For Quick Alerts
  ALLOW NOTIFICATIONS  
  For Daily Alerts

  'ರಾಜಕುಮಾರಿ'ಯಾಗಿ ಬಂದ ಆಂಜನೇಯನ ಭಕ್ತೆ ಅನುಷಾ ರೈ

  |

  ಕನ್ನಡ ಕಿರುತೆರೆಗೆ ಮತ್ತೊಂದು ಹೊಸ ಧಾರಾವಾಹಿ ಸೇರ್ಪಡೆಯಾಗಿದೆ. ಸಾಮಾಜಿಕ, ಸಾಂಸಾರಿಕ, ಹಾಸ್ಯ ಹಾಗೂ ಪೌರಾಣಿಕ ಧಾರಾವಾಹಿಗಳ ಮಧ್ಯೆ ಇನ್ನೊಂದು ವಿಭಿನ್ನ ಕಥೆ ಆರಂಭವಾಗಿದೆ. ಅದರ ಹೆಸರು 'ರಾಜಕುಮಾರಿ'

  'ರಾಜಕುಮಾರಿ' ಸೀರಿಯಲ್ ಈಗಾಗಲೇ ಆರಂಭವಾಗಿದ್ದು, ಕಸ್ತೂರಿ ಚಾನಲ್ ನಲ್ಲಿ ಪ್ರಸಾರವಾಗ್ತಿದೆ. ಡಿಸೆಂಬರ್ 12ರಿಂದ ಆರಂಭವಾಗಿರುವ 'ರಾಜಕುಮಾರಿ' ಸೋವಾರದಿಂದ ಶುಕ್ರವಾರದವರೆಗೂ ಪ್ರತಿರಾತ್ರಿ 7 ಗಂಟೆಗೆ ಮೂಡಿಬರ್ತಿದೆ.

  ಕಿರುತೆರೆಯ 'ರಾಜಕುಮಾರಿ'ಯಾಗಿ ನಟಿ ಅನುಷಾ ರೈ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಹಲವು ಸಿನಿಮಾ ಮತ್ತು ಧಾರಾವಾಹಿಯಲ್ಲಿ ನಟಿಸಿರುವ ಅನುಷಾ ಈಗ 'ರಾಜಕುಮಾರಿ' ಅವತಾರದಲ್ಲಿ ನಿಮ್ಮ ಮನೆಗೆ ಬರ್ತಿದ್ದಾರೆ.

  ಅನುಷಾ ರೈ ಅವರ ಫೋಟೋಗಳನ್ನ ನೋಡಲು ಇಲ್ಲಿ ಕ್ಲಿಕ್ ಮಾಡಿ

  ಈ ಧಾರಾವಾಹಿಯಲ್ಲಿ ಅನುಷಾ ಆಂಜನೇಯನ ಭಕ್ತೆ. ನಿಜ ಜೀವನದಲ್ಲೂ ಈಕೆ ಆಂಜನೇಯ ಭಕ್ತೆಯಾಗಿರುವುದು ವಿಶೇಷ. ಹಾಗಾಗಿ, ಧಾರಾವಾಹಿಯಲ್ಲಿ ಸದಾ ತನ್ನ ಜೊತೆಯಲ್ಲಿ ಆಂಜನೇಯನ ಪುಟ್ಟ ವಿಗ್ರಹವನಿಟ್ಟುಕೊಂಡು ಇರ್ತಾರಂತೆ.

  ಬೆಳ್ಳಿತೆರೆಯಲ್ಲಿ ಮೋಡಿ ಮಾಡುತ್ತಿರುವ ಮುದ್ದು ಚೆಲುವೆ ಅನುಷಾ.!ಬೆಳ್ಳಿತೆರೆಯಲ್ಲಿ ಮೋಡಿ ಮಾಡುತ್ತಿರುವ ಮುದ್ದು ಚೆಲುವೆ ಅನುಷಾ.!

  'ರಾಜಕುಮಾರಿ' ಪಾತ್ರಧಾರಿ ಅನುಷಾ ಬಗ್ಗೆ ಹೇಳುವುದಾರೇ, ಮಹಾಭಾವರು, ಗೋಸಿಗ್ಯಾಂಗ್, ಬಿಎಂಡಬ್ಲ್ಯೂ, ಕರ್ಷಣಂ ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದರ ಜೊತೆ ಅಣ್ಣಯ್ಯ, ನಾಗಕನ್ನಿಕೆ ಧಾರಾವಾಹಿಯಲ್ಲೂ ಅಭಿನಯಿಸಿದ್ದರು. ಹೀಗೆ, ಕಿರುತೆರೆ ಮತ್ತು ಹಿರಿತೆರೆಯಲ್ಲಿ ಮಿಂಚುತ್ತಿರುವ ಅನುಷಾ ಈಗ 'ರಾಜಕುಮಾರಿ'ಯಾಗಿ ರಂಜಿಸಲಿದ್ದಾರೆ.

  'ಪ್ರಾರ್ಥನ' ಕಥೆಗೆ ನಿರ್ಮಾಪಕ ಫಿದಾ: ಸಿನಿಮಾ ಆಗಲಿದೆ ಈ ಕಿರುಚಿತ್ರ 'ಪ್ರಾರ್ಥನ' ಕಥೆಗೆ ನಿರ್ಮಾಪಕ ಫಿದಾ: ಸಿನಿಮಾ ಆಗಲಿದೆ ಈ ಕಿರುಚಿತ್ರ

  ಅಂದ್ಹಾಗೆ, ಈ ಹಿಂದೆ ಕಸ್ತೂರಿ ವಾಹಿನಿಯಲ್ಲಿ ಬರ್ತಿದ್ದ 'ಅಣ್ಣಯ್ಯ' ಧಾರಾವಾಹಿ ನಿರ್ಮಿಸಿದ್ದ ಅದೇ ತಂಡ ಈಗ 'ರಾಜಕುಮಾರಿ' ಧಾರಾವಾಹಿಯನ್ನ ತಯಾರಿಸಿದ್ದು, ಶಶಿಧರ ಎಸ್ ಕುಂದಾಪುರ ಆಕ್ಷನ್ ಕಟ್ ಹೇಳ್ತಿದ್ದಾರೆ. ಇದಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆಯನ್ನ ಚಂದ್ರು ಎಸ್ ಎಲ್ ಬರೆದಿದ್ದಾರೆ.

  English summary
  Mahanubhavuru, bmw, goosie gang actress anusha rai starrer new serial rajakumari started in kasturi channel.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X