For Quick Alerts
  ALLOW NOTIFICATIONS  
  For Daily Alerts

  ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ ಅನುರೂಪ

  By Rajendra
  |

  ಸ್ಟಾರ್ ನೆಟ್ ವರ್ಕ್ ನ ಕನ್ನಡ ಮನೋರಂಜನಾ ವಾಹಿನಿಯಾದ ಸುವರ್ಣ ವಾಹಿನಿಯು ಅನುರೂಪ ಎಂಬ ಮತ್ತೊಂದು ವಿನೂತನ ಧಾರಾವಾಹಿಯನ್ನು ಇದೇ ಡಿಸೆಂಬರ್ 29 ರಂದು ಸಂಜೆ 7:30 ಕ್ಕೆ ಪ್ರಸಾರ ಪ್ರಾರಂಭಿಸುತ್ತದೆ.

  'ಅನುರೂಪ' ಧಾರಾವಾಹಿಯ ಕಥೆಯು 3 ಪಾತ್ರಧಾರಿಗಳ ಸುತ್ತ ಹೆಣೆಯಯಲ್ಪಟ್ಟಿದೆ. ಮೇಘನಾ ಒಂದು ಚಿಕ್ಕ ನಗರದಲ್ಲಿ ವಾಸಿಸುತ್ತಿರುವ ಸರಳ ವ್ಯಕ್ತಿತ್ವದ ಹುಡುಗಿ, ಆದರೆ ತುಂಟತನ, ಹಟಮಾರಿ ಮತ್ತು ಮುಂಗೋಪಿ ಸ್ವಭಾವದವಳಾಗಿರುತ್ತಾಳೆ. ಸ್ನೇಹಿತರನ್ನು ತುಂಬಾ ಗೌರವಿಸುವ ಇವಳು ಅವರಿಗೋಸ್ಕರ ಏನು ಬೇಕಾದರು ಸಹಾಯ ಮಾಡುವ ಮನೊಭಾವದವಳು.

  ಮೇಘನಾಳ ಬಾಲ್ಯದ ಆತ್ಮೀಯ ಹಾಗೂ ನಂಬಿಕಸ್ಥ ಸ್ನೇಹಿತ ಶಾಂ. ಸದಾ ಹಸನ್ಮುಖಿಯಾದ ಅದೃಷ್ಟದ ಹುಡುಗ. ಇವನು ಯಾವ ಗುಂಪಿನಲ್ಲಿದ್ದರೂ ಎಲ್ಲರ ಮನಸೆಳೆಯುವ ಮಿಂಚಿನಂತಹ ಹುಡುಗನಾಗಿರುತ್ತಾನೆ.

  ಈ ಕಥೆಯಲ್ಲಿ ತೆರೆದುಕೊಳ್ಳುವ ಮತ್ತೊಂದು ಪಾತ್ರ ತೇಜಸ್ವಿ ಇವನು ತುಂಬಾ ಸರಳ ಹಾಗೂ ಸುಂದರ ವ್ಯಕ್ತಿ. ಅವನು ಮಾನವ ಜೀವನವಿರುವುದೇ ಒಂದು, ಅದನ್ನು ಉಪಯುಕ್ತ ರೀತಿಯಲ್ಲಿ ಸಂಪೂರ್ಣಗೊಳಿಸಬೇಕೆಂಬ ಕಲ್ಪನೆಯನ್ನು ನಂಬಿದವನು. ಜೀವನವನ್ನು ಪ್ರೀತಿಸುವ ,ಬಂದಿದ್ದನ್ನು ಬಂದ ಹಾಗೆಯೇ ಸ್ವೀಕರಿಸುವ ಸ್ವಭಾವದ ಮನುಷ್ಯ. [ಸುವರ್ಣ ವಾಹಿನಿ ಹೊಸ ಧಾರಾವಾಹಿ 'ಮಧುಬಾಲ']

  ಹೇಗೆ ಈ ಮೂವರು ಜೀವನದ ಹಾದಿಯಲ್ಲಿ ಭೇಟಿಯಾಗುತ್ತಾರೆ ಹಾಗೂ ಸಾಕಷ್ಟು ಅಡತಡೆಗಳೊಂದಿಗೆ ಒಂದು ಸಂಕೀರ್ಣ ಸಂಬಂಧಕ್ಕೆ ಸಿಲುಕುತ್ತಾರೆ ಎಂಬುದೇ ಈ ಕಥೆಯ ಸಾರಾಂಶವಾಗಿದೆ.

  ಅನುರೂಪ ಧಾರಾವಾಹಿಯನ್ನು ನಿರ್ದೇಶಿಸಿ ನಿರ್ಮಿಸುವ ಜವಾಬ್ದಾರಿಯನ್ನು ಹೊತ್ತಿರುವವರು ವಿ.ಮಧುಸೂದನ. ಇವರು ಈಗಾಗಲೇ ವಾಹಿನಿಯ ಜನಪ್ರಿಯ 'ಮಿಲನ' ಧಾರಾವಾಹಿಯನ್ನು ನಿರ್ದೇಶಿಸಿ ನಿರ್ಮಾಣ ಮಾಡುತ್ತಿದ್ದಾರೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

  ಅನುರೂಪ ಧಾರಾವಾಹಿಯು ಇದೇ ಡಿಸೆಂಬರ್ 29 ರಿಂದ ಪ್ರತಿ ಸೋಮವಾರದಿಂದ ಶನಿವಾರದವರೆಗೆ ಸಂಜೆ 7:30ಕ್ಕೆ ಪ್ರಸಾರವಾಗಲಿದೆ. ವಾಹಿನಿಯ ಬಿಜಿನೆಸ್ ಹೆಡ್ ಅನುಪ್ ಚಂದ್ರಶೇಖರನ್ ಹೇಳುವಂತೆ, "ಇದು ಕಾಲೇಜು ವಾತಾವರಣದಲ್ಲಿ ಮೈತಳೆದ ಯುವ ಪ್ರೇಮ ಕಥೆಯಾಗಿದ್ದು, ಕಥೆಯಲ್ಲಿ ತಾಜಾತನವಿದ್ದು ಕಥಾ ಹಂದರವನ್ನು ವಿಭಿನ್ನವಾಗಿ ಬಿಚ್ಚಿಡುವ ಪ್ರಯತ್ನವಿದೆ. ಅನುರೂಪ ಕಥೆಯು ಸರಳವಾಗಿದ್ದು ನಂಬಲರ್ಹವಾಗಿರುವ ಸುಂದರ ಚಿತ್ರಕಥೆಯನ್ನು ಹೊಂದಿದೆ..."

  "ವೀಕ್ಷಕರ ಹೃದಯಕ್ಕೆ ಹತ್ತಿರವಾಗುವ ಸೂಕ್ಷ್ಮ ಕಥಾವಸ್ತುವನ್ನು ಇದು ಹೊಂದಿದೆ. ಈ ಹೊಸ ಧಾರಾವಾಹಿಯೊಂದಿಗೆ ಸಾಕಷ್ಟು ಮನಸ್ಸು ಹೃದಯಗಳನ್ನು ಗೆಲ್ಲಬಹುದು,ಖಂಡಿತ ಇದರಿಂದ ಪ್ರೈಮ್ ಟೈಮ್ ನಲ್ಲಿ ನಮ್ಮ ವೀಕ್ಷಕರ ಸಂಖ್ಯೆ ಹೆಚ್ಚುತ್ತದೆ" ಎಂದರು.

  'ಅನುರೂಪ' ಸುವರ್ಣವಾಹಿನಿಯು ಪ್ರಸಾರ ಮಾಡುತ್ತಿರುವ ಜನಪ್ರಿಯ ಕಾರ್ಯಕ್ರಮಗಳಾದ ಅಮೃತವರ್ಷಿಣಿ, ಮಿಲನ, ಅರಗಿಣಿ, ಪಂಚರಂಗಿ ಪೋಂಪೋಂ, ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು, ಮಧುಬಾಲ, ಪರಿಣೀತ ಹಾಗೂ ಅವನು ಮತ್ತೆ ಶ್ರಾವಣಿ ಮೊದಲಾದವುಗಳ ಸಾಲಿಗೆ ಈಗ ಹೊಸ ಸೇರ್ಪಡೆಯಾಗುತ್ತಿದೆ. (ಫಿಲ್ಮಿಬೀಟ್ ಕನ್ನಡ)

  English summary
  Suvarna, the Star network`s Kannada General Entertainment Channel announces the launch of its new fiction show Anuroopa from December 29th 2014. The story of Anuroopa revolves around – Meghana, She has the simplicity of a small town girl, but she is naughty, stubborn and short tempered. She adores her friends and will go to any extent to help anyone in need.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X