»   » ಈ ಸೀರೆಯ ನಿಖರವಾದ ಬೆಲೆ ಎಷ್ಟು.? ಊಹಿಸಿ ಹೇಳಿ...

ಈ ಸೀರೆಯ ನಿಖರವಾದ ಬೆಲೆ ಎಷ್ಟು.? ಊಹಿಸಿ ಹೇಳಿ...

Posted By:
Subscribe to Filmibeat Kannada

''ಈ ಸೀರೆಯ ನಿಖರವಾದ ಬೆಲೆ ಎಷ್ಟು.?'' ಎಂಬ ಡೈಲಾಗ್ ಕೇಳಿದ ತಕ್ಷಣ ನಿಮಗೆ ಪ್ರಣಯ ರಾಜ ಶ್ರೀನಾಥ್ ನೆನಪಾಗಬಹುದು. ಉದಯ ವಾಹಿನಿಯ 'ಆದರ್ಶ ದಂಪತಿಗಳು' ಕಾರ್ಯಕ್ರಮದಲ್ಲಿ ಭುಜದ ಮೇಲೆ ಸೀರೆಯನ್ನಿರಿಸಿಕೊಂಡು 'ಈ ಸೀರೆಯ ನಿಖರವಾದ ಬೆಲೆ ಎಷ್ಟು.?'' ಅಂತ ದಂಪತಿಗಳಿಗೆ ಶ್ರೀನಾಥ್ ಕೇಳುತ್ತಿದ್ದರು. ಸರಿಯಾದ ಬೆಲೆ ಹೇಳಿದವರಿಗೆ ಆ ಸೀರೆಯೇ ಬಹುಮಾನ.!

ಅಂದ್ಹಾಗೆ, ಸೀರೆ ಬೆಲೆ ಮತ್ತು ಶ್ರೀನಾಥ್ ರವರ ಡೈಲಾಗ್ ನ ನಾವು ಇಂದು ನೆನಪಿಸಿಕೊಳ್ಳುವುದಕ್ಕೆ ಕಾರಣ ಸುವರ್ಣ ವಾಹಿನಿಯ 'ನಿಹಾರಿಕಾ' ಧಾರಾವಾಹಿ.

'ನಿಹಾರಿಕಾ' ನಿಶ್ಚಿತಾರ್ಥ ಸಮಾರಂಭ

ಯಾವ ಸಿನಿಮಾಗೂ ಕಮ್ಮಿ ಇಲ್ಲ ಎನ್ನುವ ಹಾಗೆ, ಸುವರ್ಣ ವಾಹಿನಿಯಲ್ಲಿ 'ನಿಹಾರಿಕಾ' ಧಾರಾವಾಹಿ ಪ್ರಸಾರ ಆಗುತ್ತಿದೆ. ನಿಹಾರಿಕಾ ಮತ್ತು ವಿರಾಟ್ ಲವ್ ಸ್ಟೋರಿಯನ್ನ ಇದುವರೆಗೂ ನೋಡಿರುವ ನೀವು ಬರುವ ವಾರದಲ್ಲಿ ನಿಹಾರಿಕಾ ನಿಶ್ಚಿತಾರ್ಥವನ್ನ ಕಣ್ತುಂಬಿಕೊಳ್ಳಲಿದ್ದೀರಿ...

ಅದ್ಧೂರಿಯಾಗಿ ನಡೆಯಲಿರುವ ನಿಶ್ಚಿತಾರ್ಥ

ವಿರಾಟ್ ಹಾಗೂ ನಿಹಾರಿಕಾ ನಿಶ್ಚಿತಾರ್ಥದ ಚಿತ್ರೀಕರಣ ಒಂದು ರೆಸಾರ್ಟ್ ನಲ್ಲಿ ಅದ್ಧೂರಿಯಾಗಿ ನಡೆದಿದೆ. ಆ ನಿಶ್ಚಿತಾರ್ಥ ಸಮಾರಂಭದಲ್ಲಿ ಪ್ರಮುಖ ಆಕರ್ಷಣೆ ಆಗಿದ್ದು 'ನಿಹಾರಿಕಾ ಸೀರೆ'.

'ನಿಹಾರಿಕಾ' ಉಟ್ಟಿರುವ ಸೀರೆಯ ನಿಖರವಾದ ಬೆಲೆ ಎಷ್ಟು.?

ಒಮ್ಮೆ 'ನಿಹಾರಿಕಾ' ಉಟ್ಟಿರುವ ಸೀರೆಯನ್ನ ನೋಡಿ ನಿಖರವಾದ ಬೆಲೆ ಊಹಿಸಿ ಹೇಳಿ ನೋಡೋಣ... (ವಿಶೇಷ ಸೂಚನೆ: ಬೆಲೆ ಹೇಳಿದ ತಕ್ಷಣ ಸೀರೆಯನ್ನು ಬಹುಮಾನವಾಗಿ ಪಡೆಯುವ ನಿರೀಕ್ಷೆ ಮಾಡಬೇಡಿ)

ಒಂದು ಲಕ್ಷ ರೂಪಾಯಿ ಮೌಲ್ಯದ ಸೀರೆ

ನಿಹಾರಿಕಾ ಉಟ್ಟಿರುವ ಸೀರೆ ಬೆಲೆ ಬರೋಬ್ಬರಿ ಒಂದು ಲಕ್ಷ ರೂಪಾಯಿ. 18 ಕ್ಯಾರೆಟ್ ಅಪ್ಪಟ ಬಂಗಾರದ ಜರಿಗಳನ್ನು ಬಳಸಿ ನೇಯಲಾಗಿರುವ ಸೀರೆ ಇದು. ಸುಮಾರು ಎರಡು ಕೆ.ಜಿ ಭಾರವಿರುವ ಈ ರೇಶ್ಮೆ ಸೀರೆಯನ್ನುಟ್ಟು ತೇಜಸ್ವಿನಿ ಮಿಂಚಿದ್ದಾರೆ.

ನಿಹಾರಿಕಾ ಸೀರೆ ಕಥೆ

ಮರೂನ್, ಗೋಲ್ಡ್ ಮತ್ತು ಗ್ರೀನ್ ಬಣ್ಣ ಮಿಶ್ರಿತ ಇರುವ ಈ ಸೀರೆಗೆ ಜೈಪುರದ ಪ್ರಖ್ಯಾತ 'ಮೀನಕ್ಕಾರಿ' ಕಲೆಯೇ ಪ್ರೇರಣೆ. 18 ಕ್ಯಾರೆಟ್ ಬಂಗಾರದ ನೂಲು ಮತ್ತು ಅಪ್ಪಟ ರೇಶ್ಮೆ ನೂಲುಗಳನ್ನು ಬಳಸಿ 'ಸಾಫ್ಟ್ ಸಿಲ್ಕ್' ಮಾದರಿಯಲ್ಲಿ ಕೈಯಲ್ಲಿ ಈ ಸೀರೆಯನ್ನ ನೇಯಲಾಗಿದೆ. ಸೀರೆ ಹಗುರವಾಗಿ ಇರಬೇಕು ಎಂಬ ಕಾರಣಕ್ಕೆ ಅತ್ಯಂತ ತೆಳು ರೇಶ್ಮೆ ದಾರಗಳನ್ನು ಬಳಸಲಾಗಿದೆ. ಇದಕ್ಕೆ ಹಿಡಿದ ಸಮಯ ಒಂದು ತಿಂಗಳು.!

'ನಿಹಾರಿಕಾ' ಪ್ರಸಾರ ಯಾವಾಗ.?

'ನಿಹಾರಿಕಾ' ಧಾರಾವಾಹಿ ಸೋಮವಾರದಿಂದ ಶನಿವಾರ ರಾತ್ರಿ 10 ಗಂಟೆಗೆ ನಿಮ್ಮ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

English summary
'Niharika' Engagement saree costs Rs.1 Lakh.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada