For Quick Alerts
  ALLOW NOTIFICATIONS  
  For Daily Alerts

  33 ವರ್ಷಗಳ ಹಿಂದೆ ನಿರ್ಮಿಸಿದ್ದ ಧಾರಾವಾಹಿ 'ರಾಮಾಯಣ' ಮರು ಪ್ರಸಾರ

  |

  1987 ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಿ ಕೋಟ್ಯಂತರ ಭಾರತೀಯರ ಮನೆ ಮಾತಾಗಿದ್ದ 'ರಾಮಾಯಣ' ಧಾರಾವಾಹಿ ಕಳೆದ ವರ್ಷ ಲಾಕ್‌ಡೌನ್ ಅವಧಿಯಲ್ಲಿ ಪ್ರಸಾರವಾಗಿ ಹಿಟ್ ಆಗಿತ್ತು. ಇದೀಗ ಮತ್ತೆ ಇದೇ ಧಾರಾವಾಹಿ ಪ್ರಸಾರವಾಗಲಿದೆ.

  ಮತ್ತೆ ಲಾಕ್ ಡೌನ್ ಸೂಚನೆಯನ್ನ ಕೊಡ್ತಿದ್ದೀಯಾ ರಾಮಾಯಣ ಸೀರಿಯಲ್ | Filmibeat Kannada

  ಹೌದು, ರಮಾನಂದ ಸಾಗರ್ ನಿರ್ದೇಶಿಸಿದ್ದ 'ರಾಮಾಯಣ' ಧಾರಾವಾಹಿ ಪುನಃ ಟಿವಿಯಲ್ಲಿ ಪ್ರಸಾರವಾಗಲಿದೆ. ಧಾರಾವಾಹಿಯಲ್ಲಿ ಸೀತೆಯ ಪಾತ್ರದಲ್ಲಿ ನಟಿಸಿದ್ದ ನಟಿ ದೀಪಿಕಾ ಚಿಕಿಲಿಯಾ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

  ಕೊರೊನಾ ಎರಡನೇ ಅಲೆಯಿಂದಾಗಿ ದೇಶದೆಲ್ಲೆಡೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಹಾರಾಷ್ಟ್ರದಲ್ಲಿ ಈಗಾಗಲೇ ಹದಿನೈದು ದಿನಗಳ ಕರ್ಫ್ಯೂ ವಿಧಿಸಲಾಗಿದೆ. ದೇಶದ ಇತರೆ ಕೆಲವು ರಾಜ್ಯಗಳಲ್ಲಿಯೂ ಸಹ ಶಿಸ್ತಿನ ಕರ್ಫ್ಯೂ ಅಥವಾ ಲಾಕ್‌ಡೌನ್ ವಿಧಿಸುವ ಚರ್ಚೆ ನಡೆದಿದೆ. ಹಾಗಾಗಿ ಈಗ ಮತ್ತೆ 'ರಾಮಾಯಣ' ಧಾರಾವಾಹಿಯನ್ನು ಪ್ರಸಾರ ಮಾಡಲಾಗುತ್ತಿದೆ.

  33 ವರ್ಷಗಳ ನಂತರ ಕಳೆದ ವರ್ಷ ಮಾರ್ಚ್‌ನಲ್ಲಿ ಧಾರಾವಾಹಿ ಪ್ರಸಾರವಾಗಿ ಉತ್ತಮ ಟಿಆರ್‌ಪಿ ಗಳಿಸಿತ್ತು. 78 ಎಪಿಸೋಡ್‌ಗಳಿರುವ ಈ ಧಾರಾವಾಹಿ ಈಗ ಸ್ಟಾರ್ ಭಾರತ್‌ ಚಾನೆಲ್‌ನಲ್ಲಿ ಪ್ರತಿದಿನ ರಾತ್ರಿ 7 ಗಂಟೆಗೆ ಮರು ಪ್ರಸಾರವಾಗಲಿದೆ.

  'ರಾಮಾಯಣ' ಧಾರಾವಾಹಿಯು ನನ್ನ ಜೀವನದಲ್ಲಿ ಬಹುಮುಖ್ಯ ಪಾತ್ರವಹಿಸಿದೆ. ನನಗೆ ಮಾತ್ರವಲ್ಲ ಭಾರತದ ಕೋಟ್ಯಂತರ ಜನರಿಗೆ ಈ ಧಾರಾವಾಹಿ ಹಲವು ಕಾರಣಕ್ಕೆ ಬಹುಮುಖ್ಯ ಧಾರಾವಾಹಿ ಎಂದಿದ್ದಾರೆ ಧಾರಾವಾಹಿಯಲ್ಲಿ ಸೀತೆ ಪಾತ್ರದಲ್ಲಿ ನಟಿಸಿರುವ ದೀಪಿಕಾ ಚಿಕಿಲಿಯಾ.

  ರಮಾನಂದ ಸಾಗರ್ ನಿರ್ದೇಶಿಸಿದ್ದ ಧಾರಾವಾಹಿಯಲ್ಲಿ ರಾಮನ ಪಾತ್ರದಲ್ಲಿ ಅರುಣ್ ಗೋವಿಲ್, ಲಕ್ಷ್ಮಣನಾಗಿ ಸುನಿಲ್ ಲಹರಿ, ರಾವಣ ಪಾತ್ರದಲ್ಲಿ ಅರವಿಂದ ತ್ರಿವೇದಿ, ಹನುಮಂತನ ಪಾತ್ರದಲ್ಲಿ ಧಾರಾ ಸಿಂಗ್ ನಟಿಸಿದ್ದರು.

  English summary
  Ramananda Sagar's Ramayan telecasting again this year in Star Bharath Tv everyday 7 pm.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X