Don't Miss!
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- News
Budget 2023: ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆ ಖರೀದಿಸುವವರಿಗೆ ಶುಭ ಸುದ್ದಿ
- Sports
Union Budget 2023: ಕಳೆದ ಬಾರಿಗಿಂತ 700 ಕೋಟಿ ರೂ. ಅಧಿಕ ಪಡೆದ ಕ್ರೀಡಾ ಸಚಿವಾಲಯ
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Automobiles
ಸೇನೆಗೆ ಮಾರುತಿ ಜಿಪ್ಸಿ ಬದಲಿಗೆ ಅತ್ಯಾಧುನಿಕ ಹೊಸ ಜಿಮ್ನಿ ಸೇರ್ಪಡೆ ಹೇಗಿರಬಹುದು?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸೌಂದರ್ಯಳಂಥ ಪಾತ್ರದತ್ತ ರಾಧಿಕಾ ಶ್ರವಂತ್ ಚಿತ್ತ
ರಾಧಿಕಾ ಶ್ರವಂತ್.. ಕಿರುತೆರೆ ವೀಕ್ಷಕರಿಗೆ ಪರಿಚಿತ ಹೆಸರಲ್ಲದಿರಬಹುದು, ಆದರೆ ತೀರಾ ಪರಿಚಿತ ಮುಖವಂತೂ ಹೌದು. ಯಾಕೆಂದರೆ ಕಿರುತೆರೆ ಜಗತ್ತಿನಲ್ಲಿ ಆಕೆ ಸೌಂದರ್ಯ ಎಂದೇ ಫೇಮಸ್ಸು! ಹೌದು, ಕನ್ನಡ ಕಿರುತೆರೆ ಇತಿಹಾಸದಲ್ಲಿ ದಾಖಲೆ ನಿರ್ಮಾಣ ಮಾಡಿದ್ದ ಜನಪ್ರಿಯ ಧಾರಾವಾಹಿ 'ಮಂಗಳ ಗೌರಿ ಮದುವೆ' ಧಾರಾವಾಹಿಯಲ್ಲಿ ಖಳನಾಯಕಿ ಸೌಂದರ್ಯ ಆಗಿ ಮಿಂಚಿದ್ದರು.
ಗರ್ಭಿಣಿಯಾಗಿದ್ದ ಕಾರಣ ಮಂಗಳ ಗೌರಿ ಮದುವೆ ಧಾರಾವಾಹಿಯ ಸೌಂದರ್ಯ ಪಾತ್ರಕ್ಕೆ ವಿದಾಯ ಹೇಳಿದ್ದ ರಾಧಿಕಾ ಸದ್ಯ ಮುದ್ದು ಮಗಳು ಜಾಹ್ನವಿಯ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಮಗಳ ಸಲುವಾಗಿ ಬಣ್ಣದ ಜಗತ್ತಿನಿಂದ ಬ್ರೇಕ್ ತೆಗೆದುಕೊಂಡಿರುವ ರಾಧಿಕಾ ಅವರು ನಟನೆಯಿಂದ ದೂರವಾಗಿ ಮೂರು ವರ್ಷಗಳಾಯಿತು. ನಟನೆಯತ್ತ ಈಗಲೂ ವಿಶೇಷ ಒಲವು ಇರವುದರಿಂದ ಮತ್ತೆ ನಟಿಸಲು ಕಾತರದಿಂದ ಕಾಯುತ್ತಿದ್ದಾರೆ ರಾಧಿಕಾ.
ನಟಿ
ಚಂದ್ರಕಲಾ
ಮೋಹನ್
ಅವರ
ಹೊಸ
ಧಾರಾವಾಹಿ:
ಮತ್ತೆ
ಪೌರಾಣಿಕ
ಪಾತ್ರದಲ್ಲಿ
ಅಜ್ಜಮ್ಮ!
"ನಾನು ಗರ್ಭಿಣಿಯಾಗಿದ್ದ ಕಾರಣ ಸೌಂದರ್ಯ ಪಾತ್ರದಿಂದ ಹೊರಬಂದೆ. ಮಗಳು ಜಾಹ್ನವಿಯ ಕಾರಣದಿಂದ ನಾನು ನಟನೆಯಿಂದ ಬ್ರೇಕ್ ಪಡೆದುಕೊಂಡೆ. ಜೊತೆಗೆ ಅದು ಕೋವಿಡ್ ಸಮಯವಾದುದರಿಂದಲೂ ಮನೆಯಿಂದ ಹೊರಗೆ ಹೋಗುವುದು ಕೂಡಾ ಕಷ್ಟವಾಗಿತ್ತು. ಈಗ ಮಗಳಿಗೆ ಎರಡು ವರ್ಷ. ಸ್ವಲ್ಪ ದೊಡ್ಡವಳಾಗಿದ್ದಾಳೆ. ಜೊತೆಗೆ ನನಗೂ ಬಣ್ಣ ಹಚ್ಚುವ ಮನಸ್ಸಾಗಿದೆ" ಎಂದು ಹೇಳುತ್ತಾರೆ ರಾಧಿಕಾ ಮಿಂಚು.

ಹಲವು ಧಾರಾವಾಹಿಗಳಲ್ಲಿ ನಟನೆ
ಕಸ್ತೂರಿ
ವಾಹಿನಿಯಲ್ಲಿ
ಪ್ರಸಾರವಾಗುತ್ತಿದ್ದ
'ಎರಡು
ಕನಸು'
ಧಾರಾವಾಹಿಯ
ಮೂಲಕ
ಕಿರುತೆರೆಗೆ
ಕಾಲಿಟ್ಟ
ರಾಧಿಕಾ
ಮಿಂಚು
ಮತ್ತೆ
ಹಿಂತಿರುಗಿ
ನೋಡಿದ್ದೇ
ಇಲ್ಲ!
ಮುಂದೆ
'ಅಳಗುಳಿಮನೆ',
'ರಾಧಾ
ಕಲ್ಯಾಣ',
'ಖುಷಿ
ಕಣಜ',
'ಕಾದಂಬರಿ',
'ಮುಂಗಾರುಮಳೆ',
'ಪುಟ್ಮಲ್ಲಿ',
'ಆತ್ಮಬಂಧನ',
'ಅರಮನೆ
ಗಿಳಿ'
ಧಾರಾವಾಹಿಗಳಲ್ಲಿ
ನಟಿಸಿರುವ
ರಾಧಿಕಾ
ಅವರಿಗೆ
ಜನಪ್ರಿಯತೆ
ತಂದು
ಕೊಟ್ಟಿದ್ದು
ಸೌಂದರ್ಯ
ಪಾತ್ರ.

ಜನಪ್ರಿಯತೆ ನೀಡಿದ್ದು ಸೌಂದರ್ಯ ಪಾತ್ರ
'ಮಂಗಳ ಗೌರಿ' ಮದುವೆ ಧಾರಾವಾಹಿಯಲ್ಲಿ ಸೌಂದರ್ಯ ಆಗಿ ಅಭಿನಯಿಸಿದ್ದ ರಾಧಿಕಾಗೆ ಆ ಪಾತ್ರ ನೀಡಿದ ಜನಪ್ರಿಯತೆ ಅಷ್ಟಿಷ್ಟಲ್ಲ. ಮುಂದೆ ಕಾರಣಾಂತರಗಳಿಂದ ರಾಧಿಕಾ ಅವರು ಪಾತ್ರಕ್ಕೆ ವಿದಾಯ ಹೇಳಿದ್ದರೂ ಜನ ಇಂದಿಗೂ ಆಕೆಯನ್ನು ಗುರುತಿಸುವುದು ಸೌಂದರ್ಯ ಆಗಿ. ಅಷ್ಟರ ಮಟ್ಟಿಗೆ ಆ ಪಾತ್ರ ವೀಕ್ಷಕರ ಮನ ಸೆಳೆದುಬಿಟ್ಟಿತ್ತು. ಇದೀಗ ಮತ್ತೆ ನಟನೆಗೆ ಮರಳುವ ಬಯಕೆ ಹೊಂದಿದ್ದಾರೆ ರಾಧಿಕಾ ಶ್ರವಂತ್.

ಸೌಂದರ್ಯಳಂಥ ಪಾತ್ರ ಬೇಕು
ರಾಧಿಕಾ ಶ್ರವಂತ್ ಅವರಿಗೆ ಈಗಾಗಲೇ ಸಾಕಷ್ಟು ಅವಕಾಶಗಳು ಅರಸಿ ಬರುತ್ತಿದೆ. ಆದರೆ ಮತ್ತೊಮ್ಮೆ ಸೌಂದರ್ಯಳಂತಹ ಪಾತ್ರಕ್ಕೆ ಜೀವ ತುಂಬಬೇಕು ಎಂಬುದು ರಾಧಿಕಾ ಅವರ ಮಹಾದಾಸೆ. ಹಾಗಾಗಿ ಅಂತಹುದೇ ಪಾತ್ರಕ್ಕಾಗಿ ಕಾಯುತ್ತಿದ್ದಾರೆ ರಾಧಿಕಾ. ಕೆಲ ಪಾತ್ರಗಳೇ ಹಾಗೆ. ಜನರ ಮನಸ್ಸಿನಲ್ಲಿ ಅಚ್ಚೊತ್ತಿಬಿಡುತ್ತದೆ. ನಟಿಸಿದ ಕಲಾವಿದರಿಗೂ ದೊಡ್ಡ ಮಟ್ಟದಲ್ಲಿ ಹೆಸರು ತಂದು ಕೊಡುತ್ತದೆ. ಅಂಥದ್ದೆ ಪಾತ್ರ ಮತ್ತೆ ಸಿಗುವುದು ಸುಲಭ ಅಲ್ಲ.