»   » ಪ್ರೀತಿ-ದ್ವೇಷಗಳ ಕೊಂಡಿ 'ಜಸ್ಟ್ ಮಾತ್ ಮಾತಲ್ಲಿ'

ಪ್ರೀತಿ-ದ್ವೇಷಗಳ ಕೊಂಡಿ 'ಜಸ್ಟ್ ಮಾತ್ ಮಾತಲ್ಲಿ'

Posted By:
Subscribe to Filmibeat Kannada

ಸ್ಟಾರ್ ಸುವರ್ಣ ವಾಹಿನಿಯು ದಿನೇ-ದಿನೇ ವೀಕ್ಷಕರಿಗೆ ಹೊಸತನವನ್ನು ನೀಡುತ್ತಾ ಬರುತ್ತಿದೆ. ಅದ್ದೂರಿ ಬಜೆಟ್ ನ "ಹರ ಹರ ಮಹಾದೇವ" ಎಂಬ ಭರ್ಜರಿ ಧಾರಾವಾಹಿಯ ಹಿಂದೆಯೇ "ಕನೆಕ್ಷನ್" ಎಂಬ ಮತ್ತೊಂದು ಸ್ಟಾರ್ ಗಳ ಬಿಂದಾಸ್ ಮನರಂಜನಾ ರಿಯಾಲಿಟಿ ಶೋವನ್ನು ಆರಂಭಿಸಿತು.

ವೈವಿಧ್ಯಮಯ ಧಾರಾವಾಹಿಗಳ ಹಂದರವಾಗಿರುವ, ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯು ಇದೀಗ ಮತ್ತೊಂದು ಹೊಸತನದ ಧಾರಾವಾಹಿಯನ್ನು ವೀಕ್ಷಕರ ಮಡಿಲಿಗೆ ಹಾಕುತ್ತಿದೆ.['ಹರ ಹರ ಮಹಾದೇವ' ಪಾತ್ರಧಾರಿಗಳ ಪರಿಚಯ]

'ಜಸ್ಟ್ ಮಾತ್ ಮಾತಲ್ಲಿ' ಎಂಬ ವಿಭಿನ್ನ ಹೆಸರಿನಲ್ಲಿ ಆರಂಭವಾಗುತ್ತಿರುವ ಈ ಕಲರ್ ಫುಲ್ ಧಾರಾವಾಹಿ ಯುವ ಮನಸ್ಸುಗಳಿಗೆ ಹೇಳಿ ಮಾಡಿಸಿದಂತಿದ್ದು, ನಿಮಗೆ ಭರಪೂರ ಮನರಂಜನೆ ನೀಡೋದು ಪಕ್ಕಾ.[ಸುವರ್ಣದಲ್ಲಿ 60 ಕೋಟಿ ಬಜೆಟ್ ನ ಹೊಚ್ಚ ಹೊಸ ಧಾರಾವಾಹಿ]

ಏನಿದು 'ಜಸ್ಟ್ ಮಾತ್ ಮಾತಲ್ಲಿ'?, ಇದರ ಕಥಾಹಂದರ ಏನು?, ಈ ಧಾರಾವಾಹಿಯಲ್ಲಿ ಯಾರ್ಯಾರು ಕಾಣಿಸಿಕೊಳ್ಳಲಿದ್ದಾರೆ ಅನ್ನೋದನ್ನ ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ....

ದ್ವೇಷದಿಂದ ಆರಂಭ ಆಗೋ 'ಜಸ್ಟ್ ಮಾತ್ ಮಾತಲ್ಲಿ'

ಬೆಂಗಳೂರಿನಲ್ಲಿ ರೇಡಿಯೋ ಜಾಕಿಯಾಗಿ ಕೆಲಸ ಮಾಡುತ್ತಿರುವ ನಾಯಕ ಯಶ್ ಆಧುನಿಕ ಮನೋಭಾವದ ಹುಡುಗ. ಮೈಸೂರಿನಲ್ಲಿ ಟೀಚರ್ ಆಗಿ ಕೆಲಸ ಮಾಡ್ತಿರೋ ಸಾಂಪ್ರದಾಯಿಕ ಹಾಗು ನೇರ ಸ್ವಭಾವದ ಹುಡುಗಿ ನಾಯಕಿ ಸಿಂಧು. ಮನೆಯವರ ಒತ್ತಾಯಕ್ಕೆ ಯಶ್ ಹುಡುಗಿ ನೋಡುವ ಶಾಸ್ತ್ರಕ್ಕೆ ಬರುತ್ತಾನೆ. ಅಲ್ಲಿ ಇವರಿಬ್ಬರ ಪರಿಚಯವಾಗುತ್ತದೆ. ಆದರೆ ಮೊದಲ ಭೇಟಿಯಲ್ಲೇ ಒಬ್ಬರನ್ನೊಬ್ಬರು ಪರಸ್ಪರ ದ್ವೇಷಿಸಲು ಆರಂಭಿಸುತ್ತಾರೆ.[ಶಿವ-ಸತಿಯ ಪ್ರೇಮಕಥೆಗೆ ತಿರುವು ನೀಡಲಿರುವ ಸುರ-ಸುಂದರಿ]

ದ್ವೇಷದ ನಡುವೆ ಪ್ರೇಮ ಹೇಗೆ ಹುಟ್ಟುತ್ತೆ.?

ಧಾರಾವಾಹಿಯ ನಾಯಕ-ನಾಯಕಿ ಬೆಳೆದು ಬಂದ ವಾತಾವರಣ, ವ್ಯಕ್ತಿತ್ವ, ಜೀವನವನ್ನು ನೋಡುವ ದೃಷ್ಟಿ ಇವೆಲ್ಲವೂ ಭಿನ್ನ. ಆದ್ದರಿಂದ ಒಬ್ಬರನ್ನೊಬ್ಬರು ಇಷ್ಟ ಪಡುವುದಿಲ್ಲ. ಆದರೂ ಇಬ್ಬರ ನಡುವೆ ಪ್ರೇಮ ಅರಳುತ್ತದೆ. ದ್ವೇಷದ ನಡುವೆ ಪ್ರೇಮ ಹೇಗೆ ಹುಟ್ಟುತ್ತದೆ ಎನ್ನುವುದೇ 'ಜಸ್ಟ್ ಮಾತ್ ಮಾತಲ್ಲಿ' ಧಾರಾವಾಹಿಯ ಕಥಾವಸ್ತು.

ನವಿರಾದ ಹಾಸ್ಯ

ವಿನೂತನ ನಿರೂಪಣೆ, ಲವಲವಿಕೆಯಿಂದ ಕೂಡಿದ ಸಂಭಾಷಣೆ, ಕುಟುಂಬದಲ್ಲಿ ದಿನನಿತ್ಯ ನಡಿಯೋ ನವಿರಾದ ಹಾಸ್ಯವೇ 'ಜಸ್ಟ್ ಮಾತ್ ಮಾತಲ್ಲಿ' ಧಾರಾವಾಹಿಯ ಸ್ಪೇಷಾಲಿಟಿ.

ನಟ ದಿಲೀಪ್ ರಾಜ್ ನಿರ್ಮಾಣ

ನಟ ಕಮ್ ನಿರೂಪಕರಾಗಿ ಖ್ಯಾತಿ ಹೊಂದಿರುವ ದಿಲೀಪ್ ರಾಜ್ ಮತ್ತು ಶ್ರೀವಿದ್ಯಾ ರಾಜ್ ಈ ಧಾರಾವಾಹಿಗೆ ನಿರ್ಮಾಪಕರಾಗಿದ್ದಾರೆ. ಈಗಾಗಲೇ ಹಿರಿತೆರೆ ಮತ್ತು ಕಿರುತೆರೆಯಲ್ಲಿ ಅನುಭವ ಹೊಂದಿದ ದಿಲೀಪ್ ರಾಜ್ ಸುಮಾರು 20ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ ಕೀರ್ತಿ ಹೊಂದಿದ್ದಾರೆ.

ತಾರಾಗಣ

ಶರತ್ ಕೆ.ಪಿ ಅವರು ನಾಯಕನಾಗಿ, ರಶ್ಮಿ ಅವರು ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇನ್ನುಳಿದಂತೆ ಅಶ್ವಿನ್ ಹಾಸನ್, ದೀಪ್ತಿ, ವೈಷ್ಣವಿ, ಮೀನಾಕ್ಷಿ ಮತ್ತು ಶಿವಕುಮಾರ್ ಮುಂತಾದವರು ಈ ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಹಾಸ್ಯವೇ ಹೈಲೈಟ್

ಖ್ಯಾತ ಹಾಸ್ಯ ಮಾತುಗಾರ ರಿಚರ್ಡ್ ಲೂಯಿಸ್ ನಾಯಕನ ತಂದೆ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅವರಿಗೆ ಚಂದ್ರಕಲಾ ಮೋಹನ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ರಿಚರ್ಡ್ ಹಾಗೂ ಚಂದ್ರಕಲಾ ಅವರ ಹಾಸ್ಯಮಿಶ್ರಿತ ಹಾಗೂ, ಲವಲವಿಕೆಯ ಅಭಿನಯವೇ ಈ ಧಾರಾವಾಹಿಯ ಪ್ರಮುಖ ಹೈಲೈಟ್.

ಯಾವಾಗ ಆರಂಭ

"ಜಸ್ಟ್ ಮಾತ್ ಮಾತಲ್ಲಿ" ಇದೇ ಆಗಸ್ಟ್ 15 ರಿಂದ, ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8.30ಕ್ಕೆ ನಿಮ್ಮ ಮೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಪ್ರೋಮೋ ನೋಡಿ...

'ಜಸ್ಟ್ ಮಾತ್ ಮಾತಲ್ಲಿ' ಧಾರಾವಾಹಿಯ ಕಲರ್ ಫುಲ್ ಪ್ರೋಮೋ ಇಲ್ಲಿದೆ ನೋಡಿ...

English summary
The Star Networks Kannada General Entertainment Channel Suvarna announces the launch of its new fiction show 'Just Maath Maathalli'. This serial Launching on 15th August 2016, ‘Just Math Mathalli’ will be on-air from Monday to Saturday at 8:30 PM.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada