ಸೊಸೆಗಾಗಿ ಪರಿತಪಿಸಿದ ಅಜ್ಜಿ
'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಲೀಲಾಳನ್ನು ಎಜೆ ರಿಜೆಕ್ಟ್ ಮಾಡಿದ ಕಾರಣ ಮನೆಯಲ್ಲಿ ಎಲ್ಲರೂ ಆಕೆಯನ್ನು ನಿಷ್ಠರವಾಗಿ ನೋಡುತ್ತಿದ್ದಾರೆ. ಲೀಲಾಗೆ ಸಹಿಸಿಕೊಳ್ಳಲಾರದಷ್ಟು ಹಿಂಸೆ ಕೊಡುತ್ತಿದ್ದಾರೆ.
ಸರಸ್ವತಿ ಮತ್ತು ಲಕ್ಷ್ಮೀ ಇಬ್ಬರೂ ಕೂಡ ಲೀಲಾಗೆ ಹೆಜ್ಜೆ ಹೆಜ್ಜೆಗೂ ಚುಚ್ಚಿ ಚುಚ್ಚಿ ಮಾತನಾಡುತ್ತಿರುತ್ತಾರೆ. ಲೀಲಾ ಕೂಡ ಮನೆಯಿಂದ ಮನೆಯಿಂದ ಹೊರಗೂ ಹೋಗಲಾರದೇ ಒದ್ದಾಡುತ್ತಿರುತ್ತಾಳೆ.
Jothe
Jotheyali:
ಆರಾಧನಾಗೆ
ಸತ್ಯ
ಅರ್ಥ
ಮಾಡಿಸಿದ
ಪ್ರಿಯದರ್ಶಿನಿ:
ಮುಂದೇನು..?
ವಿಶ್ವರೂಪ್, ಲೀಲಾ ಪರವಿದ್ದರೂ, ಏನೂ ಮಾಡಲಾಗದೇ ಸುಮ್ಮನಿರುತ್ತಾನೆ. ಲೀಲಾ ಬಗ್ಗೆ ಕಾಳಜಿ ವಹಿಸಿದರೂ ಲೀಲಾಗೆ ಎಜೆ ತನ್ನನ್ನು ಅರ್ಥ ಮಾಡಿಕೊಳ್ಳುತ್ತಿಲ್ಲವಲ್ಲ ಎಂದು ಲೀಲಾ ಬೇಸರ ಮಾಡಿಕೊಳ್ಳುತ್ತಾಳೆ.

ಮನೆ ಬಿಟ್ಟು ಹೊರಟ ಲೀಲಾ
ಲೀಲಾ ತಲೆ ಸುತ್ತಿ ಬಿದ್ದಾಗಲೂ ಎಜೆ ಕೇರ್ ಮಾಡುವುದಿಲ್ಲ ಎಂದು ಲೀಲಾ ಬೇಸರದಿಂದ ಮನೆ ಬಿಟ್ಟು ಹೋಗಲು ನಿರ್ಧರಿಸುತ್ತಾಳೆ. ಅಂತರಾ ಫೋಟೋ ಮುಂದೆ ನಿಂತು ತಾನು ಮನೆ ಬಿಟ್ಟು ಹೋಗುವ ಬಗ್ಗೆ ಮಾತನಾಡುತ್ತಾಳೆ. ತನಗೆ ತವರು ಮನೆಯಲ್ಲೂ ಜಾಗವಿಲ್ಲ. ಅಲ್ಲಿಗೆ ಹೋದರೆ ಚುಕ್ಕಿ ಮದುವೆಯಾಗುವುದಿಲ್ಲ. ಇಲ್ಲಿ ಇರೋಣ ಎಂದರೆ ಎಜೆಗೆ ನಾನು ಬೇಕಿಲ್ಲ. ಹಾಗಾಗಿ ನಾನು ಇಲ್ಲಿ ಇರುವುದು ಸರಿಯಲ್ಲ ಎಂದು ಮನೆಯಿಂದ ಹೊರಟಿದ್ದೇನೆ. ಇಲ್ಲಿ ಯಾರೂ ನನ್ನ ಮನಸ್ಸಿನ ಮಾತುಗಳನ್ನು ಕೇಳಲು ತಯಾರಿಲ್ಲ. ನಾನು ತಪ್ಪು ಮಾಡಿಲ್ಲ. ಇಲ್ಲಿ ನಾನು ಯಾರಿಗೂ ಬೇಕಿಲ್ಲ ಎಂದ ಮೇಲೆ, ನಾನ್ಯಾಕೆ ಇಲ್ಲಿರಬೇಕು ಎಂದು ಹೇಳಿ ಮನೆಯಿಂದ ಹೊರಟು ಬಿಡುತ್ತಾಳೆ.

ಲೀಲಾ ಪತ್ರ ಓದಿದ ಅಜ್ಜಿ
ಇತ್ತ ಅಜ್ಜಿಯ ಕನ್ನಡಕ ಒಡೆದು ಹೋಗಿರುತ್ತದೆ. ಹೀಗಾಗಿ ಮತ್ತೊಂದು ಕನ್ನಡಕ ಎಜೆ ರೂಮಿನಲ್ಲಿದೆಯಲ್ವಾ ಎಂದು ಹೋಗುತ್ತಾಳೆ. ಕನ್ನಡಕ ಹುಡುಕಿದ ಬಳಿಕ ಅಜ್ಜಿಗೆ ಒಂದು ಲೆಟರ್ ಸಿಗುತ್ತದೆ. ಇದು ಎಜೆ ಲೆಟರ್ ಓದಲೋ ಬೇಡವೋ ಎಂದು ಮೊದಲು ಯೋಚಿಸುತ್ತಾಳೆ. ಬಳಿಕ ಎಷ್ಟಾದರೂ ನನ್ನ ಮಗ ಅಲ್ವಾ ಎಂದು ಅಜ್ಜಿ ಪತ್ರವನ್ನು ಓದಲು ಮುಂದಾಗುತ್ತಾಳೆ. ಆಗ ಅದು ಲೀಲಾ ಬರೆದಿರುವ ಪತ್ರವಾಗಿರುತ್ತದೆ. ಈ ಮನೆಗಾಗಿ ಲೀಲಾ ಮಾಡಿರುವುದು, ತನ್ನ ಒಂದು ಎಡವಟ್ಟಿನಿಂದ ಆದ ಅನಾಹುತ ಎಲ್ಲವನ್ನೂ ಬರೆದಿರುತ್ತಾಳೆ. ಇದನ್ನು ಓದಿದ ಮೇಲೆ ಅಜ್ಜಿಗೆ ಬೇಸರವಾಗುತ್ತದೆ.

ಸೊಸೆಯಂದಿರ ಸಂಭ್ರಮಾಚರಣೆ
ಇನ್ನು ಲೀಲಾ ಸೊಸೆಯಂದಿರು ಅತ್ತೆ ಮನೆಯಿಂದ ಹೋಗಾಯ್ತು. ಮತ್ಯಾವತ್ತೂ ಬರೋದಿಲ್ಲ ಎಂಬ ಖುಷಿಯಲ್ಲಿ ತೇಲುತ್ತಿರುತ್ತಾರೆ. ಸರಸ್ವತಿ ಮತ್ತು ಲಕ್ಷ್ಮೀ ಇಬ್ಬರೂ ದುರ್ಗಾ ಮಾಡಿದ ಕೆಲಸವನ್ನು ಹೊಗಳುತ್ತಿರುತ್ತಾರೆ. ಲೀಲಾ ಮತ್ಯಾವತ್ತೂ ಬರೋದಿಲ್ಲ. ಇನ್ನೇನಿದ್ದರೂ ತಮ್ಮದೇ ರಾಜ್ಯಭಾರ ಎಂದು ಖುಷಿ ಪಡುತ್ತಿರುತ್ತಾರೆ.

ಸೊಸೆ ಬಗ್ಗೆ ಕಂಗಾಲಾದ ಅಜ್ಜಿ
ಈ ನಡುವೆ ವಿಶ್ವರೂಪ್, ಲೀಲಾಳನ್ನು ಹುಡುಕಿಕೊಂಡು ಎಜೆ ರೂಮಿಗೆ ಬರುತ್ತಾನೆ. ಅಲ್ಲಿ ಅಜ್ಜಿ ಅಳುತ್ತಿರುವುದನ್ನು ನೋಡಿ ಕೇಳಿದಾಗ, ಅಜ್ಜಿ ಸತ್ಯ ಹೇಳುತ್ತಾಳೆ. ವಿಶ್ವರೂಪ್, ಲೀಲಾ ಎಲ್ಲೂ ಕಾಣಿಸುತ್ತಿಲ್ಲ. ಎಲ್ಲಿಗೆ ಹೋದರೋ ಏನೋ ಎಂದು ಬೇಸರ ಮಾಡಿಕೊಳ್ಳುತ್ತಾನೆ. ಅಜ್ಜಿಯೂ ತಾನು ಮಾಡಿದ್ದು ತಪ್ಪು ತನ್ನ ಸೊಸೆಯನ್ನು ಅರ್ಥ ಮಾಡಿಕೊಳ್ಳಲಿಲ್ಲ ಎಂದು ಬೇಸರ ಮಾಡಿಕೊಳ್ಳುತ್ತಾಳೆ. ಲೀಲಾ ತವರು ಮನೆಗೆ ಹೋಗಿರಬಹುದು ಎಂದು ರಾಮಚಂದ್ರ ರಾಯರಿಗೆ ಫೋನ್ ಮಾಡಿ ಕೇಳುತ್ತಾಳೆ. ಆಗ ರಾಮಚಂದ್ರ ರಾಯರು ಮನೆಯಲ್ಲಿಲ್ಲ, ಮಗಳಿಗೆ ಫೋನ್ ಮಾಡಿ ವಿಚಾರಿಸುತ್ತೇನೆ ಎನ್ನುತ್ತಾನೆ. ಚುಕ್ಕಿಗೆ ಫೋಣ ಮಾಡಿದರೆ, ಬಂದಿಲ್ಲ ಎಂದಾಗ ಶಾಕ್ ಆಗುತ್ತಾನೆ.