Don't Miss!
- Technology
ಜಿಯೋ ಗ್ರಾಹಕರೆ, ಈ ರೀಚಾರ್ಜ್ ಪ್ಲ್ಯಾನ್ ಅನ್ನು ಖಂಡಿತಾ ನೀವು ಇಷ್ಟ ಪಡ್ತೀರಿ!?
- Automobiles
'ಅಲ್ಟ್ರಾವೈಲೆಟ್ F77' ಹೇಗಿದೆ ಗೋತ್ತಾ.. ಇಲ್ಲಿದೆ ವಿಮರ್ಶೆ
- News
Union Budget; ಬೆಂಗಳೂರು-ಮಂಗಳೂರು ರೈಲು ಕಾರವಾರ ತನಕ ವಿಸ್ತರಣೆ
- Lifestyle
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- Sports
ನೀವೇ ನಮಗೆ ಸ್ಪೂರ್ತಿ: ಕಿರಿಯರ ಸಾಧನೆಗೆ ಹರ್ಮನ್ಪ್ರೀತ್ ಕೌರ್ ಮುಕ್ತಕಂಠದ ಶ್ಲಾಘನೆ
- Finance
ಹೊಸ ಆಫರ್: ಗೃಹ ಸಾಲದ ಬಡ್ಡಿದರ ಇಳಿಸಿದ ಎಸ್ಬಿಐ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸ್ಟಾರ್ ಸುವರ್ಣದಲ್ಲಿ ಸಂಕ್ರಾಂತಿ ಸಂಭ್ರಮ..! ಏನೆಲ್ಲಾ ವಿಶೇಷತೆ ಇದೆ ಗೊತ್ತಾ?
ಸಂಕ್ರಾಂತಿ ಹಬ್ಬದ ದಿನದಂದು ಎಳ್ಳು-ಬೆಲ್ಲ, ಮುಂತಾದ ಪದಾರ್ಥಗಳನ್ನು ಹಾಕಿ ಸಿಹಿ ಕಬ್ಬಿನ ಜೊತೆಗೆ ನೈವೇದ್ಯ ಮಾಡಿ ನಾಲ್ಕು ಮನೆಗೆ ಎಳ್ಳು ಬೆಲ್ಲ ಹಂಚಿ ಒಳ್ಳೆಯ ಮಾತಾಡೋಣ ದ್ವೇಷ ಮರೆತು ಸಿಹಿಯನ್ನೇ ಮನದಲ್ಲಿ ಇಟ್ಟುಕೊಳ್ಳೋಣ ಎಂದು ಎಲ್ಲಾ ವರ್ಗದ ಜನರು ಬಯಸೋದು ಸಹಜ. ಅದು ಜನಸಾಮಾನ್ಯರೇ ಆಗಲಿ ಸ್ಯಾಂಡಲ್‌ವುಡ್ ತಾರೆಯರೇ ಆಗಲಿ ಅಲ್ಲೊಂದು ಸಂಭ್ರಮ ಮನೆ ಮಾಡಿರುತ್ತದೆ. ಅಂತಹ ಸಂಭ್ರಮಕ್ಕೆ ಈ ಬಾರಿ ಸ್ಟಾರ್ ಸುವರ್ಣ ವೇದಿಕೆಯನ್ನು ಕಲ್ಪಿಸಿದೆ.
ಸ್ಟಾರ್ ಸುವರ್ಣ ವಾಹಿನಿಯು ಸಂಕ್ರಾಂತಿ ಹಬ್ಬದ ಪ್ರಯುಕ್ತ 'ಸುವರ್ಣ ಸಂಕ್ರಾಂತಿ ಸಂಭ್ರಮ' ಎಂಬ ಅದ್ದೂರಿ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ಸ್, ಕಿರುತರೆ ನಟಿಯರ ಸಮಾಗಮಾವೇ ಆಗಲಿದೆ. ಅವರೆಲ್ಲರೂ ಅವರ ಜೀವನದ ಸಿಹಿ ಕಹಿಯನ್ನು ಅನಾವರಣ ಮಾಡಲಿದ್ದಾರೆ. ಇದರ ಜೊತೆಗೆ ದೈವ ದರ್ಶನ ಮಾಡಿಸಲು ಸೂಪರ್ ಹಿಟ್ ಸಿನಿಮಾವಾದ ರಿಷಬ್ ಶೆಟ್ಟಿಯವರ ಕಾಂತಾರ ಸಿನಿಮಾ ಸಹ ಪ್ರಸಾರವಾಗಲಿದೆ.
ಮದುವೆಯಾದ ಬಳಿಕ ತೆರೆ ಮೇಲೆ ನಟಿ ಅದಿತಿ ಪ್ರಭುದೇವ್ ಇದೇ ಮೊದಲ ಬಾರಿಗೆ ಸಂಕ್ರಾಂತಿಯನ್ನು ಸ್ಟಾರ್ ಸುವರ್ಣದ ಜೊತೆ ಆಚರಿಸಿದ್ದಾರೆ. ತಮ್ಮ ಪತಿಯ ಬಗ್ಗೆ ಹಾಗೂ ಸಿನಿಮಾ ಜರ್ನಿಯ ಬಗ್ಗೆ ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ. ಹೊಸ ಜೀವನ ಹೇಗಿದೆ ಎಂದು ಪ್ರೇಕ್ಷಕರ ಜೊತೆಗೆ ಹಂಚಿಕೊಳ್ಳಲಿದ್ದಾರೆ.

ಸಂಕ್ರಾಂತಿ ಸಂಭ್ರಮದಲ್ಲಿ ಡಾಲಿ ಧನಂಜಯ್
ಡಾಲಿ ಧನಂಜಯ್ ಒನ್ಸ್ ಅಪಾನ್ ಅ ಟೈಮ್ ಇನ್ ಜಮಾಲಿ ಗುಡ್ಡ ಜಮಾಲಿಗುಡ್ಡದ ಸಿನಿಮಾದ ಸಕ್ಸಸ್‌ನಲ್ಲಿದ್ದಾರೆ. ಈಗ ಮುಂದಿನ ತಮ್ಮ ನಿರ್ಮಾಣದ ಹೊಸ ಸಿನಿಮಾದ ಬಗ್ಗೆ ಮಾತುಗಳನ್ನಾಡಿದ್ದಾರೆ. ಅವರ ಹೊಸ ಸಿನಿಮಾದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ಭಾನುವಾರದ ಸ್ಟಾರ್ ಸುವರ್ಣವನ್ನು ನೋಡಿ ಡಾಲಿ ಧನಂಜಯ್ ಜೊತೆಗೆ ಸಂಕ್ರಾಂತಿ ಆಚರಣೆ ಮಾಡಿ.

ನಿಮಿಕಾ ಮಾತು ಕೇಳಬೇಕಾ ಸ್ಟಾರ್ ಸುವರ್ಣ ನೋಡಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕ್ರಾಂತಿ' ಸಿನಿಮಾದ ಪುಷ್ಪವತಿ ಹಾಡು ಖ್ಯಾತಿಯ ನಿಮಿಕಾ ಅವರು ಸ್ಟಾರ್ ಸುವರ್ಣದ ಜೊತೆಗೆ ತಮ್ಮ ಮಾತು ಹಾಗೂ ನೃತ್ಯದ ಮೂಲಕ ವೀಕ್ಷಕರನ್ನು ರಂಜಿಸಲಿದ್ದಾರೆ. ಪುಷ್ಪವತಿ ಡ್ಯಾನ್ಸ್ ಹಾಡಿ ನಿಮ್ಮ ಶೇಕ್ ಮಾಡಲಿದ್ದಾರಾ ಎಂದು ನೋಡಿ. ಅನುಪಮಾ ಗೌಡ ಲಡ್ಡನ್ನು ಬಾಯಲ್ಲಿ ಹಾಕಿಕೊಂಡು ಕುರಕ್ಕುಳ್ಳಲಿಕೆರೆ ಹಾಡು ಹಾಕಿಕೊಂಡು ನಿಮ್ಮನ್ನು ರಂಜಿಸಲಿದ್ದಾರೆ. ಮಾತು, ತುಂಟಾಟದ ಮೂಲಕ ಅವರ ಅಭಿಮಾನಿ ವರ್ಗದವರನ್ನು ಸೆಳೆಯಲಿದ್ದಾರೆ.

ತಾಯಿಯ ಬಗ್ಗೆ ಏನು ಹೇಳಿದರು ಅಮೃತಾ ಐಯ್ಯಂಗಾರ್?
ಅಮೃತ ಐಯ್ಯಂಗಾರ್ ತಮ್ಮ ತಾಯಿ ಹೇಗೆ ಅವರ ಸಾಧನೆಗೆ ಬೆನ್ನೆಲುಬಾಗಿ ನಿಂತರು ಎಂಬುದನ್ನು ಸ್ಟಾರ್ ಸುವರ್ಣ ವಾಹಿನಿಯ ವೇದಿಕೆಯ ಮೇಲೆ ಹಂಚಿಕೊಳ್ಳಲಿದ್ದಾರೆ. ತಾವು ಪಟ್ಟ ಕಷ್ಟವನ್ನು ವೇದಿಕೆಯ ಮೇಲೆ ಕಣ್ಣೀರು ಹಾಕಿದ್ದಾರೆ. ಅಮೂಲ್ಯ ಗೌಡ ಇನ್ನು ಅನೇಕ ನಟ-ನಟಿಯರು ಸ್ಟಾರ್ ಸುವರ್ಣ ವಾಹಿನಿಯ ಸಂಕ್ರಾಂತಿ ಸಂಭ್ರಮದಲ್ಲಿ ಭಾಗವಹಿಸಲಿದ್ದಾರೆ. ಹಾಡು-ಹರಟೆ, ಮೋಜು ಮಸ್ತಿಯೊಂದಿಗೆ ಸಿಕ್ಕಾಪಟ್ಟೆ ಮನೋರಂಜನೆ ನೀಡಲಿದ್ದಾರೆ. ಬೊಂಬಾಟ್ ಭೋಜನದ ಸಾರಥಿ ಸಿಹಿ ಕಹಿ ಚಂದ್ರು ರವರು ಸ್ಟಾರ್ ಸುವರ್ಣ ವಾಹಿನಿಯ ಜನಪ್ರಿಯ ಕಾರ್ಯಕ್ರಮ 'ಬೊಂಬಾಟ್ ಭೋಜನ'ದ ಹೊಸ ಆವೃತ್ತಿಯ ಅನಾವರಣ ಮಾಡಲಿದ್ದಾರೆ.

'ದಿಯಾ' ಸಿನಿಮಾ ಖ್ಯಾತಿಯ ಪೃಥ್ವಿ ಅಂಬರ್
ಇದೇ ಮೊದಲ ಬಾರಿಗೆ 'ದಿಯಾ' ಸಿನಿಮಾ ಖ್ಯಾತಿಯ ಪೃಥ್ವಿ ಅಂಬರ್ ತನ್ನ ಪತ್ನಿಯ ಜೊತೆ ವೇದಿಕೆಯಲ್ಲಿ ಜೊತೆಯಾಗಿದ್ದು, 'ಸುವರ್ಣ ಸಂಕ್ರಾಂತಿ ಸಂಭ್ರಮ' ಕಾರ್ಯಕ್ರಮಕ್ಕೆ ಹೊಸ ಲುಕ್ ನೀಡಿದ್ದಾರೆ. ನಟ ಶಿವರಾಜ್ ಕೆ.ಆರ್.ಪೇಟೆ ನಿರೂಪಣೆಯಲ್ಲಿ ಮೂಡಿ ಬಂದಿರುವ "ಸುವರ್ಣ ಸಂಕ್ರಾಂತಿ ಸಂಭ್ರಮ" ಕಾರ್ಯಕ್ರಮವು ಇದೇ ಭಾನುವಾರ ಮಧ್ಯಾಹ್ನ 3 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ ನೋಡಿ ಎಂಜಾಯ್ ಮಾಡಿ.