»   » 'ಯುಗಾದಿ ಸಂಭ್ರಮ'ದ ಜೊತೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಉರ್ವಿ' ಚಿತ್ರತಂಡ

'ಯುಗಾದಿ ಸಂಭ್ರಮ'ದ ಜೊತೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಉರ್ವಿ' ಚಿತ್ರತಂಡ

Posted By:
Subscribe to Filmibeat Kannada

ಸ್ಟಾರ್ ಸುವರ್ಣ ವಾಹಿನಿ ವೀಕ್ಷಕರಿಗೆ ಯುಗಾದಿ ಹಬ್ಬದಂದು ಡಬಲ್ ಕೊಡುಗೆ. ಯುಗಾದಿ ಹಬ್ಬದ ದಿನದಂದು ಮನರಂಜನೆಗಾಗಿ ಟಿವಿ ಮುಂದೆ ಕುಳಿತುಕೊಳ್ಳುವವರು ಹಳ್ಳಿ ಹಬ್ಬದ ಸೊಗಡಲ್ಲಿ ಸೆಲೆಬ್ರಿಟಿಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಯಾಕಂದ್ರೆ ಸ್ಟಾರ್ ಸುವರ್ಣ ವಾಹಿನಿ ಹಳ್ಳಿ ಹಬ್ಬದ ಸೊಗಡಿನಲ್ಲಿ ಸೆಲೆಬ್ರಿಟಿಗಳೊಂದಿಗೆ ವಿವಿಧ ಟಾಸ್ಕ್ ಗಳೊಂದಿಗೆ ಯುಗಾದಿ ಹಬ್ಬವನ್ನು ಆಚರಿಸಿದೆ. ಅಲ್ಲದೇ ಅಂದೇ 'ಹರಹರ ಮಹಾದೇವ' ಧಾರಾವಾಹಿಯ ಮತ್ತೊಂದು ರೋಚಕ ಘಟ್ಟವನ್ನು ಪ್ರಸಾರ ಮಾಡುತ್ತಿದೆ.

ಯುಗಾದಿ ಸಂಭ್ರಮಕ್ಕೆ 'ಸೂಪರ್ ಜೋಡಿ-2' ತಂಡದಿಂದ ಮನರಂಜನೆ

ಸ್ಟಾರ್ ಸುವರ್ಣ ವಾಹಿನಿ ಯುಗಾದಿ ಸಂಭ್ರಮಕ್ಕಾಗಿಯೇ ಫಿಕ್ಷನ್ ಮತ್ತು ನಾನ್ ಫಿಕ್ಷನ್ ನಟನಟಿಯರಿಗೆ ವಿವಿಧ ಟಾಸ್ಕ್‌ ಗಳನ್ನು ನೀಡಿ ಪ್ರೇಕ್ಷಕರನ್ನು ರಂಜಿಸುವ ಕಾರ್ಯಕ್ರಮ ಆಚರಿಸಿದೆ.

ಫೈರಿಂಗ್ ಸ್ಟಾರ್ ನೋಡಲು ಮಿಸ್ ಮಾಡಬೇಡಿ

'ಸೂಪರ್ ಜೋಡಿ-2' ರಿಯಾಲಿಟಿ ಶೋ'ನಲ್ಲಿರುವ ಫೈರಿಂಗ್ ಸ್ಟಾರ್ ಹುಚ್ಚಾ ವೆಂಕಟ್ ಮತ್ತು ಜೋಡಿ ರಚನಾ ಇಬ್ಬರು ವೀಕ್ಷಕರನ್ನು ಹೆಚ್ಚು ರಂಜಿಸಲಿದ್ದಾರಂತೆ. ಜೊತೆಗೆ ಈ ಕಾರ್ಯಕ್ರಮದಲ್ಲಿ ಕಾಳಿಸ್ವಾಮಿ ಮತ್ತು ಬಬಿತಾ, ಅರುಣ ಮತ್ತು ಮಾಧುರ್ಯ, 'ದುರ್ಗಾ' ಧಾರಾವಾಹಿಯ ದುರ್ಗಾ ಮತ್ತು ನಕುಲ್, 'ನಿಹಾರಿಕಾ'ದಿಂದ ನಿಹಾರಿಕಾ ಮತ್ತು ಸೂರಜ್, 'ಸಿಂಧೂರ' ಧಾರಾವಾಹಿಯ ಸುಮಾ ಮತ್ತು ಸ್ವಾತಿ ಸಹ ವಿ
ಶೇಷ ಟಾಸ್ಕ್ ಗಳಲ್ಲಿ ಭಾಗವಹಿಸಿದ್ದು, ಅವರು ಸಹ ಮನರಂಜನೆ ನೀಡಲಿದ್ದಾರೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಉರ್ವಿ' ಚಿತ್ರತಂಡ

ಯುಗಾದಿ ಸಂಭ್ರಮದ ವಿಶೇಷ ಕಾರ್ಯಕ್ರಮದಲ್ಲಿ 'ಉರ್ವಿ' ಚಿತ್ರತಂಡ ಸಹ ಭಾಗವಹಿಸಿದ್ದು, ರಸಪ್ರಶ್ನೆ ಮತ್ತು ವಿವಿಧ ಆಟಗಳಲ್ಲಿ ಪಾಲ್ಗೊಂಡಿದೆಯಂತೆ. ಈ ವಿಶೇಷ ಕಾರ್ಯಕ್ರಮವು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಪ್ರಸಾರವಾಗುತ್ತಿದ್ದು, ಮಾರ್ಚ್ 29 ರಂದು ಮಧ್ಯಾಹ್ನ 1.30 ಕ್ಕೆ ವೀಕ್ಷಕರು ಕಣ್ತುಂಬಿಕೊಳ್ಳಬಹುದು.

ಮಹಾದೇವ ಮತ್ತು ವಿಷ್ಣುವಿನ ಮಹಾಸಮರ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಹರ ಹರ ಮಹಾದೇವ ಧಾರಾವಾಹಿಯು ಮತ್ತೊಂದು ರೋಚಕ ಘಟ್ಟ ತಲುಪಿದ್ದು, ಜಗತ್ಪಾಲಕರಾದ ಮಹಾದೇವ ಮತ್ತು ಮಹಾವಿಷ್ಣುವಿನ ನಡುವೆ ಮಹಾಸಮರ ಏರ್ಪಟ್ಟಿದೆ. ಈ ಸಂಚಿಕೆಯು ಸಹ ಯುಗಾದಿ ಹಬ್ಬದಂದೇ ರಾತ್ರಿ 7.30 ಕ್ಕೆ ಪ್ರಸಾರವಾಗುತ್ತಿದೆ.

English summary
Star Suvarna Channel will be aired 'Yugadi Special' Programm and 'Hara Hara Mahadev' special episode on March 29th.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X