For Quick Alerts
  ALLOW NOTIFICATIONS  
  For Daily Alerts

  ನಟಿ ತುನಿಶಾ ಸಾವು: ಜಟಿಲವಾಗುತ್ತಿದೆ ಪ್ರಕರಣ, ಹಲವು ಆರೋಪ, ಸತ್ಯ ಯಾವುದು?

  |

  ಇಪ್ಪತ್ತು ವರ್ಷದ ಜನಪ್ರಿಯ ಟಿವಿ ನಟಿ ತುನಿಶಾ ಶರ್ಮಾ ಕೆಲವು ದಿನಗಳ ಹಿಂದಷ್ಟೆ ಮುಂಬೈನಲ್ಲಿ ತಾವು ನಟಿಸುತ್ತಿದ್ದ ಧಾರಾವಾಹಿಯ ಶೂಟಿಂಗ್ ಸೆಟ್‌ನಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ.

  ಆತ್ಮಹತ್ಯೆಗೆ ನಟಿಯ ಬಾಯ್‌ಫ್ರೆಂಡ್ ಶೀಜಾನ್ ಖಾನ್ ಕಾರಣ ಎಂದು ತುನಿಶಾ ತಾಯಿ ಹಾಗೂ ಮಾವ ದೂರು ನೀಡಿದ್ದು, ದೂರಿನ ಆಧಾರದ ಮೇಳೆ ಶೀಜಾನ್‌ ಅನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

  ಶೀಜಾನ್‌ ವಿರುದ್ಧ ತುನಿಶಾರ ತಾಯಿ ಹಾಗೂ ಆಕೆಯ ಸೋದರ ಮಾವ ಹಲವು ಆರೋಪಗಳನ್ನು ಮಾಡಿದ್ದಾರೆ. ಶೀಜಾನ್‌, ತುನಿಶಾರನ್ನು ಮತಾಂತರಕ್ಕೆ ಯತ್ನಿಸಿದ್ದ ಎಂದು, ಉರ್ದು ಕಲಿಸಲು ಯತ್ನಿಸಿದ್ದ, ಬುರ್ಖಾ ತೊಡುವಂತೆ ಮಾಡಿದ್ದ, ಅದಕ್ಕೆ ಸಂಬಂಧಿಸಿದ ಚಿತ್ರಗಳು ವೈರಲ್ ಆಗಿವೆ ಎಂದು ಆರೋಪ ಮಾಡಿದ್ದಾರೆ. ಅಲ್ಲದೆ, ಶೀಜಾನ್‌, ತುನಿಶಾಳ ಕಪಾಳಕ್ಕೆ ಹೊಡೆದಿದ್ದ ಹಾಗಾಗಿ ತುನಿಶಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದಿದ್ದಾರೆ ತುನಿಶಾ ತಾಯಿ.

  ಇದೀಗ ಶೀಜಾನ್‌ರ ಕುಟುಂಬದವರೂ ಅಖಾಡಕ್ಕೆ ಇಳಿದಿದ್ದು, ತುನಿಶಾ ಕುಟುಂಬದವ ವಿರುದ್ಧ ಆರೋಪಗಳನ್ನು ಮಾಡುತ್ತಿದೆ. ತುನಿಶಾ ಬುರ್ಖಾ ತೊಟ್ಟಿರುವ ಚಿತ್ರ ಧಾರಾವಾಹಿ ಶೂಟಿಂಗ್‌ಗೆ ಸಂಬಂಧಿಸಿದ್ದು, ಆಕೆಗೆ ಬುರ್ಖಾ ತೊಡುವಂತೆ ಒತ್ತಾಯಿಸಿರಲಿಲ್ಲ ಎಂದಿದ್ದಾರೆ. ನಟಿ ಉರ್ದು ಭಾಷೆ ಕಲಿಯುತ್ತಿದ್ದಿದ್ದು ಆಕೆಯ ಇಷ್ಟದ ಅನುಸಾರ. ಭಾರತದಲ್ಲಿ ಒಂದಕ್ಕಿಂತ ಹೆಚ್ಚು ಭಾಷೆ ಕಲಿತದ್ದಕ್ಕೆ ಆರೋಪ ಮಾಡುವುದು ಹಾಸ್ಯಾಸ್ಪದ. ಶೀಜಾನ್‌, ತುನಿಶಾಳ ಕಪಾಳಕ್ಕೆ ಹೊಡೆದಿದ್ದ ಎಂಬುದು ಸಹ ಸುಳ್ಳು ಎಂದಿದ್ದಾರೆ.

  ಅಲ್ಲದೆ, ತುನಿಶಾರ ಮಾನಸಿಕ ಆರೋಗ್ಯ ಸರಿಯಿರಲಿಲ್ಲ ಆದರೆ ಅವರ ಕುಟುಂಬದವರು ಆ ಬಗ್ಗೆ ಗಮನ ವಹಿಸಲಿಲ್ಲ. ಈ ಬಗ್ಗೆ ಶೀಜಾನ್‌, ತುನಿಶಾರ ತಾಯಿಯ ಬಳಿ ಮಾತನಾಡಿದ್ದರು ಹಾಗಿದ್ದೂ ಅವರು ನಿರ್ಲಕ್ಷ್ಯ ತೋರಿದರು ಎಂದಿದ್ದಾರೆ.

  ಮುಂಬೈ ಪೊಲೀಸರು ತುನಿಶಾ ಸಾವಿನ ಪ್ರಕರಣದ ತನಿಖೆ ನಡೆಸುತ್ತಿದ್ದು, ಶೀಜಾನ್‌ಗೆ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಶೀಜಾನ್‌ನ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆ ಜನವರಿ 7 ರಂದು ನಡೆಯಲಿದೆ.

  ಕೇವಲ 20 ವರ್ಷದ ನಟಿ ತುನಿಶಾ, ತಮ್ಮ ಹದಿಮೂರನೇ ವಯಸ್ಸಿನಿಂದಲೇ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. 2014 ರಿಂದಲೂ ಹಲವಾರು ಸಿನಿಮಾಗಳಲ್ಲಿ, ಧಾರಾವಾಹಿಗಳಲ್ಲಿ ತುನಿಶಾ ನಟಿಸಿದ್ದಾರೆ. ತುನಿಶಾ ಹಾಗೂ ಶೀಜಾನ್ ಒಂದೇ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಇಬ್ಬರೂ ಪ್ರೀತಿಯಲ್ಲಿದ್ದರು. ಆದರೆ ಇಬ್ಬರ ಬ್ರೇಕ್‌ಅಪ್ ಆಗಿ ಕೆಲವು ದಿನಗಳಲ್ಲಿಯೇ ತುನಿಶಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

  English summary
  Sheezan's parents alleges on Tunisha Sharma and her parents. They told Tunisha Sharma's mental health was not good.
  Tuesday, January 3, 2023, 10:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X