twitter
    For Quick Alerts
    ALLOW NOTIFICATIONS  
    For Daily Alerts

    'ಮತ್ತೆ ಮಾಯಾಮೃಗ' ಅತೀ ಶೀಘ್ರದಲ್ಲೇ ಪ್ರಸಾರ!

    By Priya Dore
    |

    ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಹಾಗೂ ಪ್ರಯೋಗಾತ್ಮಕ ಧಾರಾವಾಹಿ 'ಮಾಯಾಮೃಗ'. ಈ ಧಾರಾವಾಹಿ ಈಗಾಗಲೇ ಹಲವು ಬಾರಿ ಮರು ಪ್ರಸಾರ ಕಂಡಿದೆ. ಕೋವಿಡ್ ಕಾರಣದಿಂದ ಈ ಧಾರಾವಾಹಿಯನ್ನು ಯೂಟ್ಯೂಬ್‌ನಲ್ಲೂ ಕೂಡ ಅಪ್‌ ಲೋಡ್‌ ಮಾಡಲಾಗಿದೆ.

    ದೈನಂದಿನ ಧಾರಾವಾಹಿಯ ಕಲ್ಪನೆಯೇ ಇಲ್ಲದ ಕಾಲದಲ್ಲಿ ಪ್ರಾರಂಭವಾದ ಮಾಯಾಮೃಗ ಎಷ್ಟರ ಮಟ್ಟಿಗೆ ಖ್ಯಾತಿಗಳಿಸಿತ್ತು ಎಂದರೆ ಶೀರ್ಷಿಕೆ ಗೀತೆ ಕೇಳುತ್ತಿದ್ದಂತೆ ಬೆಂಗಳೂರಿನ ಬೀದಿಗಳು ಖಾಲಿಯಾಗಿರುತ್ತಿತ್ತು. ಅಲ್ಲದೇ ಈಗಲೂ ಕೂಡ ಹಲವರ ಮೊಬೈಲ್‌ ರಿಂಗ್‌ ಟೋನ್‌ ಹಾಗೂ ಕಾಲರ್ ಟೋನ್‌ಗಳು ಮಾಯಾಮೃಗ ಶೀರ್ಷಿಕೆ ಹಾಡೇ ಹಾಕಿಕೊಂಡಿದ್ದಾರೆ.

    ಮಗು ಬಗ್ಗೆ ಹೇಳಿದ ಬಳಿಕ ಅನು ಮೇಲೆ ಮೂಡಿತು ಅನುಮಾನ!ಮಗು ಬಗ್ಗೆ ಹೇಳಿದ ಬಳಿಕ ಅನು ಮೇಲೆ ಮೂಡಿತು ಅನುಮಾನ!

    ಮಾಯಾಮೃಗ' ಧಾರಾವಾಹಿ 1998 ರಲ್ಲಿ ಚಂದನ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಯಶಸ್ವಿ ನಿರ್ದೇಶಕರ ಸಂಗಮದಲ್ಲಿ ಈ ಧಾರಾವಾಹಿ ಮೂಡಿ ಬಂದಿತ್ತು. ಟಿ.ಎನ್.ಸೀತಾರಾಮ್, ಪಿ ಶೇಷಾದ್ರಿ ಮತ್ತು ನಾಗೇಂದ್ರ ಶಾ ಈ ಧಾರಾವಾಹಿಯನ್ನು ನಿರ್ದೇಶನ ಮಾಡಿದ್ದರು.

    ಪುಟ್ಟಕ್ಕನ ಮಕ್ಕಳು: ಮದುವೆ ನಿಲ್ಲಿಸಲು ತಂತ್ರ ಹೆಣೆದ ಕಂಠಿ!ಪುಟ್ಟಕ್ಕನ ಮಕ್ಕಳು: ಮದುವೆ ನಿಲ್ಲಿಸಲು ತಂತ್ರ ಹೆಣೆದ ಕಂಠಿ!

    ಪ್ರೇಕ್ಷಕರನ್ನು ಹಿಡಿದಿಟ್ಟಿದ್ದ ಕಥೆ!

    ಪ್ರೇಕ್ಷಕರನ್ನು ಹಿಡಿದಿಟ್ಟಿದ್ದ ಕಥೆ!

    ಮಾಯಾಮೃಗ.. ಮಾಯಾಮೃಗ.. ಮಾಯಾಮೃಗವೆಲ್ಲಿ' ಎನ್ನುತ್ತಲೇ ಪ್ರಸಾರವಾಗುತ್ತಿದ್ದ 'ಮಾಯಾಮೃಗ' ಧಾರಾವಾಹಿಯನ್ನು ಇಷ್ಟಪಡದ ಜನರಿಲ್ಲ. 'ಮಾಯಾಮೃಗ' ಧಾರಾವಾಹಿ ಕನ್ನಡದ ಶ್ರೇಷ್ಠ ಧಾರಾವಾಹಿಗಳಲ್ಲಿ ಒಂದು. ಆ ಕಾಲದಲ್ಲೇ ಮನೆ ಮಂದಿಯನ್ನೆಲ್ಲ ಹಿಡಿದಿಟ್ಟಿತ್ತು. 2014ರಲ್ಲಿ 'ಮಾಯಾಮೃಗ' ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಮರುಪ್ರಸಾರವಾಗಿತ್ತು. ಆಗಲೂ 'ಮಾಯಾಮೃಗ' ಧಾರಾವಾಹಿಯನ್ನು ನೋಡಿದ್ದವರು ಮತ್ತೆ ನೋಡಿ ಸಂತಸ ಪಟ್ಟಿದ್ದರು. ಈಗಲೂ 'ಮಾಯಾಮೃಗ' ಧಾರಾವಾಹಿಯನ್ನು ಹಲವರು ಇಷ್ಟಪಡುತ್ತಾರೆ. 'ಮಾಯಾಮೃಗ' ಕ್ಲಾಸಿಕ್ ಧಾರಾವಾಹಿ ಎಂದರೆ ತಪ್ಪಾಗಲಾರದು.

    ಸಂಬಂಧಗಳ ಬೆಲೆ ತಿಳಿಸಿದ ಕಥೆ!

    ಸಂಬಂಧಗಳ ಬೆಲೆ ತಿಳಿಸಿದ ಕಥೆ!

    ನಾಲ್ಕು ವಿಭಿನ್ನ ಮನಸ್ಥಿತಿಯ ಕುಟುಂಬಗಳ ನಡುವೆ ಸಾಗುತ್ತದೆ 'ಮಾಯಾಮೃಗ'ದ ಕಥಾಹಂದರ. ಸಂಪ್ರದಾಯಸ್ಥ ಕುಟುಂಬದ ಮನೆಗಳಲ್ಲಿ ಸಾಂಸ್ಕ್ರತಿಕ ಪಲ್ಲಟಗಳನ್ನ ಹೇಗೆ ಸ್ವೀಕರಿಸ್ತಾರೆ ಮತ್ತು ಹಾಗೆ ಸ್ವೀಕರಿಸುವ ಸಮಯದಲ್ಲಿ ಮಾನವ ಸಂಬಂಧಗಳ ನಡುವೆ ನಡೆಯುವ ಘರ್ಷಣೆಯೇ ಮಯಾಮೃಗ ಧಾರಾವಾಹಿಯ ಮೂಲ ಕಥಾವಸ್ತು. ಇನ್ನು ಧಾರಾವಾಹಿಯಲ್ಲಿನ ಭಾಷೆಯ ಬಳಕೆ ಆಗಿರಬಹುದು, ಸಣ್ಣ ಘಟನೆಗಳೂ ಕೂಡ ಎಲ್ಲಾ ಕಾಲಕ್ಕೂ ಹೋಲಿಸಿ ಕೊಳ್ಳುವಂತಹದ್ದು. ವೈಶಾಲಿ ಕಾಸರವಳ್ಳಿ, ಮುಖ್ಯಮಂತ್ರಿ ಚಂದ್ರು, ಮಾಳವಿಕಾ, ಅವಿನಾಶ್, ದತ್ತಣ್ಣ, ಸೇತುರಾಮ್, ಮಂಜು ಭಾಷಿಣಿ, ಲಕ್ಷ್ಮೀ ಚಂದ್ರಶೇಖರ್ ಸೇರಿದಂತೆ ಅನೇಕ ಹಿರಿಯ ಕಲಾವಿದರು ಈ ಧಾರಾವಾಹಿಯಲ್ಲಿ ಅಭಿನಯಿಸಿದ್ದರು.

    ಸಂವಾದ ಕಾರ್ಯಕ್ರಮ!

    ಸಂವಾದ ಕಾರ್ಯಕ್ರಮ!

    ಟಿ.ಎನ್. ಸೀತಾರಾಮ್ ನಿರ್ದೇಶನದ ಈ ಸೀರಿಯಲ್‌ಗಳಿಗೂ ಈಗಲೂ ಬೇಡಿಕೆ ಇದೆ. ಪ್ರೇಕ್ಷಕರಿಗಾಗಿ ವೆಬ್ ಸಿರೀಸ್ ರೂಪದಲ್ಲಿ ಭೂಮಿಕಾ ಟಾಕೀಸ್ ಯುಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಲಾಗುತ್ತಿದೆ. ಈಗಲೂ ಪ್ರೇಕ್ಷಕರು ನಿತ್ಯ 'ಮಾಯಾಮೃಗ' ಧಾರಾವಾಹಿಯನ್ನು ಯುಟ್ಯೂಬ್‌ನಲ್ಲಿ ಮೊದಲಿನಷ್ಟೇ ಕುತೂಹಲದಿಂದ ನೋಡುತ್ತಾರೆ. ಇಂದಿಗೂ ಈ ಧಾರಾವಾಹಿಯನ್ನು ನೋಡುವ ಪ್ರೇಕ್ಷಕರ ಸಂಖ್ಯೆ ಕೊಂಚವೂ ಕಡಿಮೆಯಾಗಿಲ್ಲ. ಪ್ರೇಕ್ಷಕರು ಧಾರಾವಾಹಿ ಬಗ್ಗೆ ತಮಗಿದ್ದ ಕುತೂಹಲ, ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲಿ ಎಂಬ ಸಲುವಾಗಿ ಟಿ.ಎನ್ ಸೀತಾರಾಂ ಅವರು ಸಂವಾದ ಕಾರ್ಯಕ್ರಮವನ್ನು ಮೊದಲ ಬಾರಿಗೆ ಪ್ರಾರಂಭಿಸಿದರು.

    ಮಾಯಾಮೃಗ ಶೀಘ್ರದಲ್ಲೇ ಪ್ರಸಾರ!

    ಮಾಯಾಮೃಗ ಶೀಘ್ರದಲ್ಲೇ ಪ್ರಸಾರ!

    ಟಿಎನ್ ಸೀತಾರಾಂ ಮತ್ತೆ 'ಮಾಯಾಮೃಗ' ಧಾರಾವಾಹಿಯನ್ನು ಪ್ರಸಾರ ಮಾಡಲು ಮುಂದಾಗಿದ್ದಾರೆ. ಅರರೇ.. ಅದು ಹೇಗೆ ಸಾಧ್ಯ ಈಗಾಗಲೇ ಯೂಟ್ಯೂಬ್ ನಲ್ಲಿ ಇದೆಯಲ್ಲಾ. ನಾವು ಯಾವಾಗ ಬೇಕಿದ್ದರೂ ನೋಡಬಹುದಲ್ವಾ ಅಂತ ಯೋಚಿಸುತ್ತಿದ್ದೀರಾ..? ಆದರೆ ಈಗ ಮತ್ತೆ ಮಾಯಾಮೃಗ ಎಂದು ಹೊಸ ಧಾರಾವಾಹಿಯನ್ನು ಶುರು ಮಾಡಲು ಟಿಎನ್ ಸೀತಾರಾಂ ತೀರ್ಮಾನಿಸಿದ್ದಾರೆ.

    English summary
    Kannada serial Mathe Mayamruga New Serial Start Soon, Know More about the episode.
    Wednesday, August 31, 2022, 17:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X