Don't Miss!
- Automobiles
ದ್ವಿಚಕ್ರ ವಾಹನ ಖರೀದಿಸುತ್ತಿದ್ದೀರಾ? ಇದೇ ತಿಂಗಳ ಪ್ರಮುಖ ಬಿಡುಗಡೆಗಳನ್ನು ಒಮ್ಮೆ ಪರಿಶೀಲಿಸಿ
- News
Budget 2023; ಮೋದಿ ಸರ್ಕಾರದಿಂದ ಸಾವಯವ ಕೃಷಿಗೆ ಒತ್ತು: ಸಂಸದ ಈರಣ್ಣ ಕಡಾಡಿ
- Sports
IND vs NZ 3rd T20: ಸರಣಿ ನಿರ್ಣಾಯಕ 3ನೇ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಮತ್ತೆ ಮಯಾಮೃಗ'ದ ಮಹತಿ ಯಕ್ಷಗಾನಲ್ಲೂ ಎಕ್ಸ್‌ಪರ್ಟ್: ನಟಿ ನಿಖಿತಾ ಹಿನ್ನೆಯೇನು?
ಸಿರಿಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಮತ್ತೆ ಮಾಯಾಮೃಗ'ದಲ್ಲಿ ಬೃಂದಾ ಮಗಳು ಡಾಕ್ಟರ್ ಮಹತಿಯಾಗಿ ನಟಿಸುತ್ತಿರುವ ನಿಖಿತಾ ದೊರ್ತೋಡಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಪ್ರತಿಭೆ. ಎಂಸಿಎ ಪದವಿ ಪಡೆದಿರುವ ನಿಖಿತಾ ನಟನೆಯಲ್ಲಿ ಸದ್ಯ ಬದುಕು ರೂಪಿಸಿಕೊಂಡಿದ್ದಾರೆ.
ಸಣ್ಣ ವಯಸ್ಸಿನಿಂದಲೂ ನಟನೆಯತ್ತ ವಿಶೇಷ ಒಲವು ಹೊಂದಿಕೊಂಡಿದ್ದ ನಿಖಿತ ಪದವಿಯ ನಂತರ ನಟನಾ ಲೋಕದಲ್ಲಿ ಮುಂದುವರಿಯುವ ನಿರ್ಧಾರ ಮಾಡಿದರು. ರಂಗಭೂಮಿಯ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ನಿಖಿತಾ 'ಸಮಷ್ಟಿ' ನಾಟಕ ತಂಡ ಸೇರಿ ನಟನೆಯ ಆಗು ಹೋಗುಗಳನ್ನು ಹಂತ ಹಂತವಾಗಿ ತಿಳಿದುಕೊಂಡರು.
ಆರ್ಯನ
ಬಗ್ಗೆ
ಅನುಗೆ
ಸಿಕ್ತು
ಮಹತ್ವದ
ಸುಳಿವು:
ಮೀರಾ
ಹೇಳಿದ್ದು
ಸತ್ಯವಾಗುತ್ತಾ..?
ಬರೋಬ್ಬರಿ ಮೂರು ವರ್ಷಗಳ ಕಾಲ ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ನಿಖಿತಾ ನಂತರ ವಾಲಿದ್ದು ಕಿರುತೆರೆಯತ್ತ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸತ್ಯಂ ಶಿವಂ ಸುಂದರಂ' ಧಾರಾವಾಹಿಯಲ್ಲಿ ಸುಂದರನ ಪ್ರೇಯಸಿ ಟೀನಾ ಆಗಿ ನಟಿಸುವ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ನಿಖಿತಾ ಇಂಗ್ಲಿಷ್ ಟೀಚರ್ ಆಗಿ ನಂತರ ನಟಿಸಿದ್ದಾರೆ.

'ಗಿಣಿರಾಮ'ದ ಇಂಗ್ಲಿಷ್ ಟೀಚರ್ ಈಗ ಮಹತಿ
ಕಲರ್ಸ್
ಕನ್ನಡ
ವಾಹಿನಿಯಲ್ಲಿ
ಪ್ರಸಾರವಾಗುತ್ತಿರುವ
'ಗಿಣಿರಾಮ'
ಧಾರಾವಾಹಿಯಲ್ಲಿ
ಇಂಗ್ಲಿಷ್
ಟೀಚರ್
ಮಾಳವಿಕಾ
ಆಗಿ
ಅಭಿನಯಿಸಿ
ಸೈ
ಎನಿಸಿಕೊಂಡಿದ್ದ
ನಿಖಿತಾ
ಇದೀಗ
'ಮತ್ತೆ
ಮಯಾಮೃಗ'ದ
ಮಹತಿಯ
ಪಾತ್ರಕ್ಕೆ
ಜೀವ
ತುಂಬುವುದರಲ್ಲಿ
ಬ್ಯುಸಿಯಾಗಿದ್ದಾರೆ.
Puttakkana
Makkalu
Serial:
ಗೋಪಾಲನ
ಮನೆಗೆ
ಹೊರಟ
ಪುಟ್ಟಕ್ಕ

'ಮತ್ತೆ ಮಾಯಾಮೃಗದಲ್ಲಿ ನಟಿಸುತ್ತಿರುವುದು ಹೆಮ್ಮೆ'
"ಮಹತಿಯ ಪಾತ್ರದಲ್ಲಿ ನಟಿಸುತ್ತಿರುವುದಕ್ಕೆ ಖುಷಿ ತಂದಿದೆ. ಇಂತಹ ಸುವರ್ಣಾವಕಾಶ ನೀಡಿದ ಸಿರಿಕನ್ನಡ ವಾಹಿನಿಗೆ, ಟಿ.ಎನ್ ಸೀತಾರಾಮ್, ಪಿ.ಶೇಷಾದ್ರಿ ಹಾಗೂ ನಾಗೇಂದ್ರ ಶಾ ಇವರಿಗೆ ಧನ್ಯವಾದಗಳು. 24 ವರ್ಷದ ಹಿಂದೆ ಕಿರುತೆರೆ ಜಗತ್ತಿನಲ್ಲಿ ಇತಿಹಾಸವನ್ನೇ ಸೃಷ್ಟಿ ಮಾಡಿದ್ದ 'ಮಾಯಾಮೃಗ'ದ ಮುಂದುವರಿದ ಭಾಗ 'ಮತ್ತೆ ಮಾಯಾಮೃಗ'ದಲ್ಲಿ ನಟಿಸುತ್ತಿರುವುದು ನನಗೆ ಹೆಮ್ಮೆ ತಂದ ವಿಚಾರ" ಎನ್ನುತ್ತಾರೆ ನಿಖಿತಾ ದೊರ್ತೋಡಿ.

ಸಿನಿಮಾ ನಿಖಿತಾ ಫುಲ್ ಬ್ಯುಸಿ
ನಿಖಿತ ಅವರ ನಟನಾ ಪ್ರತಿಭೆ ಕೇವಲ ಕಿರುತೆರೆಗೆ ಮಾತ್ರ ಸೀಮಿತವಲ್ಲ. ಬದಲಿಗೆ ಹಿರಿತೆರೆಯಲ್ಲಿಯೂ ಕೂಡಾ ಈಕೆ ನಟನಾ ಕಂಪನ್ನು ಪಸರಿಸಿದ್ದಾರೆ. ಪವನ್ ಭಟ್ ನಿರ್ದೇಶನದ 'ಕಟ್ಟಿಂಗ್ ಶಾಪ್' ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ನಟಿಸಿರುವ ಈಕೆ 'ಸೈಕಿಕ್' ಎನ್ನುವ ಸೈಕಲಾಜಿಕಲ್ ಥ್ರಿಲ್ಲರ್ ನಲ್ಲಿಯೂ ಅಭಿನಯಿಸಿದ್ದಾರೆ. ಇನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅವರ '19.20.21' ಸಿನಿಮಾದಲ್ಲಿ ಒಂದು ಮುಖ್ಯ ಪಾತ್ರದಲ್ಲಿ ನಿಖಿತಾ ಕಾಣಿಸಿಕೊಂಡಿದ್ದಾರೆ.

ನಿಖಿತಾಗೆ ಯಕ್ಷಗಾನವೂ ಗೊತ್ತು
ಇನ್ನು ಗಂಡು ಮೆಟ್ಟಿದ ಕಲೆ ಎಂದೇ ಗುರುತಿಸುವ ಯಕ್ಷಗಾನವನ್ನು ಕಲಿತಿರುವ ಈಕೆ ಹಲವು ವೇದಿಕೆಗಳಲ್ಲಿ ಗೆಜ್ಜೆ ಕಟ್ಟಿ ಧೀಂಕಿರ ಧಿರಿಕಿಟ ಎಂದು ಹೆಜ್ಜೆ ಹಾಕಿದಾಕೆ. ಇದರ ಜೊತೆಗೆ ಮಾಡೆಲಿಂಗ್ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದ ನಿಖಿತಾ ಝರ್ಟಾನ್ ಮೇಕಪ್ ಸ್ಟುಡಿಯೋ ,ಎಂ.ಜೆ ಗಾಡ್ಜಿಯಸ್ ಮೇಕಪ್ ಸ್ಟುಡಿಯೋ ಮಾಡೆಲಿಂಗ್ ಶೋಗಳಲ್ಲಿ ಕ್ಯಾಟ್ ವಾಕ್ ಮಾಡಿ ಮೋಡಿ ಮಾಡಿದ ಬೆಡಗಿ.