»   » ಕಿರುತೆರೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ 'ಅಗ್ನಿಸಾಕ್ಷಿ'

ಕಿರುತೆರೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ 'ಅಗ್ನಿಸಾಕ್ಷಿ'

Posted By:
Subscribe to Filmibeat Kannada

ಹೀಗೊಂದು ಪ್ರಯತ್ನ ಈ ಹಿಂದೆ ಯಾವ ಭಾಷೆ ಕಿರುತೆರೆ ಲೋಕದಲ್ಲೂ ನಡೆದಿಲ್ಲ. ಒಂದೇ ವಾಹಿನಿಯ ಎರಡು ಮೆಗಾ ಸೀರಿಯಲ್ ನಿಂದ ಮತ್ತೊಂದು ಸೀರಿಯಲ್ ಕಥೆ ಹುಟ್ಟಿಕೊಂಡಿದ್ದು ಇದೇ ಮೊದಲು. ಈ ಟಿವಿ ಕನ್ನಡ ಇಂಥದ್ದೊಂದು ಪ್ರಯತ್ನ ಮಾಡಿ ಗೆದ್ದಿದೆ.

ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಸಿದ್ದು ಹಾಗೂ ಅಶ್ವಿನಿ ನಕ್ಷತ್ರದ ಸನ್ನಿಧಿ ಇಬ್ಬರ ಮದುವೆ ಕಥೆಯೊಂದಿಗೆ ಸೋಮವಾರ ಆರಂಭಗೊಂಡ 'ಅಗ್ನಿಸಾಕ್ಷಿ' ಧಾರಾವಾಹಿಗೆ ಪ್ರೇಕ್ಷಕ ಮನ ಸೋತಿದ್ದಾನೆ. ಕನ್ನಡ ಮೆಗಾ ಸೀರಿಯಲ್ ಗಳ ಇತಿಹಾಸದಲ್ಲೇ ಇಂಥದ್ದೊಂದು ನೈಜ ಮದುವೆ ಚಿತ್ರಣ ಕಂಡಿಲ್ಲ ಎಂದು ಪ್ರೇಕ್ಷಕರು ಮಾತನಾಡಿಕೊಂಡಿದ್ದಾರೆ.

ಅರ್ಕ ಮೀಡಿಯಾ ಹೌಸ್ ನಿರ್ಮಾಣದ ಅಗ್ನಿಸಾಕ್ಷಿ ಧಾರಾವಾಹಿಯ ನಿರ್ದೇಶಕರು ಹಯವದನ. ಹೊಸ ಕಥೆ ವಿನೂತನ ಪ್ರಯೋಗದ ಸೀರಿಯಲ್ ಗೆ ವೈಷ್ಣವಿ ಅವರು ನಾಯಕಿಯಾಗಿದ್ದರೆ, ವಿಜಯ್ ಸೂರ್ಯ ನಾಯಕ. ಲಕ್ಷ್ಮಿ ಬಾರಮ್ಮ ಧಾರಾವಾಹಿ ನಿರ್ದೇಶಕ ಸತೀಶ್ ಕೃಷ್ಣನ್ ಹಾಗೂ ಅಶ್ವಿನಿ ನಕ್ಷತ್ರ ಧಾರಾವಾಹಿ ನಿರ್ದೇಶಕ ಆರೂರು ಜಗದೀಶ್ ಅವರು ಮದುವೆ ಮಂಟಪದಲ್ಲಿ ಹಯವದನ ಅವರಿಗೆ ಸಾಥ್ ನೀಡಿದ್ದಾರೆ. ಅಗ್ನಿಸಾಕ್ಷಿ ಜತೆಗೆ ಬಂದಿರುವ ಹೃದಯಂಗಮ ಕಥೆಯುಳ್ಳ 'ಅಕ್ಕ' ವಿವಾದ/ವಿವರ ಇಲ್ಲಿ ಓದಿ

ಮಾರತಹಳ್ಳಿ ಸಮೀಪವಿರುವ ಟೆಂಪೆಲ್ ಟ್ರೀ ತಾಣದಲ್ಲಿ ವಿಜೃಂಭಣೆಯ ಮದುವೆ ಸೆಟ್ ಹಾಕಲಾಗಿತ್ತ್ತು. ಈಟಿವಿ ಕನ್ನಡದ ಕ್ರಿಯೆಟೀವ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ಈ ಅಭೂತಪೂರ್ವ ಧಾರಾವಾಹಿ ಉಗಮಕ್ಕೆ ಸಾಕ್ಷಿಯಾಗಿದ್ದರು. ಸೂಪರ್ ಸ್ಟಾರ್ ಜೆಕೆಗಾಗಿ ಖಡಕ್ ಸಂಭಾಷಣೆ ಬರೆದಿರುವ ಯುವ ಬರಹಗಾರ ಶ್ರೀನಿಧಿ ಡಿಎಸ್ ಅವರು ಅಗ್ನಿಸಾಕ್ಷಿ ಧಾರಾವಾಹಿಯ ಮೊದಲ ಕೆಲವು ಎಪಿಸೋಡುಗಳಿಗೆ ಸಂಭಾಷಣೆ ಬರೆಯುತ್ತಿದ್ದಾರೆ.

ಮದುವೆಗೆ ಮನಸಾಕ್ಷಿ ಮುಖ್ಯನಾ? ಅಥವಾ ಅಗ್ನಿಸಾಕ್ಷಿ ಮುಖ್ಯನಾ? ನೀವು ಅರೇಂಜ್ಡ್ ಮದುವೆ ಬಗ್ಗೆ ಕೇಳಿರುತ್ತೀರಾ? ಅರೇಂಜ್ಮೆಂಟ್ ಗಾಗಿ ಆಗಿರುವ ಮದುವೆ ಬಗ್ಗೆ ಗೊತ್ತಾ? ಪ್ರತಿ ರಾತ್ರಿ 8 ಗಂಟೆಗೆ ಅಗ್ನಿಸಾಕ್ಷಿ ಧಾರಾವಾಹಿ ತಪ್ಪದೇ ನೋಡಿ...ಧಾರಾವಾಹಿ ಮದುವೆ ಸಂಭ್ರಮ ಚಿತ್ರಗಳನ್ನು ಶ್ರೀನಿಧಿ ಡಿಎಸ್ ಅವರು ನಮಗೆ ಕಳಿಸಿದ್ದಾರೆ ಇಲ್ಲಿವೆ ತಪ್ಪದೇ ನೋಡಿ...

ಧಾರಾವಾಹಿ ಪ್ರೋಮೋ ನೋಡಿ

ಈ ಟಿವಿ ಕನ್ನಡದ ಅಗ್ನಿಸಾಕ್ಷಿ ಧಾರಾವಾಹಿಯ ಪ್ರೋಮೋ ನೋಡಿ

ಅಗ್ನಿ ಸಾಕ್ಷಿ ಕಥೆ ಹಿನ್ನೆಲೆ

ಅಶ್ವಿನಿ ನಕ್ಷತ್ರದ ಸೂಪರ್ ಸ್ಟಾರ್ ಜೆಕೆ ರಾಖಿ ಸಿಸ್ಟರ್ ಸನ್ನಿಧಿ ಜತೆಗೆ ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಚಂದನ್ ಆಪ್ತ ಗೆಳೆಯ ಸಿದ್ದಾರ್ಥ್ ಮದುವೆ ನಿಶ್ಚಯವಾಗಿರುತ್ತದೆ. ಎರಡು ಜನಪ್ರಿಯ ಸೀರಿಯಲ್ ಗಳ ಕಥೆಯಿಂದ ಅಗ್ನಿಸಾಕ್ಷಿ ಕಥೆ ಹುಟ್ಟಿಕೊಂಡಿದೆ ಹಾಗೂ ಆ ಸೀರಿಯಲ್ ಗಳ ಮುಂದುವರೆದ ಭಾಗವಾಗಿರುತ್ತದೆ.

ಲಕ್ಷ್ಮಿ ಬಾರಮ್ಮದ ಲಚ್ಚಿ ಅಲಿಯಾಸ್ ಲಕ್ಷ್ಮಿ ಪ್ರೀತಿಸುತ್ತಿರುವ ಸಿದ್ದುಗೆ ಇದು ಒತ್ತಾಯದ ಮದುವೆಯಾಗಿರುತ್ತದೆ. ತಂದೆ (ಮುಖ್ಯಮಂತ್ರಿ ಚಂದ್ರು) ಅನಾರೋಗ್ಯದಿಂದ ಈಗಷ್ಟೇ ಚೇತರಿಸಿಕೊಂಡಿರುತ್ತಾರೆ. ಹೀಗಾಗಿ ಮನಸ್ಸಿಲ್ಲದ ಮದುವೆಗೆ ಸಿದ್ದು ಸಜ್ಜಾಗಿರುತ್ತಾನೆ.

ಮುಂದಿನ ಕಥೆ

ಅಗ್ನಿಸಾಕ್ಷಿ ಮೊದಲ ಎಪಿಸೋಡ್ ನಲ್ಲಿ ಬಲವಂತದ ಮದುವೆಗೆ ಒಪ್ಪಿಕೊಂಡಿರುವ ಸಿದ್ದು ಮಾನಸಿಕ ತೊಳಲಾಟ, ವರಪೂಜೆಗೆ ಬಂದರೂ ಇನ್ನೂ ಚಿನ್ನು ಹೆಸರು ಜಪಿಸುತ್ತಿರುವುದು, ಅತಿಥಿಗಳ ಆಗಮನ, ವಿವಿಧ ಧಾರ್ಮಿಕ ಶಾಸ್ತ್ರ, ಹಾಡು ಹಸೆಯ ನಡುವೆ ಡಿಂಪಲ್ ನಗು ಸೂಸುತ್ತಿರುವ ಸನ್ನಿಧಿ, ನಾನು ಇಲ್ಲಿ ಸನ್ನಿಧಿ ಅಣ್ಣನಾಗಿ ಬಂದಿದ್ದೇನೆ, ಸೂಪರ್ ಸ್ಟಾರ್ ಜೆಕೆ ಆಗಿ ಅಲ್ಲ ಎಂದು ಜೆಕೆ ಹೇಳಿದ್ದು ಎಲ್ಲವೂ ಪ್ರಸಾರವಾಗಿದೆ.ಮುಂದಿನ ಎಪಿಸೋಡಿನಲ್ಲಿ ನಟ ವಿಜಯ್ ರಾಘವೇಂದ್ರ, ನಟಿ ಸಂಜನಾ ಸೇರಿದಂತೆ ಇತರೆ ಗಣ್ಯರು ಮದುವೆ ಸಮಾರಂಭಕ್ಕೆ ಆಗಮಿಸಲಿದ್ದಾರೆ.

ಲಕ್ಷ್ಮಿ ಬಾರಮ್ಮ ಜೋಡಿ

ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಜನಪ್ರಿಯ ಜೋಡಿ ಚಂದನ್ ಹಾಗೂ ಶ್ರುತಿ

ಜೆಕೆ ಹಾಗೂ ಹೆಂಡ್ತಿ

ಅಶ್ವಿನಿ ನಕ್ಷತ್ರ ಖ್ಯಾತಿಯ ಸೂಪರ್ ಸ್ಟಾರ್ ಜೆಕೆ(ಕಾರ್ತಿಕ್) ಹಾಗೂ ಆತನ ಹೆಂಡತಿ ಅಶ್ವಿನಿ(ಮಯೂರಿ)

ಎಲ್ಲದರ ರುವಾರಿ ಗುಂಡ್ಕಲ್

ಈಟಿವಿ ಕನ್ನಡದ ಈ ಹೊಸ ಪ್ರಯೋಗದ ರುವಾತಿ ಪರಮೇಶ್ವರ್ ಗುಂಡ್ಕಲ್

ಸ್ಕ್ರಿಪ್ಟ್ ರಚನೆಯಲ್ಲಿ

ಸ್ಕ್ರಿಪ್ಟ್ ತಿದ್ದುತ್ತಿರುವ ಪರಮೇಶ್ವರ್ ಗುಂಡ್ಕಲ್ ಹಾಗೂ ಶ್ರೀನಿಧಿ ಡಿಎಸ್ ಮತ್ತಿತ್ತರ ತಾಂತ್ರಿಕ ವರ್ಗ

ನಿರ್ದೇಶಕ ದ್ವಯರು

ಅಶ್ವಿನಿ ನಕ್ಷತ್ರದ ಅರೂರ್ ಜಗದೀಶ್ ಹಾಗೂ ಅಗ್ನಿಸಾಕ್ಷಿಯ ಹಯವದನ

ಅಗ್ನಿಸಾಕ್ಷಿ ತಂಡ

ಟೆಂಪೆಲ್ ಟ್ರೀನಲ್ಲಿ ಮದುವೆ ಸಂಭ್ರಮದ ಜತೆಗೆ ಧಾರಾವಾಹಿಗೆ ದುಡಿದ ಕಲಾವಿದರು, ತಾಂತ್ರಿಕ ವರ್ಗದವರ ಗ್ರೂಪ್ ಫೋಟೋ

ಸುಂದರ ಸೆಟ್

ಟೆಂಪೆಲ್ ಟ್ರೀನಲ್ಲಿ ಮದುವೆ ಸಂಭ್ರಮದ ಸುಂದರ ಸೆಟ್. ವರನ ಕಾಶಿಯಾತ್ರೆ, ಕನ್ಯಾದಾನ, ಸಪ್ತಪದಿ, ಲಾಜಾ ಹೋಮ ಮುಂತಾದ ಮದುವೆ ಸಂಭ್ರಮದ ಕಾರ್ಯಗಳ ಚಿತ್ರಗಳನ್ನು ನಿರೀಕ್ಷಿಸಿ

English summary
Etv Kannada Serial Agnisakshi creates history in Kannada Television daily soaps arena. Agnisakshi serial is created from two popular serials Lakshmi Baramma and Ashwini Nakshatra. Actor Siddu from Lakshmi Baramma will be forced to marry Sannidhi of Ashwini Nakshatra
Please Wait while comments are loading...